Basavaraj Bommai: ಬಿಎಸ್​ವೈ ಆಪ್ತನಿಗೆ ಸಿಎಂ ಪಟ್ಟ; ನಾಳೆ ಮುಖ್ಯಮಂತ್ರಿಯಾಗಿ ಬೊಮ್ಮಾಯಿ ಪ್ರಮಾಣ ವಚನ

ಬಿಜೆಪಿಯಲ್ಲಿ ತಮ್ಮ ನಂತರ ಬೊಮ್ಮಾಯಿಯೇ ಸಿಎಂ ಆಗಬೇಕು ಎಂಬುದು ಕೂಡ ಯಡಿಯೂರಪ್ಪ ಅವರ ಇಚ್ಛೆ ಯಾಗಿತ್ತು

ಬಿಜೆಪಿಯಲ್ಲಿ ತಮ್ಮ ನಂತರ ಬೊಮ್ಮಾಯಿಯೇ ಸಿಎಂ ಆಗಬೇಕು ಎಂಬುದು ಕೂಡ ಯಡಿಯೂರಪ್ಪ ಅವರ ಇಚ್ಛೆ ಯಾಗಿತ್ತು

ಬಿಜೆಪಿಯಲ್ಲಿ ತಮ್ಮ ನಂತರ ಬೊಮ್ಮಾಯಿಯೇ ಸಿಎಂ ಆಗಬೇಕು ಎಂಬುದು ಕೂಡ ಯಡಿಯೂರಪ್ಪ ಅವರ ಇಚ್ಛೆ ಯಾಗಿತ್ತು

 • Share this:
  ಬೆಂಗಳೂರು (ಜು. 27): ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ್​ ಬೊಮ್ಮಯಿ ಅವರನ್ನು ಬಿಜೆಪಿ ಶಾಸಕಾಂಗ ಪಕ್ಷ ಸರ್ವ ಸಮ್ಮತದಿಂದ ಆಯ್ಕೆ ಮಾಡಿದೆ. ಸಿಎಂ ಆಗಿ ಆಯ್ಕೆಯಾಗುತ್ತಿದ್ದಂತೆ ಪಕ್ಷಕ್ಕೆ ಧನ್ಯವಾದ ತಿಳಿಸಿದ ಬೊಮ್ಮಾಯಿ ಅವರು ನೇರವಾಗಿ ರಾಜಭವನಕ್ಕೆ ತೆರಳಿದ್ದಾರೆ. ರಾಜ್ಯಪಾಲರ ಭೇಟಿ ಬಳಿಕ ಅವರ ಪ್ರಮಾಣ ವಚನಕ್ಕೆ ಸಮಯ ಕೂಡ ನಿಗದಿಯಾಗಿದೆ. ನಾಳೆ ಮಧ್ಯಾಹ್ನ 3. 30ಕ್ಕೆ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ನೂತನವಾಗಿ ರಾಜ್ಯದ ಮುಖ್ಯಮಂತ್ರಿಯಾದ ಬೊಮ್ಮಾಯಿ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಪಕ್ಷದ ನಾಯಕರು ಬೊಮ್ಮಾಯಿ ಅವರಿಗೆ ಅಭಿನಂದಿಸಿದ್ದಾರೆ.

  ಲಿಂಗಾಯತ ನಾಯಕ
  ಬೆಳಗಾವಿಯ ಶಿಗ್ಗಾವಿ ಮೂಲದ ಬಸವರಾಜ್​ ಬೊಮ್ಮಾಯಿ ಲಿಂಗಾಯತ ಸಮುದಾಯದ ನಾಯಕರಾಗಿದ್ದಾರೆ. ಲಿಂಗಾಯತ ಬಿಎಸ್​ ಯಡಿಯೂರಪ್ಪ ಅವರನ್ನು ಕೆಳಗಿಳಿಸಿದ ಬಳಿಕ ಸಮುದಾಯದ ಕೆಂಗಣ್ಣಿಗೆ ಬಿಜೆಪಿ ಗುರಿಯಾಗುವುದನ್ನು ತಪ್ಪಿಸಲು ಬೊಮ್ಮಾಯಿಗೆ ಪಟ್ಟ ಕಟ್ಟುವುದು ಸೂಕ್ತ ಎಂದ ಅರಿತ ಹೈ ಕಮಾಂಡ್​ ಬೊಮ್ಮಾಯಿಗೆ ಪಟ್ಟ ಕಟ್ಟಿದೆ. ಸದರ ಲಿಂಗಾಯತ ಸಮುದಾಯದ ಬೊಮ್ಮಾಯಿಗೆ ಬಿಜೆಪಿ ಸ್ಥಾನ ನೀಡುವ ಮೂಲಕ ಮಠಾಧೀಶ ಕೋಪ ತಣ್ಣಾಗಾಗುವಂತೆ ಮಾಡಿದೆ. ಈ ಮೂಲಕ ಬಿಜೆಪಿ ಮತ್ತೆ ಲಿಂಗಾಯತ ಸಮುದಾಯದ ಮತ ಬ್ಯಾಂಕ್​ ಭದ್ರ ಪಡಿಸಿಕೊಂಡಿದೆ.

  ಯಡಿಯೂರಪ್ಪ ಅವರ ಮೊದಲ ಆಯ್ಕೆ ಕೂಡ ಬೊಮ್ಮಯಿ
  ಬಿಜೆಪಿಯಲ್ಲಿ ತಮ್ಮ ನಂತರ ಬೊಮ್ಮಾಯಿಯೇ ಸಿಎಂ ಆಗಬೇಕು ಎಂಬುದು ಕೂಡ ಯಡಿಯೂರಪ್ಪ ಅವರ ಇಚ್ಛೆ ಯಾಗಿತ್ತು. ಆರ್​ಎಸ್​ಎಸ್​ ಕಾರ್ಯಕರ್ತರಾಗಿರದ ಬಿಜೆಪಿ ನಾಯಕ ಬೊಮ್ಮಾಯಿ ಆಗಿದ್ದು, ಅವರ ಆಯ್ಕೆ ಪಕ್ಷಕ್ಕೆ ಲಾಭಾ ತರಲಿದೆ ಎಂಬುದು ಬಿಎಸ್​ ಯಡಿಯೂರಪ್ಪ ಲೆಕ್ಕಾಚಾರವಾಗಿತ್ತು.

  ತಂದೆಯ ಮಾರ್ಗ ಅನುಸರಿಸಿದ ಬೊಮ್ಮಾಯಿ
  ಬಸವರಾಜ್​ ಬೊಮ್ಮಾಯಿ ತಂದೆ ಎಸ್​ಆರ್​ ಬೊಮ್ಮಾಯಿ ಕೂಡ ರಾಜ್ಯದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದವರು . ತಂದೆಯ ಮಾರ್ಗ ಅನುಸರಿಸಿದ ಬಸವರಾಜ್​ ಬೊಮ್ಮಾಯಿ ಜನತಾ ದಳದ ಮೂಲಕ ತಮ್ಮ ರಾಜಕೀಯ ಶುರು ಮಾಡಿದವರು. 1998ರಲ್ಲಿ ಜನತಾ ದಳದ ಮೂಲಕ ಧಾರವಾಡ ವಿಧಾನಸಭಾ ಚುನಾವಣೆಗೆ ನಿಂತರು. 1998 ಮತ್ತು 2004ರಲ್ಲಿ ಜೆಡಿಎಸ್ ಶಾಸಕರಾಗಿದ್ದ ಅವರು ಬಳಿಕ 2008ರಲ್ಲಿ ಬಿಜೆಪಿ ಸೇರಿದರು. 2008ರಲ್ಲಿ ಹಾವೇರಿಯ ಶಿಗ್ಗಾವಿ ಕ್ಷೇತ್ರದಲ್ಲಿ ವಿಧಾನಸಭಾ ಚುನಾವಣೆ ಗೆದ್ದ ಅವರು ಯಡಿಯೂರಪ್ಪ ಸಂಪುಟದಲ್ಲಿ ಜಲ ಸಂಪನ್ಮೂಲ ಸಚಿವರಾಗಿ, ಗೃಹ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ.
  Published by:Seema R
  First published: