ಹುಲಿಯಾ ಅಲ್ಲ ಇನ್ಮೇಲೆ ರಾಜಹುಲಿ: ಸಿದ್ದರಾಮಯ್ಯರನ್ನು ಕೆಣಕಿದ ಬಸವರಾಜ ಬೊಮ್ಮಯಿ

12 ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದರ ಬಗ್ಗೆ ಸಂಭ್ರಮ ವ್ಯಕ್ತಪಡಿಸಿದ ಮಾತನಾಡಿದ ಅವರು, ಈ ಗೆಲುವಿಗೆ ಕಾರಣ ಯಡಿಯೂರಪ್ಪ ಅವರು. ಅವರನ್ನು ಹೇ ರಾಜಹುಲಿಯಾ ಎಂದು ಕರೆಯಬೇಕು ಎಂದು ಸಂತಸ ವ್ಯಕ್ತಪಡಿಸಿದರು. 

Seema.R | news18-kannada
Updated:December 9, 2019, 1:14 PM IST
ಹುಲಿಯಾ ಅಲ್ಲ ಇನ್ಮೇಲೆ ರಾಜಹುಲಿ: ಸಿದ್ದರಾಮಯ್ಯರನ್ನು ಕೆಣಕಿದ ಬಸವರಾಜ ಬೊಮ್ಮಯಿ
ಬೊಮ್ಮಾಯಿ
  • Share this:
ಬೆಂಗಳೂರು(ಡಿ. 09): ಇಷ್ಟು ದಿನ ಹೌದು ಹುಲಿಯಾ ಎನ್ನುತ್ತಿದ್ದವರು ಹೇ ರಾಜಹುಲಿಯಾ ಎಂದು ಯಡಿಯೂರಪ್ಪ ಅವರಿಗೆ ಬಹುಬರಾಕ್​ ಹಾಡುತ್ತಾರೆ ಎಂದು ಬಿಜೆಪಿ ನಾಯಕ ಬಸವರಾಜ್​ ಬೊಮ್ಮಯಿ ಸಿದ್ದರಾಮಯ್ಯಗೆ ಟಾಂಗ್​ ನೀಡಿದ್ದಾರೆ.

12 ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದರ ಬಗ್ಗೆ ಸಂಭ್ರಮ ವ್ಯಕ್ತಪಡಿಸಿದ ಮಾತನಾಡಿದ ಅವರು, ಈ ಗೆಲುವಿಗೆ ಕಾರಣ ಯಡಿಯೂರಪ್ಪ ಅವರು. ಅವರನ್ನು ಹೇ ರಾಜಹುಲಿಯಾ ಎಂದು ಕರೆಯಬೇಕು ಎಂದು ಸಂತಸ ವ್ಯಕ್ತಪಡಿಸಿದರು.

ಉಪಚುನಾವಣಾ ಪ್ರಚಾರದ ವೇಳೆ ಸಿದ್ದರಾಮಯ್ಯ ಅವರನ್ನು ಹೌದು ಹುಲಿಯಾ ಎನ್ನುವ ಮೂಲಕ ಅವರನ್ನು ಜನರು ಹುರಿದುಂಬಿಸಿದ್ದರು. ಈ ಸ್ಲೋಗನ್​ಗೆ ಕೌಂಟರ್​ ಕೊಟ್ಟು ಮಾತನಾಡಿದ ಅವರು, ಹೌದು ಹುಲಿಯಾ ಅಲ್ಲ ಇನ್ನೇನಿದ್ದರೂ ಹೇ ರಾಜಹುಲಿಯಾ ಅಷ್ಟೇ ಎಂದರು.

ಅನರ್ಹರ ವಿರುದ್ಧ ಪ್ರಚಾರ ನಡೆಸಿದ್ದ ಸಿದ್ದರಾಮಯ್ಯ, ಸ್ವ ಹಿತಾಸಕ್ತಿಗಾಗಿ ತಮ್ಮನ್ನು ಮಾರಿಕೊಂಡವರು ಕ್ಷೇತ್ರದ ಅಭಿವೃದ್ಧಿ ಮಾಡುತ್ತಾರಾ ಎಂದು ಪ್ರಶ್ನಿಸಿದ್ದರು. ಅಲ್ಲದೇ ತಾವು 10 ರಿಂದ 12 ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.

ಇದನ್ನು ಓದಿ: Karnataka Bypoll Result: ಜೆಡಿಎಸ್​ ಭದ್ರಕೋಟೆಯಲ್ಲಿ ಅರಳಿದ ಕಮಲ: ಮಗ ವಿಜಯೇಂದ್ರ ಕೆಲಸಕ್ಕೆ ಅಪ್ಪ ಯಡಿಯೂರಪ್ಪ ಸಂತಸ

ಆದರೆ, ಚುನಾವಣಾ ಫಲಿತಾಂಶದಲ್ಲಿ ಆಡಳಿತ ಪಕ್ಷಕ್ಕೆ ಮತದಾರರ ಒಲವು ತೋರಿದ್ದಾನೆ. ಅನರ್ಹರಾದರೂ , ಬಿಜೆಪಿ ಅಭ್ಯರ್ಥಿಪರ ಮತಚಲಾಯಿಸುವ ಮೂಲಕ ಮೂರು ವರ್ಷಗಳ ಕಾಲ ಬಿಜೆಪಿ ಸ್ಥಿರ ಆಡಳಿತ ನಡೆಸಲು ಆಶೀರ್ವಾದಿಸಿದ್ದಾರೆ.
First published:December 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading