• Home
  • »
  • News
  • »
  • state
  • »
  • Karnataka Politics: ಸ್ವಯಂಘೋಷಿತ ಮುಖ್ಯಮಂತ್ರಿಗೆ ಕ್ಷೇತ್ರ ಸಿಗ್ತಿಲ್ಲವಾ? ಯತ್ನಾಳ್ ಲೇವಡಿ

Karnataka Politics: ಸ್ವಯಂಘೋಷಿತ ಮುಖ್ಯಮಂತ್ರಿಗೆ ಕ್ಷೇತ್ರ ಸಿಗ್ತಿಲ್ಲವಾ? ಯತ್ನಾಳ್ ಲೇವಡಿ

ಶಾಸಕ ಬಸವಗೌಡ ಪಾಟೀಲ್ ಯತ್ನಾಳ್

ಶಾಸಕ ಬಸವಗೌಡ ಪಾಟೀಲ್ ಯತ್ನಾಳ್

ಸಂತೋಷ್ ಲಾಡ್​ಗೆ ತಮ್ಮ ಇಬ್ಬರು ನಾಯಕರು ಸೋಲ್ತಾರೆ ಎಂದು ಅನ್ನಿಸಿರಬಹುದು. ಹಾಗಾಗಿ ಈ ರೀತಿ ಮಾತನಾಡಿದ್ದು, ಅದು ಅವರ ಪಕ್ಷದ ವಿಚಾರ ಎಂದರು.

  • Share this:

ಇಂದು ಶ್ರೀ ಗುರು ಮಡಿವಾಳೇಶ್ವರ ದ್ವಾರ ಬಾಗಿಲು ನಿರ್ಮಾಣಕ್ಕೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (MLA Basanagowda Patil Yatnal) ಭೂಮಿ ಪೂಜೆ ಸಲ್ಲಿಸಿದರು. ಧಾರವಾಡ ಹೊರವಲಯದ ಗರಗ ಕ್ರಾಸ್‌ನಲ್ಲಿ (Garaga Cross, Dharwad) ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಯ್ತು. ಗರಗ ಗ್ರಾಮದಲ್ಲಿ ಗುರು ಮಡಿವಾಳೇಶ್ವರ ಮಠವಿದ್ದು, ಮುಖ್ಯ ರಸ್ತೆಗೆ ದ್ವಾರ ನಿರ್ಮಾಣ ಮಾಡಲಾಗುತ್ತಿದೆ. ಭೂಮಿ ಪೂಜೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಯತ್ನಾಳ್, ಸಿದ್ದರಾಮಯ್ಯ ಸ್ಥಿತಿ ಕುಂಡಿ(ಅಂಡು) ಸುಟ್ಟ ಬೆಕ್ಕಿನಂತಾಗಿದೆ. ಸಿದ್ದರಾಮಯ್ಯ ದಾವಣಗೆರೆಯಲ್ಲಿ ಸಮಾವೇಶ ಮಾಡಿದ್ದರು. ಸಿದ್ದರಾಮಯ್ಯ (Former CM Siddaramaiah) ಶಿಷ್ಯ ಶಾಸಕ ಜಮೀರ್ ಅಹ್ಮದ್ ಖಾನ್ (MLA Zameer Ahmed Khan) ಹತ್ತು ಲಕ್ಷ ಜನ ಸೇರಿದ್ದರು ಎಂದಿದ್ದರು. ರಾಜ್ಯದಲ್ಲಿ 160 ಜನರಲ್ ಕ್ಷೇತ್ರಗಳಿದ್ರೂ, ಸಿದ್ದರಾಮಯ್ಯರಿಗೆ ಒಂದು ಕ್ಷೇತ್ರ ಸಹ ಸಿಗ್ತಿಲ್ಲ ಎಂದು ವ್ಯಂಗ್ಯ ಮಾಡಿದರು.


ಒಮ್ಮೆ ಕೋಲಾರ ಮತ್ತೊಮ್ಮೆ ಚಾಮರಾಜನಗರಕ್ಕೆ ಹೋಗ್ತಾರೆ. ಇನ್ನೊಮ್ಮೆ ಚಾಮುಂಡೇಶ್ವರಿ, ಬೀಳಗಿ, ಬಾದಾಮಿಗೆ ಬರ್ತಾರೆ. ಅವರೊಬ್ಬರು ಮಾಜಿ ಸಿಎಂ ಆಗಿದ್ದು, ಕಾಂಗ್ರೆಸ್‌ನ ಮುಂದಿನ ಸ್ವಯಂಘೋಷಿತ ಮುಖ್ಯಮಂತ್ರಿ ಆಗಿರುವ ನಾಯಕರಾಗಿದ್ದಾರೆ. ಅಂತಹ ವ್ಯಕ್ತಿಗೆ ಒಂದು ಕ್ಷೇತ್ರ ಇಲ್ಲದಾಗಿದೆ ಎಂದು ವ್ಯಂಗ್ಯ ಮಾಡಿದರು.


ಸಂತೋಷ್ ಲಾಡ್​ ಹೇಳಿಕೆಗೆ ಪ್ರತಿಕ್ರಿಯೆ


ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಚುನಾವಣೆ ಸ್ಪರ್ಧೆ ಬೇಡ ಅಂತಾ ಸಂತೋಷ್ ಲಾಡ್ ಹೇಳಿಕೆಗೆ ಬಸನಗೌಡ ಪಾಟೀಲ್  ಯತ್ನಾಳ್ ಪ್ರತಿಕ್ರಿಯಿಸಿದರು. ಸಂತೋಷ್ ಲಾಡ್​ಗೆ ತಮ್ಮ ಇಬ್ಬರು ನಾಯಕರು ಸೋಲ್ತಾರೆ ಎಂದು ಅನ್ನಿಸಿರಬಹುದು. ಹಾಗಾಗಿ ಈ ರೀತಿ ಮಾತನಾಡಿದ್ದು, ಅದು ಅವರ ಪಕ್ಷದ ವಿಚಾರ ಎಂದರು.


Basanagowda patil Yatnal taunts siddaramaiah for his search of assembly constiency mrq
ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್​


ನಿರಾಣಿಗೆ ತಿರುಗೇಟು


ಇದೇ ವೇಳೆ ಯತ್ನಾಳ್ ಕಾಂಗ್ರೆಸ್ ಬಿ ಟೀಮ್ ಎಂಬ ನಿರಾಣಿ ಹೇಳಿಕೆಗೆ ತಿರುಗೇಟು ನೀಡಿದರು. ಬಿ ಟೀಮ್ , ಎ ಟೀಮ್ ಎನ್ನುವುದು ಕೆಲವು ದಿನಗಳಲ್ಲಿ ಗೊತ್ತಾಗಲಿದೆ. ಸಮಾಜಕ್ಕೆ ನ್ಯಾಯ ಕೊಡಿಸಲು ನಮ್ಮ ಸ್ವಾಮೀಜಿಗಳು ಹೋರಾಟ ಮಾಡುತ್ತಿದ್ದಾರೆ. ನಾನು, ಕಡಾಡಿ ಸೇರಿ ಬಿಜೆಪಿಯವರೇ ಹೋರಾಟದಲ್ಲಿದ್ದೇವೆ. ಕಾಶಪ್ಪನವರಿಗೆ ಪಂಚಮಸಾಲಿ ಹೋರಾಟಕ್ಕೆ ರಾಷ್ಟ್ರೀಯ ಅಧ್ಯಕ್ಷರಾಗಿದ್ದು ಪಕ್ಷಾತೀತ ವಿಚಾರ. ಹಾಗೆ ಹರಿಹರ ಪೀಠಕ್ಕೆ ಜೆಡಿಎಸ್​ನವರು ಅಧ್ಯಕ್ಷರಾಗಿದ್ದಾರೆ ಎಂದರು.


ಪರೇಶ್​ ಮೇಸ್ತಾ ಪ್ರಕರಣದ ಬಗ್ಗೆ ಇನ್ನೊಮ್ಮೆ ತನಿಖೆ ಮಾಡಿಸುವ ಚಿಂತನೆ ನಡೆದಿದೆ. ಇನ್ನೊಮ್ಮೆ ಪುನರ್ ತನಿಖೆ ಆಗಬೇಕಿದೆ. ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಂಡಿದೆ. ಪರಿಶೀಲನೆ ಮಾಡುವಂತೆ ಸರ್ಕಾರ ಈಗಾಗಲೇ ಸಿಬಿಐಗೆ ಕೇಳಿಕೊಂಡಿದ್ದೇನೆ ಎಂದು ತಿಳಿಸಿದರು.


ಇದನ್ನೂ ಓದಿ:  Siddu V/s Yatnal: ಸಿದ್ದರಾಮಯ್ಯಗೆ ತಾಕತ್ತು ಇದ್ರೆ ಹಂದಿ ಮಾಂಸ ತಿಂದು ಮಸೀದಿಗೆ ಹೋಗಲಿ, ಯತ್ನಾಳ್ ಸವಾಲ್


ರಮೇಶ್ ಜಾರಕಿಹೊಳಿ ಮಂತ್ರಿ ಆಗ್ತಾರೆ


ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮಂತ್ರಿ ಆಗುತ್ತಾರೆ. ರಮೇಶ್​ ಜಾರಕಿಹೊಳಿ ಜೆಡಿಎಸ್ ಸೇರುತ್ತಾರೆಂಬ ಸುದ್ದಿ ಸುಳ್ಳು. ರಮೇಶ್ ಜಾರಕಿಹೊಳಿ ಆದಷ್ಟು ಬೇಗ ಅವರು ಮಂತ್ರಿ ಆಗಲಿದ್ದು, ಅವರ ಎಲ್ಲಾ ಭವಿಷ್ಯ ಬಿಜೆಪಿಯಲ್ಲಿದೆ.


ಮಂತ್ರಿ ಮಂಡಲ ಈಗಲೂ ಪುನರ್ ರಚನೆ ಆಗಬಹುದು. ಆದರೆ ನಾನು ಮಂತ್ರಿ ಸ್ಥಾನದ ಆಕಾಂಕ್ಷಿ ಇಲ್ಲ. ಆದರೆ ಜಾರಕಿಹೊಳಿಯವರದ್ದೇ‌ ಮೊದಲ ಹೆಸರು ಇದೆ ಎಂಬ ಮಾಹಿತಿ ನೀಡಿದರು.


Basanagowda patil Yatnal taunts siddaramaiah for his search of assembly constiency mrq
ಶಾಸಕ ಯತ್ನಾಳ್


ಇದನ್ನೂ ಓದಿ:  Basanagouda Patil Yatnal: ನಾನು ಸಿಎಂ ಆದರೆ ಒಬ್ಬರನ್ನು ಜೈಲಿಗೆ ಕಳಿಸ್ತೇನೆ ಎಂದ ಯತ್ನಾಳ್! ಹಾಗಿದ್ರೆ ಆ ವ್ಯಕ್ತಿ ಯಾರು?


ಬಿಜೆಪಿಗೆ ಕಾಂಗ್ರೆಸ್ ಪ್ರಶ್ನೆ


ಬಸನಗೌಡ ಪಾಟೀಲ್ ಯತ್ನಾಳ್ ನಮ್ಮ ಪಕ್ಷದ ನಾಯಕರಲ್ಲ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ನಾಯಕ ಅರುಣ್ ಸಿಂಗ್ (BJP Leader Arun Singh) ಹೇಳಿದ್ದಾರೆ. ಹಾಗಾದ್ರೆ ಯತ್ನಾಳ್ ಯಾವ ಪಕ್ಷದ ನಾಯಕರು? ಯತ್ನಾಳರನ್ನು ಉಚ್ಛಾಟನೆ (Expell) ಮಾಡುವಿರಾ? ಅವರು ಶಾಸಕರು ಅಷ್ಟೇ ಎಂದಿದ್ದಾರೆ ಅರುಣ್ ಸಿಂಗ್. ಹಾಗಿದ್ರೆ ಬಿಜೆಪಿಗೆ ಶಾಸಕರೆಂದರೆ (MLAs) ಕೇವಲವೇ? ಯತ್ನಾಳರನ್ನು ನಿಯಂತ್ರಿಸಲಾಗದಷ್ಟು ರಾಜ್ಯ ಬಿಜೆಪಿ (Karnataka BJP) ಅಸಹಾಯಕವಾಗಿದೆಯೇ? ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.

Published by:Mahmadrafik K
First published: