HOME » NEWS » State » BASAVARAJ H GORAKOPPANAVAR CHALLENGES TO SIDDARAMAIAH TO BUILD RAM MADIR IN BADAMI SESR RBK

ಎಕರೆ ಜಮೀನು ನೀಡಲು ಸಿದ್ದ; ಮಂದಿರ ಕಟ್ಟಿಸುವಂತೆ ಸಿದ್ದರಾಮಯ್ಯಗೆ ಸವಾಲ್​

ಬಾದಾಮಿ ಬಳಿಯ ಬನಶಂಕರಿ ರಸ್ತೆಯ ಪಕ್ಕದಲ್ಲಿ ತಮ್ಮ 9ಎಕರೆ ಜಮೀನು ಇದ್ದು, ಅದರಲ್ಲಿ 1 ಎಕರೆ ಜಮೀನನ್ನು ಮಿನಿ ರಾಮ ಮಂದಿರಕ್ಕಾಗಿ ದೇಣಿಗೆ ಕೊಡುವುದಾಗಿ ವಾಗ್ದಾನ ನೀಡಿದ್ದಾರೆ.

news18-kannada
Updated:February 20, 2021, 9:45 PM IST
ಎಕರೆ ಜಮೀನು ನೀಡಲು ಸಿದ್ದ; ಮಂದಿರ ಕಟ್ಟಿಸುವಂತೆ ಸಿದ್ದರಾಮಯ್ಯಗೆ ಸವಾಲ್​
ಸಿದ್ದರಾಮಯ್ಯ
  • Share this:
ಬಾಗಲಕೋಟೆ (ಫೆ. 20): ದೇಶದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸುವ ವಿಚಾರದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಇದರ ಬೆನ್ನಲ್ಲೆ ಮಾಜಿ ಸಿಎಂ ಸಿದ್ದರಾಮಯ್ಯ  ರಾಮ ಮಂದಿರ ನಿರ್ಮಾಣ ಜಾಗ ವಿವಾದಿತ, ನಾನು ದೇಣಿಗೆ ಕೊಡಲ್ಲ. ಬೇರೆ ಜಾಗದಲ್ಲಿ ನಿರ್ಮಾಣ ಮಾಡಿದರೆ  ಕೊಡುತ್ತಿದ್ದೆ ಎನ್ನುವ ಮೂಲಕ ಬಿಜೆಪಿ ನಾಯಕರ ಟೀಕೆಗೆ ಗುರಿಯಾಗಿದ್ದಾರೆ. ಸಿದ್ದರಾಮಯ್ಯ ಅವರ ಹೇಳಿಕೆ ವಿರೋಧ ವ್ಯಕ್ತಪಡಿಸಿರುವ ಅವರದೇ ಕ್ಷೇತ್ರವಾದ ಬಾದಾಮಿ ಪುರಸಭೆ ಸದಸ್ಯ, ತಾವು 1 ಎಕರೆ ಜಮೀನು ನೀಡುತ್ತೇನೆ. ಸಿದ್ದರಾಮಯ್ಯ ಮಂದಿರ ನಿರ್ಮಿಸಲಿ ಎಂದು ಸವಾಲ್​ ಹಾಕಿದ್ದಾರೆ.  ಬಸವರಾಜ ಗೊರಕೊಪ್ಪನವರ್  ಈ ಕುರಿತು ತಮ್ಮ ಟ್ವಿಟರ್​ ಖಾತೆಯಲ್ಲಿ ಬರೆದುಕೊಂಡಿದ್ದಾರೆ.  ಸಿದ್ದರಾಮಯ್ಯ ಅವರು, ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬಳಿಕವೂ ಅದು ವಿವಾದಿತ ಭೂಮಿ ರಾಮ ಮಂದಿರ ನಿರ್ಮಿಸುತ್ತಿದ್ದಾರೆ. ‌ಅದಕ್ಕೆ ನಾನು ದೇಣಿಗೆ ಕೊಡುವುದಿಲ್ಲ ಎಂದಿರುವುದು ನೋವಾಗಿದೆ .ಸಿದ್ದರಾಮಯ್ಯನವರು ತಾವೊಬ್ಬರು ವಕೀಲರಾಗಿದ್ದವರು, ಸುಪ್ರೀಂಕೋರ್ಟ್ ತೀರ್ಪಿಗೆ ಅಗೌರವ ತೋರುವ ಜೊತೆಗೆ ಹಿಂದೂಗಳ ಭಾವನೆಗೆ ಧಕ್ಕೆ ತರುವ ಹೇಳಿಕೆ ಯಾಕೆ ನೀಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.



ಬಾದಾಮಿ ಬನಶಂಕರಿ ರಸ್ತೆಯಲ್ಲಿ ತಾವು ಜಮೀನು ಹೊಂದಿದ್ದು, ಅದರ  ಅಂದಾಜು 1ಕೋಟಿ. ಈ  ಬೆಲೆಬಾಳುವ  1 ಎಕರೆ ಜಮೀನು ನಾನು ದೇಣಿಗೆ ಕೊಡಲು ಸಿದ್ಧನಿದ್ದೇನೆ,  ಅಲ್ಲಿ ಸಿದ್ದರಾಮಯ್ಯ, ರಾಮ ಮಂದಿರ ಕಟ್ಟಿ ತೋರಿಸಲಿ ಎಂದು ಸವಾಲ್ ಹಾಕಿದ್ದಾರೆ.

ಇದನ್ನು ಓದಿ: ನಮ್ಮೂರಿನಲ್ಲೂ ರಾಮ ಮಂದಿರ ಕಟ್ಟಿಸುತ್ತಿದ್ದೇನೆ; ಮಾಜಿ ಸಿಎಂ ಸಿದ್ದರಾಮಯ್ಯಬಾದಾಮಿ ಬಳಿಯ ಬನಶಂಕರಿ ರಸ್ತೆಯ ಪಕ್ಕದಲ್ಲಿ ತಮ್ಮ 9ಎಕರೆ ಜಮೀನು ಇದ್ದು, ಅದರಲ್ಲಿ 1 ಎಕರೆ ಜಮೀನನ್ನು ಮಿನಿ ರಾಮ ಮಂದಿರಕ್ಕಾಗಿ ದೇಣಿಗೆ ಕೊಡುವುದಾಗಿ ವಾಗ್ದಾನ ನೀಡಿದ್ದಾರೆ. ಅಲ್ಲದೇ ರಾಮ ಮಂದಿರ ಕಟ್ಟಲು ಜಮೀನು ನೀಡುವುದಾಗಿ ತಾಯಿ ಬನಶಂಕರಿ ದೇವಿ ಮೇಲೆ ಆಣೆ ಮಾಡಿ ಕೊಡುತ್ತೇನೆ ಎಂದು ವಾಗ್ದಾನ ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಸಿದ್ದರಾಮಯ್ಯ ಹೇಳಿದ್ದಕ್ಕೆ ನನಗೆ ನೋವಾಗಿದೆ. ಹೀಗಾಗಿ ಉಚಿತವಾಗಿ ನಾನು  ಜಮೀನು ನೀಡುತ್ತೇನೆ,. ಸಿದ್ದರಾಮಯ್ಯ ಸ್ವಂತ ಹಣದಲ್ಲಿ ಶ್ರೀರಾಮ ಮಂದಿರ ಕಟ್ಟಿಸಲಿ. 1 ಎಕರೆ ಜಮೀನು ಹಕ್ಕು ಬಿಟ್ಟು ಕೊಡುತ್ತೇನೆ ಎಂದಿದ್ದಾರೆ.
Published by: Seema R
First published: February 20, 2021, 9:45 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories