HOME » NEWS » State » BASAVARAJ HORATTI HITS BACK AT BJP GOVERNMENT AT DHARAWAD LG

ಕಳೆದ ವರ್ಷ ಬಿದ್ದ ಮನೆಗಳನ್ನೇ ಬಿಜೆಪಿ ಸರ್ಕಾರ ಇನ್ನೂ ಕಟ್ಟಿಸಿಲ್ಲ; ಬಸವರಾಜ್ ಹೊರಟ್ಟಿ ವ್ಯಂಗ್ಯ

ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಹಾಸನದವರು. ಅವರೆಲ್ಲ ಅಭಿವೃದ್ಧಿ ಮಾಡುತ್ತಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಜನಪ್ರತಿನಿಧಿಗಳು ವೈಯಕ್ತಿಕ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡುತ್ತಾರೆ ಎಂದು ಕುಟುಕಿದರು.

news18-kannada
Updated:August 7, 2020, 7:25 AM IST
ಕಳೆದ ವರ್ಷ ಬಿದ್ದ ಮನೆಗಳನ್ನೇ ಬಿಜೆಪಿ ಸರ್ಕಾರ ಇನ್ನೂ ಕಟ್ಟಿಸಿಲ್ಲ; ಬಸವರಾಜ್ ಹೊರಟ್ಟಿ ವ್ಯಂಗ್ಯ
ವಿಧಾನ ಪರಿಷತ್​ ಸದಸ್ಯ ಬಸವರಾಜ್​​​​ ಹೊರಟ್ಟಿ
  • Share this:
ಧಾರವಾಡ(ಆ.07) : ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆಯೋ ಇಲ್ಲವೋ ಎಂಬ ಅನುಮಾನ ಜನರಲ್ಲಿ ಮೂಡಿದೆ. ಸರ್ಕಾರ ಜನರಿಗೆ ಕೊಟ್ಟ ಮಾತಿಗೆ ತಪ್ಪಿದೆ. ಇದೊಂದು ಡ್ರಾಮಾ ಕಂಪನಿಯಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ಹಾಗೂ ಹಾಲಿ ಸದಸ್ಯ ಬಸವರಾಜ ಹೊರಟ್ಟಿ ವ್ಯಂಗ್ಯವಾಡಿದ್ದಾರೆ.

ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಪ್ರವಾಹಕ್ಕೆ ಸಿಲುಕಿ ನೂರಾರು ಮನೆಗಳು ಬಿದ್ದಿವೆ, ಬಿದ್ದ ಮನೆಗಳನ್ನೇ ಕಟ್ಟಿಲ್ಲ. ಈ ಬಗ್ಗೆ ಬರುವ ಅಧಿವೇಶನದಲ್ಲಿ ಚರ್ಚಿಸಲಿದ್ದೇನೆ . ಪುನಃ ಅತಿವೃಷ್ಟಿಯಿಂದ ಮನೆ ಹಾನಿ ಸಂಭವಿಸಿವೆ. ಸಿಎಂ ಅಧಿಕಾರಿಗಳಿಗೆ ಸೂಚಿಸಬೇಕು. ಕೆಲಸ ಮಾಡದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಉತ್ತರ ಕರ್ನಾಟಕಕ್ಕೆ ಇಲಾಖೆಗಳ ಸ್ಥಳಾಂತರ ವಿಚಾರಕ್ಕೆ ಪ್ರತಿಕ್ರಿಯಿಸಿದ ಹೊರಟ್ಟಿ ಅವರು, ಇಲಾಖೆ ಸ್ಥಳಾಂತರ ವಿಚಾರದಲ್ಲಿ ತಕ್ಷಣ ಕ್ಯಾಬಿನೆಟ್ ನಿರ್ಣಯ ಆಗಬೇಕು. ಇಲ್ಲದಿದ್ದರೆ ಯಾವ ಇಲಾಖೆ ಎಲ್ಲಿಯಾದರೂ ಸ್ಥಳಾಂತರ ಆಗಲಿದೆ ಎಂಬ ಆತಂಕ ವ್ಯಕ್ತಪಡಿಸಿದರು. ಉತ್ತರ ಕರ್ನಾಟಕದ ಜನಪ್ರತಿನಿಧಿಗಳು ಇಚ್ಛಾಶಕ್ತಿ ಪ್ರದರ್ಶಿಸಲ್ಲ ಎಂದು ಬೇಸರ ಕೂಡ ವ್ಯಕ್ತಪಡಿಸಿದರು.

ನೆರೆ ಸಂತ್ರಸ್ತರಿಗೆ ಮನೆ ನಿರ್ಮಾಣಕ್ಕೆ 5 ಲಕ್ಷ ರೂ. ಪರಿಹಾರ - ಸಿಎಂ ಯಡಿಯೂರಪ್ಪ ಘೋಷಣೆ

ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಹಾಸನದವರು. ಅವರೆಲ್ಲ ಅಭಿವೃದ್ಧಿ ಮಾಡುತ್ತಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಜನಪ್ರತಿನಿಧಿಗಳು ವೈಯಕ್ತಿಕ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡುತ್ತಾರೆ ಎಂದು ಕುಟುಕಿದರು.
Youtube Video

ಸಮಸ್ಯೆ ಎಂದಾಕ್ಷಣ ಹಳೆ ಮೈಸೂರು ಭಾಗದಲ್ಲಿ ಎಲ್ಲರೂ ಒಂದಾಗುತ್ತಾರೆ. ಆದರೆ ನಮ್ಮಲ್ಲಿ ಹಾಗೆ ಆಗುವುದಿಲ್ಲ. ತಾವು ಅಧಿಕಾರ ಇದ್ದಾಗ ಹೈಕೋರ್ಟ್ ಹಾಗೂ ಕಾನೂನು ವಿಶ್ವವಿದ್ಯಾಲಯವನ್ನು ತಂದಿದ್ದು, ನಮ್ಮಲ್ಲಿ ಮುಖ್ಯಮಂತ್ರಿ ಆಗಿ ಹೋಗಿದ್ದಾರೆ. ಆದರೆ, ಪ್ರಯೋಜನ ಏನು ಪ್ರಶ್ನಿಸಿದ್ದಾರೆ.
Published by: Latha CG
First published: August 7, 2020, 7:20 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories