Swamiji Suicide: ಆಡಿಯೋ ವೈರಲ್​ಗೆ ನೊಂದು ಬೆಳಗಾವಿಯಲ್ಲಿ ಸ್ವಾಮೀಜಿ ಆತ್ಮಹತ್ಯೆ! ಮಠದಲ್ಲೇ ನೇಣುಬಿಗಿದುಕೊಂಡು ಸೂಸೈಡ್

ಬೆಳಗಾವಿಯ ಬೈಲಹೊಂಗಲದ ಮಡಿವಾಳೇಶ್ವರ ಮಠದ ಬಸವಸಿದ್ದಲಿಂಗ ಸ್ವಾಮೀಜಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಡೆತ್ ನೋಟ್ ಬರೆದಿಟ್ಟಿರುವ ಸ್ವಾಮೀಜಿಗಳು ನೇಣುಬಿಗಿದುಕೊಂಡು ಸೂಸೈಡ್ ಮಾಡಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನ ಸಾವಿಗೆ ನಾನೇ ಕಾರಣ ಅಂತ ಲೆಟರ್ ಬರೆದಿಟ್ಟಿದ್ದಾರೆ.

ಬಸವಸಿದ್ದಲಿಂಗ ಸ್ವಾಮೀಜಿ ಆತ್ಮಹತ್ಯೆ

ಬಸವಸಿದ್ದಲಿಂಗ ಸ್ವಾಮೀಜಿ ಆತ್ಮಹತ್ಯೆ

  • Share this:
ರಾಜ್ಯದಲ್ಲಿ ಮುರುಘಾ ಸ್ವಾಮೀಜಿ ವಿರುದ್ಧದ ಅತ್ಯಾಚಾರ ಪ್ರಕರಣ ದೊಡ್ಡ ಸದ್ದು ಮಾಡ್ತಿದೆ. ಸ್ವಾಮೀಜಿಗಳನ್ನು 3 ದಿನ ಪೊಲೀಸ್ ಕಸ್ಟಡಿ ಕೊಟ್ಟು ಈಗ 9 ದಿನ ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದೆ. ಇದರ ನಡುವೆ ರಾಜ್ಯದಲ್ಲಿ ಮತ್ತೊಂದು ಘಟನೆ ನಡೆದೋಗಿದೆ. ಬೆಳಗಾವಿಯ (Belagavi) ಬೈಲಹೊಂಗಲದ ನೇಗಿನಾಳ ಗ್ರಾಮದಲ್ಲಿ ಬಸವಸಿದ್ದಲಿಂಗ ಸ್ವಾಮೀಜಿ (Basavasiddalinga Swamiji) ಆತ್ಮಹತ್ಯೆಗೆ (Suicide) ಶರಣಾಗಿದ್ದಾರೆ. 50 ವರ್ಷದ ಬಸವಸಿದ್ದಲಿಂಗ ಸ್ವಾಮೀಜಿ ಮಠದಲ್ಲೇ (Mutt) ಆತ್ಮಹತ್ಯೆಗೆ ಶರಣಾಗಿದ್ದಾರೆ. ಡೆತ್​​ನೋಟ್​​  (Death Note) ಬರೆದಿಟ್ಟಿರುವ ಸ್ವಾಮೀಜಿ, ಮಡಿವಾಳೇಶ್ವರ ಮಠದ ಮೇಲಿನ ಮಹಡಿಯ ಕೋಣೆಯಲ್ಲಿ ನೇಣಿಗೆ (Hanging) ಶರಣಾಗಿದ್ದಾರೆ. ಹಡೆದ ತಾಯಿ ನನ್ನ ಕ್ಷಮಿಸು, ಮಠದ ಭಕ್ತರು ನನ್ನನ್ನು ಕ್ಷಮಿಸಿ. ನನ್ನ ನಡೆ ಮಡಿವಾಳೇಶ್ವರ ಕಡೆಗೆ ಎಂದು ಡೆತ್​​​ನೋಟ್​ನಲ್ಲಿ ಬರೆದಿಟ್ಟಿದ್ದಾರೆ.

ಬೆಳಗಾವಿಯ ಬೈಲಹೊಂಗಲದ ಮಡಿವಾಳೇಶ್ವರ ಮಠದ ಬಸವಸಿದ್ದಲಿಂಗ ಸ್ವಾಮೀಜಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಡೆತ್ ನೋಟ್ ಬರೆದಿಟ್ಟಿರುವ ಸ್ವಾಮೀಜಿಗಳು ನೇಣುಬಿಗಿದುಕೊಂಡು ಸೂಸೈಡ್ ಮಾಡಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನ ಸಾವಿಗೆ ನಾನೇ ಕಾರಣ ಅಂತ ಲೆಟರ್ ಬರೆದಿಟ್ಟಿದ್ದಾರೆ.

Basavasiddalinga Swamiji suicide in Belagavi after viral audio hanging in the mutt
ಬಸವಸಿದ್ದಲಿಂಗ ಸ್ವಾಮೀಜಿ


ಯಾರನ್ನೂ ವಿಚಾರಣೆಗೆ ಒಳಪಡಿಸಬೇಡಿ- ಸ್ವಾಮೀಜಿ ಡೆತ್​ನೋಟ್
ಡೆತ್ ನೋಟ್​​​ನಲ್ಲಿ ಬಸವಸಿದ್ದಲಿಂಗ ಸ್ವಾಮೀಜಿಯವರು, ಯಾರನ್ನೂ ವಿಚಾರಣೆಗೆ ಒಳಪಡಿಸಬೇಡಿ ಎಂದು ಬರೆದಿದ್ದಾರೆ. ಈ ಲೋಕದ ಗೊಡವೆ ಸಾಕು. ಮಠದ ಕಮಿಟಿ, ಭಕ್ತರು ಮಠವನ್ನು ಮುನ್ನಡೆಸಿಕೊಂಡು ಹೋಗಿ ಎಂದು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಟಿಪ್ಪು ವರ್ಣನೆ ಮಾಡಿದ್ದಕ್ಕೆ ಮುರುಘಾ ಶ್ರೀಗಳಿಗೆ ಈ ಪರಿಸ್ಥಿತಿ: ಶಾಸಕ ಯತ್ನಾಳ್

ಸ್ವಾಮೀಜಿ ಸಾವಿಗೆ ಆಡಿಯೋ ಕಾರಣ!
ಬಸವಸಿದ್ದಲಿಂಗ ಸ್ವಾಮೀಜಿ ಸಾವಿಗೆ ಆಡಿಯೋನೇ ಕಾರಣ ಎನ್ನಲಾಗಿದೆ. ಇಬ್ಬರು ಮಹಿಳೆಯರು ಬಸವಸಿದ್ದಲಿಂಗ ಸ್ವಾಮೀಜಿ ಬಗ್ಗೆ ಮಾತನಾಡಿರುವ ಆಡಿಯೋ ವೈರಲ್ ಆಗಿತ್ತು. ಈ ಬಗ್ಗೆ ಸ್ವಾಮೀಜಿ ಖಿನ್ನತೆಗೊಳಗಾಗಿದ್ದರು ಎನ್ನಲಾಗಿದೆ.

Basavasiddalinga Swamiji suicide in Belagavi after viral audio hanging in the mutt
ಬಸವಸಿದ್ದಲಿಂಗ ಸ್ವಾಮೀಜಿ


ನಾಳೆ ಬೆಳಗ್ಗೆ 9 ಗಂಟೆಗೆ ಗ್ರಾಮದಲ್ಲಿ ಶ್ರೀಗಳ ಮೆರವಣಿಗೆ
ನಾಳೆ ಬೆಳಗ್ಗೆ 9 ಗಂಟೆಗೆ ಗ್ರಾಮದಲ್ಲಿ ಶ್ರೀಗಳ ಪಾರ್ಥಿವ ಶರೀರರದ ಮೆರವಣಿಗೆ ನಡೆಯಲಿದೆ. ಬಳಿಕ ಮಧ್ಯಾಹ್ನ 1 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ. ಈಗಾಗಲೇ ಬಸವಸಿದ್ದಲಿಂಗ ಸ್ವಾಮೀಜಿಯ ಅಂತಿಮ ದರ್ಶನ ಪಡೆಯಲು ಹಲವು ಮಠಾಧೀಶರು ಆಗಮಿಸ್ತಿದ್ದಾರೆ.

ಇಬ್ಬರು ಮಹಿಳೆಯರ ವಿರುದ್ಧ ಶಿಕ್ಷೆಗೆ ಆಗ್ರಹ
ಸ್ವಾಮೀಜಿಗಳು ಕಾಯಕ ಯೋಗಿ ಆಗಿದ್ದರು. ಆಡಿಯೋ ವೈರಲ್ ಬೆನ್ನಲ್ಲೇ ಮನನೊಂದು ಆತ್ಮಹತ್ಯೆ ಮಾಡಿದ್ದಾರೆ. ಆಡಿಯೋದಲ್ಲಿ ಮಾತನಾಡಿದ ಇಬ್ಬರು ಮಹಿಳೆಯರಿಗೆ ಶಿಕ್ಷೆ ಆಗಬೇಕು ಅಂತಾ ಗ್ರಾಮದ ಮುಖಂಡರು ಆಗ್ರಹಿಸಿದ್ದಾರೆ.

Basavasiddalinga Swamiji suicide in Belagavi after viral audio hanging in the mutt
ಸ್ವಾಮೀಜಿ ಬರೆದಿಟ್ಟಿರುವ ಡೆತ್​ನೋಟ್


ಶ್ರೀಗಳ ಕೊಠಡಿ ಮುಂಭಾಗದಲ್ಲಿ ಮೌನ ಪ್ರತಿಭಟನೆ.
ಮಹಿಳೆಯರಿಬ್ಬರು ಮಾತನಾಡಿದ ಆಡಿಯೋದಲ್ಲಿ ಸ್ವಾಮಿಜಿ ಹೆಸರು ಪ್ರಸ್ತಾಪವಾದ ಹಿನ್ನೆಲೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆಡಿಯೋದಲ್ಲಿ ಮಾತನಾಡಿದ ಮಹಿಳೆಯರ ಬಂಧನ ಆಗ್ಬೇಕು ಅಂತಾ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ಬಂಧನವಾಗದ ಹೊರತು ಮರಣೋತ್ತರ ಪರೀಕ್ಷೆಗೆ ಅವಕಾಶ ಕೊಡಲ್ಲ ಎಂದು ಪಟ್ಟುಹಿಡಿದಿದ್ದರು. ಗ್ರಾಮಸ್ಥರು ಶ್ರೀಗಳ ಕೊಠಡಿ ಮುಂಭಾಗದಲ್ಲಿ ಮೌನ ಪ್ರತಿಭಟನೆ ನಡೆಸಿದರು.

ಆಡಿಯೋದಲ್ಲಿ ಮಾತನಾಡಿದ ಮಹಿಳೆ ಜೊತೆಗೆ ನಾನು ಮಾತನಾಡಿದ್ದೇನೆ. ನಿಮ್ಮಿಂದ ಶ್ರೀಗಳನ್ನು ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಶ್ರೀಗಳ ಸಾವಿಗೆ ವಿಡಿಯೋ ಕಾರಣ. ಇಬ್ಬರ ಮಹಿಳೆಯರನ್ನು ಬಂಧನ ಮಾಡಬೇಕು ಎಂದು ನೇಗಿನಾಳ ಗ್ರಾಮದಲ್ಲಿ ಲಿಂಗಾಯತ ಮುಖಂಡ ಶಂಕರ ಗುಡಸ್ ಹೇಳಿದ್ದಾರೆ.

ಲಿಂಗಾಯತ ಮಠಗಳನ್ನು ಟಾರ್ಗೆಟ್ ಮಾಡಲಾಗಿದೆ- ಗುಡಸ್
ಆಡಿಯೋ ವೈರಲ್ ಬಳಿ ಸ್ವಾಮೀಜಿ ಮನನೊಂದಿದ್ದರು. ಕಠೋರವಾಗಿ ಬಸವ ತತ್ವ ಪಾಲಿಸುತ್ತಿದ್ದರು. ಮಠಾಧೀಶರಿಗೆ ಕಿರುಕುಳ ನಿಲ್ಲಬೇಕು. ಆಡಿಯೋದಲ್ಲಿ ಮಾತನಾಡಿದವರೇ ಸಾವಿಗೆ ಕಾರಣ. ಲಿಂಗಾಯತ ಮಠಗಳನ್ನು ಟಾರ್ಗೆಟ್ ಮಾಡಲಾಗಿದೆ ಅಂತಾ ಶಂಕರ ಗುಡಸ್ ಹೇಳಿದ್ದಾರೆ.

ಇದನ್ನೂ ಓದಿ: ಮುರುಘಾ ಸ್ವಾಮೀಜಿಗೆ ಸೆಪ್ಟೆಂಬರ್ 14ರವರೆಗೆ ನ್ಯಾಯಾಂಗ ಬಂಧನ

ಮುರುಘಾ ಸ್ವಾಮೀಜಿಗೆ 9 ದಿನ ನ್ಯಾಯಾಂಗ ಬಂಧನ
ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಮುರುಘಾ ಸ್ವಾಮೀಜಿಗೆ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶ ಹೊರಡಿಸಿದೆ. ಇಂದು ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಮತ್ತೆ 9 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಸೆಪ್ಟೆಂಬರ್ 14ರವರೆಗೆ ನ್ಯಾಯಾಂಗ ಬಂಧಿನವಿರಲಿದೆ.
Published by:Thara Kemmara
First published: