ಚಿತ್ರದುರ್ಗ (ಡಿ.13): ಮುರುಘಾಮಠಕ್ಕೆ (Murugha Mutt) ಆಡಳಿತಾಧಿಕಾರಿ ನೇಮಕ ವಿಚಾರಕ್ಕೆ ಸಂಬಂಧಿಸಿದಂತೆ ಅಪಸ್ವರ ಕೇಳಿ ಬಂದಿದೆ. ಮುರುಘಾ ಮಠದ ಉಸ್ತುವಾರಿ ಬಸವಪ್ರಭು ಶ್ರೀಗಳು (Basavaprabhu Shree) ಆಡಳಿತಾಧಿಕಾರಿ ನೇಮಕ ಆದೇಶ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ. ಆಡಳಿತಾಧಿಕಾರಿ ನೇಮಕಕ್ಕೆ ಪ್ರತಿಕ್ರಿಯಿಸಿದ ಬಸವಪ್ರಭು ಶ್ರೀಗಳು, ಸರ್ಕಾರದ ಈ ಆದೇಶದಿಂದ (Government Order) ಲಕ್ಷಾಂತರ ಭಕ್ತರ ಮನಸ್ಸಿಗೆ ನೋವಾಗಿದೆ ಎಂದು ಹೇಳಿದ್ದಾರೆ.
ಆಡಳಿತಾಧಿಕಾರಿ ನೇಮಿಸಿದಂತೆ ಮನವಿ ಮಾಡಿದ್ದೆವು
ಚಿತ್ರದುರ್ಗದಲ್ಲಿ ಮಾತಾಡಿದ ಬಸವಪ್ರಭು ಶ್ರೀಗಳು ಈ ಬಗ್ಗೆ ಭಕ್ತರು, ಕಾನೂನು ತಜ್ಞರ ಸಲಹೆ ಪಡೆದು ಕಾನೂನು ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ. ಈಗಾಗಲೇ ಸಿಎಂಗೆ ಆಡಳಿತಾಧಿಕಾರಿ ನೇಮಿಸಿದಂತೆ ಮನವಿ ಮಾಡಿದ್ದೆವು. ಸರ್ಕಾರ ಯಾಕೆ ಆಡಳಿತಾಧಿಕಾರಿ ನೇಮಿಸಿದೆ ಗೊತ್ತಿಲ್ಲ. ಮಠದ ಪೂಜಾ ಕೈಂಕರ್ಯ, SJM ಸಂಸ್ಥೆಯ ಆಡಳಿತ ಸೂಸುತ್ರವಾಗಿ ನಡೆಯುತ್ತಿದೆ ಎಂದು ಹೇಳಿದ್ರು.
ಮುರುಘಾಶ್ರೀ ವಿರುದ್ಧ ಪಿತೂರಿ ನಡೆದಿದೆ
ಮುರುಘಾಶ್ರೀ ವಿರುದ್ಧ ಪಿತೂರಿ ನಡೆದಿದೆ ಎಂಬುದು ಗೊತ್ತಿದ್ದು, ಮಾಜಿ ಸಚಿವ ಎಚ್. ಏಕಾಂತಯ್ಯ ಇರಬಹುದು ಬೇರೆ ಯಾರೇ ಇರಬಹುದು. ದುರುದ್ದೇಶದಿಂದ ಮುರುಘಾಶ್ರೀ ಪಿತೂರಿ ನಡೆಸಿದ್ದಾರೆ. ಇದನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕಿತ್ತು ಎಂದು ಬಸವಪ್ರಭು ಶ್ರೀಗಳು ಹೇಳಿದ್ದಾರೆ.
ಮುರುಘಾಮಠಕ್ಕೆ ಆಡಳಿತಾಧಿಕಾರಿ ನೇಮಿಸಿದ ರಾಜ್ಯ ಸರ್ಕಾರ
ಚಿತ್ರದುರ್ಗದ ಮುರುಘಾ ಸ್ವಾಮಿ (Murugha swamy) ವಿರುದ್ಧ ಫೋಕ್ಸೋ ಪ್ರಕರಣ ದಾಖಲಾಗಿದ್ದು, ಶಿವಮೂರ್ತಿ ಮುರುಘಾ ಶರಣರು (Shivamurthy Murugha Sharanaru) ಕಳೆದ 3 ತಿಂಗಳಿಂದ ನ್ಯಾಯಾಂಗ ಬಂಧನದಲ್ಲಿರುವ (Judicial Custody) ಹಿನ್ನೆಲೆ ಚಿತ್ರದುರ್ಗದ (Chitradurga) ಮುರುಘಾ ಮಠದ ಟ್ರಸ್ಟ್ ಮತ್ತು ಶಿಕ್ಷಣ ಸಂಸ್ಥೆಗೆ ನಿವೃತ್ತ ಐಎಎಸ್ ಅಧಿಕಾರಿ ಪಿ.ಎಸ್.ವಸ್ತ್ರದ್ (IAS Officer PS Vastrad) ಅವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಆಡಳಿತಾಧಿಕಾರಿ ನೇಮಕಕ್ಕೆ ಒತ್ತಾಯ
ಆಡಳಿತಾಧಿಕಾರಿ ನೇಮಿಸಬಹುದು ಎಂದು ಅಭಿಪ್ರಾಯ
ಈ ಸಂಬಂಧ ರಾಜ್ಯ ಸರ್ಕಾರ ಅಡ್ವೊಕೇಟ್ ಜನರಲ್ ಅವರ ಅಭಿಪ್ರಾಯ ಕೇಳಿತ್ತು. ಮುರುಘಾ ಶರಣರು ನ್ಯಾಯಾಂಗ ಬಂಧನದಲ್ಲಿರುವುದರಿಂದ ಟ್ರಸ್ಟಿನ ಸ್ವತ್ತು ರಕ್ಷಿಸುವ ಉದ್ದೇಶದಿಂದ ಸಂವಿಧಾನದ ಅನುಚ್ಛೇದ 162 ರ ಅನ್ವಯ ಸರ್ಕಾರ ಆಡಳಿತಾಧಿಕಾರಿ ನೇಮಿಸಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಹೀಗಾಗಿ ನಿವೃತ್ತ ಐಎಎಸ್ ಅಧಿಕಾರಿ ಪಿ.ಎಸ್.ವಸ್ತ್ರದ್ ಅವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಇದನ್ನೂ ಓದಿ: H Vishwanath: ಬಿಜೆಪಿ ವಿರುದ್ಧವೇ ವಿಶ್ವನಾಥ್ ಕೆಂಡಾಮಂಡಲ; ಕಾಂಗ್ರೆಸ್ ಸೇರ್ಪಡೆ ಬಗ್ಗೆ ಹೊಸ ಬಾಂಬ್ ಸಿಡಿಸಿದ ಹಳ್ಳಿ ಹಕ್ಕಿ
694 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ
ಮುರುಘಾ ಮಠ (Murugha Mutt) ಸ್ವಾಮೀಜಿಗಳ ವಿರುದ್ಧ ದಾಖಲಾಗಿರುವ 2ನೇ ಪೋಕ್ಸೋ (POCSO Act) ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಒಟ್ಟು 694 ಪುಟಗಳ ಚಾರ್ಜ್ ಶೀಟ್ನಲ್ಲಿ ಮಠದಲ್ಲಿ ನಡೆಯುತ್ತಿರುವ ಹಲವು ಆಘಾತಕಾರಿ ಸಂಗತಿಗಳನ್ನು ಬೆಳಕಿಗೆ ತಂದಿದೆ. ಸಂತ್ರಸ್ತ ಬಾಲಕಿಯರ ಗಂಭೀರ ಆರೋಪಗಳೂ ಇಲ್ಲಿ ದಾಖಲಾಗಿವೆ. ಪ್ರಕರಣದ ತನಿಖೆ ನಡೆಸಿರುವ ಡಿವೈಎಸ್ಪಿ ಅನಿಲ್ (DySP Anil) ನೇತೃತ್ವದ ತಂಡ 2ನೇ ಅಪರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಒಟ್ಟು 694 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದರು.
ಪೋಕ್ಸೋ, ಅಟ್ರಾಸಿಟಿ ಮತ್ತು ಧಾರ್ಮಿಕ ಕೇಂದ್ರ ದುರುಪಯೋಗ ಕಾಯ್ದೆ ಅಡಿಯಲ್ಲೂ ಕೇಸ್ ದಾಖಲಾಗಿದ್ದು, 342 ಪುಟಗಳ 2 ಸೆಟ್ನಂತೆ ಒಟ್ಟು 694 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ