• Home
  • »
  • News
  • »
  • state
  • »
  • Chitradurga: ಮುರುಘಾಮಠಕ್ಕೆ ನೂತನ ಉತ್ತರಾಧಿಕಾರಿ ನೇಮಕ; ಬಸವಾದಿತ್ಯ ಶ್ರೀಗಳಿಗೆ ಪಟ್ಟ

Chitradurga: ಮುರುಘಾಮಠಕ್ಕೆ ನೂತನ ಉತ್ತರಾಧಿಕಾರಿ ನೇಮಕ; ಬಸವಾದಿತ್ಯ ಶ್ರೀಗಳಿಗೆ ಪಟ್ಟ

ಮುರುಘಾಮಠಕ್ಕೆ ನೂತನ ಉತ್ತರಾಧಿಕಾರಿ ನೇಮಕ

ಮುರುಘಾಮಠಕ್ಕೆ ನೂತನ ಉತ್ತರಾಧಿಕಾರಿ ನೇಮಕ

ಮುರುಘಾ ಶರಣರ ನಂತರ ಭಕ್ತರೆಲ್ಲರೂ ನೂತನ ಉತ್ತರಾಧಿಕಾರಿ ಶ್ರೀಗಳಿಗೆ ಹೂವಿನ ಸುರಿಮಳೆ ಸುರಿಸಿದರು. ಮುರುಘಾ ಶ್ರೀಗಳು ಹಿರಿಯ ಸ್ವಾಮೀಜಿಗಳ ಪರಂಪರೆಯನ್ನು ಪಾಲಿಸಿಕೊಂಡ ಬಂದಿದ್ದಾರೆ ಎನ್ನಬಹುದು.

  • Share this:

ಚಿತ್ರದುರ್ಗ (ಮೇ 27): ರಾಜಾಶ್ರಯದ ಐತಿಹಾಸಿಕ ಮಠಗಳಲ್ಲಿ ಒಂದಾಗಿರುವ ಕೋಟೆ ನಾಡು ಚಿತ್ರದುರ್ಗದ (Chitradurga) ಮುರುಘ ರಾಜೇಂದ್ರ ಮಠದ (Muruga Rajendra Mutt) ಪೀಠಾಧ್ಯಕ್ಷರಾದ ಶಿವಮೂರ್ತಿ ಮುರುಘಾ ಶರಣರು ಕ್ರಾಂತಿಕಾರಿ ನಿರ್ಧಾರ ಕೈಗೊಂಡಿದ್ದು, ಕೋಟೆನಾಡು ಚಿತ್ರದುರ್ಗ ಜಿಲ್ಲೆಯನ್ನು ಮಠಗಳ ಬೀಡು ಎಂದೇ ಕರೆಯುತ್ತಾರೆ. ಅದ್ರಲ್ಲಿ ಪ್ರಮುಖ ಮಠಗಳಲ್ಲಿ ಶ್ರೀ ಮುರುಘರಾಜೇಂದ್ರ  ಬೃಹನ್ಮಠವೂ ಒಂದಾಗಿದೆ. ಇಂದು ಮಠದಲ್ಲಿ ನಡೆದ ಶರಣ ಸಭೆಯಲ್ಲಿ ಉತ್ತರಾಧಿಕಾರಿ ಆಯ್ಕೆ ನಡೆಯಿತು. ಚಿತ್ರದುರ್ಗ ತಾಲೂಕಿನ ಹುಲ್ಲೂರು ಗ್ರಾಮದ ಶಿವಮೂರ್ತಯ್ಯ ಹಾಗೂ ಚಂದ್ರಕಲಾ ದಂಪತಿಗಳ ಏಕೈಕ ಪುತ್ರರಾದ ಬಸವಾದಿತ್ಯ (Basavaditya) ಅವರನ್ನು ಉತ್ತರಾಧಿಕಾರಿಯಾಗಿ ಘೋಷಿಸಲ್ಪಟ್ಟರು. ರುದ್ರಾಕ್ಷಿ ಮಾಲೆ ಹಾಕಿ, ಪುಷ್ಪವೃಷ್ಟಿ ಗೈದ ಡಾ.ಶಿವಮೂರ್ತಿ ಮುರುಘಾ ಶರಣರು, ನಾಡಿನ ಅನೇಕ ಕಡೆಗಳಿಂದ ಬಂದಿದ್ದ ಮಠದ ಭಕ್ತರೆದುರು ಉತ್ತರಾಧಿಕಾರಿ ಆಯ್ಕೆಯನ್ನು ಘೋಷಿಸಿದರು.


ಉತ್ತರಾಧಿಕಾರಿ ಬಸವಾದಿತ್ಯ ಸ್ವಾಮೀಜಿ


ಶ್ರೀಮಠದ ಉತ್ತರಾಧಿಕಾರಿಯಾಗಿ ಬಸವಾದಿತ್ಯ ಸ್ವಾಮೀಜಿ ನೇಮಕ ಮಾಡಿದ್ದಾರೆ. ಚಿತ್ರದುರ್ಗ ನಗರದ ಮುರುಘಾ ಮಠದ ಶಿರಸಂಗಿ ಮಹಾಲಿಂಗ ಸ್ವಾಮಿ ಸಭಾಂಗಣದಲ್ಲಿ ನೂರಾರು ಭಕ್ತರ ಸಮ್ಮುಖದಲ್ಲಿ ಶರಣರು ಈ ಘೋಷಣೆ ಮಾಡಿದ್ದಾರೆ. ಇನ್ನು ನೂತನ ಉತ್ತರಾಧಿಕಾರಿ ಬಸವಾದಿತ್ಯ ಸ್ವಾಮೀಗಳಿಗೆ ಹಣೆಗೆ ವಿಭೂತಿ ಇಟ್ಟು, ರುದ್ರಾಕ್ಷಿ ಮಾಲೆ ಹಾಕುವ ಮೂಲಕ ಘೋಷಿಸಿದರು.


ಇದನ್ನೂ ಓದಿ:  Annamalai IPS: ಸಿನಿಮಾದತ್ತ ಮುಖ ಮಾಡಿದ ಕರ್ನಾಟಕದ ಸಿಂಗಂ, ಒಂದೇ ಒಂದು ರೂಪಾಯಿ ಸಂಭಾವನೆ ಪಡೆದ ಅಣ್ಣಾಮಲೈ


ಶ್ರೀಗಳಿಗೆ ಹೂವಿನ ಸುರಿಮಳೆ


ಮುರುಘಾ ಶರಣರ ನಂತರ ಭಕ್ತರೆಲ್ಲರೂ ನೂತನ ಉತ್ತರಾಧಿಕಾರಿ ಶ್ರೀಗಳಿಗೆ ಹೂವಿನ ಸುರಿಮಳೆ ಸುರಿಸಿದರು. ಮುರುಘಾ ಶ್ರೀಗಳು ಹಿರಿಯ ಸ್ವಾಮೀಜಿಗಳ ಪರಂಪರೆಯನ್ನು ಪಾಲಿಸಿಕೊಂಡ ಬಂದಿದ್ದಾರೆ ಎನ್ನಬಹುದು.


ಮಠದ ಗುರುಕುಲದಲ್ಲಿಯೇ ಇದ್ದ ಬಸವಾದಿತ್ಯ


ಮಠದ ಗುರುಕುಲದಲ್ಲಿಯೇ ಇದ್ದು, ಎರಡು ವರ್ಷ ಪಿಯುಸಿ ಅಭ್ಯಸಿಸಿರುವ ಬಸವಾದಿತ್ಯ ಅವರು, ಕೆಲದಿನಗಳಿಂದ ಡಾ.ಶಿವಮೂರ್ತಿ ಮುರುಘಾ ಶರಣರ ಜೊತೆಗೆ ಓಡಾಟದಲ್ಲೂ ಪಾಲ್ಗೊಂಡವರು. ಮಠಕ್ಕೆ ಬಂದ ಮೇಲೆ ಸಂಪೂರ್ಣ ಅಧ್ಯಾತ್ಮಿಕತೆಯತ್ತ ವಾಲಿದ ಬಸವಾದಿತ್ಯ ಅವರು, ಮುರುಘಾ ಶರಣರ ಗಮನ ಸೆಳೆದಿರಬಹುದು. ಒಂದು ವರ್ಷದ ಹಿಂದೆಯೇ ಉತ್ತರಾಧಿಕಾರಿ ಆಯ್ಕೆಯಾಗಿತ್ತು. ಮಠದ ಆಡಳಿತದ ಸ್ಪಷ್ಟತೆಗಾಗಿ ಆಯ್ಕೆ ನಡೆದಿದೆ ಎನ್ನುತ್ತಾರೆ ಡಾ.ಶಿವಮೂರ್ತಿ ಮುರುಘಾ ಶರಣರು.


ಒಂದು ವರ್ಷದ ಹಿಂದೆಯೇ ನಿರ್ಧಾರ


ಆತುರದ ನಿರ್ಧಾರ ಇಲ್ಲ : ನೂತನ ಉತ್ತರಾಧಿಕಾರಿ ಘೋಷಣೆ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಶರಣರು, "ಇದು ಆತುರದ ನಿರ್ಧಾರವಲ್ಲ, ಒಂದು ವರ್ಷದ ಹಿಂದೆಯೇ ಉತ್ತರಾಧಿಕಾರಿ ಘೋಷಣೆ ಬಗ್ಗೆ ನಿರ್ಧರಿಸಲಾಗಿತ್ತು" ಎಂದು ಹೇಳಿದರು.


ಶಿವಮೂರ್ತಯ್ಯ ಮತ್ತು ಚಂದ್ರಕಲಾ ದಂಪತಿ ಪುತ್ರ


ಬಸವಾದಿತ್ಯ ಸ್ವಾಮೀಜಿನಗಳು ಚಿತ್ರದುರ್ಗ ಹುಲ್ಲೂರು ಗ್ರಾಮದ ಶಿವಮೂರ್ತಯ್ಯ ಮತ್ತು ಚಂದ್ರಕಲಾ ದಂಪತಿ ಎರಡನೇ ಪುತ್ರರು. ಚಿತ್ರದುರ್ಗ ನಗರದ ಎಸ್ಜೆಎಂ ಸ್ವಾತಂತ್ರ್ಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.


ಮಠದ ಅಭಿವೃದ್ಧಿಗೆ ಶ್ರಮಿಸುವೆ 


ಚಿತ್ರದುರ್ಗ ತಾಲ್ಲೂಕಿನ ಹುಲ್ಲೂರು ಗ್ರಾಮದ ಚಂದ್ರಕಲಾ ಮತ್ತು ಶಿವಮೂರ್ತಯ್ಯ ದಂಪತಿಯ ಪುತ್ರ ಬಸವಾದಿತ್ಯರು ದ್ವಿತೀಯ ಪಿಯು ವ್ಯಾಸಂಗ ಮಾಡುತ್ತಿದ್ದಾರೆ. ಮಠದ ನೂತನ ಉತ್ತರಾಧಿಕಾರಿಯಾದ ನಂತರ ಮಾತನಾಡಿದ ಅವರು, ಬಸವಾದಿತ್ಯ ಸ್ವಾಮಿಗಳು "ನನಗೆ ಚಿಕ್ಕ ವಯಸ್ಸಿನಲ್ಲೇ ಮಠದ ಜವಾಬ್ದಾರಿ ನೀಡಿದ್ದಾರೆ. ಮಠವನ್ನು ಮತ್ತಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯುಲಾಗುವುದು" ಎಂದು ಹೇಳಿದರು.


ಇದನ್ನೂ ಓದಿ:  Text Book Row: ಪಠ್ಯಪುಸ್ತಕ ಪರಿಷ್ಕರಣೆ ವಿರೋಧ; ಮೇ 31ರಂದು ರಾಜ್ಯಾದ್ಯಂತ ಹೋರಾಟಕ್ಕೆ ಕರವೇ ಸಜ್ಜು


20 ಯತಿವರ್ಯರು ಮಠವನ್ನು ಮುನ್ನಡೆಸಿದ್ದಾರೆ


20 ಯತಿವರ್ಯರು ಮಠವನ್ನು ಮುನ್ನಡೆಸಿದ್ದಾರೆ; "ಇದು ಭಕ್ತರ ಶ್ರದ್ಧಾಕೇಂದ್ರ , ಇಲ್ಲಿ ನಮ್ಮನ್ನು ಸೇರಿದಂತೆ 20 ಯತಿವರ್ಯರು ಮಠವನ್ನು ಮುನ್ನಡೆಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಾನವನ ಬದುಕು ಅಸ್ಥಿರವಾಗಿದೆ. ಮನೆಗಳಲ್ಲಿ ಅನಿರೀಕ್ಷಿತ ಅಪಘಾತ, ಹೃದಯಾಘಾತದಲ್ಲಿ ನಿಧನರಾದರೆ ಜವಾಬ್ದಾರಿಯನ್ನು ಮನೆಯವರು ತೆಗೆದುಕೊಳ್ಳುತ್ತಾರೆ. ಆದರೆ ಮಠಗಳಲ್ಲಿ ಆ ರೀತಿ ಆದರೆ ಶೂನ್ಯ ನಿರ್ಮಾಣವಾಗಬಾರದು ಎಂದು ಭಕ್ತರು ಹಾಗೂ ಸಮುದಾಯದ ಮುಖಂಡರ ಸಮ್ಮುಖದಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ" ಎಂದು ಶಿವಮೂರ್ತಿ ಮುರುಘಾ ಶರಣರು ಹೇಳಿದ್ದಾರೆ

Published by:Pavana HS
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು