‘ಜೈ ಮಹಾರಾಷ್ಟ್ರ‘ ಅಂದ್ರೆ ತಪ್ಪೇನು? ಪಾಕಿಸ್ತಾನ್​​ ಜಿಂದಾಬಾದ್​​​ ಅಂದಾಗ ಕನ್ನಡ ಹೋರಾಟಗಾರರು ಎಲ್ಲಿದ್ದರು?; ಯತ್ನಾಳ್​

ಸಚಿವ ನಾರಾಯಣ ಗೌಡ ಮಹಾರಾಷ್ಟ್ರಕ್ಕೆ ಜೈಕಾರ ಹಾಕಿದ್ದರಲ್ಲಿ ತಪ್ಪೇನಿಲ್ಲ. ಅವರು ದೇಶದ ಒಂದು ಭಾಗಕ್ಕೆ ಜೈಕಾರ ಹಾಕಿದ್ದಾರೆಯೇ ಹೊರತು ಪಾಕಿಸ್ತಾನಕ್ಕೆ ಜೈ ಅಂದಿಲ್ಲ. ಪಾಕಿಸ್ತಾನಕ್ಕೆ ಜೈಕಾರ ಹಾಕಿದವರ ವಿರುದ್ದ ಕನ್ನಡಪರ ಹೋರಾಟಗಾರು ಯಾಕೆ ದನಿ ಎತ್ತಿಲ್ಲ? ಹುಬ್ಬಳ್ಳಿ, ಬೆಂಗಳೂರಿನಲ್ಲಿ ಪಾಕಿಸ್ತಾನಕ್ಕೆ ಜೈ ಎಂದಾಗ ಈ ಲ್ಯಾಂಡ್ ಮಾಫಿಯಾಗಳು ಎಲ್ಲಿ ಹೋಗಿದ್ದರು? ಎಂದು ಪ್ರಶ್ನಿಸಿದರು ಬಸನಗೌಡ ಪಾಟೀಲ್ ಯತ್ನಾಳ್.

ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ

ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ

 • Share this:
  ಚಿತ್ರದುರ್ಗ(ಫೆ.28): "ಜೈ ಮಹಾರಾಷ್ಟ್ರ, ಜೈ ಶಿವಾಜಿ" ಎಂದು ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದ ನೂತನ ಸಚಿವ ನಾರಾಯಣಗೌಡ ಪರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭರ್ಜರಿ ಬ್ಯಾಟಿಂಗ್​​ ಮಾಡಿದರು. ತೋಟಗಾರಿಕಾ ಸಚಿವ ನಾರಾಯಣಗೌಡ ಪಾಕಿಸ್ತಾನಕ್ಕೆ ಜೈಕಾರ ಹಾಕಿಲ್ಲ. ಬದಲಿಗೆ ದೇಶದ ಮತ್ತೊಂದು ರಾಜ್ಯ ಮಹಾರಾಷ್ಟ್ರಕ್ಕೆ ಜೈ ಅಂದಿದ್ಧಾರೆ, ಇದರಲ್ಲಿ ತಪ್ಪೇನಿದೆ? ಎಂದು ಯತ್ನಾಳ್​​ ಸಮರ್ಥಸಿಕೊಂಡರು.

  ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಚಿವ ನಾರಾಯಣ ಗೌಡ ಮಹಾರಾಷ್ಟ್ರಕ್ಕೆ ಜೈಕಾರ ಹಾಕಿದ್ದರಲ್ಲಿ ತಪ್ಪೇನಿಲ್ಲ. ಅವರು ದೇಶದ ಒಂದು ಭಾಗಕ್ಕೆ ಜೈಕಾರ ಹಾಕಿದ್ದಾರೆಯೇ ಹೊರತು ಪಾಕಿಸ್ತಾನಕ್ಕೆ ಜೈ ಅಂದಿಲ್ಲ. ಪಾಕಿಸ್ತಾನಕ್ಕೆ ಜೈಕಾರ ಹಾಕಿದವರ ವಿರುದ್ದ ಕನ್ನಡಪರ ಹೋರಾಟಗಾರು ಯಾಕೆ ದನಿ ಎತ್ತಿಲ್ಲ? ಹುಬ್ಬಳ್ಳಿ, ಬೆಂಗಳೂರಿನಲ್ಲಿ ಪಾಕಿಸ್ತಾನಕ್ಕೆ ಜೈ ಎಂದಾಗ ಈ ಲ್ಯಾಂಡ್ ಮಾಫಿಯಾಗಳು ಎಲ್ಲಿ ಹೋಗಿದ್ದರು? ಎಂದು ಪ್ರಶ್ನಿಸಿದರು ಬಸನಗೌಡ ಪಾಟೀಲ್ ಯತ್ನಾಳ್. ಈ ಮೂಲಕ ಕನ್ನಡ ಪರ ಹೋರಾಟಗಾರರನ್ನು ಬೆಂಗಳೂರಿನ ಲ್ಯಾಂಡ್ ಮಾಫಿಯಾಗಳಿಗೆ ಹೋಲಿಸಿದ್ದಾರೆ.

  ಕೆ.ಆರ್​​​ ಪೇಟೆ ಬಿಜೆಪಿ ಶಾಸಕ ಮತ್ತು ನೂತನ ಸಚಿವ ನಾರಾಯಣಗೌಡ ಕಾರ್ಯಕ್ರಮವೊಂದರಲ್ಲಿ ಮಹಾರಾಷ್ಟ್ರಕ್ಕೆ ಜೈ ಎಂದು ಮರಾಠ ಪ್ರೇಮ ತೋರುವ ಮೂಲಕ ಸುದ್ದಿಯಾಗಿದ್ದರು. ಈ ಹಿಂದೆ ಫೆಬ್ರವರಿ 20ನೇ ತಾರೀಕಿನಂದು ರಾಷ್ಟ್ರೀಯ ಭಾವೈಕ್ಯತಾ ಶಿಬಿರ ಆಯೋಜಿಸಲಾಗಿತ್ತು. ಇಲ್ಲಿನ ಕಾರ್ಯಕ್ರಮದಲ್ಲಿ ಹೆಚ್ಚಾಗಿ ಮರಾಠಿಗರು ಇದ್ದ ಕಾರಣ ವೇದಿಕೆ ಮೇಲೆಯೇ ಜೈ ಮಹಾರಾಷ್ಟ್ರ ಎಂದು ಘೋಷಣೆ ಕೂಗಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗಿತ್ತು.

  ಇದನ್ನೂ ಓದಿ: ನನ್ನ ತಾಕತ್ತು ಮಹಾರಾಷ್ಟ್ರ; ‘ಜೈ ಮಹಾರಾಷ್ಟ್ರ, ಜೈ ಶಿವಾಜಿ ಎಂದ ಕೆ.ಆರ್​ ಪೇಟೆ ಬಿಜೆಪಿ ಶಾಸಕ ನಾರಾಯಣಗೌಡ

  ಇನ್ನು, ನಾನು ಏನೇ ಆಗಿದ್ದರು ಅದು ಮಹಾರಾಷ್ಟ್ರದಿಂದ ಮಾತ್ರ. ಕಳೆದ 35 ವರ್ಷಗಳಿಂದ ಹಿಂದೆ ಮುಂಬೈಗೆ ಹೋದ ನಾನು ಈಗ ಮಹಾರಾಷ್ಟ್ರದಿಂದ ದೊಡ್ಡ ಉದ್ಯಮಿ ಆಗಿದ್ದೇನೆ. ಹೋಟೆಲ್​​ ಉದ್ದಯಮಿಯಾಗಿ ನಂತರ ಬಿಲ್ಡರ್​​​ ಆದ ನಾನು ಇಲ್ಲಿಗೆ ಬಂದು ರಾಜಕಾರಣಿ ಆಗಿದ್ದೇನೆ ಎಂದು ಬಿಜೆಪಿ ಶಾಸಕ ನಾರಾಯಣ ಗೌಡ ನಾಲಿಗೆ ಹರಿಬಿಟ್ಟಿದ್ದರು.

  ನನ್ನ ದೇಹದಲ್ಲಿ ಏನಾದರೂ ತಾಕತ್ತಿದ್ದರೆ ಅದು ಮಹಾರಾಷ್ಟ್ರದಿಂದ ಮಾತ್ರ. ಹಾಗಾಗಿ ವೇದಿಕೆ ಮೇಲೆಯೇ ಜೈ ಶಿವಾಜಿ, ಜೈ ಮಹಾರಾಷ್ಟ್ರದ ಎಂದು ಘೋಷಣೆ ಕೂಗುತ್ತೇನೆ. ಹೀಗೆ ತನ್ನ ಮರಾಠ ಪ್ರೇಮ ತೋರುವ ಮೂಲಕ ನಾರಾಯಣಗೌಡ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

  ಇದನ್ನೂ ಓದಿ: ಮಂಡ್ಯದ ತಾಕತ್ತು ಮುಂದಿನ ಚುನಾವಣೆಯಲ್ಲಿ ಗೊತ್ತಾಗಲಿದೆ; ಶಾಸಕ ನಾರಾಯಣಗೌಡ ವಿರುದ್ಧ ಗುಡುಗಿದ ಹೆಚ್​ಡಿಕೆ

  ನಂತರ ಜೈ ಮಹಾರಾಷ್ಟ್ರ ಎಂದು ಕೂಗುವ ಮೂಲಕ ಮರಾಠ ಪ್ರೇಮ ಮೆರೆದಿದ್ದ ಸಚಿವ ನಾರಾಯಣ ಗೌಡ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ ಎಚ್ಚೆತ್ತ ಕೆ.ಆರ್​​ ಪೇಟೆ ಶಾಸಕ, ನಾನು ಕನ್ನಡಿಗ. ನನ್ನ ರಕ್ತದಲ್ಲೇ ಕರ್ನಾಟಕ, ಕನ್ನಡ ಇದೆ. ಮಹಾರಾಷ್ಟ್ರದಲ್ಲಿ ವ್ಯವಹಾರ ಮಾಡುತ್ತಿದ್ದೆ. ಅದಕ್ಕಾಗಿ ಮಹಾರಾಷ್ಟ್ರಕ್ಕೆ ಜೈ ಅಂದಿದ್ದೆ. ಆದರೆ, ಯಾರೋ ಕಿಡಿಗೇಡಿಗಳು ನನ್ನ ಕನ್ನಡಾಭಿಮಾನದ ಮಾತು ಬಿಟ್ಟು, ಕೇವಲ ಮಹಾರಾಷ್ಟ್ರದ ಬಗೆಗಿನ ಮಾತನ್ನು ಮಾತ್ರ ವಿಡಿಯೋ ಮಾಡಿ ವೈರಲ್​ ಮಾಡಿದ್ದಾರೆ ಎಂದು ಸ್ಪಷ್ಟನೆ ನೀಡಿದರು.
  First published: