ರಾಹುಲ್ ಗಾಂಧಿ ಒಬ್ಬ ಅರೆಹುಚ್ಚ - ಬಸನಗೌಡ ಪಾಟೀಲ್ ಯತ್ಮಾಳ

news18
Updated:August 29, 2018, 11:05 PM IST
ರಾಹುಲ್ ಗಾಂಧಿ ಒಬ್ಬ ಅರೆಹುಚ್ಚ - ಬಸನಗೌಡ ಪಾಟೀಲ್ ಯತ್ಮಾಳ
news18
Updated: August 29, 2018, 11:05 PM IST
- ಮಹೇಶ ವಿ.ಶಟಗಾರ,  ನ್ಯೂಸ್ 18 ಕನ್ನಡ 

ವಿಜಯಪುರ ( ಆಗಸ್ಟ್ 29) :  ಬರಿ ವಿವಾದದಲ್ಲಿ ಸುದ್ದಿಯಾಗಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡ ಅವರ ಕುರಿತು ಮಿಮಿಕ್ರಿ ಮಾಡಿ ಸುದ್ದಿಯಾಗಿದ್ದಾರೆ.

ವಿಜಯಪುರ ಜಿಲ್ಲೆಯ  ಮುದ್ದೇಬಿಹಾಳದಲ್ಲಿ ವಿಧಾನ ಪರಿಷತ್ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಜೆಡಿಎಸ್ ವಿರುದ್ದ ವಾಗ್ದಾಳಿ ನಡೆಸಿದರು.

ರಾಹುಲ್ ಗಾಂಧಿ ಒಬ್ಬ ಅರೆಹುಚ್ಚ, ಆತನಿಗೆ ಬುದ್ಧಿ ಇದೆಯೋ ಇಲ್ಲವೋ ಗೊತ್ತಿಲ್ಲ. ಜರ್ಮನ್ ನಲ್ಲಿ ಹೋಗಿ ಏನೇನೋ ಮಾತಾಡ್ತಾನೆ. ಅಂಥವರು ನಮ್ಮ ನಾಯಕ ಎಂದು ಹೇಳಿಕೊಂಡು ಇವರು ಓಡಾಡುತ್ತಾರೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಬಗ್ಗೆ ಮಾತನಾಡುವ ನೈತಿಕ ಹಕ್ಕು ಅವರಿಗಿಲ್ಲ ಎಂದು  ಆರೋಪಿಸಿದರು.

ವಾಜಪೇಯಿ ಅವರ ಕೊನೆಯ ಆಸೆ ನದಿಗಳ ಜೋಡಣೆ ಮಾಡುವದಾಗಿತ್ತು. ಆದರೆ ಮಾಜಿ ಪ್ರಧಾನಿ ದೇವೇಗೌಡರ ಕೊನೆಯ ಆಸೆ ಹಾಗೂ ಕನಸು ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡುವದಾಗಿತ್ತು. ಅವರೇ ಎಲ್ಲ ಸ್ಥಾನಗಳನ್ನು ಬೇಕು ಎನ್ನುತ್ತಾರೆ. ಕುಮಾರಸ್ವಾಮಿ ಸಿಎಂ ಆಗಬೇಕು, ರೇವಣ್ಣಗೆ ಲೋಕೋಪಯೋಗಿ ಹಾಗೂ ಪವರ್ ಬೇಕು, ಡಿ ಸಿ ತಮ್ಮಣ್ಣ, ಪುಟ್ಟರಾಜು ಎಲ್ಲರೂ ಮಂತ್ರಿಗಳೇ. ಸಂಬಂಧಿಕರು  ಹಾಗೂ ಒಕ್ಕಲಿಗರೇ ಮಂತ್ರಿಗಳಾಗಬೇಕು. ಮನೆಯವರೇಲ್ಲ ಕಮಿಷನ್ ತಿನ್ನಬೇಕು ಎಂದು  ದೇವೇಗೌಡರ ವಿರುದ್ದ ಆರೊಪ ಮಾಡಿದರು.


 
First published:August 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...