ಬಾಗಲಕೋಟೆ: ಜಿಲ್ಲೆಯ ಮುಧೋಳದಲ್ಲಿ (Mudhol, Bagalkot) ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕು ಸ್ಥಾಪನೆ & ಉದ್ಘಾಟನೆ ಕಾರ್ಯಕ್ರಮ ನೆರವೇರಿಸಿದ ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಹೊಸ ಕಿಡಿಯನ್ನು ಹೆಚ್ಚಿಸಿದ್ದಾರೆ. ಇತ್ತೀಚೆಗಷ್ಟೇ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ (Balachandra Jarkiholi), ಲಿಂಗಾಯತರೇ (Lingayat Leader) ಮುಂದಿನ ಸಿಎಂ ಎಂದು ಹೇಳಿದ್ದರು. ಇದೀಗ ಬಸವರಾಜ್ ಬೊಮ್ಮಾಯಿ ನಾನೇ ಮುಂದಿನ ಸಿಎಂ (Karnataka Next CM) ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಬೆನ್ನಲ್ಲೇ ಬಿಜೆಪಿ (BJP) ಅಂಗಳದಲ್ಲಿ ಹೊಸ ಚರ್ಚೆಗಳು ಆರಂಭಗೊಂಡಿವೆ.
ಪಿಎಂ ಕಿಸಾನ್ 6ನೇ ಕಂತಿನ 975 ಕೋಟಿ ರೂಪಾಯಿ ಬಿಡುಗಡೆ ಮಾಡಿದರು. 48 ಲಕ್ಷ 75 ಸಾವಿರ ಜನ ಫಲಾನುಭವಿಗಳ ಅಕೌಂಟಿಗೆ ಹಣ ಜಮಾವಣೆಗೆ ಚಾಲನೆ ನೀಡಿದರು. ನಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತೆ ನಾನೇ ಸಿಎಂ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಾಗಲಕೋಟೆಯ ಮುಧೋಳ ನಗರ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ನಾನೇ ಮುಂದಿನ ಮುಖ್ಯಮಂತ್ರಿ ಅಂತಾ ಹೇಳಿದ್ದಾರೆ.
ಇಂದು ಬಾಗಲಕೋಟೆ ಜಿಲ್ಲೆಯ ಮುಧೋಳದ ರನ್ನ ಕ್ರೀಡಾಂಗಣದಲ್ಲಿ ಪಿಎಂ ಕಿಸಾನ್ ಕರ್ನಾಟಕ ಯೋಜನೆಯ 2022-23ನೇ ಸಾಲಿನ 2 ಕಂತಿನ ಮೊತ್ತವನ್ನು ರೈತ ಫಲಾನುಭವಿಗಳ ಖಾತೆಗೆ ನೇರವಾಗಿ ವರ್ಗಾಯಿಸುವ ಪ್ರಕ್ರಿಯೆಗೆ ಚಾಲನೆ ನೀಡಿದೆನು.
1/2 pic.twitter.com/2fkTSDHlpj
— Basavaraj S Bommai (@BSBommai) March 21, 2023
ಬೀಳಗಿ ಕ್ಷೇತ್ರದಲ್ಲಿ ನೀರಾವರಿ ಸೇರಿದಂತೆ ಸಾವಿರಾರು ಅಭಿವೃದ್ಧಿ ಕಾರ್ಯ ನಡೆಯುತ್ತಿದ್ದು, ಆದರೆ ಮುರುಗೇಶ್ ನನ್ನನ್ನ ಕರೆದಿಲ್ಲ, ನೆಕ್ಸ್ಟ್ ನಾನೇ ಬರ್ತೀನಿ. ಚಿಂತೆ ಮಾಡಬೇಡ್ರಿ ನಾನು ಮುಂದಿನ ಮುಖ್ಯಮಂತ್ರಿ ಆಗಿ ಬರ್ತೀನಿ ಅಂತಾ ವಿಶ್ವಾಸ ವ್ಯಕ್ತಪಡಿಸಿದರು.
ಬಾಲಚಂದ್ರ ಜಾರಕಿಹೊಳಿ ಹೇಳಿದ್ದೇನು?
ನಾಗನೂರಲ್ಲಿ ವೀರಶೈವ ಲಿಂಗಾಯತ ಸಮಾವೇಶದಲ್ಲಿ ಮಾತನಾಡಿರುವ ಬಾಲಚಂದ್ರ ಜಾರಕಿಹೊಳಿ, 'ಲಿಂಗಾಯತ ಸಿಎಂ' ಟ್ರಂಪ್ ಕಾರ್ಡ್ ಯೂಸ್ ಮಾಡಿದ್ದಾರೆ. ಅಂದರೆ ಲಿಂಗಾಯತ ನಾಯಕರೊಬ್ಬರು ಸಿಎಂ ಆಗ್ತಾರೆ ಅನ್ನೋ ಸುಳಿವು ನೀಡಿದ್ದಾರೆ.
ಇದನ್ನೂ ಓದಿ: Karnataka election 2023: ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಘೋಷಣೆ ಬೆನ್ನಲ್ಲೇ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು
ವೀರಶೈವ ಲಿಂಗಾಯತ ಸಮಾಜದ ಮತ ವಿಭಜನೆ ಆಗಬಾರದು. ದಯಮಾಡಿ ತಮ್ಮ ಮತ ಬೇರೆ ಪಕ್ಷಕ್ಕೆ ಹೋಗಬಾರದು. ಏಕೆಂದರೆ ಸಿಎಂ ಸ್ಥಾನ ಅಷ್ಟೊಂದು ಸರಳ ಅಲ್ಲ. 6 ಕೋಟಿ ಜನಸಂಖ್ಯೆಯಲ್ಲಿ 224 ಜನಕ್ಕೆ ಎಂಎಲ್‌ಎ ಆಗುವ ಹಣೆಬರಹ ಇರುತ್ತೆ.ಅದರಲ್ಲಿ 34 ಜನರಿಗೆ ಮಂತ್ರಿ ಆಗುವ ಹಣೆಬರಹವನ್ನು ದೇವರು ಬರೆದಿರುತ್ತಾನೆ. ಈ 6 ಕೋಟಿ ಜನಸಂಖ್ಯೆಯಲ್ಲಿ ಒಬ್ಬನೇ ಸಿಎಂ ಆಗುವ ಹಣೆಬರಹ ಬರೆದಿರುತ್ತಾನೆ. ಮುಖ್ಯಮಂತ್ರಿ ಸ್ಥಾನ ವೀರಶೈವ ಲಿಂಗಾಯತ ಸಮಾಜದ ಕೈಯಲ್ಲಿದೆ ಎಂದು ಸ್ಫೋಟಕ ಹೇಳಿಕೆ ನೀಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ