• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಹೊರಬಿದ್ದ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು - ಈ ಬಗ್ಗೆ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದೇನು?

ಹೊರಬಿದ್ದ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು - ಈ ಬಗ್ಗೆ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದೇನು?

ಬಸನಗೌಡ ಪಾಟೀಲ್ ಯತ್ನಾಳ್

ಬಸನಗೌಡ ಪಾಟೀಲ್ ಯತ್ನಾಳ್

ಕೋರ್ಟ್​ ನಿರ್ಣಯ ಸಮಸ್ತ ಭಾರತೀಯರ ಗೆಲುವು. ಇನ್ನು ನಮಗೆ ಕಾಶಿ ವಿಶ್ವನಾಥ, ಮಥುರಾ ಶ್ರೀ ಕೃಷ್ಣ ಮಂದಿರಗಳು ಮತ್ತು ಅದರ ಜೊತೆ ಇನ್ನುಳಿದ ಹಿಂದೂ ಪವಿತ್ರ ಸ್ಥಳಗಳ ಮೇಲೆ ಅವಮಾನ ಗುಲಾಮಗಿರಿಯ ಸಂಕೇತ ಮುಕ್ತಿಯಾಗಬೇಕು ಎಂದು ಬಸನಗೌಡ ಪಾಟೀಲ್ ಯತ್ನಾಳ್ ಪೋಸ್ಟ್​ ಮಾಡಿದ್ದಾರೆ.

  • Share this:

ವಿಜಯಪುರ(ಸೆ.30): ಬಾಬರಿ ಮಸೀದಿ ಧ್ವಂಸ ಪ್ರಕರಣದ ಕುರಿತು ಸಿಬಿಐ ನ್ಯಾಯಾಲಯ ತೀರ್ಪು ಪ್ರಕಟಿಸುತ್ತಿದ್ದಂತೆ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ರಾ. ಪಾಟೀಲ ಯತ್ನಾಳ ಮತ್ತೆ ತಮ್ಮ ಹಿಂದೂಪರ ವಾದ ಮುಂದುವರೆಸಿದ್ದಾರೆ. ಸಿಬಿಐ ನ್ಯಾಯಾಲಯದ ತೀರ್ಪು ಪ್ರಕಟವಾದ ಹಿನ್ನೆಲೆಯಲ್ಲಿ ಬಿ.ಆರ್​​ ಪಾಟೀಲ ಯತ್ನಾಳ ಹೆಸರಿನಲ್ಲಿ ಫೇಸ್​ಬುಕ್ ಖಾತೆಯಲ್ಲಿ ಪೋಸ್ಟ್​ವೊಂದನ್ನು ಹಾಕಿದ್ದಾರೆ.  ಅದರಲ್ಲಿ ಬಾಬರಿ ಮಸೀದಿ ಮಸೀದಿ ಧ್ವಂಸದ ಬಗ್ಗೆ ಸಿಬಿಐ ನ್ಯಾಯಾಲಯ ನೀಡಿರುವ ತೀರ್ಪನ್ನು ಉಲ್ಲೇಖಿಸಿದ್ದಾರೆ. ಇಂದು ಬಾಬರ್​​ನ ಆಕ್ರಮಣದ ಕುರುಹು ಗುಮ್ಮಟ ಬಿದ್ದ ಬಗ್ಗೆ ನಮ್ಮ ನಾಯಕರ ಮೇಲೆ ಹಾಕಿದ ಪೂರ್ವ ನಿಯೋಜಿತ ಸಂಚು ಕೇಸಿನ ಬಗ್ಗೆ ಸಿ ಬಿ ಆಯ್ ಕೋರ್ಟ ನಮ್ಮ ಎಲ್ಲ ನಾಯಕರನ್ನು ನಿರ್ದೋಷಿಗಳೆಂದು ಐತಿಹಾಸಿಕ ತೀರ್ಪು ನೀಡಿದೆ.


ಕೋರ್ಟ್​ ನಿರ್ಣಯ ಸಮಸ್ತ ಭಾರತೀಯರ ಗೆಲುವು. ಇನ್ನು ನಮಗೆ ಕಾಶಿ ವಿಶ್ವನಾಥ, ಮಥುರಾ ಶ್ರೀ ಕೃಷ್ಣ ಮಂದಿರಗಳು ಮತ್ತು ಅದರ ಜೊತೆ ಇನ್ನುಳಿದ ಹಿಂದೂ ಪವಿತ್ರ ಸ್ಥಳಗಳ ಮೇಲೆ ಅವಮಾನ ಗುಲಾಮಗಿರಿಯ ಸಂಕೇತ ಮುಕ್ತಿಯಾಗಬೇಕು. ಜೈ ಶ್ರೀರಾಮ್, ಜೈ ಶ್ರೀ ಕಾಶಿ ವಿಶ್ವನಾಥ, ಜೈ ಶ್ರೀ ಕೃಷ್ಣ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ರಾ. ಪಾಟೀಲ ಯತ್ನಾಳ ಬಾಬರಿ ಮಸೀದಿ ಧ್ವಂಸದ ಕುರಿತು ಸಿಬಿಐ ಕೋರ್ಟು ನೀಡಿರುವ ತೀರ್ಪಿನ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.


ಅಲ್ಲದೇ ಜೈ ಶ್ರೀರಾಮ್, ಜೈ ಶ್ರೀ ಕಾಶಿ ವಿಶ್ವನಾಥ, ಜೈ ಶ್ರೀ ಕೃಷ್ಣ ಎಂದು ಪೋಸ್ಟ್​ ಮಾಡುವ ಮೂಲಕ ಕಾಶಿ ವಿಶ್ವನಾಥ, ಮಧುರಾ ಶ್ರೀಕೃಷ್ಣ ಮಂದಿರಗಳು ಹಾಗೂ ಇನ್ನುಳಿದ ಹಿಂದೂ ದೇವಸ್ಥಾನಗಳ ಪರ ಬ್ಯಾಟ್ ಬೀಸಿದ್ದಾರೆ.


ಈ ಸಂಬಂಧ ಮಾಜಿ ಉಪಪ್ರಧಾನಿ ಎಲ್. ಕೆ. ಅಡ್ವಾಣಿ, ಕೇಂದ್ರ ಮಾಜಿ ಸಚಿವ ಮುರಳಿ ಮನೋಹರ ಜೋಶಿ, ಉತ್ತರ ಪ್ರದೇಶದ ಮಾಜಿ ಸಿಎಂ ಕಲ್ಯಾಣ ಸಿಂಗ್, ವಿಎಚ್‌ಪಿ ಮುಖಂಡರಾದ ವಿನಯ ಕಟಿಯಾರ, ಮಧ್ಯಪ್ರದೇಶ ಮಾಜಿ ಸಿಎಂ ಉಮಾ ಭಾರತಿ, ಮುಖಂಡರಾದ ಸಾಕ್ಷಿ ಮಹಾರಾಜ, ಲಲ್ಲೂ ಸಿಂಗ್, ಸಾಧ್ವಿ ರಿತಾಂಬರ, ಮಹಂತ ನಿತ್ಯ ಗೋಪಾಲ ದಾಸ, ಬ್ರಿಜ ಭೂಷಣ ಸಿಂಗ್, ವಿಎಚ್​ಪಿ ಅಂತಾರಾಷ್ಟ್ರಿಯ ಪ್ರಧಾನ ಕಾರ್ಯದರ್ಶಿಯಾಗಿದ್ದ ದಿ. ಅಶೋಕ ಸಿಂಘಾಲ, ಶಿವಸೇನೆ ಸಂಸ್ಥಾಪಕ ದಿವಂಗತ ಬಾಳಸಾಹೇಬ ಠಾಕ್ರೆ ಮತ್ತು ಹಿಂದೂ ಪರ ಸಂಘಟನೆ ಮುಖಂಡ ಗಿರಿರಾಜ ಕಿಶೋರ ಅವರ ಫೋಟೋಗಳನ್ನು ಶೇರ್ ಮಾಡಿ ಗಮನ ಸೆಳೆದಿದ್ದಾರೆ.


ಇದನ್ನೂ ಓದಿ: ಬಾಬ್ರಿ ಮಸೀದಿ ಉಳಿಸಲು ಪ್ರಯತ್ನಿಸಿದ್ದ ಮಾಜಿ ಐಎಎಸ್ ಅಧಿಕಾರಿಗೆ ಕೋರ್ಟ್ ತೀರ್ಪಿನಿಂದ ಅಚ್ಚರಿ


ಒಟ್ಟಾರೆ ಯತ್ನಾಳ, ಈಗ ಬಾಬರಿ ಮಸೀದಿ ಬಳಿಕ ಕಾಶಿ ವಿಶ್ವನಾಥ, ಮಥುರಾ ಶ್ರೀ ಕೃಷ್ಣ ಮಂದಿರಗಳ ವಿಷಯವನ್ನು ಪ್ರಸ್ತಾಪಿಸುವ ಮೂಲಕ ಮತ್ತೊಂದು ಸುತ್ತಿನ ಚರ್ಚೆಗೆ ನಾಂದಿ ಹಾಡಿದ್ದಾರೆ.

top videos
    First published: