‘ಸಂಪುಟ ವಿಸ್ತರಣೆಯಾಗಲೀ, ಬಿಡಲಿ’: ಡಿ​​.22ರ ನಂತರ ಸರ್ಕಾರದ ಪತನ ಖಚಿತ; ಬಿಜೆಪಿ ಶಾಸಕ ಯತ್ನಾಳ್​​ ಭವಿಷ್ಯ

Ganesh Nachikethu
Updated:December 7, 2018, 3:39 PM IST
‘ಸಂಪುಟ ವಿಸ್ತರಣೆಯಾಗಲೀ, ಬಿಡಲಿ’: ಡಿ​​.22ರ ನಂತರ ಸರ್ಕಾರದ ಪತನ ಖಚಿತ; ಬಿಜೆಪಿ ಶಾಸಕ ಯತ್ನಾಳ್​​ ಭವಿಷ್ಯ
ಬಸನಗೌಡ ರಾ. ಪಾಟೀಲ್ ಯತ್ನಾಳ್
Ganesh Nachikethu
Updated: December 7, 2018, 3:39 PM IST
ಮಹೇಶ ವಿ.ಶಟಗಾರ

ವಿಜಯಪುರ(ಡಿ.07): ಸಚಿವ ಸಂಪುಟ ವಿಸ್ತರಣೆಯಾಗಲೀ ಬಿಡಲಿ, ಡಿ. 22ರ ನಂತರ ಕಾಂಗ್ರೆಸ್​​-ಜೆಡಿಎಸ್​​ ಮೈತ್ರಿ ಸರ್ಕಾರದ ಪತನ ಬಹುತೇಕ ಖಚಿತ ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ ಯತ್ನಾಳ್ ಅವರು ಭವಿಷ್ಯ ನುಡಿದಿದ್ದಾರೆ. ಅಲ್ಲದೇ ಕಾಂಗ್ರೆಸ್​​-ಜೆಡಿಎಸ್​​ ಶಾಸಕರಿಗೆ ಮೋಸ ಮಾಡಲಾಗುತ್ತಿದೆ. ಸಂಪುಟ ವಿಸ್ತರಣೆಯಾದರೇ ಸರ್ಕಾರಕ್ಕೆ ಕಂಟಕವಿದೆ ಎಂದು ಮಾಜಿ ಪ್ರಧಾನಿ ದೇವೆಗೌಡರು ಮುಹೂರ್ತ ನೋಡುತ್ತಿದ್ಧಾರೆ ಎಂದು ಆರೋಪಿಸಿದರು.

ಇಂದು ಸುದ್ದಿಗಾರರೊಂದಿಗೆ ವಿಜಯಪುರದಲ್ಲಿ ಮಾತನಾಡಿದ ಅವರು, ಮಾಜಿ ಸಿಎಂ ಸಿದ್ದರಾಮಯ್ಯನವರು ಸಚಿವ ಸಂಪುಟ ವಿಸ್ತರಣೆಗೆ ಡಿಸೆಂಬರ್.22ರ ಗಡುವು ನೀಡಿದ್ದಾರೆ.  ಇದು ಕಾಂಗ್ರೆಸ್ ಜೆಡಿಎಸ್ ಶಾಸಕರನ್ನು ಮೋಸ ಮಾಡುವ ತಂತ್ರವಾಗಿದೆ. ದೇವೇಗೌಡರು ಮುಹೂರ್ತ ನೋಡಿ ಕೆಲಸ ಮಾಡುತ್ತಾರೆ.  ಮುಂದೆ ಧನುರ್ ಮಾಸ ಬರುವುದರಿಂದ ಬೆಳಗಾವಿ ಅಧಿವೇಶನದಿಂದ ಪಾರಾಗಲು ಈ ತಂತ್ರ ಮಾಡಿದ್ದಾರೆ ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ ಯತ್ನಾಳ್​​ ಅವರು ಕಿಡಿರಿದ್ಧಾರೆ.

ಸಂಪುಟ ವಿಸ್ತರಣೆ ವಿಚಾರಕ್ಕೆ ಈಗಾಗಲೇ ಕಾಂಗ್ರೆಸ್​​ ಶಾಸಕರಲ್ಲಿ ಭಾರೀ ಆಕ್ರೋಶ ಅಡಗಿದೆ. ಕೆಲವು ಸಚಿವರು ಮೂರು ನಾಲ್ಕು ಖಾತೆಗಳನ್ನು ಹೊಂದಿದ್ದಾರೆ. ಹಾಗಾಗಿ ಅವರಿಗೆ ಸಚಿವ ಪುಟ ವಿಸ್ತತಣೆ ಬೇಡವಾಗಿದೆ. ನಾಲ್ಕೈದು ಬಾರಿ ಆಯ್ಕೆಯಾದ ಹಿರಿಯ ಶಾಸಕರಿಗೆ ಸಚಿವ ಸ್ಥಾನ ಅನಿವಾರ್ಯವಾಗಿದೆ. ಎಲ್ಲರಿಗೂ ಸಂಪುಟ ವಿಸ್ತರಣೆ ವೇಳೆಯಲ್ಲಿ ಸಮಾಧಾನ ಮಾಡಲಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಡಿ. 22ರ ನಂತರ ಸರಕಾರ ಪತನವಾಗಲಿದೆ ಎಂದರು.

ಇದನ್ನೂ ಓದಿ: ವೇದಿಕೆಯಲ್ಲೇ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ; ಆಸ್ಪತ್ರೆಗೆ ರವಾನೆ

ಇನ್ನು ಬಿಜೆಪಿಗೆ ಬರುವ ಶಾಸಕರ ಹೆಸರು ಹೇಳಿ ಬಲಿಪಶು ಮಾಡಲು ಸಾಧ್ಯವಿಲ್ಲ. ಎಚ್. ಕೆ. ಪಾಟೀಲ, ಎಂ. ಬಿ. ಪಾಟೀಲ ಅವರಂಥವರಿಗೂ ಅನ್ಯಾಯವಾಗಿದೆ. ಎಚ್. ಕೆ. ಪಾಟೀಲ ಸಿಎಂ ಆಗುವ ಅರ್ಹತೆ ಉಳ್ಳವರು. ಇಂಥವರಿಗೂ ಕಾಂಗ್ರೆಸ್ ಅನ್ಯಾಯ ಎಸಗಿದೆ. ಎಚ್. ಡಿ. ಕುಮಾರಸ್ವಾಮಿ ಅವರು ಮಂಡ್ಯ, ಮೈಸೂರು, ರಾಮನಗರ, ಹಾಸನ, ತುಮಕುರು, ಚಾಮರಾಜನಗರ, ಬೆಂಗಳೂರಿಗೆ ಮಾತ್ರ  ಸಿಎಂ ಆಗಿದ್ದಾರೆ.  ಉತ್ತರ ಕರ್ನಾಟಕಕ್ಕೆ ಮುಖ್ಯಮಂತ್ರಿಯಾಗಿಲ್ಲ ಎಂದು ವಾಗ್ದಾಳಿ ನಡೆಸಿದರು.

ಸಿಎಂ, ಡಿಸಿಎಂ, ಜಲಸಂಪನ್ಮೂಲ ಸಚಿವ ಡಿ. ಕೆ ಶಿವಕುಮಾರ ಅವರ ನಿರಾಸಕ್ತಿಯಿಂದಲೇ ಉತ್ತರ ಕರ್ನಾಟಕದ ಕೃಷ್ಣಾ ಮೇಲ್ದಂಡೆ ಯೋಜನೆ ಕಾಮಗಾರಿಗಳು ಸ್ಥಗಿತವಾಗಿವೆ. ಗುತ್ತಿಗೆದಾರರಿಗೆ ಮಾನಸಿಕ ಹಿಂಸೆ ನೀಡುವ ಮೂಲಕ ಹಣ ವಸೂಲಿಗೆ ಪೀಡಿಸಲಾಗುತ್ತಿದೆ.  ಆರ್ಥಿಕ ತೊಂದರೆಯಲ್ಲಿ ಗುತ್ತಿಗೆದಾರರಿದ್ದಾರೆ.  ಉತ್ತರ ಕರ್ನಾಟಕವನ್ನು ಇದೇ ರೀತಿ ನಿರ್ಲಕ್ಷ್ಯ ತೋರಿದರೆ ಸಿಎಂ ಹೇಳಿದಂತೆ ಈ ಭಾಗದ ಜನ ಮತ್ತು ರೈತರು ದಂಗೆ ಏಳಲಿದ್ದಾರೆ ಎಂದು ಯತ್ನಾಳ ಎಚ್ಚರಿಕೆ ನೀಡಿದರು.
Loading...

ಇದನ್ನೂ ಓದಿ: ಹಿಂದುತ್ವದ ಕಡೆ ಮತ್ತೆ ವಾಲಿರುವ ಬಿಜೆಪಿಗೆ ಐದು ರಾಜ್ಯಗಳ ಚುನಾವಣೆಯಲ್ಲಿ ಸ್ಟಾರ್​ ಪ್ರಚಾರಕರಾಗಿದ್ದು ಆದಿತ್ಯನಾಥ್​

ಲೋಕೋಪಯೋಗಿ ಇಲಾಖೆ ಹಾಸನಕ್ಕೆ ಮೀಸಲಾಗಿದೆ.  ಹಾಸನಕ್ಕೆ 1500 ಕೋಟಿ. ರೂಪಾಯಿ ನೀಡಲಾಗಿದೆ. ಹೀಗೆಯೆ ಅವರಿಗೆ ಬೇಕಾದ ಕ್ಷೇತ್ರಗಳಿಗೆ ಹೆಚ್ಚು ಅನುದಾನ ನೀಡಿ, ಬಿಜೆಪಿ ಶಾಸಕರಿಗೆ ತಾರತಮ್ಯ ಮಾಡಲಾಗುತ್ತಿದೆ. ಅಭಿವೃದ್ಧಿ ಕಾಮಗಾರಿ ಸ್ಥಗಿತಗೊಂಡಿವೆ. ಅಂಬೇಡ್ಕರ್​​ ನಿಗಮದ ಹಣವನ್ನೂ ಕೂಡ ಸಾಲಮನ್ನಾ ಹೆಸರಿನಲ್ಲಿಯೇ ಹಿಂಪಡೆದಿದ್ದಾರೆ. ಈ ಕೂಡಲೇ ಸಿಎಜಿ ವರದಿ ಕುರಿತು ಸಿಬಿಐ ತನಿಖೆಯಾಗಲಿ. ಬೆಳಗಾವಿ ಅಧಿವೇಶನದಲ್ಲಿ ಸಿಬಿಐ ತನಿಖೆಗೆ ಆಗ್ರಹಿಸುತ್ತೇವೆ. ಬಿಎಸ್​ವೈ ಜೈಲಿಗೆ ಹೋಗಿದ್ದರು ಎಂಬ ಕಾಂಗ್ರೆಸ್​ ನಾಯಕರು ಜೈಲಿಗೆ ಹೋಗಲಿದ್ದಾರೆ ಎಂದು ಯತ್ನಾಳ್​​ ಜರೆದಿದ್ದಾರೆ.

-------------------
ತಮಿಳುನಾಡಿನವರ ಒತ್ತಡ ನ್ಯಾಯಬದ್ಧವಲ್ಲ, ಮೇಕೆದಾಟು ವಿಚಾರದ ಬಗ್ಗೆ ಡಿಕೆ ಶಿವಕುಮಾರ್ ಹೇಳಿಕೆ
First published:December 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...