ಬೆಂಗಳೂರು: ರಾಜ್ಯದ ಹಿರಿಯ ರಾಜಕಾರಣಿ (Senior Politician), ಜೆಡಿಎಸ್ನ (JDS) ಹಿರಿಯ ನಾಯಕ (Senior Leader), ವಿಧಾನ ಪರಿಷತ್ ಸಭಾಪತಿ (Speaker) ಬಸವರಾಜ ಹೊರಟ್ಟಿ (Basavaraj Horatti) ಪಕ್ಷ ತೊರೆದಿದ್ದಾರೆ. ಅವರು ಬಿಜೆಪಿ (BJP) ಸೇರುವ ಬಗ್ಗೆ ಈ ಹಿಂದೆಯೇ ಆಶಯ ವ್ಯಕ್ತಪಡಿಸಿದ್ದರು. ಇದೀಗ ಅಧಿಕೃತವಾಗಿ ಜೆಡಿಎಸ್ ತೊರೆದು, ಬಿಜೆಪಿ ಸೇರಿದ್ದಾರೆ. ಇಂದು ಬೆಂಗಳೂರಿನಲ್ಲಿ (Bengaluru) ಕೇಂದ್ರ ಗೃಹಸಚಿವ (Union Home Minister) ಅಮಿತ್ ಶಾ (Amit Shah) ಸಮ್ಮುಖದಲ್ಲಿ ಅಧಿಕೃತವಾಗಿ ಬಿಜೆಪಿ ಸೇರಿದ್ದಾರೆ. ಇನ್ನು ಪಕ್ಷ ಸೇರುತ್ತಿದ್ದಂತೆ ಬಸವರಾಜ್ ಹೊರಟ್ಟಿಗೆ ಬಿಜೆಪಿ ಭರ್ಜರಿ ಗಿಫ್ಟ್ (Gift) ನೀಡಿದೆ. ಮುಂಬರುವ ವಿಧಾನ ಪರಿಷತ್ ಚುನಾವಣೆಗೆ ಶಿಕ್ಷಕರ ಕ್ಷೇತ್ರದ ಟಿಕೆಟ್ (Ticket) ಅನ್ನು ಬಸವರಾಜ್ ಹೊರಟ್ಟಿಗೆ ನೀಡುವುದಾಗಿ ಕನ್ಪರ್ಮ್ (Confirm) ಮಾಡಿದೆ.
ಇಂದು ಬಿಜೆಪಿಗೆ ಸೇರ್ಪಡೆಯಾದ ಬಸವರಾಜ್ ಹೊರಟ್ಟಿ
ಜೆಡಿಎಸ್ ಹಿರಿಯ ನಾಯಕ ಬಸವರಾಜ್ ಹೊರಟ್ಟಿ ಇಂದು ಅಧಿಕೃತವಾಗಿ ಜೆಡಿಎಸ್ ತೊರೆದು, ಬಿಜೆಪಿ ಸೇರಿದ್ದಾರೆ. ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲ್ನಲ್ಲಿ ಅಮಿತ್ ಶಾ ಸಮ್ಮುಖದಲ್ಲಿ ಬಸವರಾಜ್ ಹೊರಟ್ಟಿ ಬಿಜೆಪಿ ಸೇರಿದ್ದಾರೆ. ಕೇಂದ್ರ ಗೃಹಸಚಿವ ಅಮಿತ್ ಶಾ, ಹೂಗುಚ್ಛ ನೀಡಿ ಹಿರಿಯ ನಾಯಕನ್ನು ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ.
ಹೋಟೆಲ್ನಲ್ಲಿ ಅಮಿತ್ ಶಾ ಜೊತೆ ಚರ್ಚೆ
ಅಮಿತ್ ಶಾ ವಾಸ್ತವ್ಯ ಹೂಡಿರುವ ರೇಸ್ ಕೋರ್ಸ್ ರಸ್ತೆಯಲ್ಲಿರುವ ತಾಜ್ ವೆಸ್ಟ್ ಎಂಡ್ ಹೋಟೆಲ್ಗೆ ಬಸವರಾಜ ಹೊರಟ್ಟಿ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಕರೆದೊಯ್ದರು. ಈ ಸಂದರ್ಭದಲ್ಲಿ ಬಸವರಾಜ್ ಹೊರಟ್ಟಿ ಅಧಿಕೃತವಾಗಿ ಬಿಜೆಪಿ ಸೇರಿದರು. ಬಳಿಕ ಅವರೊಂದಿಗೆ ಚರ್ಚೆ ಮಾಡಿದರು.
ಇದನ್ನೂ ಓದಿ: Basava Jayanti 2022: ಆಂಧ್ರ ಪ್ರದೇಶದಲ್ಲೂ ಬಸವ ಜಯಂತಿ ಆಚರಣೆಗೆ ಆದೇಶ, ಪ್ರಧಾನಿ ಮೋದಿಯಿಂದ ಸ್ಮರಣೆ
ಪಕ್ಷ ಸೇರುತ್ತಿದ್ದಂತೆ ಹೊರಟ್ಟಿಗೆ ಬಿಜೆಪಿ ಟಿಕೆಟ್
ಇನ್ನು ಪಕ್ಷ ಸೇರುತ್ತಿದ್ದಂತೆ ಬಸವರಾಜ್ ಹೊರಟ್ಟಿಗೆ ಬಿಜೆಪಿ ಭರ್ಜರಿ ಗಿಫ್ಟ್ ನೀಡಿದೆ. ಮುಂಬರುವ ವಿಧಾನ ಪರಿಷತ್ ಚುನಾವಣೆಗೆ ಶಿಕ್ಷಕರ ಕ್ಷೇತ್ರದ ಟಿಕೆಟ್ ಅನ್ನು ಬಸವರಾಜ್ ಹೊರಟ್ಟಿಗೆ ನೀಡುವುದಾಗಿ ಕನ್ಪರ್ಮ್ ಮಾಡಿದೆ. ಎರಡು ಶಿಕ್ಷಕರ ಕ್ಷೇತ್ರ ಮತ್ತು ಎರಡು ಪದವೀಧರರ ಕ್ಷೇತ್ರಗಳು ತೆರವಾಗಲಿದ್ದು, ಭಾರತೀಯ ಜನತಾ ಪಕ್ಷ ಈಗಾಗಲೇ ಮೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದ್ದರೂ ಬಸವರಾಜ ಹೊರಟ್ಟಿ ಪ್ರತಿನಿಧಿಸುತ್ತಿರುವ ಕ್ಷೇತ್ರಕ್ಕೆ ಮಾತ್ರ ಇನ್ನೂ ಅಭ್ಯರ್ಥಿಯನ್ನು ಪ್ರಕಟಿಸಿರಲಿಲ್ಲ. ಇದೀಗ ಹೊರಟ್ಟಿಗೆ ಟಿಕೆಟ್ ನೀಡುವುದು ಕನ್ಫರ್ಮ್ ಆಗಿದೆ.
ಸಭಾಪತಿ ಸ್ಥಾನಕ್ಕೆ ಶೀಘ್ರವೇ ರಾಜೀನಾಮೆ
ಸದ್ಯ ಬಸವರಾಜ್ ಹೊರಟ್ಟಿ ವಿಧಾನ ಪರಿಷತ್ ಸಭಾಪತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶೀಘ್ರವೇ ಅವರು ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಬಳಿಕ ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧಿಸಲಿದ್ದಾರೆ.
“ಏನಿಲ್ಲ, ಜೆಡಿಎಸ್ ಬಗ್ಗೆ ಈಗಲೂ ಪ್ರೀತಿಯಿದೆ”
ಜೆಡಿಎಸ್ ಬಗ್ಗೆ ಬೇರೆ ಏನಿಲ್ಲ, ಈಗಲೂ ಪ್ರೀತಿ ಇದೆ ಅಂತ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದ್ದಾರೆ. ಬಿಜೆಪಿ ಸೇರುವುದಕ್ಕೆ ಕಾರಣ ಅಂತ ಏನಿಲ್ಲ, ರಾಜಕಾರಣದ ಕಾರಣಕ್ಕಾಗಿ ಸೇರಿದೆ. ಈಗಿನ ವ್ಯವಸ್ಥೆಯಲ್ಲಿ ಆಕಸ್ಮಿಕ ನಿರ್ಧಾರ ತೆಗೆದುಕೊಂಡೆ. ಈ ಬಗ್ಗೆ ನನಗೆ ಆತಂಕ ಏನಿಲ್ಲ ಅಂತ ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಇದನ್ನೂ ಓದಿ: Narendra Modi: ಈ ಯುದ್ಧದಲ್ಲಿ ಗೆಲ್ಲುವವರಿಲ್ಲ, ಎಲ್ಲರಿಗೂ ಕಷ್ಟವೇ, ರಷ್ಯಾ-ಉಕ್ರೇನ್ ಬಗ್ಗೆ ಮೋದಿ ಮಾತು
ಹೊರಟ್ಟಿ ಸೇರ್ಪಡೆ ವೇಳೆ ಪ್ರಮುಖರ ಉಪಸ್ಥಿತಿ
ಇನ್ನು ಬಸವರಾಜ್ ಹೊರಟ್ಟಿ ಅವರಿಗೆ ಅಮಿತ್ ಶಾ ಹೂ ಗುಚ್ಚ ನೀಡುವ ಮೂಲಕ, ಪಕ್ಷಕ್ಕೆ ಸ್ವಾಗತಿಸಿದರು. ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸೇರಿದಂತೆ ಮತ್ತಿತರರು ಉಪಸ್ಥಿತರಾಗಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ