HOME » NEWS » State » BASANAGOUDA PATIL YATNAL SAYS CM NOT TO LISTEN KANNADA ACTIVIST WORDS SESR MVSV

ಬಂದ್​ ಹೇಗೆ ಮಾಡುತ್ತಾರೆ ನೋಡೋಣ: ಕನ್ನಡ ಪರ ನಕಲಿ ಹೋರಾಟಗಾರರಿಗೆ ಸಿಎಂ ಹೆದರಬಾರದು ಎಂದ ಯತ್ನಾಳ್​

ವಾಟಾಳ್​ ನಾಗರಾಜ ಮತ್ತು ಕನ್ನಡ ಪರ ಸಂಘಟನೆಗಳು  ಹೇಗೆ ಬಂದ್ ಮಾಡುತ್ತಾರೋ ನೋಡೋಣ

news18-kannada
Updated:November 20, 2020, 6:46 PM IST
ಬಂದ್​ ಹೇಗೆ ಮಾಡುತ್ತಾರೆ ನೋಡೋಣ: ಕನ್ನಡ ಪರ ನಕಲಿ ಹೋರಾಟಗಾರರಿಗೆ ಸಿಎಂ ಹೆದರಬಾರದು ಎಂದ ಯತ್ನಾಳ್​
ಶಾಸಕ ಬಸನಗೌಡ ಪಾಟೀಲ್ ಯತ್ನಾಳ
  • Share this:
ವಿಜಯಪುರ (ನ. 20): ಕನ್ನಡ ಪರ ನಕಲಿ ಹೋರಾಟಗಾರರು ಮತ್ತು ರೋಲಕಾಲ್ ಹೋರಾಟಗಾರರಿಗೆ ಮುಖ್ಯಮಂತ್ರಿಗಳು ಹೆದರಬಾರದು. ಮರಾಠ ನಿಗಮ ವಿರೋಧಿಸಿ ಕೆಲ ಕನ್ನಡ ಸಂಘಟನೆಯವರು ಡಿ. 5 ರಂದು  ನೀಡಿರುವ ಬಂದ್​ ಜಿಲ್ಲೆಯಲ್ಲಿ  ಹೇಗೆ ನಡೆಯುತ್ತದೆ. ಹೇಗೆ ಅವರು ಬಂದ್​ ಆಚರಿಸುತ್ತಾರೆ ನೋಡೋಣ   ಎಂದು ಬಿಜೆಪಿ ಶಾಸಕ ಬಸನಗೌಡ ರಾ. ಪಾಟೀಲ .ಯತ್ನಾಳ ಸವಾಲು ಹಾಕಿದ್ದಾರೆ. ನಗರದಲ್ಲಿ  ಮಾತನಾಡಿದ ಅವರು, ಮರಾಠಾ ಭಾಷೆ, ಬೆಳಗಾವಿ ವಿಚಾರದಲ್ಲಿ ಶಿವಸೇನಾ, ಶರದ ಪವಾರ, ಆಯೋಗ್ಯ ಅಜೀತ ವವಾರ ವಿರೋಧಿಸುತ್ತೇನೆ.  ಕನ್ನಡಿಗರ ಮತ ಹೋಗುತ್ತೆ ಎಂದು ಸಿಎಂ ಚಿಂತೆ ಮಾಡಬಾರದು.  ನಾವು ಮೊದಲು ಹಿಂದೂಗಳು.  ನಮ್ಮ ರಕ್ಷಣೆ ಮಾಡಿದ ಶಿವಾಜಿ ಮಹಾರಾಜರ ಸಮುದಾಯಕ್ಕೆ ಇನ್ನೂ ಹೆಚ್ಚಿನ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ. ಇದೇ ವೇಳೆ ವಾಟಾಳ್​ ನಾಗರಾಜ ಮತ್ತು ಕನ್ನಡ ಪರ ಸಂಘಟನೆಗಳು  ಹೇಗೆ ಬಂದ್ ಮಾಡುತ್ತಾರೋ ನೋಡೋಣ ಎಂದರು.

ಮುಂದುವರೆದು ಮಾತನಾಡಿದ ಅವರು, ಕನ್ನಡದ ಹೆಸರಿನಲ್ಲಿ ಸುಮ್ಮನೆ ಹೋರಾಟ ಸಲ್ಲದು.  ಕನ್ನಡ ಮತ್ತು ಸಂಸ್ಕೃತಿ ಹೆಸರಿನಲ್ಲಿ  ವಾಟಾಳ್ ನಾಗರಾಜ, ಕನ್ನಡ ಪರ ಸಂಘಟನೆಗಳ ಮುಖಂಡ ಎಷ್ಟು ಅನುದಾನ ಪಡೆದಿದ್ದಾರೆ? ಸರಕಾರದಿಂದ ಪಡೆದ ರೂ. 50 ಲಕ್ಷ ಹಣವನ್ನು ಕನ್ನಡಪರ ಹೋರಾಟಗಾರರು ಎಲ್ಲ ಕನ್ನಡಪರ ಸಂಘಟನೆಗಳಿಗೆ ಹಂಚಿಕೆ ಮಾಡಿದ್ದಾರಾ ಎಂದು ಅವರು ಪ್ರಶ್ನಿಸಿದರು.

ಇವರೆಲ್ಲ ಬೆಂಗಳೂರಿನಲ್ಲಿ ಕುಳಿತು ಹೋಟೇಲಿನಲ್ಲಿ ಕುಳಿತು ಹೋಟೇಲ್ ತಮ್ಮದೆಂದು ಹೇಳುತ್ತಾರೆ.  ವಾಟಾಳ್​​ ನಾಗರಾಜ ಅವರಿಂದ ನಾವೇನು ಕಲಿಯಬೇಕಾಗಿಲ್ಲ.  ಮರಾಠಾ ಸಮುದಾಯಕ್ಕೆ ನೀಡಿರುವ ನಿಗಮಕ್ಕೆ ಬೆಂಬಲವಿದೆ.  ಸಿಎಂ ಏನಾದರೂ ಅಭಿವೃದ್ಧಿ ನಿಗಮ ಹಿಂಪಡೆದರೆ ದೊಡ್ಡ ಅನಾಹುತವಾಗುತ್ತೆ ಎಂದು ಯತ್ನಾಳ ಎಚ್ಚರಿಕೆ ನೀಡಿದರು.

ಇದನ್ನು ಓದಿ: ಕನ್ನಡಿಗರಿಗೆ ದ್ರೋಹ ಮಾಡಿದ್ದೀರಿ, ನಾವು ಸುಮ್ಮನಿರಲ್ಲ; ಸಿಎಂಗೆ ವಾಟಾಳ್ ನಾಗರಾಜ್​ ಎಚ್ಚರಿಕೆ

ರಾಜ್ಯ ಸರಕಾರ ಮರಾಠಿ ಅಭಿವೃದ್ಧಿ ನಿಗಮ ಮಾಡಿಲ್ಲ.  ಮರಾಠಾ ಸಮುದಾಯ ಅಭಿವೃದ್ಧಿ ನಿಗಮ ಸ್ಥಾಪಿಸಿದೆ.  ದೇಶದಲ್ಲಿ ಹಿಂದೂ ಧರ್ಮ ಉಳಿಯಲು ಮತ್ತು ಇಂದು ನಾವೆಲ್ಲ ಹಿಂದೂಗಳಾಗಿ ಉಳಿಯಲು ಛತ್ರಪತಿ ಶಿವಾಜಿ ಮಹಾರಾಜರು ಕಾರಣ.  ಶಿವಾಜಿ ಮಹಾರಾಜರು ಹುಟ್ಟಿರದಿದ್ದರೆ ಭಾರತ ಯಾವತ್ತೊ ಪಾಕಿಸ್ತಾನದ ಭಾಗವಾಗುತ್ತಿತ್ತು ಎಂದು ಕವಿಯೊಬ್ಬರು ಹೇಳಿದ್ದಾರೆ.  ಶಿವಾಜಿ ಮಹಾರಾಜರು ಕನ್ನಡಿಗರೇ.  ಆದಿಲ್ ಶಾಹಿ ಕಾಲದಲ್ಲಿ ಶಿವಾಜಿ ಮಹಾರಾಜರ ತಂದೆ ಶಹಾಜಿ ರಾಜೆ ಬೆಂಗಳೂರಿನ ಸರದಾರರಾಗಿದ್ದರು.  ಬೆಂಗಳೂರನ್ನು ಕಂಟ್ರೋಲ್ ಮಾಡುತ್ತಿದ್ದರು.  ಬೆಂಗಳೂರು ಆದಿಲ್ ಶಾಹಿ ಮನೆತನದ ಕಂಟ್ರೋಲ್ ಲ್ಲಿತ್ತು.  ಮರಾಠಾ ಸುಮದಾಯ ಯಾವಾಗಲೂ ಹಿಂದೂ ಪರವಾಗಿದೆ.  ಧರ್ಮದ ಪರವಾಗಿದೆ.  ದೇಶದ ಪರವಾಗಿ ಹೋರಾಟ ಮಾಡಿದ ಸಮುದಾಯ ಇದಾಗಿದೆ ಎಂದು ಯತ್ನಾಳ ತಿಳಿಸಿದರು.

ಮರಾಠಾ ಸಮುದಾಯಕ್ಕೆ ಸರಕಾರ ಕಾನೂನಾತ್ಮಕವಾಗಿ ಆ ಪ್ರಾಧಿಕಾರಕ್ಕೆ ಏನೆಲ್ಲ ಕೊಡಲು ಸಾಧ್ಯವೋ ಅದನ್ನೆಲ್ಲ ಕೊಡಬೇಕು.  ಆದರೆ, ಮರಾಠಾ ಸಮುದಾಯದ ಕೊಡುಗೆ ದೊಡ್ಡದಿದೆ.  ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮರಾಠಾ ಸಮುದಾಯವರಿದ್ದಾರೆ.  ಮೈಸೂರು ಭಾಗದಲ್ಲಿ, ಬೀದರ ಜಿಲ್ಲೆಯಲ್ಲಿ, ದಾವಣಗೆರೆ ಜಿಲ್ಲೆ, ವಿಜಯಪುರ ಜಿಲ್ಲೆಯೂ ಮರಾಠಾ ಸಮುದಾಯದವರಿದ್ದಾರೆ.  ಆ ನಿಗಮಕ್ಕೆ ಸಿಎೞ ಇನ್ನೂ ಹೆಚ್ಚಿನ ಅನುದಾನ ನೀಡಬೇಕು ಎಂದು ಯತ್ನಾಳ ಆಗ್ರಹಿಸಿದರು.
Published by: Seema R
First published: November 20, 2020, 6:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories