ವೀರಶೈವ ಮತ್ತು ಲಿಂಗಾಯತ ಎರಡೂ ಬೇರೆ ಬೇರೆ: ಬಸವರಾಜ್ ಹೊರಟ್ಟಿ


Updated:March 13, 2018, 5:53 PM IST
ವೀರಶೈವ ಮತ್ತು ಲಿಂಗಾಯತ ಎರಡೂ ಬೇರೆ ಬೇರೆ: ಬಸವರಾಜ್ ಹೊರಟ್ಟಿ

Updated: March 13, 2018, 5:53 PM IST
ಪರಶುರಾಮ್ ತಹಶೀಲ್ದಾರ್, ನ್ಯೂಸ್ 18 ಕನ್ನಡ

ಹುಬ್ಬಳ್ಳಿ(ಮಾ.13): ವೀರಶೈವ ಮತ್ತು ಲಿಂಗಾಯತ ಎರಡೂ ಬೇರೆಬೇರೆ ಎಂಬುದರ ಬಗ್ಗೆ ನಮ್ಮ ಬಳಿ ಐತಿಹಾಸಿಕ ದಾಖಲೆಗಳಿವೆ ಎಂದು, ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಈ ಕುರಿತು ಚರ್ಚಿಸಲು ವೀರಶೈವ ಮತ್ತು ಲಿಂಗಾಯತ ಮುಖಂಡರ ಸಭೆ ಕರೆಯುವಂತೆ ಯಡಿಯೂರಪ್ಪನವರಿಗೆ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ.

ಯಡಿಯೂರಪ್ಪ ಮತ್ತು ಆರ್‌ಎಸ್‌ಎಸ್ ಮುಖಂಡರು‌ ಪ್ರತ್ಯೇಕ ಧರ್ಮಕ್ಕೆ ವಿರೋಧವಿದೆ ಎಂದಿದ್ದಾರೆ. ಆರ್‌ಎಸ್‌ಎಸ್‌ನ ಭಯ್ಯಾಜಿ ನಮ್ಮ ವಿಚಾರದಲ್ಲಿ ಮೂಗು ತೂರಿಸಬಾರದು. ಯಡಿಯೂರಪ್ಪನವರೇ ನೀವು ವೀರಶೈವರೋ ಅಥವಾ ಲಿಂಗಾಯತರೋ ಸ್ಪಷ್ಟಪಡಿಸಿ. ನಾಗಮೋಹನ ದಾಸ್ ಸಮಿತಿ ವರದಿ ಕಸದಬುಟ್ಟಿಗೆ ಎಸೆಯಿರಿ ಎಂದು ಜಗದೀಶ್ ಶೆಟ್ಟರ್ ಹೇಳುತ್ತಿದ್ದಾರೆ. ಜಗದೀಶ ಶೆಟ್ಟರ್ ಯಾವ ಸಮುದಾಯದಿಂದ ಮುಂದೆ ಬಂದರು ಹೇಳಲಿ. ಸಮಿತಿಗೆ 700 ಪುಟಗಳ ಐತಿಹಾಸಿಕವಾದ ದಾಖಲೆ ಕೊಟ್ಟಿದ್ದೇವೆ. ಕೆಲವು ಸ್ವಾಮೀಜಿಗಳು ಧರ್ಮ ಒಡೆಯುತ್ತಿದ್ದೇವೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ.

ಲಿಂಗಾಯತರಿಗೆ ಪ್ರತ್ಯೇಕ ಸ್ಥಾನಮಾನ ಕೊಟ್ಟರೆ ಯಾರಿಗೇನು ತೊಂದರೆ. ನಾಗಮೋಹನ ದಾಸ್‌ ವರದಿ ಒಪ್ಪಿಕೊಳ್ಳಬೇಕು ಎನ್ನುವುದು ರಾಜ್ಯದ ಲಿಂಗಾಯತರ ಒಕ್ಕೊರಲ ಧ್ವನಿ. ರಾಜ್ಯ ಸರ್ಕಾರ ಯಾವುದೇ ಒತ್ತಡಕ್ಕೆ ಮಣಿಯದೆ ವರದಿ ಒಪ್ಪಿಕೊಳ್ಳಬೇಕು. ಅಲ್ಪಸಂಖ್ಯಾತ ಸ್ಥಾನಮಾನಕ್ಕಾಗಿ ಕೇಂದ್ರಕ್ಕೆ ಶಿಫಾರಸು ಕಳಿಸಬೇಕು. ನಮ್ಮ ಹಕ್ಕನ್ನು ನಾವು ಕೇಳಿದರೆ ಭಿಕ್ಷೆಯಲ್ಲ. ಕ್ಯಾಬಿನೆಟ್‌ನಲ್ಲಿ ಒಮ್ಮತದ ತೀರ್ಮಾನಕ್ಕೆ ಬರದಿದ್ದರೆ ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂದವರು ತಿಳಿಸಿದ್ದಾರೆ.
First published:March 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ