• Home
  • »
  • News
  • »
  • state
  • »
  • Basavaraj Horatti: ವಿಧಾನ ಪರಿಷತ್ ಸಭಾಪತಿಯಾಗಿ ಬಸವರಾಜ್ ಹೊರಟ್ಟಿ ಆಯ್ಕೆ

Basavaraj Horatti: ವಿಧಾನ ಪರಿಷತ್ ಸಭಾಪತಿಯಾಗಿ ಬಸವರಾಜ್ ಹೊರಟ್ಟಿ ಆಯ್ಕೆ

ಬಸವರಾಜ್ ಹೊರಟ್ಟಿ, ನೂತನ ಸಭಾಪತಿ

ಬಸವರಾಜ್ ಹೊರಟ್ಟಿ, ನೂತನ ಸಭಾಪತಿ

ಜೂನ್​ನಲ್ಲಿ ನಡೆದ ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ 8ನೇ ಬಾರಿ ಗೆಲುವನ್ನು ತಮ್ಮ ಹೆಸರಿನಲ್ಲಿ ಬರೆದುಕೊಂಡಿದ್ದರು. 76 ವರ್ಷದ ಹೊರಟ್ಟಿ 1980ರಿಂದ ವಿಧಾನಪರಿಷತ್‌ ಸದಸ್ಯರಾಗಿ ಆಯ್ಕೆಗೊಳ್ಳುತ್ತಾ ಬಂದಿದ್ದಾರೆ.

  • News18 Kannada
  • Last Updated :
  • Belgaum, India
  • Share this:

ಬೆಳಗಾವಿ: ವಿಧಾನ ಪರಿಷತ್ ನೂತನ ಸಭಾಪತಿಯಾಗಿ (LC Chairman Election) ಬಿಜೆಪಿ ಎಂಎಲ್​ಸಿ ಬಸವರಾಜ್ ಹೊರಟ್ಟಿ (BJP MLC Basavaraj Horatti) ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 2021ರಲ್ಲಿ ಬಿಜೆಪಿ ಬೆಂಬಲಿತ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಬಸವರಾಜ್ ಹೊರಟ್ಟಿ ಸಭಾಪತಿಯಾಗಿ ಆಯ್ಕೆಯಾಗಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಜೆಡಿಎಸ್ (JDS) ತೊರೆದ ಬಸವರಾಜ್ ಹೊರಟ್ಟಿ ಬಿಜೆಪಿ ಸೇರಿದ್ದರು. ಇಂದು ವಿಧಾನ ಪರಿಷತ್ ಕಲಾಪ ಆರಂಭವಾಗುತ್ತಿದ್ದಂತೆ ಬಸವರಾಜ್ ಹೊರಟ್ಟಿ ಅವರನ್ನ ಸಭಾಪತಿ ಸ್ಥಾನಕ್ಕೆ ಆಡಳಿತ ಪಕ್ಷದ ಮುಖ್ಯ ಸಚೇತಕ ವೈಎ ನಾರಾಯಣಸ್ವಾಮಿ ಸೂಚಿಸಿದರರು. ಬಸವರಾಜ್ ಹೊರಟ್ಟಿ ಸಭಾಪತಿಯಾಗಿ ಚುನಾಯಿಸಲ್ಪಟ್ಟಿದ್ದಾರೆಂದು ಹಂಗಾಮಿ ಸಭಾಪತಿ ಮಲಕಾಪೂರೆ ಘೋಷಿಸಿದರು.


ಸಿಎಂ ಬಸವರಾಜ್ ಬೊಮ್ಮಾಯಿ, ವಿಪಕ್ಷ ನಾಯಕ ಬಿಕೆ ಹರಿಪ್ರಸಾದ್, ಜೆಡಿಎಸ್ ಸದಸ್ಯರಾದ ಶರವಣ, ಭೋಜೆಗೌಡರು ಬಸವರಾಜ್ ಹೊರಟ್ಟಿ ಅವರನ್ನು ಸಭಾಪತಿ ಸ್ಥಾನಕ್ಕೆ ಕರೆತಂದರು. ಸಬಾಪತಿ ಸ್ಥಾನದಲ್ಲಿ ಬಸವರಾಜ್ ಹೊರಟ್ಟಿ ಆಸೀನರಾದರು. ಆಡಳಿತ ಪಕ್ಷದ ಸಾಲಿನಲ್ಲಿ ತಮಗೆ ಗೊತ್ತು ಪಡಿಸಿದ ಸ್ಥಾನಕ್ಕೆ ತೆರಳಿ ಮಲಾಕಪೂರೆ ಆಸೀನರಾದರು.


ಇದೇ ವರ್ಷ ಜೂನ್​ನಲ್ಲಿ ನಡೆದ ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ 8ನೇ ಬಾರಿ ಗೆಲುವನ್ನು ತಮ್ಮ ಹೆಸರಿನಲ್ಲಿ ಬರೆದುಕೊಂಡಿದ್ದರು. 76 ವರ್ಷದ ಹೊರಟ್ಟಿ 1980ರಿಂದ ವಿಧಾನಪರಿಷತ್‌ ಸದಸ್ಯರಾಗಿ ಆಯ್ಕೆಗೊಳ್ಳುತ್ತಾ ಬಂದಿದ್ದಾರೆ.


ವಲಸಿಗ, ಮೂಲ ಚರ್ಚೆ


ಹಾಲಿ ಸಭಾಪತಿ ರಾಘವೇಂದ್ರ ಮಲಕಾಪೂರೆ ತಮ್ಮನ್ನೇ ಮುಂದುವರಿಸಬೇಕು ಎಂದು ಹೈಕಮಾಂಡ್​ ಮಟ್ಟದಲ್ಲಿಯೂ ಲಾಬಿ ಮಾಡಿದ್ದರು. ಬರುವಂತ ವಲಸಿಗರಿಗೆ ಎಲ್ಲಾ ಸ್ಥಾನಗಳನ್ನು ನೀಡುತ್ತಾ ಹೋದ್ರೆ ಮೂಲ ಬಿಜೆಪಿಗರು ಏನು ಮಾಡಬೇಕು ಎಂದು ರಾಘವೇಂದ್ರ ಮಲಕಾಪೂರೆ ಪ್ರಶ್ನೆ ಮಾಡಿದ್ದರು.


ಆದ್ರೆ ಒಗ್ಗಟ್ಟು  ಪ್ರದರ್ಶನಕ್ಕೆ ಹೈಕಮಾಂಡ್ ಸೂಚನೆ ನೀಡಿದ ಹಿನ್ನೆಲೆ ರಾಘವೇಂದ್ರ ಮಲಕಾಪೂರೆ ಬಂಡಾಯದ ಬಾವುಟವನ್ನು ಇಳಿಸಿದ್ದರು.


ಸಿಎಂ ಬೊಮ್ಮಾಯಿ ಜೊತೆ ಆಗಮಿಸಿ ನಾಮಪತ್ರ ಸಲ್ಲಿಕೆ


ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಜೊತೆ ಆಗಮಿಸಿದ್ದ ಬಸವರಾಜ್ ಹೊರಟ್ಟಿ ಅವರು ವಿಧಾನ ಪರಿಷತ್ ಕಾರ್ಯದರ್ಶಿ ಕೆ.ಆರ್. ಮಹಾಲಕ್ಷ್ಮಿ ಅವರಿಗೆ ನಾಮಪತ್ರ ಸಲ್ಲಿಸಿದ್ದರು.


ಅಸಮಾಧಾನ ಹೊರ ಹಾಕಿದ ಮಲಕಾಪೂರೆ


ನ್ಯೂಸ್ 18 ಕನ್ನಡದ ಜೊತೆ ಮಾತನಾಡಿದ ಪರಿಷತ್ ಸಭಾಪತಿ ಹಾಗೂ ಸಭಾಪತಿ ಸ್ಥಾನದ ಆಕಾಂಕ್ಷಿ ರಘುನಾಥ್ ಮಲಕಾಪೂರೆ, ರಾಜ್ಯಪಾಲರ ಸೂಚನೆಯಂತೆ ಇವತ್ತು ಪರಷತ್ ಸಭಾಪತಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲಾಗುತ್ತಿದೆ. ರಾಜ್ಯಪಾಲರ ಸೂಚನೆಯಂತೆ ಚುನಾವಣೆ ನಡೆಸುತ್ತಿದ್ದೇನೆ. ನಾನು ಆಕಾಂಕ್ಷಿಯೆ ಆದರೆ ಪಕ್ಷದ ಸೂಚನೆ ಪಾಲಿಸಲೇಬೇಕು. ನಾನು ಕಾರ್ಯಕರ್ತನಾಗಿದ್ದು, ಈ ಸ್ಥಾನವನ್ನು ಯಾರಿಂದಲೂ ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದರು.


Basavaraj Horatti elected karnataka legislative council chairman mrq
ನಾಮಪತ್ರ ಸಲ್ಲಿಕೆ


ಬಸವರಾಜ್ ಹೊರಟ್ಟಿಯವರಿಗೆ ಪಕ್ಷ ಸಭಾಪತಿ ಮಾಡಲು ನಿರ್ಧರಿಸಿದೆ. ನಾನು ಬಸವರಾಜ್ ಹೊರಟ್ಟಿಯವರಿಗೆ ಅಭಿನಂದಿಸುತ್ತೇನೆ. ಪಕ್ಷದ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ ಎಂದು ಹೇಳಿದ್ದರು.


ಡಿಸೆಂಬರ್ 20 ಮಧ್ಯಾಹ್ನ ಎರಡು ಗಂಟೆವರೆಗೆ ಮಾತ್ರ ನಾಮಪತ್ರ ಸಲ್ಲಿಕೆಗೆ ಅವಕಾಶವಿತ್ತು. ಆದರೆ ಬಸವರಾಜ್ ಹೊರಟ್ಟಿ ಬಳಿಕ ಯಾರೂ ನಾಮಪತ್ರ ಸಲ್ಲಿಕೆ ಮಾಡದ ಹಿನ್ನೆಲೆ ನಿನ್ನೆಯೇ ಗೆಲುವು ಖಚಿತವಾಗಿತ್ತು.


ಶನಿವಾರ ಸುದ್ದಿಗೋಷ್ಠಿ


ಶನಿವಾರ ಸುದ್ದಿಗೋಷ್ಠಿ ನಡೆಸಿದ್ದ ಬಸವರಾಜ್ ಹೊರಟ್ಟಿ, ನಾನೇ ಬಿಜೆಪಿ ಅಭ್ಯರ್ಥಿ ಎಂದು ಹೇಳಿದ್ದರು. ವಿಧಾನ ಪರಿಷತ್ ಸಸ್ಯ ರವಿಕುಮಾರ್ (MLC Ravikumar) ನನಗೆ ಕರೆ ಮಾಡಿ ಈ ಮಾಹಿತಿ ನೀಡಿದ್ದಾರೆ. ಬೆಳಗಾವಿ ಅಧಿವೇಶನದ (Belagavi Winter Session) ಸಮಯದಲ್ಲಿ ಪ್ರತಿಭಟನೆ ಮಾಡುವುದು ಬೇಡ ಎಂದು ಮನವಿ ಮಾಡಿಕೊಂಡಿದ್ದರು.


ಇದನ್ನೂ ಓದಿ: Basavaraj Bommai: ‘ಮಹಾ’ ಸಚಿವರು ಕರ್ನಾಟಕಕ್ಕೆ ಬಂದ್ರೆ ಕಾನೂನು ಸುವ್ಯವಸ್ಥೆ ಹದಗೆಡುತ್ತೆ- CM ಬೊಮ್ಮಾಯಿ


ಈ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಸಮಸ್ಯೆಗಳ ಬಗ್ಗೆ ಕುರಿತು ಚರ್ಚೆಯಾಗಬೇಕು. ಪ್ರತಿಭಟನೆಗಳಿಂದ ಯಾವುದೇ ವಿಷಯಗಳು ಚರ್ಚೆಯಾಗಲ್ಲ  ಎಂದು ಹೇಳಿದ್ದರು.


ನಮ್ಮದು ಸಮಗ್ರ ಕರ್ನಾಟಕ. ಬೆಳಗಾವಿ ಅಧಿವೇಶನದಲ್ಲಿಈ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲು ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ಬಸವರಾಜ್ ಹೊರಟ್ಟಿ ಹೇಳಿದ್ದರು.


ಇನ್ನು ಜೆಡಿಎಸ್ ತೊರೆಯವ ಮುನ್ನವೇ ಬಿಜೆಪಿ ನಾಯಕರು (BJP Leaders) ಸಭಾಪತಿ ಸ್ಥಾನದ ಭರಸವೆ ನೀಡಿದ್ದರು.  ಆರಂಭದಲ್ಲಿ ಬಿಜೆಪಿ ಒಳಗೆ ವಲಸೆ ಮತ್ತು ಮೂಲ ಎಂದು ಶೀತಲ ಸಮರ ಉಂಟಾಗಿತ್ತು.

Published by:Mahmadrafik K
First published: