news18-kannada Updated:March 11, 2020, 8:10 PM IST
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಸಚಿವ ಕೆ.ಸುಧಾಕರ್ ಮತ್ತು ಕೆ.ಆರ್.ರಮೇಶ್ ಕುಮಾರ್.
ಬೆಂಗಳೂರು(ಮಾ.11) : ರಮೇಶ್ ಕುಮಾರ್ ರಿಂದ ನನ್ನ ವ್ಯಕ್ತಿತ್ವಕ್ಕೆ ಧಕ್ಕೆಯಾಗಿದೆ. ಹಕ್ಕುಚ್ಯುತಿ ಆಗಿದೆ ಎಂಬ ಸಚಿವ ಸುಧಾಕರ್ ಆರೋಪದಲ್ಲಿ ಹುರುಳಿಲ್ಲ ಎಂದು ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಹೇಳಿದರು.
ಸದನದಲ್ಲಿ ಸಂವಿಧಾನದ ಚರ್ಚೆ ವೇಳೆ ರಮೇಶ್ ಕುಮಾರ್ ಅವರು ತಮ್ಮನ್ನು ಬಾಸ್ಟರ್ಡ್ ಎಂದು ಕರೆದಿರುವುದಾಗಿ ಸುಧಾಕರ್ ಸ್ಪೀಕರ್ಗೆ ಹಕ್ಕುಚ್ಯುತಿ ನೋಟೀಸ್ ಕೊಟ್ಟಿದ್ದಾರೆ. ಆದರೆ ಇದು ರೆಕಾರ್ಡ್ನಲ್ಲಿ ಇಲ್ಲ. ಇದನ್ನು ಅವರು ಹುಟ್ಟು ಹಾಕಿಕೊಂಡು ಹೇಳುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.
ಸ್ಪೀಕರ್ ಜೊತೆ ಮಾತನಾಡಿದ ಸಂದರ್ಭದಲ್ಲಿ ನೋಟೀಸ್ ಬಗ್ಗೆ ನಮಗೆ ಹೇಳಿಲ್ಲ. ಸದನದಲ್ಲಿ ಕೂಳಿತಾಗ 363 ನೋಟೀಸ್ ನೀಡಲಾಗಿದೆ ಅಂತ ಸ್ಪೀಕರ್ ಹೇಳಿದರು. ಬಾಸ್ಟರ್ಡ್ ಎಂದು ಹೇಳಿದ್ದಾರೆ ಎಂಬುದರ ಬಗ್ಗೆ ಯಾವ ರೆಕಾರ್ಡ್ ನಲ್ಲಿಯೂ ಇಲ್ಲ. ಅದು ಎಲ್ಲಿ ಹುಟ್ಟುಸಿಕೊಂಡದ್ದು ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.
ರಮೇಶ್ ಕುಮಾರ್ ತೇಜೋವಧೆ ಮಾಡುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಜನರು ಇದನ್ನೆಲ್ಲಾ ನೋಡುತ್ತಿದ್ದಾರೆ. ಮಾಧ್ಯಮಗಳನ್ನು ದೂರ ಇಟ್ಟ ಬಿಜೆಪಿಯವರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಂಬಿಕೆ ಇದೆಯಾ ಎಂದು ಸಿದ್ಧರಾಮಯ್ಯ ಪ್ರಶ್ನಿಸಿದರು. ಪ್ರಜಾಪ್ರಭುತ್ವದ ಮೇಲೆ ಇವರಿಗೆ ನಂಬಿಕೆ ಇದ್ದರೆ, ಸೂಕ್ತ ರೀತಿಯಲ್ಲಿ ಸದನ ನಡೆಸಬೇಕು ಎಂದು ಆಗ್ರಹಿಸಿದರು.
ಮಧ್ಯಾಹ್ನ ಸ್ಪೀಕರ್ ನನ್ನನ್ನು ಕರೆದರು, ಆ ವೇಳೆ ಬಿಜೆಪಿಯವರು ನನ್ನನ್ನು ಮಾತನಾಡುವುದಕ್ಕೆ ಬಿಟ್ಟಿಲ್ಲ. ಇವಾಗ ಹೊಸ ಹೊಸ ವಿಚಾರ ಮಾತನಾಡುತ್ತಿದ್ದಾರೆ. ಅವರು ಸಂವಿಧಾನ ಕುರಿತ ಚರ್ಚೆ ಪೂರ್ಣ ಮಾಡುವುದಕ್ಕೆ ಬಿಡಿ ಅಂತಿದ್ದಾರೆ. ಅವರಿಗೆ ಯಾವುದೇ ಸಾಕ್ಷಿ ಇಲ್ಲ. ಎಲ್ಲಿ ತಮ್ಮ ಬಣ್ಣ ಬಯಲಾಗುತ್ತೆ ಎಂಬ ಭಯ ಅವರಲ್ಲಿ ಇರುವುದರಿಂದ ನಮಗೆ ಚರ್ಚೆಗೆ ಅವಕಾಶ ಕೊಡುತ್ತಿಲ್ಲ ಎಂದು ಕಿಡಿಕಾರಿದರು.
ಇದನ್ನೂ ಓದಿ :
ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿರುವುದು ಆಶ್ಚರ್ಯ ತಂದಿದೆ; ಸಚಿವ ಈಶ್ವರಪ್ಪ
ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಡಿಕೆ ಶಿವಕುಮಾರ್ ನೇಮಕ ಆಗಿದೆ. ಅವರಿಗೆ ಸೇರಿದಂತೆ ನೂತನ ಕಾರ್ಯಾಧ್ಯಕ್ಷರಿಗೆ ನಾನು ಅಭಿನಂದನೆ ತಿಳಿಸಿದ್ದೇನೆ. ಪಾಪ ಸಚಿವ ಶ್ರೀರಾಮುಲು ತುಂಬಾ ಭ್ರಮೆಯಲ್ಲಿ ಇದ್ದಾರೆ. ಲೋಕಸಭೆ ಚುನಾವಣೆಯ ನಂತರ ಬಿಜೆಪಿ ಕಥೆ ಏನಾಗಿದೆ. ಐದು ರಾಜ್ಯಗಳಲ್ಲಿ ಬಿಜೆಪಿ ಕಥೆ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಬಿಜೆಪಿ ದೇಶದಲ್ಲಿ ಪಾತಾಳಕ್ಕೆ ಹೋಗಿದೆ ಎಂದು ಸಚಿವ ಶ್ರೀರಾಮುಲು ಅವರಿಗೆ ಸಿದ್ದರಾಮಯ್ಯ ತಿರುಗೇಟು ನೀಡಿದರು.
First published:
March 11, 2020, 7:53 PM IST