• Home
  • »
  • News
  • »
  • state
  • »
  • Karnataka Politics: ಅಧಿಕಾರದಲ್ಲಿರೋ ಮುಖ್ಯಮಂತ್ರಿಯೇ ಏನೂ ಮಾಡೋಕಾಗಿಲ್ಲ, ನೀನ್ಯಾವ ಲೆಕ್ಕ? ಜಾರಕಿಹೊಳಿಗೆ ಸವಾಲ್

Karnataka Politics: ಅಧಿಕಾರದಲ್ಲಿರೋ ಮುಖ್ಯಮಂತ್ರಿಯೇ ಏನೂ ಮಾಡೋಕಾಗಿಲ್ಲ, ನೀನ್ಯಾವ ಲೆಕ್ಕ? ಜಾರಕಿಹೊಳಿಗೆ ಸವಾಲ್

ಸತೀಶ್ ಜಾರಕಿಹೊಳಿ

ಸತೀಶ್ ಜಾರಕಿಹೊಳಿ

ಭಾನುವಾರ ಗೋಕಾಕ್ ನಗರದಲ್ಲಿ ಬೃಹತ್ ಸಮಾವೇಶ ನಡೆಸಲಾಯಿತು. ಸಮಾವೇಶದಲ್ಲಿ ಮಾತನಾಡಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸತೀಶ ಜಾರಕಿಹೊಳಿ ವಿರುದ್ಧ ವಾಗ್ದಾಳಿ ನಡೆಸಿದ್ರು. ಪಂಚಮಸಾಲಿ ವೇದಿಕೆಯನ್ನು ಹಿಂದು ವೇದಿಕೆಯಾಗಿ ಪರಿವರ್ತನೆ ಮಾಡಿ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ರು.

ಮುಂದೆ ಓದಿ ...
  • News18 Kannada
  • Last Updated :
  • Belgaum, India
  • Share this:

ಬೆಳಗಾವಿ(ನವೆಂಬರ್ 13): ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ (Reservation) ನೀಡಲು ಆಗ್ರಹಿಸಿ ಭಾನುವಾರ ಗೋಕಾಕ್ ನಗರದಲ್ಲಿ ಬೃಹತ್ ಸಮಾವೇಶ ನಡೆಸಲಾಯಿತು. ಸಮಾವೇಶದಲ್ಲಿ ಮಾತನಾಡಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) )ಅವರು ಸತೀಶ ಜಾರಕಿಹೊಳಿ (Satish Jarkiholi) ವಿರುದ್ಧ ವಾಗ್ದಾಳಿ ನಡೆಸಿದ್ರು. ಪಂಚಮಸಾಲಿ ವೇದಿಕೆಯನ್ನು ಹಿಂದು ವೇದಿಕೆಯಾಗಿ ಪರಿವರ್ತನೆ ಮಾಡಿ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ರು. ತಾಕತ್ತಿದ್ದರೆ ಇದ್ರೆ ನೇರವಾಗಿ ಯುದ್ದಕ್ಕೆ ಬನ್ನಿ, ಅಧಿಕಾರದಲ್ಲಿ ಇದ್ದ ಮುಖ್ಯಮಂತ್ರಿಯೇ ಏನೂ ಮಾಡೋಕಾಗಿಲ್ಲ, ನೀನ್ಯಾವ ಲೆಕ್ಕ? ಯಮಕಮನರಡಿ ಕ್ಷೇತ್ರ ಸಾಮಾನ್ಯ ಆಗಿದ್ದರೆ ನಾನು ಬಂದು ಸ್ಪರ್ಧೆ ಮಾಡುತ್ತಿದ್ದೆ, ಆದರೆ ಅದು ಮೀಸಲು ಇದೆ ಎಂದು ಯತ್ನಾಳ್ ವಾಗ್ದಾಳಿ ನಡೆಸಿದರು.


ಕಳೆದ 15 ದಿನಗಳಿಂದ ಗೋಕಾಕ್ ತಾಲೂಕಿನ ಪ್ರತಿ ಗ್ರಾಮಗಳಲ್ಲಿ ಪಂಚಮಸಾಲಿ ಸಮಾಜದ ಒಗ್ಗೂಡಿಸಲು ಜಯಮೃತ್ಯುಂಜಯ ಶ್ರೀ ಪ್ರವಾಸ ಮಾಡಿದ್ರು. ಗೋಕಾಕ್ ನಗರದ ನ್ಯೂ ಇಂಗ್ಲಿಷ್ ಶಾಲಾ ಮೈದಾನದಲ್ಲಿ ಸಮಾವೇಶ ಆಯೋಜನೆ ಮಾಡಲಾಗಿತ್ತು. ಡಿಸೆಂಬರ್ 12ರಂದು ಬೆಂಗಳೂರಿನ ವಿಧಾನಸೌದದ ಮುಂಭಾಗದಲ್ಲಿ ಅಂತಿಮ ಘಟ್ಟದ ಹೋರಾಟ ನಡೆಸಲು ಸಮಾಜ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ 25 ಲಕ್ಷ ಜನ ಸೇರಿಸಬೇಕು ಎಂದು ಈಗಾಗಲೇ ಕರೆ ನೀಡಲಾಗಿದೆ. ಅಷ್ಟರಲ್ಲಿಯೇ ಸಿಎಂ ನಮ್ಮ ಸಮಾಜಕ್ಕೆ 2ಎ ಮೀಸಲಾತಿ ಘೋಷಣೆ ಮಾಡೋ ನಿರೀಕ್ಷೆ ಇದೆ ಎಂದು ಶ್ರೀಗಳು ಹೇಳಿದರು. ಈಗಾಗಲೇ ಹಲವು ಸಹ ಮಾತು ಕೊಟ್ಟು ಸಿಎಂ ತಪ್ಪಿದ್ದಾರೆ, ಇನ್ನಾದರೂ ಎಚ್ಚೆತ್ತುಕೊಳ್ಳಬೇಕು ಎಂದರು.
ಇದನ್ನೂ ಓದಿ: Camera Theft: ರೀಲ್ಸ್​ ಮಾಡೋ ಹುಚ್ಚಿಗೆ ಕಳ್ಳತನಕ್ಕಿಳಿದ ಸ್ಟೂಡೆಂಟ್! ಮದುವೆ ಮನೆಯಲ್ಲಿ ಕ್ಯಾಮೆರಾ ಕದ್ದ ಖರ್ತನಾಕ್!


ಬಳಿಕ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್,  ಡಾ.‌ಬಾಬಾಸಾಹೇಬ್ ಅಂಬೇಡ್ಕರ್ ಸಂವಿಧಾನ ಶಿಲ್ಪಿ. ಜಗತ್ತಿನ ಯಾವುದೇ ಒಬ್ಬ ನಾಯಕನಿಗೆ ಆಗದಷ್ಟು ಅಪಮಾನ ಅವರಿಗೆ ಆಗಿದೆ. ಮಹರ್ಷಿ ವಾಲ್ಮೀಕಿ ರಾಮಾಯಣ ಬರೆದರು. ವೇದವಸ್ಯಾಸರು ಮಹಾಭಾರತದ ಬರೆದರು. ಅಂಬೇಡ್ಕರ್ ಅವರೇ ಹಿಂದು ಧರ್ಮದ ಬಗ್ಗೆ ಮಾತನಾಡಿಲ್ಲ. ಅಂಬೇಡ್ಕರ್ 20 ವರ್ಷ ಎಲ್ಲಾ ಧರ್ಮಗಳ ಅಧ್ಯಯನ ಮಾಡಿದ್ರು. ವ್ಯವಸ್ಥೆ ಬದಲಾವಣೆ ಆಗುತ್ತೆ ಅಂತ ಕಾದು ನೋಡಿದ್ರು. ಬಳಿಕ ಬೌದ್ಧ ಧರ್ಮವನ್ನು ಸ್ವೀಕಾರ ಮಾಡಿದ್ರು. ಅಂಬೇಡ್ಕರ್ ಬಗ್ಗೆ ಓದಿದ್ದೇ‌ನೆ, ನನಗೆ ಬುದ್ದಿ ಕಲಿಸುತ್ತೀರಿ. ತಾಕತ್ ಇದ್ರೆ ನೀನು ಮಾತನಾಡಬೇಕಿತ್ತು. ಬಾಬಾ ಸಾಹೇಬ್ ಅಂಬೇಡ್ಕರ್ ಎಂದೂ ದಲಿತ ಸ್ಥಾನ ಕೇಳಿಲ್ಲ. ಪಾಕಿಸ್ತಾನ‌ ವಿಭಜನೆಯ ಬಗ್ಗೆ ಅಂಬೇಡ್ಕರ್ ವಿರೋಧ ವ್ಯಕ್ತಪಡಿಸಿದ್ದರು. ನೀವು ಹಿಂದು ಧರ್ಮದ ಬಗ್ಗೆ ಮಾತನಾಡುತ್ತೀರಿ. ಹಿಂದು ಧರ್ಮದ ಪವಿತ್ರ ಗ್ರಂಥ ಬರೆದವರು ವಾಲ್ಮೀಕಿ. ಹಿಂದು ಧರ್ಮ ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದಾರೆ.


All Bollywood Khan stars are pakistan agents said MLA Basanagowda patil yatnal mrq
ಬಸನಗೌಡ ಪಾಟೀಲ್ ಯತ್ನಾಳ್


ತಾಕತ್ತು ಇದ್ರೆ ನನ್ನ ಜೊತೆಗೆ ಯುದ್ಧಕ್ಕೆ ಬಾ ಎನ್ ಕಿಸಿತಿಯೋ ನೊಡೋಣ, ಅಧಿಕಾರದಲ್ಲಿ ಸಿಎಂನಿಂದಲೇ ಕಿಸಿಯೋಕೆ ಆಗಿಲ್ಲ. ನೀನೇನು ಕಿಸಿತಿಯಾ ಎಂದು ಸತೀಶ ಜಾರಕಿಹೊಳಿ ವಿರುದ್ಧ ವಾಗ್ದಾಳಿ ನಡೆಸಿದರು. ನಾನು ಎಲ್ಲಾ ಸಮಾಜದ ಬಗ್ಗೆ ವಿಧಾನಸಭೆಯ ಬಗ್ಗೆ ನಾನು ಮಾತನಾಡಿದ್ದೇನೆ. ನೀನು ಯಾವಾತ್ತಾದರೂ ಮಾತನಾಡಿದ್ದೀಯಾ ಎಂದು ಪ್ರಶ್ನಿಸಿದ್ರು.  11 ರೂಪಾಯಿ ಪಟ್ಟಿ ಕೊಡವರು ಮುಂದಿನ ಸಲ ಪಾಠ ಕಲಿಸಲಿದ್ದಾರೆ. ನಿಮ್ಮ ಕಬ್ಬಿನ ತೂಕದಲ್ಲಿ ಮೋಸ ಮಾಡಿದ ಹಣದಿಂದ ರಾಜಕೀಯ ಮಾಡುತ್ತಿದ್ದಾರೆ. ರಮೇಶ ಜಾರಕಿಹೊಳಿ ಅನ್ಯಾಯ ಆದಾಗ ನಾನೇ ಧ್ವನಿ ಎತ್ತಿದ್ದೇನೆ. ನಮ್ಮವನೇ ಲಿಂಗಾಯತ ಒಬ್ಬ ಮೋಸ ಮಾಡಿದ ಆಗಲೂ ನಾನೇ ಬಹಿರಂಗವಾಗಿ ಮಾತನಾಡಿದ್ದೇನೆ ಎಂದು ಯತ್ನಾಳ್ ಹೇಳಿದ್ರು.


ಯಮಕನಮಡಿ ಕ್ಷೇತ್ರ ಪರಿಶಿಷ್ಟ ಪಂಗಡಕ್ಕೆ ಮೀಸಲು ಇದೆ


ಯಮಕನಮಡಿ ಕ್ಷೇತ್ರ ಸಮಾನ್ಯ ಆಗಿದ್ದರೆ ನಾನೇ ಬಂದು ಸ್ಪರ್ಧೆ ಮಾಡುತ್ತಿದ್ದೆ. ಅದು ಪರಿಶಿಷ್ಟ ಪಂಗಡಕ್ಕೆ ಮೀಸಲು ಇದೆ ಇರಲಿ. ಹೊರಗೆ ಹಾಕಬೇಕು ಅಂದವರೇ  ಮೊನ್ನೆ ಬಂದು ನೀವು ನಮ್ಮ ನಾಯಕ ಎಂದು ಹೇಳಿದ್ದಾರೆ. ನಮ್ಮ ಜೀವನ ಇರೋದೆ ಹಿಂದುತ್ವ. ಚನ್ನಮ್ಮ,  ರಾಯಣ್ಣ, ಶಿವಾಜಿ ಬಗ್ಗೆ ಮಾತನಾಡಿದ್ರೆ ಕೊನೆಯ ದಿನಗಳು ಎಂದು ತಿಳಿದುಕೊಳ್ಳಿ. ಹೆದರಿಸೋಕೆ ಗೋಕಾಕ್ ಏನ್ ಕಾಶ್ಮೀರ್ ನಾ, ಗೋಕಾಕ್ ಏನ್ ಬಿಹಾರನಾ? ಕಾಲಿಗೆ ನಮಸ್ಕಾರ ಮಾಡೋ ಸಂಪ್ರದಾಯ ಬಿಡಿ. ಮುಂದಿನ ಚುನಾವಣೆಯಲ್ಲಿ ಮತದಾನದ ಮೂಲಕ ಪಾಠ ಕಲಿಸಿ. ರಾಜ್ಯಸಭಾ ಸದಸ್ಯ ಈರಣ್ಣ‌ ಕಡಾಡಿ ಕಾರಿನ ಮೇಲೆ ದಾಳಿ ಮಾಡ್ತಿರಾ. ನಮಗೂ ಹೋರಾಟ ಮಾಡುವ ಶಕ್ತಿ ಇದೆ. ಹಾಲುಮತ, ಉಪ್ಪಾರ ಸಮಾಜಕ್ಕೆ ಅನ್ಯಾಯ ಆಗಿದೆ. ಎಲ್ಲಾ ಸಮಾಜವರನ್ನು ಒಗ್ಗೂಡಿಸಿ ತೆಗೆದುಕೊಂಡು. ಮುನ್ನಡೆಯಿರಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ರು.

Published by:Precilla Olivia Dias
First published: