ಮೈಸೂರು-ಬಾಗಲಕೋಟೆ ನಡುವಿನ ಬಸವ ಎಕ್ಸ್‌ಪ್ರೆಸ್ ರೈಲು ಸಂಚಾರ ರದ್ದು; ರೈಲ್ವೆ ಇಲಾಖೆ ಆದೇಶ

ರೇಲ್ವೆ ಇಲಾಖೆ ಅಧಿಕಾರಿಗಳು ಈ ಕುರಿತು ಮುಂಚಿತವಾಗಿಯೇ ಯಾವುದೇ ಮುನ್ಸೂಚನೆ ನೀಡದಿರುವುದು ಸಾರ್ವಜನಿಕರ ವ್ಯಾಪಕ ಟೀಕೆಗೆ ಗುರಿಯಾಗಿದೆ. ರೇಲು ಸೇವೆ ಯಾವಾಗ ಆರಂಭವಾಗುತ್ತದೆ ಎಂಬುದರ ಬಗ್ಗೆ ಸರಿಯಾಗಿ ಮಾಹಿತಿ ಸಿಗದೆ ಪರದಾಡುವಂತಾಗಿದೆ.

Ganesh Nachikethu | news18
Updated:September 21, 2019, 7:18 AM IST
ಮೈಸೂರು-ಬಾಗಲಕೋಟೆ ನಡುವಿನ ಬಸವ ಎಕ್ಸ್‌ಪ್ರೆಸ್ ರೈಲು ಸಂಚಾರ ರದ್ದು; ರೈಲ್ವೆ ಇಲಾಖೆ ಆದೇಶ
ಸಾಂದರ್ಭಿಕ ಚಿತ್ರ
  • News18
  • Last Updated: September 21, 2019, 7:18 AM IST
  • Share this:
ಬೆಂಗಳೂರು(ಸೆ.21): ಮೈಸೂರು-ಬಾಗಲಕೋಟೆ ನಡುವೆ ಸಂಚಾರ ನಡೆಸುವ ರೈಲೊಂದನ್ನು ರದ್ದುಗೊಳಿಸಲಾಗಿದೆ. ಇಂದಿನಿಂದ ಅಕ್ಟೋಬರ್ 6ರವರೆಗೂ ಬಸವ ಎಕ್ಸ್‌ಪ್ರೆಸ್ ರೈಲು ಸಂಚಾರ ರದ್ದುಗೊಳಿಸಿ ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ.

ಸೊಲ್ಲಾಪುರದಲ್ಲಿ ದ್ವಿಪಥ ಹಳಿ ಜೋಡಣೆಗಾಗಿ ಕಾಮಗಾರಿ ಕೈಗೊಳ್ಳಲಾಗುತ್ತದೆ. ಹಾಗಾಗಿ ಬಾಗಲಕೋಟೆ-ಮೈಸೂರು ನಡುವೆ ಬಸವ ಎಕ್ಸ್‌ಪ್ರೆಸ್ ರೈಲಿನ ಸಂಚಾರ ಮುಂದಿನ ಅಕ್ಟೋಬರ್ 6ರ ತನಕ ರದ್ದುಗೊಳಿಸಲಾಗಿದೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇನ್ನು ಸೊಲ್ಲಾಪುರ-ವಾಡಿ ವಿಭಾಗದ ಕಲಬುರಗಿ-ಸವಲ್ಗಿ ರೈಲ್ವೆ ನಿಲ್ದಾಣಗಳ ನಡುವೆ ಇಂಟರ್ ಲಾಕಿಂಗ್ ಕೆಲಸ ನಡೆಯುತ್ತಿದೆ. ಈ ಕಾಮಗಾರಿಗಳಿಗೆ ಅಡಚಣೆ ಉಂಟಾಗಬಾರದು ಎಂಬ ಕಾರಣಕ್ಕೆ ಬಸವ ಎಕ್ಸ್‌ಪ್ರೆಸ್ ರೈಲು ಸೇವೆ ಸಂಚಾರ ರದ್ದು ಮಾಡಿದ್ದೇವೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಗ್ರಂಥಾಲಯವಿದ್ದ ಜಾಗದಲ್ಲೇ ಕಚೇರಿ ತೆರೆದ ಸಂಸದ ತೇಜಸ್ವಿ ಸೂರ್ಯ; ಸಾರ್ವಜನಿಕರ ತೀವ್ರ ಆಕ್ರೋಶ

ಜಿಲ್ಲೆಯಲ್ಲಿ ರೈಲು ಸಂಚಾರ ಏಕಾಏಕಿ ಸ್ಥಗಿತಗೊಳಿಸಲಾಗುತ್ತಿದೆ. ಸೋಲಾಪುರದಿಂದ ಬರುವ ರೈಲುಗಳ ಸೇವೆ ಬಂದ್ ಆಗಿದೆ. ಪರಿಣಾಮ ವಿಜಯಪುರನ ನಗರ, ಇಂಡಿ, ಮಿಂಚನಾಳ ಸೇರಿದಂತೆ ನಾನಾ ಕಡೆ ಪ್ರಯಾಣಿಸಲು ಜನಕ್ಕೆ ತೊಂದರೆಯಾಗಲಿದೆ ಎನ್ನಲಾಗಿದೆ.

ರೇಲ್ವೆ ಇಲಾಖೆ ಅಧಿಕಾರಿಗಳು ಈ ಕುರಿತು ಮುಂಚಿತವಾಗಿಯೇ ಯಾವುದೇ ಮುನ್ಸೂಚನೆ ನೀಡದಿರುವುದು ಸಾರ್ವಜನಿಕರ ವ್ಯಾಪಕ ಟೀಕೆಗೆ ಗುರಿಯಾಗಿದೆ. ರೇಲು ಸೇವೆ ಯಾವಾಗ ಆರಂಭವಾಗುತ್ತದೆ ಎಂಬುದರ ಬಗ್ಗೆ ಸರಿಯಾಗಿ ಮಾಹಿತಿ ಸಿಗದೆ ಪರದಾಡುವಂತಾಗಿದೆ.

-------------
First published: September 21, 2019, 7:12 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading