ಮತ್ತೆ ಮಂತ್ರಿ ಆಗುತ್ತೇನೆ ಎಂದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ

ಹಿಂದೆ ನಾನು ಆಲಮಟ್ಟಿ ಯೋಜನೆ ವಿಚಾರವಾಗಿ ಇದೇ ರೀತಿ ಜಗಳ ಮಾಡಿದ್ದೆ. ನಾನು ರಾಜೀನಾಮೆ ಕೊಡುತ್ತೇನೆ ಎಂದಾಗ ಅನಂತಕುಮಾರ್ ಅವರು ಕರೆದು ಬೈದಿದ್ದರು. ಮುಂದೆ 3 ತಿಂಗಳಲ್ಲಿ ವಾಜಪೇಯಿ ನನ್ನನ್ನು ಮಂತ್ರಿ ಮಾಡಿದ್ದರು ಎಂದು ಯತ್ನಾಳ ತಮ್ಮ ಹಳೆಯ ನೆನಪನ್ನು ಬಿಚ್ಚಿಟ್ಟಿದ್ದಾರೆ.

news18
Updated:November 13, 2019, 3:13 PM IST
ಮತ್ತೆ ಮಂತ್ರಿ ಆಗುತ್ತೇನೆ ಎಂದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ
ಬಸನಗೌಡ ಯತ್ನಾಳ
  • News18
  • Last Updated: November 13, 2019, 3:13 PM IST
  • Share this:
ವಿಜಯಪುರ(ನ. 13): ನೆರೆ ಪರಿಹಾರ ವಿಚಾರದಲ್ಲಿ ಕೇಂದ್ರ ಸರ್ಕಾರವನ್ನು ಕುಟುಕಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ತಾನು ಶೀಘ್ರದಲ್ಲೇ ಮಂತ್ರಿಯಾಗುತ್ತೇನೆ ಎಂದು ಭವಿಷ್ಯ ನುಡಿದಿದ್ದಾರೆ. ಹಿಂದೆ ತಾನು ಮಾತನಾಡಿದ್ದಾಗ ಅಂದಿನ ಪ್ರಧಾನಿ ವಾಜಪೇಯಿ ಅವರು ಮೂರೇ ತಿಂಗಳಲ್ಲಿ ನನ್ನನ್ನು ಮಂತ್ರಿ ಮಾಡಿದ್ದರು. ಈಗಲೂ ಹಾಗೇ ಆದರೆ ಆಶ್ಚರ್ಯಪಡಬೇಡಿ ಎಂದು ಯತ್ನಾಳ ಹೇಳಿದ್ದಾರೆ. ಈ ಮೂಲಕ ತನಗೆ ಮಂತ್ರಿ ಸ್ಥಾನ ಸಿಗುತ್ತದೆ ಎಂದು ಪರೋಕ್ಷವಾಗಿ ಆಶಯ ವ್ಯಕ್ತಪಡಿಸಿದ್ದಾರೆ.

ಹಿಂದೆ ನಾನು ಆಲಮಟ್ಟಿ ಯೋಜನೆ ವಿಚಾರವಾಗಿ ಇದೇ ರೀತಿ ಜಗಳ ಮಾಡಿದ್ದೆ. ನಾನು ರಾಜೀನಾಮೆ ಕೊಡುತ್ತೇನೆ ಎಂದಾಗ ಅನಂತಕುಮಾರ್ ಅವರು ಕರೆದು ಬೈದಿದ್ದರು. ಮುಂದೆ 3 ತಿಂಗಳಲ್ಲಿ ವಾಜಪೇಯಿ ನನ್ನನ್ನು ಮಂತ್ರಿ ಮಾಡಿದ್ದರು ಎಂದು ಯತ್ನಾಳ ತಮ್ಮ ಹಳೆಯ ನೆನಪನ್ನು ಬಿಚ್ಚಿಟ್ಟಿದ್ದಾರೆ.

ಇದನ್ನೂ ಓದಿ: ಹದಿನೈದಕ್ಕೆ ಹದಿನೈದೂ ಕ್ಷೇತ್ರವನ್ನು ಗೆಲ್ಲುತ್ತೇವೆ; ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿಶ್ವಾಸ

ಇಲ್ಲಿ ಕಗ್ಗೋಡದಲ್ಲಿ ಮಾತನಾಡಿದ ಅವರು, ತಾನು ನೆರೆ ಪರಿಹಾರದ ಬಗ್ಗೆ ಧ್ವನಿ ಎತ್ತಿದಾಗ ಬಹಳ ಮಂತ್ರಿ 15 ದಿನದಲ್ಲಿ ನನ್ನನ್ನು ಪಕ್ಷದಿಂದ ಹೊರಹಾಕುತ್ತಾರೆ ಎಂದಿದ್ದರು. ಆದರೆ, ಇನ್ನು 15 ದಿನದಲ್ಲಿ ತನಗೆ ಪ್ರಮೋಷನ್ ಸಿಕ್ಕರೆ ಅಚ್ಚರಿ ಇಲ್ಲ ಎಂದು ಹೇಳಿದ್ದಾರೆ.

ಮಂತ್ರಿ ಆಗುವ ಬಗ್ಗೆ ನಾನು ತಲೆ ಕೆಡಿಸಿಕೊಂಡಿಲ್ಲ. ನಮ್ಮ ಜಾತಿ ಕೋಟಾದಲ್ಲಿ ಸಿಸಿ ಪಾಟೀಲ ಅವರು ಮಂತ್ರಿಯಾಗಿದ್ದಾರೆ. ನನಗೆ ಯಾವುದೇ ಜಾತಿ ಇಲ್ಲ. ನನ್ನದು ಒಂದೇ ಜಾತಿ, ಅದು ಹಿಂದೂ ಜಾತಿ. ಈ ಹಿಂದೂ ಜಾತಿಗೆ ಇನ್ನೂ ಕೋಟಾ ಬಂದಿಲ್ಲ. ಕೊನೆಗೆ ಅದೂ ಬರದೇ ಇರಲ್ಲ ಎಂದು ಕೇಂದ್ರದ ಮಾಜಿ ಸಚಿವರೂ ಆಗಿರುವ ಅವರು ಆಶಿಸಿದ್ದಾರೆ.

(ವರದಿ: ಮಹೇಶ ವಿ ಶಟಗಾರ)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published: November 13, 2019, 1:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading