Basavaraj Horatti: ದಾಖಲೆ ಬರೀತಾರಾ ಬಸವರಾಜ್ ಹೊರಟ್ಟಿ: ತಮ್ಮ ಅಂಬಾಸಿಡರ್ ಕಾರ್ ಬಗ್ಗೆ ಹೇಳಿದ್ದು ಹೀಗೆ

ನಾಮಪತ್ರ ಸಲ್ಲಿಕೆ ವಿಚಾರವಾಗಿ ಮಾತನಾಡಿದ ಬಸವರಾಜ್ ಹೊರಟ್ಟಿ, ಎರಡು ಸೆಟ್‌ ನಲ್ಲಿ ನಾಮಪತ್ರ ಸಲ್ಲಿಸಿದ್ದೇನೆ. ಸಲ್ಲಿಸಿರೊ ಎರಡೂ ಸೆಟ್ ನಾಮಪತ್ರ ಸ್ವೀಕಾರ ಆಗಿವೆ. ಇನ್ನೊಂದು ನಾಮಪತ್ರ ಮೇ 26 ರಂದು ಬಿಜೆಪಿ ಪಕ್ಷದ ವತಿಯಿಂದ ನಾಮಪತ್ರ ಸಲ್ಲಿಸುವೆ.

ನಾಮಪತ್ರ ಸಲ್ಲಿಕೆ

ನಾಮಪತ್ರ ಸಲ್ಲಿಕೆ

  • Share this:
ಧಾರವಾಡ : ಸಾಮಾನ್ಯವಾಗಿ ಜನರು, ಹೊಸ ಕಟ್ಟಡ, ಮನೆ ನಿರ್ಮಾಣ ಮಾಡುವಾಗ ವಾಸ್ತುವಿನ (Vastu) ಮೊರೆ ಹೋಗುತ್ತಾರೆ. ಇನ್ನು ಕೆಲವರು ಶುಭ ಕಾರ್ಯಕ್ಕೆ ತಮ್ಮ ವಾಹನಗಳನ್ನೇ ಬಳಕೆ ಮಾಡುತ್ತಾರೆ. ಅದೇ ರೀತಿ ಬಸವರಾಜ್ ಹೊರಟ್ಟಿಯವರು (Basavaraj Horatti) ಸಹ ನಾಮಪತ್ರ ಸಲ್ಲಿಕೆ (Nomination) ಕಾರ್ಯಕ್ಕೆ ಅವರ ಹಳೆಯ ಅಂಬಾಸಿಡರ್ ಕಾರ್ ನಲ್ಲಿ (Ambassador Car) ಬಂದು ನಾಮಪತ್ರ ಸಲ್ಲಿಸಿದ್ರು. ಹೌದು ಕರ್ನಾಟಕ ಪಶ್ಚಿಮ ಶಿಕ್ಷಕರ‌ ಕ್ಷೇತ್ರದ ಚುನಾವಣೆಗೆ ನಾಮಪತ್ರ ಸಲ್ಲಿಸಲು ದಂಪತಿ ಸಮೇತ ಬಂದ ಅದೇ ಹಳೆಯ ಕಾರಿನಲ್ಲಿ ಬಂದ ಬಸವರಾಜ್ ಹೊರಟ್ಟಿಯವರು, ಕಾರಿನ ಇತಿಹಾಸವನ್ನು ಮೆಲಕು ಹಾಕಿದರು. 

1980 ರಲ್ಲಿ ಮೊದಲ ಬಾರಿಗೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡುವಾಗಲು ಇದೇ ಕಾರನ್ನು ಬಳಕೆ ಮಾಡಿದ್ದ ಬಸವರಾಜ್ ಹೊರಟ್ಟಿ ಅವರು ಅಂದಿನಿಂದ ಇಲ್ಲಿಯವರೆಗೆ ಯಾವದೇ ಶುಭ ಕಾರ್ಯಕ್ಕೆ ತೆರಳಬೇಕಾದರೆ ಇದೇ ಅಂಬಾಸಿಡರ್ ಕಾರನ್ನೇ ಬಳಕೆ ಮಾಡುತ್ತಿದ್ದಾರೆ.

ಎಲ್ಲ ಶುಭಕಾರ್ಯಗಳಿಗೆ ಬೇಕು ಇದೇ ಕಾರ್

CNB 5757 ನಂಬರಿನ ಅಂಬಾಸಿಡರ್ ಕಾರು 8 ಲಕ್ಷ ಕಿಲೋ ಮೀಟರ್ ಓಡಿದೆ. ಆರಂಭದಲ್ಲಿ ರಾಜಕೀಯಕ್ಕೆ ಕಾಲಿಟ್ಟಾಗಲೇ ಈ ಕಾರ ಖರೀದಿಸಿದ ಬಸವರಾಜ್ ಹೊರಟ್ಟಿ ಅವರು ಅಂದು ತಮ್ಮ‌ಎಲ್ಲ ಕೆಲಸಗಳಿಗೂ ಇದೇ ಅಂಬಾಸಿಡರ್ ಕಾರನ್ನೆ ತೆಗೆದುಕೊಂಡು ಹೋಗುತ್ತಿದ್ದರು. ಅದರಲ್ಲೂ ಶುಭ ಕಾರ್ಯಗಳಿಗೆ ಈ ಕಾರನಲ್ಲೇ ಪ್ರಯಾಣ ಮಾಡುತ್ತಿದ್ದಾರೆ. ಇದರಿಂದ ಅವರಿಗೆ ಒಳ್ಳೆದಾಗಿದೆ ಎಂಬ ನಂಬಿಕೆ ಅವರದ್ದಾಗಿದೆ.

Basavaraj Horatti files nomination papers as BJP candidate
ಅಂಬಾಸಿಡರ್ ಕಾರ್


ಇದನ್ನೂ ಓದಿ:  MLC Election; ಲಕ್ಷ್ಮಣ ಸವದಿಗೆ ಜಾಕ್ ಪಾಟ್: ಬಿಜೆಪಿ ಪಟ್ಟಿ ರಿಲೀಸ್

ಇದೇ‌ ನಂಬಿಕೆಯನ್ನು ಮುಂದುವರೆಸಿಕೊಂಡು ಬಂದ ಹೊರಟ್ಟಿ ಅವರು 8 ನೇ‌ ಬಾರಿ‌ ನಾಮಪತ್ರ ಸಲ್ಲಿಕೆಗೆ ಇದೇ ಕಾರಣನಲ್ಲಿ ದಂಪತಿಗಳು ಆಗಮಿಸಿ‌ ನಾಮಪತ್ರ ಸಲ್ಲಿಸಿದರು.

ಅಂಬಾಸಿಡರ್ ಕಾರ್ ಬಗ್ಗೆ ಹೇಳಿದ್ರು ಹೊರಟ್ಟಿ

ಅಂಬಾಸಿಡರ್‌ ನಲ್ಲಿ ಬಂದು ನಾಮಪತ್ರ ಸಲ್ಲಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಬಸವರಾಜ್ ಹೊರಟ್ಟಿ, ಈ ಕಾರನೊಂದಿಗೆ ಅದೇನೋ ಒಂದು ಭಾವನಾತ್ಮಕ ಸಂಬಂಧ. ನನಗೆ ಈ ಕಾರ್ ಮೇಲೆ ಬಹಳ ಪ್ರೀತಿ ಇದೆ. ಕಾರ್ ಖರೀದಿಸಿದಾಗಿಂದ ಇಲ್ಲಿವರೆಗೆ 8 ಲಕ್ಷ ಕಿಮೀ ಓಡಿದೆ. ಎಲ್ಲರಿಗೂ 5757 ಕಾರ ಅಂದ್ರೆ ಪರಿಚಯ. ಈ ಕಾರಿನಲ್ಲಿ ಹೋದರೆ ಹೊರಟ್ಟಿ ಬಂದ್ರು ಎನ್ನುತ್ತಿದ್ದರು. ಕುಟುಂಬಕ್ಕೆ ಉಪಯೋಗ ಮಾಡುತ್ತೇವೆ, ಶುಭ ಕಾರ್ಯಕ್ಕೆ ಈ ಕಾರ್ ಒಳ್ಳೆಯದು. ಅದೇ ತಲೆಯಲ್ಲಿದೆ. ಹೀಗಾಗಿ ಆ ಕಾರು ಬಳಸುತ್ತೇವೆ ಎಂದರು.

Basavaraj Horatti files nomination papers as BJP candidate
ಅಂಬಾಸಿಡರ್ ಕಾರ್


ಮೇ 26ರಂದು ಮತ್ತೊಂದು ನಾಮಪತ್ರ

ನಾಮಪತ್ರ ಸಲ್ಲಿಕೆ ವಿಚಾರವಾಗಿ ಮಾತನಾಡಿದ ಬಸವರಾಜ್ ಹೊರಟ್ಟಿ, ಎರಡು ಸೆಟ್‌ ನಲ್ಲಿ ನಾಮಪತ್ರ ಸಲ್ಲಿಸಿದ್ದೇನೆ. ಸಲ್ಲಿಸಿರೊ ಎರಡೂ ಸೆಟ್ ನಾಮಪತ್ರ ಸ್ವೀಕಾರ ಆಗಿವೆ. ಇನ್ನೊಂದು ನಾಮಪತ್ರ ಮೇ 26 ರಂದು ಬಿಜೆಪಿ ಪಕ್ಷದ ವತಿಯಿಂದ ನಾಮಪತ್ರ ಸಲ್ಲಿಸುವೆ.

8ನೇ ಬಾರಿ ಆರಿಸಿ ಬಂದ್ರೆ ದಾಖಲೆ

ಅಂದು ಸಿಎಂ ಬಸವರಾಜ್ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸೇರಿದಂತೆ ಅನೇಕ ನಾಯಕರು ಬರುತ್ತಾರೆ ಎಂದರು. ಇನ್ನು ಇದೇ ಸಂದರ್ಭದಲ್ಲಿ ಸೋಲಿಲ್ಲದ ಸರದಾರ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು,  ಈ ಭಾರತ ದೇಶದಲ್ಲಿ ಏಳು ಸಲ ಯಾರೂ ಪರಿಷತ್‌ಗೆ ಆರಿಸಿ ಬಂದಿಲ್ಲ. 8 ನೇ ಆರಿಸಿ ಬಂದಲ್ಲಿ ದಾಖಲೆ ಆಗುತ್ತದೆ. ಆ ದಾಖಲೆ ಆಗಬೇಕು ಅಂತಾನೇ ಎಲ್ಲರೂ ನಮ್ಮ ಕಡೆ ಒಲವು ತೋರಿಸಿದ್ದಾರೆ ಎಂದರು.

Basavaraj Horatti files nomination papers as BJP candidate
ಅಂಬಾಸಿಡರ್ ಕಾರ್


ಇದನ್ನೂ ಓದಿ:  MLC Election: ಮೇಲ್ಮನೆ ನಾಮಪತ್ರ ಸಲ್ಲಿಕೆಗೆ ಕೊನೆ ಕ್ಷಣದ ಕಸರತ್ತು; ಹೆಲಿಕಾಪ್ಟರ್‌ನಲ್ಲಿ ಬಂದ ಹೇಮಲತಾ, ಜೆಡಿಎಸ್‌ನಿಂದ ಶರವಣ ನಾಮಪತ್ರ

MLC Poll: ಬಿಜೆಪಿ ಅಭ್ಯರ್ಥಿಗಳು

ವಿಧಾನಪರಿಷತ್ ಚುನಾವಣೆಗೆ (Vidhanaparishat Election) ಬಿಜೆಪಿ ಕೊನೆಗೂ ಅಧಿಕೃತ ಪಟ್ಟಿ ಬಿಡುಗಡೆ ಮಾಡಿದೆ. ಚಲವಾದಿ ನಾರಾಯಣಸ್ವಾಮಿ, ಹೇಮಲತಾ ನಾಯಕ್, ಎಸ್.ಕೇಶವಪ್ರಸಾದ್ ಮತ್ತು ಲಕ್ಷ್ಮಣ ಸವದಿ ಅವರಿಗೆ ಟಿಕೆಟ್ ನೀಡಲಾಗಿದೆ.
Published by:Mahmadrafik K
First published: