HOME » NEWS » State » BASANAGOUDA PATIL YATNAL SAYS THE ELDERS SHOULD GIVE UP THE MINISTERIAL POSITION AND PAY ATTENTION TO THE PARTY ORGANIZATION SESR

ಹಿರಿಯರು ಸಚಿವ ಸ್ಥಾನ ಬಿಟ್ಟುಕೊಟ್ಟು, ಪಕ್ಷ ಸಂಘಟನೆಗೆ ಗಮನ ನೀಡಬೇಕು; ಯತ್ನಾಳ್​​

ಸಚಿವ ಸಂಪುಟ ವಿಸ್ತರಣೆ ಬಳಿಕ ಕೆಲವರಲ್ಲಿ ಅಸಮಾಧಾನ ಮೂಡಿತು. ಯಾರನ್ನೂ ಯಾರು ಸಮಾಧಾನ ಮಾಡಿದ್ದಾರೆ ಗೊತ್ತಿಲ್ಲ

news18-kannada
Updated:January 20, 2021, 2:42 PM IST
ಹಿರಿಯರು ಸಚಿವ ಸ್ಥಾನ ಬಿಟ್ಟುಕೊಟ್ಟು, ಪಕ್ಷ ಸಂಘಟನೆಗೆ ಗಮನ ನೀಡಬೇಕು; ಯತ್ನಾಳ್​​
ಶಾಸಕ ಬಸನಗೌಡ ಪಾಟೀಲ ಯತ್ನಾಳ
  • Share this:
ಬೆಂಗಳೂರು (ಜ. 20): ಪಕ್ಷದ ಹಿರಿಯರು ಸಚಿವ ಸ್ಥಾನವನ್ನು ಬಿಟ್ಟು ಕೊಟ್ಟು ಬೇರೆಯವರಿಗೆ ಅವಕಾಶ ನೀಡಬೇಕು. ಈ ಮೂಲಕ ಪಕ್ಷ ಸಂಘಟನೆಯ ಕಡೆ ಗಮನ ಕೊಡಬೇಕು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್​ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ವಂಶಾಡಳಿತಕ್ಕೆ ಯಾವುದೇ ಅವಕಾಶವನ್ನು ಕೊಡಬಾರದು. ವಂಶಾಡಳಿತ ರಾಜಕೀಯವನ್ನು ಕೊನೆಗಾಣಿಸುವುದೇ ಪ್ರಧಾನಿ ನರೇಂದ್ರ ಮೋದಿ ಆಶಯವಾಗಿದ್ದು, ಇದು ಪಕ್ಷದ ಧ್ಯೇಯವಾಗಿದೆ. ಆದರೆ. ಪ್ರಧಾನಿ ಆಶಯಕ್ಕೆ ವಿರುದ್ಧವಾಗಿ ಕೆಲಸ ನಡೆಯುತ್ತಿದೆ. ಈ ಹಿನ್ನಲೆ ಒಂದು ಮನೆಯಲ್ಲಿ ಒಬ್ಬರಿಗೆ ಅಧಿಕಾರ ಕೊಡಬೇಕು.ಇದು ಪ್ರಧಾನಿ ಆಶಯದಂತೆ ಪಕ್ಷ ನಡೆದುಕೊಳ್ಳಬೇಕು ಎಂಬ ಬಗ್ಗೆ ರಾಜ್ಯ ಮತ್ತು ರಾಷ್ಟ್ರೀಯ ಅಧ್ಯಕ್ಷರಿಗೆ ಪತ್ರ ಬರೆಯುತ್ತೇನೆ. ಇದು ಕಟ್ಟುನಿಟ್ಟಾಗಿ ಜಾರಿ ಆಗಬೇಕು. ಪ್ರಧಾನ ಮಂತ್ರಿಗಳ ಆಶಯವನ್ನು ಸಾಕಾರಗೊಳಿಸಬೇಕು‌ ಎನ್ನುವುದು ನನ್ನ ಕಳಕಳಿ ಅಷ್ಟೇ ಎಂದರು. 

ಸಂಪುಟ ವಿಸ್ತರಣೆ ಬಳಿಕ ಅಸಮಾಧಾನಗೊಂಡ ಶಾಸಕರು ಈಗ ಸುಮ್ಮನಾಗಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಸಚಿವ ಸಂಪುಟ ವಿಸ್ತರಣೆ ಬಳಿಕ ಕೆಲವರಲ್ಲಿ ಅಸಮಾಧಾನ ಮೂಡಿತು. ಯಾರನ್ನೂ ಯಾರು ಸಮಾಧಾನ ಮಾಡಿದ್ದಾರೆ ಗೊತ್ತಿಲ್ಲ. ಎಲ್ಲರನ್ನೂ ಸಮಾಧಾನ ಮಾಡುವ ಶಕ್ತಿ ಒಂದು ಇದೆ. ಆ ಶಕ್ತಿ ಎಲ್ಲರನ್ನೂ ಸಮಾಧಾನ ಮಾಡಿದೆ ಎಂದು ಮಾರ್ಮಿಕವಾಗಿ ತಿಳಿಸಿದರು.

ಇದನ್ನು ಓದಿ: ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಬೃಹತ್ ಜಾಥಾ

ತಮ್ಮ ವಿರುದ್ಧ ಹೈ ಕಮಾಂಡ್​ಗೆ ರೇಣುಕಾಚಾರ್ಯ ದೂರು ನೀಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ರೇಣುಕಾಚಾರ್ಯ ನನ್ನ ಮೇಲೆ ದೂರು ಕೊಟ್ಟಿರುವುದು ಗೊತ್ತಿಲ್ಲ. ಅವರು ಯಾರ ಬಗ್ಗೆ ಮಾತನಾಡುತ್ತಾರೆ ಎಂಬುದು ನನಗೆ ಗೊತ್ತಿಲ್ಲ. ಯಾರ ಪರವಾಗಿ ಮಾತನಾಡುತ್ತಾರೆ ಎನ್ನುವುದು ಗೊತ್ತಿಲ್ಲ ಎಂದರು.

ಇಲ್ಲಿ ಸಚಿವರನ್ನಾಗಿ ಮಾಡಿರೋರು ಯಾರು..? ಆ ತಪ್ಪನ್ನ ಮಾಡಿದ್ದು ಯಾರು..? ಸಚಿವ ಸಂಪುಟ ವಿಸ್ತರಣೆಯಲ್ಲಿ ಕೇಂದ್ರ ನಾಯಕರ ಹಸ್ತಕ್ಷೇಪ ಇಲ್ಲ. ಪೂರ್ಣ ಸ್ವಾತಂತ್ರ್ಯ ಸಿಎಂಗೆ ಇತ್ತು, ಅವರೇ ಮಾಡಿದ್ದಾರೆ. ಇನ್ನು ಈ ಕುರಿತು ಎಲ್ಲಿ ಯಾರ ಜತೆ ಮಾತಾಡಬೇಕು, ಯಾವಾಗ ಏನು ಮಾತಾಡಬೇಕು ಆಗ ಮಾತಾಡುತ್ತೇನೆ ಎಂದರು.
Published by: Seema R
First published: January 20, 2021, 2:39 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories