ಮಂಗಳೂರಿನಲ್ಲಿ ಸಿಎಎ ವಿರೋಧಿ ಪ್ರತಿಭಟನೆ: ಸಭೆಗೆ ಬಳಸಿದ್ದ 2,500 ಕುರ್ಚಿಗಳಿಗೆ ಕಿಡಿಗೇಡಿಗಳಿಂದ ಬೆಂಕಿ

ಪೌರತ್ವ ಸಂರಕ್ಷಣಾ ಸಮಿತಿಯಿಂದ ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸಲಾಗಿತ್ತು. ರ್ಯಾಲಿ ಮುಗಿದ ನಂತರ ಕುರ್ಚಿಗಳನ್ನು ವಾಹನದಲ್ಲಿ ತುಂಬಿಸಿಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

news18-kannada
Updated:January 13, 2020, 10:47 AM IST
ಮಂಗಳೂರಿನಲ್ಲಿ ಸಿಎಎ ವಿರೋಧಿ ಪ್ರತಿಭಟನೆ: ಸಭೆಗೆ ಬಳಸಿದ್ದ 2,500 ಕುರ್ಚಿಗಳಿಗೆ ಕಿಡಿಗೇಡಿಗಳಿಂದ ಬೆಂಕಿ
ಕುರ್ಚಿಗಳಿಗೆ ಬೆಂಕಿ ಹಚ್ಚಿರುವ ದೃಶ್ಯ
  • Share this:
ಮಂಗಳೂರು(ಜ.13): ಪೌರತ್ವ ಮಸೂದೆ ಕಾಯ್ದೆ ಸಂಬಂಧ ಮಂಗಳೂರಿನಲ್ಲಿ ನಡೆದ ಗೋಲಿಬಾರ್​ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಘಟನೆಗೆ ನಗರ ಸಾಕ್ಷಿಯಾಗಿದೆ.

ಸಿಎಎ ವಿರೋಧಿ ಪ್ರತಿಭಟನಾ ಸಭೆಗೆ ಬಳಸಲಾಗಿದ್ದ ಎರಡೂವರೆ ಸಾವಿರ ಕುರ್ಚಿಗಳಿಗೆ ಯಾರೋ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಪೌರತ್ವ ಕಾಯ್ದೆ ವಿರೋಧಿಸಿ ನಿನ್ನೆ ಮಂಗಳೂರು ಹೊರವಲಯದ  ಕೊಣಾಜೆಯ ದೇರಳಕಟ್ಟೆಯಲ್ಲಿ ಬೃಹತ್​ ಪ್ರತಿಭಟನಾ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು.

ಇನ್ನೆರಡು ದಿನಗಳಲ್ಲಿ ಕೆಪಿಸಿಸಿ ಅಧ್ಯಕ್ಷ ಮತ್ತು ವಿಪಕ್ಷ ನಾಯಕನ ಆಯ್ಕೆ ಸಾಧ್ಯತೆ; ದೆಹಲಿಯತ್ತ ಸಿದ್ದರಾಮಯ್ಯ

ಈ ವೇಳೆ ಪ್ರತಿಭಟನಾ ಜಾಥಾದಲ್ಲಿ ಸಾವಿರಾರು ಮಂದಿ ಸೇರಿದ್ದರು. ಪ್ರತಿಭಟನಾ ರ್ಯಾಲಿ ಮುಗಿದ ಬಳಿಕ ಎಲ್ಲಾ ಕುರ್ಚಿಗಳನ್ನು ಈಚರ್​ ವಾಹನಕ್ಕೆ ತುಂಬಲಾಗಿತ್ತು. ಆದರೆ ದುಷ್ಕರ್ಮಿಗಳು ಈಚರ್​ ವಾಹನ ಸಮೇತ 2,500 ಕುರ್ಚಿಗಳಿಗೆ ಬೆಂಕಿ ಹಚ್ಚಿದ್ದಾರೆ. ಪರಿಣಾಮ ವಾಹನದ ಜೊತೆಗೆ ಕುರ್ಚಿಗಳೆಲ್ಲವೂ ಸುಟ್ಟು ಭಸ್ಮವಾಗಿವೆ.

ಕೊಣಾಜೆ ಠಾಣಾ ವ್ಯಾಪ್ತಿಯ ದೇರಳಕಟ್ಟೆಯಲ್ಲಿ ಘಟನೆ ನಡೆದಿದೆ. ದೇರಳಕಟ್ಟೆ ಪೌರತ್ವ ಸಂರಕ್ಷಣಾ ಸಮಿತಿಯಿಂದ ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸಲಾಗಿತ್ತು. ರ್ಯಾಲಿ ಮುಗಿದ ನಂತರ ಕುರ್ಚಿಗಳನ್ನು ವಾಹನದಲ್ಲಿ ತುಂಬಿಸಿಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಕಾಶಿ ವಿಶ್ವನಾಥನ ಭಕ್ತರಿಗೆ ಡ್ರೆಸ್​ಕೋಡ್; ಪ್ಯಾಂಟ್​ ಧರಿಸಿ ಬಂದರೆ ದೇವರ ದರ್ಶನವಿಲ್ಲ

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದೇರಳಕಟ್ಟೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
First published:January 13, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ