ಬಿಜೆಪಿಗೆ ಬನ್ನಿ, ಮಂತ್ರಿ ಮಾಡುತ್ತೇವೆ: ಎಂ.ಬಿ. ಪಾಟೀಲ್​ಗೆ ಬಹಿರಂಗ ಆಹ್ವಾನ


Updated:September 6, 2018, 6:26 PM IST
ಬಿಜೆಪಿಗೆ ಬನ್ನಿ, ಮಂತ್ರಿ ಮಾಡುತ್ತೇವೆ: ಎಂ.ಬಿ. ಪಾಟೀಲ್​ಗೆ ಬಹಿರಂಗ ಆಹ್ವಾನ
ಬಸನಗೌಡ ರಾ. ಪಾಟೀಲ್ ಯತ್ನಾಳ್

Updated: September 6, 2018, 6:26 PM IST
- ಮಹೇಶ ವಿ. ಶಟಗಾರ, ನ್ಯೂಸ್18 ಕನ್ನಡ

ವಿಜಯಪುರ(ಸೆ. 06): ನೆರೆಯ ಬೆಳಗಾವಿಯಲ್ಲಿ ರಮೇಶ್ ಜಾರಕಿಹೊಳಿಗೆ ಬಿಜೆಪಿಯಿಂದ ಡಿಸಿಎಂ ಸ್ಥಾನದ ಸಖತ್ ಆಫರ್ ಸಿಕ್ಕಿದೆ ಎಂಬ ಸುದ್ದಿ ಓಡಾಡುತ್ತಿರುವ ಹೊತ್ತಿನಲ್ಲಿ ವಿಜಯಪುರದಲ್ಲೂ ಕಾಂಗ್ರೆಸ್ಸಿಗರನ್ನು ಬಿಜೆಪಿಗೆ ಸೆಳೆಯು ಪ್ರಯತ್ನ ನಡೆಯುತ್ತಿರುವಂತಿದೆ. ಸದಾ ವಿವಾದಾತ್ಮಕ ಹೇಳಿಕೆಗಳನ್ನ ನೀಡುವ ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿ ಶಾಸಕ ಬಸನಗೌಡ ರಾ. ಪಾಟೀಲ್ ಯತ್ನಾಳ್ ಅವರು ಈಗ ಮಾಜಿ ಸಚಿವ ಎಂ.ಬಿ. ಪಾಟೀಲ್ ಅವರನ್ನು ಬಿಜೆಪಿಗೆ ಆಹ್ವಾನಿಸಿದ್ದಾರೆ. ಎಂ.ಬಿ.ಪಾಟೀಲ್ ಬಿಜೆಪಿಗೆ ಬಂದರೆ ಸಚಿವ ಸ್ಥಾನ ಕೊಡುವುದಾಗಿಯೂ ಆಫರ್ ಕೊಟ್ಟಿದ್ದಾರೆ.

ಬೇಕಿದ್ದರೆ ಎಂ.ಬಿ. ಪಾಟೀಲ್ ಬಿಜೆಪಿ ಸೇರಲಿ. ಯಡಿಯೂರಪ್ಪ ಅವರನ್ನು ಸಿಎಂ ಮಾಡೋಣ. ಎಂ.ಬಿ. ಪಾಟೀಲ್ ಅವರನ್ನು ಮಂತ್ರಿಯನ್ನಾಗಿ ಮಾಡುತ್ತೇವೆ. ಈ ಚುನಾವಣೆ ನಂತರ ರಾಜ್ಯದಲ್ಲಿ ಸಾಕಷ್ಟು ಬದಲಾವಣೆಯಾಗಲಿದೆ ಎಂದು ಯತ್ನಾಳ್ ಹೇಳಿದ್ದಾರೆ.

ಪ್ರಸಕ್ತ ವಿಧಾನ ಪರಿಷತ್ ಚುನಾವಣೆ ಬಳಿಕ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಲಿದೆ. ಆಗ ಸಚಿವ ಸ್ಥಾನ ಸಿಗದವರಿಂದ ಸರಕಾರಕ್ಕೆ ಕಷ್ಟಕರವಾಗಲಿದೆ. ಈ ಹಿಂದೆಯೂ ತಾವು ಎಂ.ಬಿ. ಪಾಟೀಲ್ ಸಚಿವರಾಗಲಿ ಎಂದು ಸಹಾಯ ಮಾಡಿರುವುದಾಗಿ ಯತ್ನಾಳ ತಿಳಿಸಿದ್ದಾರೆ.

ವಿಧಾನ ಪರಿಷತ ಚುನಾವಣೆಗೆ ಮತ ಹಾಕದೆ  ಮಾಜಿ ಸಿಎಂ ಎಸ್. ಸಿದ್ದರಾಮಯ್ಯ ವಿದೇಶ ಪ್ರವಾಸಕ್ಕೆ ತೆರಳಿದ್ದು ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನ ಎಂದು ಕಿಡಿಕಾರಿದ ಯತ್ನಾಳ್, ಜನಪ್ರತಿನಿಧಿಗಳಿಂದ ಜನಪ್ರತಿನಿಧಿಯನ್ನು ಆಯ್ಕೆ ಮಾಡುವ ಚುನಾವಣೆ ಇದಾಗಿದ್ದು, ಸಿದ್ಧರಾಮಯ್ಯ ಮತ ಹಾಕದೆ ವಿದೇಶ ಪ್ರವಾಸ ಕೈಗೊಂಡಿರುವುದು ಸರಕಾರ ಉರುಳಿಸುವ ಪ್ರಯತ್ನವಾ ಎಂಬುದನ್ನು ಅವರೇ ಸ್ಪಷ್ಟಪಡಿಸಬೇಕು ಎಂದು ಶಂಕಿಸಿದ್ದಾರೆ.
First published:September 6, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ