Dharwad: ನಾನೇನು ಭೂತನಾ? ನನ್ನ ಮುಖ ಹಾಗೆ ಕಾಣುತ್ತಾ? ನಾನು ಎಲ್ಲರಿಗಿಂತ ಸ್ಮಾರ್ಟ್ ಇದ್ದೀನಿ: ಬಸವರಾಜ್ ಹೊರಟ್ಟಿ

ನಾನು ಅದಕ್ಕೆ ಬಯ್ಯುತ್ತೇನೆ,‌ ಅದು ಅವರವರ ಪ್ರೀತಿ, ಗೌರವ.‌ ನಾನೇನೂ ದೇವರಲ್ಲ, ಐದೂ ಬೆರಳು ಸಮ ಇರೋದಿಲ್ಲ. ರಾಜಕಾರಣಿ ಅನ್ನೋದಕ್ಕೆ ನಮಗೆ ಕೊಂಚ "ರಿಯಾಯಿತಿ" ಕೊಡಬೇಕು. ನಾನು ಆದರ್ಶ ಬಿಟ್ಟು ಹೋಗಿಲ್ಲ, ಹೋಗೋದಿಲ್ಲ ಎಂದರು.

ಬಸವರಾಜ್ ಹೊರಟ್ಟಿ

ಬಸವರಾಜ್ ಹೊರಟ್ಟಿ

  • Share this:
ಧಾರವಾಡ : ನಾನೇನು ಭೂತನಾ, ನನ್ನ ಮುಖ ಹಾಗೆ ಕಾಣುತ್ತಾ, ನಾನು ಎಲ್ಲರಿಗಿಂತ ಸ್ಮಾರ್ಟ್ ಇದ್ದೇನೆ. ನೀವೇ ಪ್ರಾಮಾಣಿಕವಾಗಿ ಹೇಳಿ ಅಂತಾ ಮಾಧ್ಯಮದವರಿಗೆ ಬಿಜೆಪಿ ಅಭ್ಯರ್ಥಿ ಬಸವರಾಜ್ ಹೊರಟ್ಟಿ (BJP Candidate Basavaraj Horatti) ಪ್ರಶ್ನೆ ಮಾಡಿದ್ದಾರೆ. ಧಾರವಾಡದಲ್ಲಿ (Dharwad) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಶ್ಚಿಮ ಶಿಕ್ಷಕರ ಚುನಾವಣೆ (Election) ಮತದಾನವು, ಈ ಬಾರಿ ಶೇ. 90 ರಷ್ಟು ಮತದಾನವಾಗಬಹುದು ಎಂದರು. ಇದೇ ಸಂದರ್ಭದಲ್ಲಿ ಶಿಕ್ಷಕರಿಗೆ (Teachers) ಹೆದರಿಸುತ್ತಾರಾ ಅನ್ನೋ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಹೊರಟ್ಟಿ, ಮೂರ್ಖ ಹೀಗೆ ಹೇಳುತ್ತಾನೆ. ಹೆದರಿಸಲು, ಹೆದರಲು ಕಾರಣ ಬೇಕಲ್ಲವೇ. ನಾನು 42 ವರ್ಷದಿಂದ ಎಂ.ಎಲ್.ಸಿ. (MLC) ಆಗಿ ಕೆಲಸ ಮಾಡಿದ್ದೇನೆ. ನನ್ನ ಮೇಲೆ ಒಂದೂ ಕಪ್ಪು ಚುಕ್ಕೆ ಇಲ್ಲ, ಹಾಗೇನಾದರೂ ಇದ್ದರೆ ತೋರಿಸಿ ಎಂದು ಸವಾಲು ಹಾಕಿದರು.

ನಾನು ಮಂತ್ರಿ, ಸಭಾಪತಿಯಾಗಿ ಕೆಲಸ ಮಾಡಿದ್ದೇನೆ. ಪ್ರತಿ ಬಾರಿ ಸಾವಿರಾರು ಶಿಕ್ಷಕರು ಮತ ಹಾಕುತ್ತಾರೆ. ಅವರೆಲ್ಲರಿಗೂ ನಾನು ಹೆದರಿಸಿದ್ದೇನೆಯೇ? ನಾನೇನು ಬ್ಯಾಲೆಟ್ ಡಬ್ಬಿಯಲ್ಲಿ ಕೂತಿರುತ್ತೇನೆಯೇ? ನನಗೆ ಒಂದೇ ಒಂದು ಉದಾಹರಣೆ ತೋರಿಸಿ ಎಂದರು.

ಜೆಡಿಎಸ್ ಅಭ್ಯರ್ಥಿ 13 ವರ್ಷ ನಮ್ಮ ಮನೆಯಲ್ಲಿದ್ದ!

ಜೆಡಿಎಸ್ ಅಭ್ಯರ್ಥಿ ಆರೋಪಕ್ಕೆ ‌ತಿರುಗೇಟು ನೀಡಿದ ಹೊರಟ್ಟಿ, ಜೆಡಿಎಸ್ ಅಭ್ಯರ್ಥಿ 13 ವರ್ಷ ನಮ್ಮನೆಯಲ್ಲಿದ್ದ. ಆತ ಏನೇನು ಮಾಡಿದ್ದಾನೆ ಅಂತಾ ಹೇಳಲೇ? ಎಷ್ಟೆಷ್ಟು ಲೂಟಿ ಮಾಡಿದ್ದಾನೆ ಅನ್ನೋ ಕಥೆ ಇವೆ. ಆತನ ಮೇಲೆ ಕ್ರಿಮಿನಲ್ ಕೇಸ್ ಇದೆ. ಇದನ್ನು ಆತ ಹೇಳಬೇಕಲ್ಲವೇ ಎಂದು ಪ್ರಶ್ನೆ ಮಾಡಿದರು.

ಇದೇ ಸಂದರ್ಭದಲ್ಲಿ ಕೈ ಅಭ್ಯರ್ಥಿ ಬಸವರಾಜ್ ಗುರಿಕಾರ್ ವಿರುದ್ಧ ವಾಗ್ದಾಳಿ‌ ನಡೆಸಿದ ಹೊರಟ್ಟಿ, ಶಿಕ್ಷಕರಿಗಾಗಿ ಗುರಿಕಾರ್ ಏನು‌ ಮಾಡಿದ್ದಾರೆ ಎಂದು ಪ್ರಶ್ನೆ ಮಾಡಿದರು. ಕಾಂಗ್ರೆಸ್ ಆರೋಪದಲ್ಲಿ ಹುರುಳಿಲ್ಲ, ಸಿದ್ದು ಸರಕಾರವಿದ್ದಾಗ ಇವರ ಎಲ್ಲ ಬೇಡಿಕೆ ತಿರಸ್ಕರಿಸಲಾಗಿದೆ.

ಇದನ್ನೂ ಓದಿ:  Minister Munirathna: ಸಚಿವ ಮುನಿರತ್ನ ವಿರುದ್ಧ ವಿದ್ಯಾರ್ಥಿಗಳಿಂದ ದೂರು; ಯಾಕೆ ಗೊತ್ತಾ?

ನಾನು ಆದರ್ಶ ಬಿಟ್ಟು ಹೋಗಿಲ್ಲ

ಜನ ಏಳು ಬಾರಿ ಆರಿಸಿ ಕಳಿಸಿದ್ದು ಸುಮ್ಮನೇನಾ? ನನ್ನದೇನಾದರೂ ಅಕ್ರಮ ಇದ್ದರೆ ಹೊರಗೆ ಎಳೆಯಿರಿ. ನಾನು ಎಲ್ಲಿಗೆ ಹೋದರೂ ಅನೇಕರು ಕಾಲು ಮುಟ್ಟಿ ನಮಸ್ಕರಿಸುತ್ತಾರೆ.‌ ನಾನು ಅದಕ್ಕೆ ಬಯ್ಯುತ್ತೇನೆ,‌ ಅದು ಅವರವರ ಪ್ರೀತಿ, ಗೌರವ.‌ ನಾನೇನೂ ದೇವರಲ್ಲ, ಐದೂ ಬೆರಳು ಸಮ ಇರೋದಿಲ್ಲ. ರಾಜಕಾರಣಿ ಅನ್ನೋದಕ್ಕೆ ನಮಗೆ ಕೊಂಚ "ರಿಯಾಯಿತಿ" ಕೊಡಬೇಕು. ನಾನು ಆದರ್ಶ ಬಿಟ್ಟು ಹೋಗಿಲ್ಲ, ಹೋಗೋದಿಲ್ಲ ಎಂದರು.

ಕಾನೂನು ಪ್ರಕಾರ ತೆಗೆದುಕೊಳ್ಳಲಿ

ಜೆ.ಎಸ್.ಎಸ್ ಕಾಲೇಜು ಬಳಿ ಬ್ಯಾನರ್ ಹಾಕಿದ್ದ ಪ್ರಕರಣಕ್ಕೆ ಪ್ರತಿಕ್ರಿಯೆ ನೀಡಿದ ಹೊರಟ್ಟಿ, ನಿಯಮ ಇದೆ ಅಂದರೇನು ಮಾಡೋದು? ಈಗಾಗಗಲೇ ಡಿಸಿ ಜೊತೆಗೆ ಮಾತಾಡಿದ್ದೇನೆ. ಹಿಂದಿನ ಚುನಾವಣೆಯಲ್ಲಿ ಯಾರೂ ಹೀಗೆ ಮಾಡಿರಲಿಲ್ಲ. ಕಾನೂನು ಇದೆ ಅಂತಾ ಅವರು ಹೇಳಿದರು. ಕಾನೂನು ಪ್ರಕಾರ ಏನಿದೆಯೋ ಅದನ್ನು ಮಾಡಲಿ ಎಂದರು.

ಇದನ್ನೂ ಓದಿ:  Congress Protest: ದೇಶದ ಪ್ರಜಾಪ್ರಭುತ್ವವನ್ನು ಹತ್ತಿಕ್ಕುವ ಕೆಲಸ ಆಗ್ತಿದೆ; ಸಿದ್ದರಾಮಯ್ಯ

ವಿಧಾನ ಪರಿಷತ್ ಚುನಾವಣೆ

ವಿಧಾನ ಪರಿಷತ್ ಚುನಾವಣೆಗೆ ಮತದಾನ ಆರಂಭಗೊಂಡಿದ್ದು, ಜೂನ್ 15 ರಂದು ಮತ ಎಣಿಕೆ ನಡೆಯಲಿದೆ. ಎಲ್ಲಾ ಮತದಾನ ಕೇಂದ್ರಗಳಲ್ಲಿ ಮತದಾನ ಆರಂಭಗೊಂಡಿದ್ದು, 607 ಮತಗಟ್ಟೆಗಳಲ್ಲಿ 2,84,922 ಶಿಕ್ಷಕರು ಮತ್ತು ಪದವೀಧರರು ತಮ್ಮ ಹಕ್ಕು ಚಲಾಯಿಸಲಿದ್ದಾರೆ.

ಇನ್ನು ಚುನಾವಣಾ ಕಣದಲ್ಲಿ ನಾಲ್ವರು ಮಹಿಳೆಯರು ಸೇರಿದಂತೆ 49 ಅಭ್ಯರ್ಥಿಗಳ ಭವಿಷ್ಯ ಇಂದು ಮತಪೆಟ್ಟಿಗೆಗೆ ಸೇರಲಿದೆ. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಎಲ್ಲಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ. ವಾಯುವ್ಯ ಪದವೀಧರ ಕ್ಷೇತ್ರವೊಂದರಲ್ಲಿ ಮಾತ್ರ ಜೆಡಿಎಸ್ ಸ್ಪರ್ಧೆ ಮಾಡಿಲ್ಲ.
Published by:Mahmadrafik K
First published: