HOME » NEWS » State » BASANAGOUDA PATIL YATNAL SAYS AMBEDKAR SHOULD HAVE BEEN PRIME MINISTER OF INDIA SESR SRHB

ಮಹಾಭಾರತ ಬರೆದದ್ದು ವಾಲ್ಮೀಕಿ ಎಂದು ತಪ್ಪಾಗಿ ಹೇಳಿ ಪೇಚಿಗೆ ಸಿಕ್ಕ ಶಾಸಕ ಯತ್ನಾಳ್​​

ಡಾ. ಅಂಬೇಡ್ಕರ್ ಬರೆದ ಸಂವಿಧಾನದ ಅಡಿಯಲ್ಲೇ ಪ್ರಧಾನಿ ನರೇಂದ್ರ ಮೋದಿ ಸಿಎಎ ಜಾರಿಗೆ ತಂದಿದ್ದಾರೆ‌. ಆದರೆ, ಅದರ ವಿರುದ್ದ ವ್ಯವಸ್ಥಿತ ಪಿತೂರಿ ಮಾಡಿ ಸಂವಿಧಾನಕ್ಕೆ ಅಪಚಾರ ಮಾಡಲಾಗುತ್ತಿದೆ

news18-kannada
Updated:March 6, 2020, 4:17 PM IST
ಮಹಾಭಾರತ ಬರೆದದ್ದು ವಾಲ್ಮೀಕಿ ಎಂದು ತಪ್ಪಾಗಿ ಹೇಳಿ ಪೇಚಿಗೆ ಸಿಕ್ಕ ಶಾಸಕ ಯತ್ನಾಳ್​​
ಬಸನಗೌಡ ಯತ್ನಾಳ
  • Share this:
ಬೆಂಗಳೂರು (ಮಾ.06): ಸದಾ ತಮ್ಮ ವಿವಾದಿತ ಹೇಳಿಕೆ ಮೂಲಕ ಯಡವಟ್ಟು ಮಾಡಿಕೊಳ್ಳುವ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್​ ವಿಧಾನಸಭೆಯಲ್ಲಿ ಮಹಾಭಾರತ ಬರೆದದ್ದು ಕೆಳಜಾತಿಯ ವಾಲ್ಮೀಕಿ ಎನ್ನುವ ಮುಜುಗರಕ್ಕೊಳಗಾದ ಘಟನೆ ನಡೆಯಿತು. 

ಸದನದಲ್ಲಿ ಸಂವಿಧಾನದ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ಹಿಂದೂಗಳಿಗೆ ವೇದಗಳು ಬೇಕಾಗಿದ್ದವು. ಆಗ ವ್ಯಾಸರನ್ನು ಕರೆದು ವೇದ ರಚಿಸಲಾಯಿತು. ಇದಾದ ಬಳಿಕ ಮಹಾ ಕಾವ್ಯ ರಚನೆಗಾಗಿ ಕೆಳಜಾತಿಯವರಾದ  ವಾಲ್ಮೀಕಿಯನ್ನು ಕರೆದರು ಎಂದು ತಪ್ಪಾಗಿ ಹೇಳಿದರು. ಸ್ವಲ್ಪ ಹೊತ್ತಿನಲ್ಲಿಯೇ  ತಪ್ಪಾಗಿ ಉಲ್ಲೇಖ ಮಾಡಿರುವುದಾಗಿ ತಿಳಿದು ಸರಿಪಡಿಸಿಕೊಂಡ ಅವರು, ಮಹಾಭಾರತ ಬರೆದಿದ್ದು ವ್ಯಾಸರು ಎಂದರು.

ಡಾ. ಅಂಬೇಡ್ಕರ್ ಬರೆದ ಸಂವಿಧಾನದ ಅಡಿಯಲ್ಲೇ ಪ್ರಧಾನಿ ನರೇಂದ್ರ ಮೋದಿ ಸಿಎಎ ಜಾರಿಗೆ ತಂದಿದ್ದಾರೆ‌. ಆದರೆ, ಅದರ ವಿರುದ್ದ ವ್ಯವಸ್ಥಿತ ಪಿತೂರಿ ಮಾಡಿ ಸಂವಿಧಾನಕ್ಕೆ ಅಪಚಾರ ಮಾಡಲಾಗುತ್ತಿದೆ ಎಂದು ಕೂಡ ದೂರಿದರು.

ದೇಶದಲ್ಲಿ ಇಬ್ಬರು ಗಾಂಧಿಗಳಿಗೆ ಮಾತ್ರ ಮಹತ್ವ ನೀಡಲಾಗಿದೆ. ಒಂದು ಗಾಂಧೀಜಿ, ಇನ್ನೊಂದು ಈಗಿನ ಗಾಂಧಿ ಪರಿವಾರ. ಉಳಿದೆಲ್ಲಾ ಹೋರಾಟಗಾರರ ಸ್ಮರಣೆಯೇ ಇಲ್ಲ ಎಂದು ಪರೋಕ್ಷವಾಗಿ ರಾಹುಲ್​ ಗಾಂಧಿ ಕುಟುಂಬದ ವಿರುದ್ಧ ಹರಿಹಾಯ್ದರು

ಅಂಬೇಡ್ಕರ್​ ದೇಶದ ಪ್ರಧಾನಿಯಾಗಬೇಕಿತ್ತು. ಆದರೆ, ಬೌದ್ಧ ಧರ್ಮ ಸ್ವೀಕರಿಸಿದ್ದ ಹಿನ್ನೆಲೆ ಅವರಿಗೆ ಈ ಅವಕಾಶ ಸಿಗಲಿಲ್ಲ. ಇದರಿಂದಾಗಿ ಹಿಂದೂಗಳು ನೆಮ್ಮದಿಯಿಂದ ಇರುವಂತಾಯಿತು ಎಂದು ಅಭಿಪ್ರಾಯಪಟ್ಟರು.

ಇದನ್ನು ಓದಿ: ಸೆಲ್ಫಿ ವಿತ್​ ಪಿಡಿಒ; ಸಾರ್ವಜನಿಕರ ಅಹವಾಲು ಸ್ವೀಕರಿಸಲು ಸಿಇಒ ಮಾಡಿದ ಈ ಐಡಿಯಾಗೆ ಜನರಿಂದ ಶಹಬ್ಬಾಸ್​ಗಿರಿ

ಕೆಲವರು ಸ್ವಾತಂತ್ರ್ಯ ಹೋರಾಟಗಾರ ವೀರ ಸಾರ್ವಕರ್ ಬಗ್ಗೆ ಏನೇನೋ ಮಾತನಾಡುತ್ತಾರೆ. ಎರಡೆರಡು ಬಾರಿ ಕಾಲಾಪಾನಿ ಶಿಕ್ಷೆ ಅನುಭವಿಸಿದವರು ಸಾವರ್ಕರ್. ಆದರೆ ಅವರು ಹಿಂದೂ ಧರ್ಮದ ಅಭಿಮಾನಿಗಳಾಗಿದ್ದರು. ಹೀಗಾಗಿ, ಸಾವರ್ಕರ್ ಬಗ್ಗೆ ಅಂಬೇಡ್ಕರ್ ಅಸಮಾಧಾನಕ್ಕೆ ಹೊಂದಿದ್ದರು. ಆದರೆ,  ಸಾವರ್ಕರ್ ಅವರ ಹಲವು ವಿಚಾರಗಳನ್ನು ಅಂಬೇಡ್ಕರ್​​ ಒಪ್ಪುತ್ತಿದ್ದರು ಎಂದು ಮಾಜಿ ಕೇಂದ್ರ ಸಚಿವರೂ ಆದ ಯತ್ನಾಳ ಹೇಳಿದರು.
First published: March 6, 2020, 4:17 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories