• Home
  • »
  • News
  • »
  • state
  • »
  • ED, IT Raid: ಸಿದ್ದರಾಮಯ್ಯ ಮನೆ ಮೇಲೆ ದಾಳಿ ಆಗಲ್ಲ ಯಾಕೆ? ಯತ್ನಾಳ್ ಕೊಟ್ಟ ಉತ್ತರ ಹೀಗಿತ್ತು

ED, IT Raid: ಸಿದ್ದರಾಮಯ್ಯ ಮನೆ ಮೇಲೆ ದಾಳಿ ಆಗಲ್ಲ ಯಾಕೆ? ಯತ್ನಾಳ್ ಕೊಟ್ಟ ಉತ್ತರ ಹೀಗಿತ್ತು

ಸಿದ್ದರಾಮಯ್ಯ ಮತ್ತು ಯತ್ನಾಳ್

ಸಿದ್ದರಾಮಯ್ಯ ಮತ್ತು ಯತ್ನಾಳ್

ಅವಳಿ ಜಿಲ್ಲೆಯಲ್ಲಿ ನಮ್ಮ ಪಕ್ಷ ಹಾಳು ಮಾಡುವ ಹುಳ ಇದೆ ಎಂಬ ಹೇಳಿಕೆಯ ವಿಚಾರವಾಗಿ ಮಾತನಾಡಿದ ಅವರು, ಆ ಹುಳ ಹಿಂಗೆ ಉಪಾದ್ಯಾಪೆ ಮಾಡಿದ್ರೆ ಸಿಬಿಐ ರೇಡ್ ಆಗುತ್ತೆ ಎಂದು ಪರೋಕ್ಷವಾಗಿ ಸಚಿವ ಮುರುಗೇಶ್ ನಿರಾಣಿ ವಿರುದ್ದ ವಾಗ್ದಾಳಿ ನಡೆಸಿದರು.

  • Share this:

ಬಾಗಲಕೋಟೆ: ಕಾಂಗ್ರೆಸ್ (Congress) ಪಕ್ಷ ಬ್ಯಾನ್ ಮಾಡಬೇಕು, ಕಾಂಗ್ರೆಸ್ ಈ‌‌ ದೇಶಕ್ಕೆ ಒಂದು ಶಾಪವಾಗಿದೆ ಎಂದು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ (MLA Basanagowda Patil Yatnal) ಗುಡುಗಿದ್ದಾರೆ. ಬಾಗಲಕೋಟೆಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕರು, ಸ್ವಾತಂತ್ರ್ಯ ಬಳಿಕ ಕಾಂಗ್ರೆಸ್ ಅನ್ನು ವಿಸರ್ಜಿಸುವಂತೆ ಗಾಂಧಿಜಿ ಹೇಳಿದ್ದರು. ಸಿದ್ದರಾಮಯ್ಯ ಅವರು ಪೂರ್ತಿ ಹತಾಶರಾಗಿದ್ದಾರೆ. ಹೀಗಾಗಿ ಆರ್​ಎಸ್ಎಸ್ ಸಂಘಟನೆ ಬ್ಯಾನ್ ಮಾಡಬೇಕು ಎಂದು ಹೇಳುತ್ತಿದ್ದಾರೆ. RSS ದೇಶಭಕ್ತ ಸಂಘಟನೆ ಅಂತ ಸುಪ್ರೀಂ ಕೋರ್ಟ್ ಹೇಳಿದೆ. ದೇಶಭಕ್ತರನ್ನು ತಯಾರು ಮಾಡುವಂತಹ ಕಾರ್ಖಾನೆ ಆಗಿದೆ ಎಂದು ಹೇಳಿದ್ದಾರೆ. ಪಿಎಫ್ಐ (PFI) ಸಂಘಟನೆ ದೇಶದಲ್ಲಿ ಹಿಂದುಗಳ ಹತ್ಯೆ ಮಾಡುವುದು, ಹಿಂದು ನಾಯಕರ ಕೊಲೆ, ಲವ್ ಜಿಹಾದ್ (Love Jihad) ಮಾಡಬೇಕೆಂಬ ಕುತಂತ್ರದ ಸಾಕ್ಷಿಯಿದೆ. ಸುಮ್ಮನೆ ನಿಷೇಧ ಹೇರುವಂತಹ ಕೆಲಸ ಮಾಡಿಲ್ಲ. ಸಾವಿರಾರು ಕೋಟಿ ಅರಬ್ ದೇಶಗಳಿಂದ ಈ ಚಟುವಟಿಕೆಗಳಿಗೆ ಹಣ ಬರುವ ಬಗ್ಗೆ ದಾಖಲೆ ಸಿಕ್ಕಿದೆ. ಪಿಎಫ್ಐ ನಿಷೇಧ ಅಗಿದ್ದು ಕಾಂಗ್ರೆಸ್​ಗೆ ಒಳಗಿಂದ ಒಳಗೆ ಸಂತೋಷವಿದೆ ಎಂದು ವ್ಯಂಗ್ಯ ಮಾಡಿದರು.


ದುರ್ದೈವ ಅಂದ್ರೆ ದೇಶಕ್ಕಿಂತ ಮುಸ್ಲಿಂ ವೋಟ್​​ಗಳಿಗಾಗಿ ಟೀಕೆ ಮಾಡ್ತಿದಾರೆ. ಪಿಎಫ್ಐನಿಂದ ಕಾಂಗ್ರೆಸ್ ಮತ ಬ್ಯಾಂಕ್ ಒಡೆದು ಹೋಗಿತ್ತು. ಕಾಂಗ್ರೆಸ್​ಗೆ ಜೀವನ ಕೊಟ್ಟಿದ್ದು ನರೇಂದ್ರ ಮೋದಿ ಎಂದು ಯತ್ನಾಳ ತಿಳಿಸಿದರು.


ಬಾಂಗ್ಲಾದೇಶ ಒಡೆದವರು ಯಾರು?


ಇದೇ ಸಮಯದಲ್ಲಿ,ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಜೋಡೋ ಪಾದಯಾತ್ರೆ ವಿಚಾರವಾಗಿ ಮಾತನಾಡಿದ ಯತ್ನಾಳ್, ಭಾರತ ಜೋಡೋ ಅನ್ನೋದಕ್ಕೆ ಕಾಂಗ್ರೆಸ್ಸಿಗರಿಗೆ ನೈತಿಕತೆಯೇ ಇಲ್ಲ. ಪಾಕಿಸ್ತಾನ ಒಡೆದು ಕೊಟ್ಟವರು ಯಾರು? ಬಾಂಗ್ಲಾದೇಶ ಒಡೆದವರು ಯಾರು? ಎಂದು ಪ್ರಶ್ನೆ ಮಾಡಿದರು.


ಕಾಶ್ಮೀರದ ಆರ್ಟಿಕಲ್ 370 ವಿಧಿ ಲಾಗು ಮಾಡಿ ಭಾರತವನ್ನು ತೋಡೋ ಮಾಡುವ ಕೆಲಸ ಮಾಡಿದೆ. ಆದರೆ ಪಿಎಂ‌ ಮೋದಿ ಭಾರತವನ್ನು ಜೋಡಿಸುವ ಕೆಲಸ ಮಾಡುತ್ತಿದ್ದಾರೆ. ಕಾಶ್ಮೀರದ 370ನೇ ವಿಧಿ ನಾವು ತೆಗೆದು ಹಾಕಿದ್ದಿವಿ. ಭಾರತದ ಅವಿಭಾಜ್ಯ ಅಂಗ ಅಂತೇಳಿ ಡಿಕ್ಲೇರ್ ಮಾಡಲಾಗಿದೆ ಎಂದರು.


Basanagowda patil yatnal explained Why not ed and it raids on siddaramaiah house mttv mrq
ಶಾಸಕ ಯತ್ನಾಳ್


ಕೈ ಪಕ್ಷ ಪಾಕಿಸ್ತಾನದ ಕಾಂಗ್ರೆಸ್


ಕಾಂಗ್ರೆಸ್ ನವರು ಈ ದೇಶದಲ್ಲಿ ಇನ್ನೊಂದು ಪಾಕಿಸ್ತಾನ ತಯಾರು ಮಾಡಲು ಹೊರಟಿದ್ದಾರೆ. ಮುಸ್ಲಿಮರ ತುಷ್ಠಿಕರಣ ಬಿಟ್ರೆ, ಕೈ ಪಕ್ಷ ಪಾಕಿಸ್ತಾನದ ಕಾಂಗ್ರೆಸ್​ ಆಗಿ ಪರಿವರ್ತನೆ ಆಗಿದೆ. ಬಾಡಿಗೆ ಜನರನ್ನು ತಂದು ಹೋರಾಟ ಮಾಡುತ್ತಿದ್ದಾರೆ.


ಇದನ್ನೂ ಓದಿ:  Constable Challenge: ಪೊಲೀಸ್ ಎಸ್ಕಾರ್ಟ್ ಇಲ್ಲದೇ ಮನೆಗೆ ಹೋಗು; ಸಿದ್ದರಾಮಯ್ಯಗೆ ಪೊಲೀಸ್​ ಪೇದೆ ಸವಾಲ್​


ರಾಹುಲ್ ಎಂಬ ಅರೆಹುಚ್ಚ, ಅಪ್ರಬುದ್ಧ, ಆಲೂಗಡ್ಡೆಯಿಂದ ಬಂಗಾರ ತೆಗೆಯುವಂತಹ ವ್ಯಕ್ತಿ. ರಾಹುಲ್ ಪಿಎಂ ಆದ್ರೆ ಏನಾಗುತ್ತೆ ಅನ್ನೋದು ದೇಶದ ಜನರಿಗೆ ಗೊತ್ತಿದೆ. ಜೋಡೋದಿಂದ ಬಿಜೆಪಿಯಿಂದ ಹೆದರಿಲ್ಲ. ಆದ್ರೆ‌ ಕಾಂಗ್ರೆಸ್ ಹತಾಶೆಗೊಂಡಿದೆ. ಇನ್ನೂ 20 ವರ್ಷ ಮೋದಿನೇ ಪ್ರಧಾನಿ ಆಗಿರ್ತಾರೆ ಎಂದು ತಿಳಿಸಿದರು.


ಕನಕಪುರ ಪೂರ್ತಿ ಲೂಟಿ ಆಗಿದೆ


ಇದೇ ಸಂದರ್ಭದಲ್ಲಿ ಸಿಬಿಐಯನ್ನು ಬಿಜೆಪಿ ದುರುಪಯೋಗಪಡಿಸಿಕೊಳ್ತಿದೆ ಎಂಬ ಡಿಕೆಶಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಯತ್ನಾಳ್, ಇವರು ಈ ದೇಶ ಲೂಟಿ ಮಾಡಿದ್ದಾರೆ.


ಕನಕಪುರ ಪೂರ್ತಿ ಲೂಟಿ ಆಗಿದೆ. ಸಾವಿರಾರು ಕೋಟಿ ರೂಪಾಯಿ ಅಕ್ರಮ‌ ಆಸ್ತಿ ಇದೆ. ನನ್ನ ಮೇಲೆ ರೇಡ್ ಮಾಡ್ತಾರಾ? 10 ಸಾರಿ ರೇಡ್ ಮಾಡಿದ್ರು ನನ್ನ ಬಳಿ ಏನೂ ಸಿಗುವುದಿಲ್ಲ. ನೀವು ಕಳ್ಳತನ ಮಾಡಿದ್ದೀರಿ ಅದಕ್ಕೆ ಸಿಬಿಐನವರು ರೇಡ್ ಮಾಡ್ತಿದಾರೆ.


Basanagowda patil yatnal explained Why not ed and it raids on siddaramaiah house mttv mrq
ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ


ಸಿದ್ದರಾಮಯ್ಯ ಮನೆ ಮೇಲೆ ರೇಡ್‌ ಮಾಡಿದ್ದೀವಾ?


ನಾವೇನು ಸಿದ್ದರಾಮಯ್ಯ ಮನೆ ಮೇಲೆ ರೇಡ್‌ಮಾಡಿದ್ದೀವಾ? ಎಂದು ಪ್ರಶ್ನೆ ಮಾಡಿ,ಸಿದ್ದರಾಮಯ್ಯ ಅವರದ್ದು ಯಾಕೆ ಮಾಡಿಲ್ಲ. ಡಿಕೆಶಿ ಮೇಲಿನ ತರಹದ ಆರೋಪಗಳು ಸಿದ್ದರಾಮಯ್ಯ ಮೇಲಿಲ್ಲ. ಆರೋಪ ಇದ್ರೆ ಸಿದ್ದರಾಮಯ್ಯ ಮತ್ತು ನನ್ನ ಮೇಲೂ ರೇಡ್ ಮಾಡ್ತಾರೆ. ನಮ್ಮ ಬಿಜೆಪಿ ಕೆಲವು ಮಂದಿ ಮೇಲೆ ರೇಡ್ ಮಾಡಿದ್ದಾರೆ.ಹಿಂದಿನ ಸಿಎಂ ಅವರ ಮಗನ ಅತ್ಯಂತ  ನಿಕಟ ಇದ್ದ ಕಂಡಕ್ಟರ್ ಮೇಲೂ ರೇಡ್ ಮಾಡಿದ್ರು ಎಂದು ತಿಳಿಸಿದರು.


 ಆ ಹುಳು ಈ ಬಾರಿ ಸೋಲುತ್ತೆ


ಅವಳಿ ಜಿಲ್ಲೆಯಲ್ಲಿ ನಮ್ಮ ಪಕ್ಷ ಹಾಳು ಮಾಡುವ ಹುಳ ಇದೆ ಎಂಬ ಹೇಳಿಕೆಯ ವಿಚಾರವಾಗಿ ಮಾತನಾಡಿದ ಅವರು, ಆ ಹುಳ ಹಿಂಗೆ ಉಪಾದ್ಯಾಪೆ ಮಾಡಿದ್ರೆ ಸಿಬಿಐ ರೇಡ್ ಆಗುತ್ತೆ ಎಂದು ಪರೋಕ್ಷವಾಗಿ ಸಚಿವ ಮುರುಗೇಶ್ ನಿರಾಣಿ ವಿರುದ್ದ ವಾಗ್ದಾಳಿ ನಡೆಸಿದರು.


ಇದನ್ನೂ ಓದಿ:  Siddaramaiah: ಪರೇಶ್‌ ಮೇಸ್ತ ಕೇಸ್‌ನಲ್ಲಿ ಬಿಜೆಪಿ ವಿರುದ್ಧ ಗುಡುಗು! ನ್ಯೂಸ್ 18 ಕನ್ನಡ ವರದಿ ಟ್ವೀಟ್ ಮಾಡಿದ ಸಿದ್ದರಾಮಯ್ಯ


ದುಡ್ಡಿದೆ ಅಂತೇಳಿ ಚರಂತಿಮಠ ಅವರನ್ನು ಸೋಲಿಸ್ತೀವಿ. ಯತ್ನಾಳ, ಕಾರಜೋಳ, ಸಿದ್ದು ಸವದಿ ಸೋಲಿಸ್ತೀವಿ ಅಂತಾ ಆ ಹುಳ ತಿಳಿದುಕೊಂಡಿದೆ. ಅದೇ ಈ ಸಾರಿ ಹೋಗುತ್ತದೆ (ಸೋಲುತ್ತದೆ)‌. ಯಾವುದು ಆ ಹುಳು ಎಂಬ ಪ್ರಶ್ನೆ ಅದನ್ನ ನೀವೇ ವಿಶ್ಲೇಷಣೆ ಮಾಡಿ ಎಂದು ಹೆಸರು ಹೇಳದೇ ಯತ್ನಾಳ್ ಜಾರಿಕೊಂಡರು.


ವರದಿ: ಮಂಜುನಾಥ್ ತಳವಾರ

Published by:Mahmadrafik K
First published: