HOME » NEWS » State » BASANAGOUDA PATIL YATNAL SAYS AFTER FOUR MONTHS THERE IS BIG CHANGES IN POLITICS SESR

ಮುಂದಿನ ನಾಲ್ಕು ತಿಂಗಳಲ್ಲಿ ರಾಜ್ಯ ರಾಜಕೀಯದಲ್ಲಿ ಭಾರೀ ಬದಲಾವಣೆ; ಯತ್ನಾಳ್ ಭವಿಷ್ಯ

ಸಚಿವ ಸ್ಥಾನಕ್ಕಾಗಿ ಈಗಾಗಲೇ ಪಕ್ಷದಲ್ಲಿ ಹಿರಿಯ ನಾಯಕರು ಅಸಮಾಧಾನ ತೋರಿದ್ದಾರೆ. ಸಿಎಂ ಸಂಪುಟ ಪುನಾರಚನೆ ಮಾಡಬೇಕು ಎಂದು‌ ಗಂಭೀರ ಚರ್ಚೆಯಾಗುತ್ತಿದೆ. ರಾಜಕೀಯದಲ್ಲಿ  ಸಚಿವರ ಕುಟುಂಬ ಹಸ್ತಕ್ಷೇಪ ಮಾಡುತ್ತಿದೆ ಎಂಬ ಬಗ್ಗೆಯೂ ಹೈಕಮಾಂಡ್​ಗೂ ಮಾಹಿತಿಇದೆ 

news18-kannada
Updated:February 14, 2020, 6:37 PM IST
ಮುಂದಿನ ನಾಲ್ಕು ತಿಂಗಳಲ್ಲಿ ರಾಜ್ಯ ರಾಜಕೀಯದಲ್ಲಿ ಭಾರೀ ಬದಲಾವಣೆ; ಯತ್ನಾಳ್ ಭವಿಷ್ಯ
ಬಸವನಗೌಡ ಪಾಟೀಲ ಯತ್ನಾಳ
  • Share this:
ವಿಜಯಪುರ (ಫೆ.14): ರಾಜ್ಯ ರಾಜಕೀಯಲ್ಲಿ ಭಾರೀ ಬದಲಾವಣೆಯಾಗಲಿದ್ದು, ಮುಂದಿನ ನಾಲ್ಕು ತಿಂಗಳಲ್ಲಿ ಈ ಬದಲಾವಣೆ ಕಾಣಲಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್  ಭವಿಷ್ಯ ನುಡಿದಿದ್ದಾರೆ. 

ನಗರದಲ್ಲಿ ಮಾತನಾಡಿದ ಅವರು, ಬಜೆಟ್ ಅಧಿವೇಶನ ಬಳಿಕ ಸಂಪುಟ ಪುನಾರಚನೆಯಾಗಲಿದ್ದು, ಸಚಿವ ಸಂಪುಟ ಬದಲಾವಣೆ ಮಾಡಲೇಕಾಗುತ್ತದೆ. ಈ ಬಗ್ಗೆ ಹೈಕಮಾಂಡ್​ ಒಳ್ಳೆಯ ನಿರ್ಧಾರ ಕೈಗೊಳ್ಳಬಹುದು ಎಂಬ ನಿರೀಕ್ಷೆ ಇದೆ ಎಂದಿದ್ದಾರೆ.

ಸಚಿವ ಸ್ಥಾನಕ್ಕಾಗಿ ಈಗಾಗಲೇ ಪಕ್ಷದಲ್ಲಿ ಹಿರಿಯ ನಾಯಕರು ಅಸಮಾಧಾನ ತೋರಿದ್ದಾರೆ. ಸಿಎಂ ಸಂಪುಟ ಪುನಾರಚನೆ ಮಾಡಬೇಕು ಎಂದು‌ ಗಂಭೀರ ಚರ್ಚೆಯಾಗುತ್ತಿದೆ. ರಾಜಕೀಯದಲ್ಲಿ  ಸಚಿವರ ಕುಟುಂಬ ಹಸ್ತಕ್ಷೇಪ ಮಾಡುತ್ತಿದೆ ಎಂಬ ಬಗ್ಗೆಯೂ ಹೈಕಮಾಂಡ್​ಗೂ ಮಾಹಿತಿಇದೆ  ಎಂದರು. 

ಸಚಿವರ ಮೌಲ್ಯಮಾಪನ ನಡೆಸಬೇಕೆಂದು ಸಿಎಂ ಅವರಿಗೆ ಮನವಿ ಮಾಡಿದ್ದೇನೆ. ಕೆಲ ಸಚಿವರು ವಿಧಾನಸೌಧ ಹಾಗೂ ವಿಕಾಸ ಸೌಧದತ್ತ ಸುಳಿಯಲ್ಲಾ. ಶಾಸಕರಾದ ನಾವು ಸಚಿವರನ್ನು ಹುಡುಕಾಡಬೇಕಾಗಿದೆ. ಅವರ ಪಿಎಗಳೂ ಸಹ ಸಿಗುತ್ತಿಲ್ಲಾ ಎಂದು ತಮ್ಮದೇ ಸರ್ಕಾರದ ಸಚಿವರ ಕಾರ್ಯ ವೈಖರಿ ಬಗ್ಗೆ ಸರ್ಕಾರ ಗಮನಹರಿಸಬೇಕಿದೆ.  ಕಳಪೆ ಸಾಧನೆ ಮಾಡಿದ ಸಚಿವರನ್ನು ಬಿಟ್ಟು ಹೊಸಬರಿಗೆ ಅವಕಾಶ ನೀಡಬೇಕು. ಸಚಿವ ಸ್ಥಾನ ಕಳೆದುಕೊಂಡರೆ ಅವರೇನು ಬಂಡಾಯ ಏಳಲ್ಲ. ಬಂಡಾಯ ಎದ್ದು ಚುನಾವಣೆಗೆ ಹೋದರೂ ಅವರು ಮರು ಆಯ್ಕೆಯಾಗಲ್ಲ. ಅಸಮರ್ಥ ಸಚಿವರನ್ನು ಮನೆಗೆ ಕಳುಹಿಸಬೇಕು ಎಂದರು.

ಇದನ್ನು ಓದಿ: ಅನಾರೋಗ್ಯಕ್ಕೆ ಒಳಗಾದ ನಾಡೋಜ ಪಾಟೀಲ್​ ಪುಟ್ಟಪ್ಪ ; ಕಿಮ್ಸ್​ಗೆ ಆಸ್ಪತ್ರೆಗೆ ದಾಖಲು

ಈ ರೀತಿ ಮೌಲ್ಯ ಮಾಪನ ಕಾರ್ಯ ನಡೆಯದಿದ್ದರೆ ಮುಂದಿನ ಒಚುನಾವಣೆ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಈ ಬಗ್ಗೆ ಹೈ ಕಮಾಂಡ್​ ಕೂಡ ಗಮನ ಹರಿಸುತ್ತಿದ್ದು, ಸರ್ಕಾರ ಚಿಂತನೆ ನಡೆಸಬೇಕು. ಸರ್ಕಾರದಲ್ಲಿ  ಸುಧಾರಣೆಯಾಗದಿದ್ದರೆ ಶಾಸಕರು ಯಾರ ಬಳಿ ಹೋಗಿ ನಿಲ್ಲಬೇಕು ಎಂಬ ಬಗ್ಗೆ  ಹೈಕಮಾಂಡ್ ಉತ್ತಮ ನಿರ್ಧಾರ ಕೈಗೊಳ್ಳಬಹುದು ಎಂದರು.
First published: February 14, 2020, 6:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories