ಬಿಜೆಪಿಗೆ ಜೆಡಿಎಸ್ ಬೆಂಬಲ ನೀಡುವ ಮಾತನ್ನು ಪುನರುಚ್ಚರಿಸಿದ ಬಸವರಾಜ್​ ಹೊರಟ್ಟಿ

ಯಡಿಯೂರಪ್ಪ ಭೇಟಿ ಕುರಿತು ಮಾತನಾಡಿದ ಅವರು, ಕ್ಷೇತ್ರದ ಕೆಲಸದ ಬಗ್ಗೆ ಸಿಎಂ ಭೇಟಿಯಾಗಿದ್ದೆ ಅಷ್ಟೇ. ಇದರ ಹಿಂದೆ ಬೇರೆ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದರು.

Seema.R
Updated:November 19, 2019, 4:14 PM IST
ಬಿಜೆಪಿಗೆ ಜೆಡಿಎಸ್ ಬೆಂಬಲ ನೀಡುವ ಮಾತನ್ನು ಪುನರುಚ್ಚರಿಸಿದ ಬಸವರಾಜ್​ ಹೊರಟ್ಟಿ
ಎಂಎಲ್ಸಿ ಬಸವರಾಜ ಹೊರಟ್ಟಿ
  • Share this:
ಬೆಂಗಳೂರು (ನ.19): ಮಕ್ಕಳು ಅತ್ತಾಗ ಚಾಕಲೇಟ್​ ನೀಡಿ ಸಮಾಧಾನ ಪಡಿಸುವಂತೆ, ಈಗ ನಾವು ಅಸಮಾಧಾನಿತ ಪರಿಷತ್​ ಸದಸ್ಯರನ್ನು ಮನವೊಲಿಸಿದ್ದೇವೆ. ಅದೊಂದು ಕೆಟ್ಟ ಘಳಿಗೆ, ಬಿಟ್ಟುಬಿಡುವಂತೆ ಸಮಾಧಾನ ಪಡಿಸಿದ್ದೇವೆ. ಇದರಿಂದ ಸದ್ಯಕ್ಕೆ ಅಸಮಾಧಾನ ತಣ್ಣಗೆ ಆಗಿದೆ ಎಂದು ಜೆಡಿಎಸ್​ ನಾಯಕ ಬಸವರಾಜ್​ ಹೊರಟ್ಟಿ ತಿಳಿಸಿದ್ದಾರೆ. 

ಕುಮಾರಸ್ವಾಮಿ ತಮ್ಮನ್ನು ಸರಿಯಾಗಿ ನಡೆಸಿಕೊಂಡಿಲ್ಲ, ನಮ್ಮನ್ನು ಕಾಣುತ್ತಿಲ್ಲ ಎನ್ನುವ ದೂರು ಇದೆ.  ಈಗ ಅವರು ನಮ್ಮ ಜೊತೆ ಮಾತನಾಡಿದ್ದಾರೆ. ಉಪಚುನಾವಣೆ ಹಿನ್ನೆಲೆ ಇದನ್ನೆಲ್ಲಾ ಮರೆತು ಬಿಡುವಂತೆ ತಿಳಿಸಿದ್ದೇನೆ. ಮಕ್ಕಳಿಗೆ ತಾತ್ಕಲಿಕವಾಗಿ ಚಾಕಲೇಟ್​ ಕೊಟ್ಟು ಸಮಾಧಾನ ಮಾಡುವಂತೆ ಉಪಚುನಾವಣೆ ನೆಪದಲ್ಲಿ ಅವರನ್ನು ಓಲೈಸುವ ಯತ್ನ ನಡೆಸಲಾಗಿದೆ. ನಾವು ಕೂಡ ಚಾಕಲೇಟ್ ಪಡೆದು ಸೈಲೆಂಟ್ ಆಗಿದ್ದೇವೆ  ಎಂದರು.

ಯಡಿಯೂರಪ್ಪ ಭೇಟಿ ಕುರಿತು ಮಾತನಾಡಿದ ಅವರು, ಕ್ಷೇತ್ರದ ಕೆಲಸದ ಬಗ್ಗೆ ಸಿಎಂ ಭೇಟಿಯಾಗಿದ್ದೆ ಅಷ್ಟೇ. ಇದರ ಹಿಂದೆ ಬೇರೆ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದರು.

ಉಪಚುನಾವಣೆ ಬಳಿಕ ಸರ್ಕಾರ ಬೀಳಿಸಲು ಬಿಡಲ್ಲ ಎಂಬ ಕುಮಾರಸ್ವಾಮಿ, ದೇವೇಗೌಡರ ಮಾತಿನ ಆಧಾರದ ಮೇಲೆ ಬಿಜೆಪಿಗೆ ಜೆಡಿಎಸ್​ ಬೆಂಬಲ ನೀಡಿದರೆ ಒಳಿತು ಎಂದು ಹೇಳಿಕೆಯನ್ನು ನಾನು ನೀಡಿದೆ. ಬಿಜೆಪಿ ಹೆಚ್ಚು ಸ್ಥಾನ ಗೆಲ್ಲದಿದ್ದರೆ ಬೆಂಬಲ ಎಂದಿದ್ದೆ. ಈಗಲೂ ಕೂಡ ನಾನು ಅದೇ ಮಾತನ್ನು ಹೇಳುತ್ತೇನೆ ಎಂದರು.

ಇದನ್ನು ಓದಿ: ಯಾರಿಗೆ ಬೆಂಬಲ?: ಇನ್ನೆರಡು ದಿನದಲ್ಲಿ ನಿರ್ಧಾರ ಪ್ರಕಟಿಸಲಿರುವ ಸಂಸದೆ ಸುಮಲತಾ

ಕುಮಾರಸ್ವಾಮಿ ಉಪಚುನಾವಣೆ ಬಳಿಕ ಕುಮಾರಸ್ವಾಮಿ ಯಡಿಯೂರಪ್ಪ ರಾಜೀನಾಮೆ ನೀಡುತ್ತಾರೆ ಎಂಬ ಹೊಸ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಉಪ ಚುನಾವಣೆ ನಂತರ ಹಿಂಗೂ ಆಗಬಹುದು, ಹಂಗೂ ಆಗಬಹುದು. ಕುಮಾರಸ್ವಾಮಿ ಸರ್ಕಾರ ಬೀಳೋಕೆ ಬಿಡಲ್ಲ ಎಂದಿದ್ದಾರೆ. ಸರ್ಕಾರ ಬೀಳಲ್ಲ. ಸರ್ಕಾರ ಬೀಳಿಸುವುದಕ್ಕೆ ಮೂರು ಪಕ್ಷಗಳಲ್ಲಿ ಯಾವ ಶಾಸಕರಿಗೆ ಇಷ್ಟ ಇಲ್ಲ ಎಂದು ತಿಳಿಸಿದರು.
 
First published:November 19, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ