Karnataka Politics: ಬಸವರಾಜ ಹೊರಟ್ಟಿ ಅಧಿಕಾರದ ಆಸೆಯಿಂದ ಬಿಜೆಪಿಗೆ ಹೋಗಿದ್ದಾರೆ- ಸಿದ್ದರಾಮಯ್ಯ

ಜೆಡಿಎಸ್ ಅಭ್ಯರ್ಥಿ ಕಣದಿಂದ ನಿವೃತ್ತಿ ಮಾಡಿಸೋದೇ ಸಂಧಾನ. ಅವರು ನಮಗೆ ವೋಟ್ ಹಾಕಬೇಕು ಅದೇ ಈಗ ಸಂಧಾನ, ಹಿಂದೆ ದೇವೇಗೌಡರಿಗಾಗಿ ನಾವು ಅಭ್ಯರ್ಥಿಯನ್ನೇ ಹಾಕಿರಲಿಲ್ಲ ಕುಮಾರಸ್ವಾಮಿಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ

ಮಾಜಿ ಸಿಎಂ ಸಿದ್ದರಾಮಯ್ಯ

  • Share this:
ಧಾರವಾಡ ಜೂ 8 : ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ (Basavaraj Horatti) ಅವರು ಜನತಾ ದಳ, ಜನತಾ ಪಾರ್ಟಿ, ಜೆಡಿಎಸ್‌ನಿಂದ ಏಳು ಸಲ ಆಗಿದ್ದಾರೆ‌ ಈಗ ಅಧಿಕಾರದ ಆಸೆಯಿಂದ ಬಿಜೆಪಿಗೆ ಹೋಗಿದ್ದಾರೆ. ಜೆಡಿಎಸ್‌ ಸ್ಪರ್ಧಿಸಿದರೆ ಗೆಲ್ಲಿಸೊಲ್ಲ ಅಂತಾ ಭಯದಿಂದ ಬಿಜೆಪಿಗೆ ಹೋಗಿದ್ದಾರೆ ಎಂದು ಮಾಜಿ‌ ಸಿಎಂ ಸಿದ್ದರಾಮಯ್ಯ (Siddaramaiah) ವ್ಯಂಗ್ಯ ಮಾಡಿದರು. ಅವರು ಧಾರವಾಡ ದೈವಜ್ಣ ಕಲ್ಯಾಣ ಮಂಟಪದಲ್ಲಿ‌ಮಡೆದ ವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆ ಸಭೆಯನ್ನು ಉದೇಶಿ‌ ಮಾತನಾಡಿದರು. 

ಜೆಡಿಎಸ್ ಅಭ್ಯರ್ಥಿಕಣದಿಂದ ನಿವೃತ್ತಿ ಮಾಡಿಸೋದೇ ಸಂಧಾನ. ಅವರು ನಮಗೆ ವೋಟ್ ಹಾಕಬೇಕು ಅದೇ ಈಗ ಸಂಧಾನ, ಹಿಂದೆ ದೇವೇಗೌಡರಿಗಾಗಿ ನಾವು ಅಭ್ಯರ್ಥಿಯನ್ನೇ ಹಾಕಿರಲಿಲ್ಲ ಕುಮಾರಸ್ವಾಮಿಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

8ನೇ ಬಾರಿ ಗಿನ್ನೆಸ್ ದಾಖಲೆ ಮಾಡುತ್ತಾರಂತೆ

ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಗುರಿಕಾರ್ ಪರ ಪ್ರಚಾರವಾಗಿ ಶಿಕ್ಷಕರನ್ನು ಉದೇಶಿ‌ ಮಾತನಾಡಿದ ಸಿದ್ದರಾಮಯ್ಯ, ಬಸವರಾಜ ಹೊರಟ್ಟಿ ಏಳು ಸಲ ಕ್ಷೇತ್ರ ಪ್ರತಿನಿಧಿಸಿದ್ದರು. ಏಳು ಸಲ ಮುಗಿದ ಮೇಲೆ 8 ನೇ ಸಲ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದಾರೆ. 42 ವರ್ಷ ಸತತ ಪರಿಷತ್ ಸದಸ್ಯರಾದವರು,ಈಗ 8 ನೇ ಬಾರಿ ಗಿನ್ನೆಸ್ ದಾಖಲೆ ಮಾಡುತ್ತಾರಂತೆ. ಆ ದಾಖಲೆ ಮಾಡೋದು ಅವರಲ್ಲ ಎಂದರು. ಇನ್ನು ನಮ್ಮ ಅಭ್ಯರ್ಥಿ ಬಸವರಾಜ ಗುರಿಕಾರ ಅವರು 40 ವರ್ಷದಿಂದ ಶಿಕ್ಷಕರ ಹೋರಾಟಗಾರರಾಗಿದ್ದವರು ಅವರಿಗೆ ಮತ‌ನೀಡಿದ ಮೂಲ ದಾಖಲೆ ಮಾಡಲೆಂದರು.

ಇದನ್ನೂ ಓದಿ: Explained: ರಾಜ್ಯಸಭಾ ಚುನಾವಣೆ ನಡೆಯುವುದು ಹೇಗೆ? ಇಲ್ಲಿದೆ ಓದಿ ಪಿನ್ ಟು ಪಿನ್ ಮಾಹಿತಿ

ಕುಮಾರಸ್ವಾಮಿ, ಯಡಿಯೂರಪ್ಪ, ಬೊಮ್ಮಾಯಿ ಸೇರಿ 3 ಲಕ್ಷ ಕೋಟಿ ಸಾಲ ಮಾಡಿದ್ದಾರೆ

ಇದೇ ಸಂದರ್ಭದಲ್ಲಿ ಸಿಎಂಗಳ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ ಅವರು ಕುಮಾರಸ್ವಾಮಿ, ಯಡಿಯೂರಪ್ಪ, ಬೊಮ್ಮಾಯಿ ಸೇರಿ 3 ಲಕ್ಷ ಕೋಟಿ ಸಾಲ ಮಾಡಿದ್ದಾರೆ. ನಾನೇ ಹಣಕಾಸು ಮಂತ್ರಿಯಾದರೂ ಎಲ್ಲ ಸರಿ ಮಾಡಲು ಎರಡು ವರ್ಷ ಬೇಕು. ನಾನು ಐದು ವರ್ಷ ಸಿಎಂ ಆಗಿದ್ದೆ, ಆಗ ರೆವಿನ್ಯೂ ಸರಿಯಾಗಿತ್ತು,ನಾನು ಇಲ್ಲಿಯವರೆಗೆ 13 ಬಜೆಟ್ ಮಂಡಿಸಿದ್ದೇನೆ,  40 ವರ್ಷದಿಂದ ರಾಜಕೀಯದಲ್ಲಿದ್ದೇನೆ.ಇಂತಹ ಭ್ರಷ್ಟ, ಕೆಟ್ಟ ಸರ್ಕಾರ ಯಾವತ್ತಿಗೂ ಬಂದಿರಲಿಲ್ಲ. ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ ಎಂದು ಭವಿಷ್ಯ ನುಡಿದರು.

ನಮ್ಮ ಪಕ್ಷಕ್ಕೆ ಹೈಕಮಾಂಡ್​ ಇದೆ, ಅವರಿಗೆ ಹೈಕಮಾಂಡ್​ ಇಲ್ಲ

ರಾಜ್ಯಸಭೆ ಚುನಾವಣೆ ಜೆಡಿಎಸ್ ಹೊಂದಾಣಿಕೆ ಎಚ್‌ಡಿಕೆ ಆಹ್ವಾನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದದ ಸಿದ್ದರಾಮಯ್ಯ, ಜೆಡಿಎಸ್ ಅಭ್ಯರ್ಥಿ‌ ಕಣದಿಂದ ನಿವೃತ್ತಿ ಮಾಡಿಸೋದೇ ಈಗ ಸಂಧಾನ. ಅವರು ನಮಗೆ ವೋಟ್ ಹಾಕಬೇಕು ಅದೇ ಈಗ ಸಂಧಾನ ಎಂದು ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದಾರೆ. ಹಿಂದೆ ದೇವೇಗೌಡರಿಗಾಗಿ ನಾವು ಅಭ್ಯರ್ಥಿಯನ್ನೇ ಹಾಕಿರಲಿಲ್ಲ, ಆದರೆ ಈಗ ಅವರು ಅಭ್ಯರ್ಥಿ ಯಾಕೆ ಹಾಕಿದ್ರು.

ಇದನ್ನೂ ಓದಿ: Kiran Mazumdar: ಬೆಂಗಳೂರಿನ ಹದಗೆಟ್ಟ ರಸ್ತೆ ಬಗ್ಗೆ ಕಿರಣ್ ಮಂಜುಂದಾರ್ ಟ್ವೀಟ್; ರಾಜಕಾರಣಿಗಳ ವಿರುದ್ಧ ಕಿಡಿ

ಬಿಜೆಪಿ ಸೋಲಿಸೋದು ಅನ್ನೋದಾದ್ರೆ ನಮಗೆ ಸಪೋರ್ಟ್ ಮಾಡಲಿ ಎಂದರು.‌ ಇನ್ನೂ ಕಾಂಗ್ರೆಸ್ ಹೈಕಮಾಂಡ್ ಒಪ್ಪಿಗೆ ವಿಚಾರಕ್ಕೆ ಮಾತನಾಡಿ, ನಮ್ಮ ಪಕ್ಷಕ್ಕೆ ಹೈಕಮಾಂಡ್ ಇದೆ, ಅವರಿಗೆ ಹೈಕಮಾಂಡ್ ಇಲ್ಲ, ಅವರ ಹೈಕಮಾಂಡ ಇರೋದು ಪದ್ಮನಾಭನಗರದಲ್ಲಿ. ನಮ್ಮ ಹೈಕಮಾಂಡ ಇರೋದು ದೆಹಲಿಯಲ್ಲಿ. ರಾಜ್ಯದ ಉಸ್ತುವಾರಿ ಹೇಳಿದಂತೆ ಎರಡನೇ ಅಭ್ಯರ್ಥಿ ಹಾಕಿದ್ದೇವೆ. ಈಗ ಏನೂ ಆಗೋದಿಲ್ಲ, ಏನೇ ಆಗೋದಿದ್ರು ಮತದಾನದ ದಿನವೇ ತೀರ್ಮಾನ ಆಗುತ್ತದೆ ಎಂದು ಖಡಕ್ ಆಗಿ ಹೇಳಿದರು.

ವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ಗುರಿಕಾರ್ ಪರ ಪ್ರಚಾರ ಸಭೆಯಲ್ಲಿ ಶಾಸಕ ಸತೀಶ ಜಾರಕಿಹೊಳಿ, ಮಾಜಿ ಶಾಸಕ ಎನ್.ಎಚ್ ಕೊನರೆಡ್ಡಿ, ಸಲೀಂ ಅಹ್ಮದ, ಶ್ರೀನಿವಾಸ ಮಾನೆ ಸೇರಿದಂತೆ ಸ್ಥಳೀಯ ಕಾಂಗ್ರೆಸ್ ನಾಯಕರು ಹಾಗೂ ಮುಖಂಡರು ಭಾಗಿಯಾಗಿದ್ರು.
Published by:Pavana HS
First published: