• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Basanagouda Patil Yatnal: ನಾನು ಸಿಎಂ ಆದರೆ ಒಬ್ಬರನ್ನು ಜೈಲಿಗೆ ಕಳಿಸ್ತೇನೆ ಎಂದ ಯತ್ನಾಳ್! ಹಾಗಿದ್ರೆ ಆ ವ್ಯಕ್ತಿ ಯಾರು?

Basanagouda Patil Yatnal: ನಾನು ಸಿಎಂ ಆದರೆ ಒಬ್ಬರನ್ನು ಜೈಲಿಗೆ ಕಳಿಸ್ತೇನೆ ಎಂದ ಯತ್ನಾಳ್! ಹಾಗಿದ್ರೆ ಆ ವ್ಯಕ್ತಿ ಯಾರು?

ಶಾಸಕ ಬಸವಗೌಡ ಪಾಟೀಲ್ ಯತ್ನಾಳ್

ಶಾಸಕ ಬಸವಗೌಡ ಪಾಟೀಲ್ ಯತ್ನಾಳ್

"ನಾನು ಮತ್ತೊಬ್ಬ ಯೋಗಿ ಬಾಬಾ ಆಗ್ತಾನೆ ಅನ್ನೋ ಭಯ ಅವರಿಗೆ!" ಅನ್ನೋ ಮೂಲಕ ಹೆಸರು ಪ್ರಸ್ತಾಪಿಸಿದೇ, ಸ್ವಪಕ್ಷದ ಕೆಲ ನಾಯಕರ ಬಗ್ಗೆ ಅಸಮಾಧಾನ ಹೊರ ಹಾಕಿದ್ರು. "ನಾನು ಅಪ್ಪಿತಪ್ಪಿ ಮುಖ್ಯಮಂತ್ರಿ ಆದ್ರೆ ಒಬ್ರನ್ನ ಜೈಲಿಗೆ, ಒಬ್ಬರನ್ನ ಕಾಡಿಗೆ ಕಳಿಸ್ತೇನೆ" ಅಂತಾ ಯತ್ನಾಳ್ ಹೇಳಿದ್ರು.

ಮುಂದೆ ಓದಿ ...
  • Share this:

ಗದಗ: ನಿನ್ನೆ ಗದಗದಲ್ಲಿ (Gadag) ನಡೆದ ಹಿಂದೂ ಮಹಾ ಗಣಪತಿ ಧರ್ಮ ಸಭೆಯಲ್ಲಿ‌ (Hindu Mahaganapati Dharma Sabhe) ಭಾಗವಹಿಸಿ ಮಾತ್ನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal), ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಕಾರ್ಯ ವೈಖರಿ ಬಗ್ಗೆ ಟೀಕಿಸಿದ್ರು. ಅಲ್ದೆ, ನಾನು ಸಿಎಂ ಆದ್ರೆ  ಬದಲಾವಣೆ ಆಗುತ್ತೆ ಅನ್ನೋ ಮೂಲಕ ಸಿಎಂ ಆಗುವ ಆಸೆಯನ್ನ ಮತ್ತೊಮ್ಮೆ ಬಹಿರಂಗ ಪಡೆಸಿದ್ರು.‌ ನಾನು ಮುಖ್ಯಮಂತ್ರಿ ಆಗಿದ್ರೆ.. ಮೊದಲು ಹೊಡಿರಿ ಅಂತಿದ್ದೆ, ಹೊಡದವರಿಗೆ ಪ್ರಮೋಷನ್ ಕೊಡ್ತಿದ್ದೆ, ಉತ್ತರ ಪ್ರದೇಶ ಮಾದರಿಯಲ್ಲಿ (Uttar Pradesh Model) ಬುಲ್ಡೊಜರ್ (Bulldozer) ಪ್ರಯೋಗಿಸಿ ಅಂದ್ರೆ ನಮ್ಮಲ್ಲಿ ಸಾಧ್ಯವಿಲ್ಲ ಅಂತಾರೆ.. ಸಾಧ್ಯವಿಲ್ಲ ಅಂದ್ರೆ ಯಾತಕ್ಕೆ ಇದ್ದೀರಿ.. ಮನೆಗೆ ಹೋಗ್ರಿ ಅಂತಾ ಚಾಟಿ ಬೀಸಿದ್ರು.


“ಎನ್‌ಕೌಂಟರ್ ಸ್ಪೆಷಲಿಸ್ಟ್‌ಗಳನ್ನ ಇಡ್ತಿದ್ದೆ”


ಹಾಡಹಗಲೇ ಹಿಂದೂಗಳನ್ನ ಹೊಡೀತಾರೆ.. ಹುಬ್ಬಳ್ಳಿಯಲ್ಲಿ ಪೊಲೀಸ್ ಸ್ಟೇಷನ್ ಗೆ ಬೆಂಕಿ ಹಚ್ಚಿದ್ರು.. ಪೊಲೀಸರ ಕೈಯಲ್ಲಿ ಬಂದೂಕು ಕೊಟ್ಟಿದ್ದೀರಿ.. ಆದ್ರೆ, ಹೊಡೀಬೇಡ ಅಂತಾರೆ.. ನಾನು ಮುಖ್ಯಮಂತ್ರಿ ಆಗಿದ್ರೆ.. ಮೊದಲು ಹೊಡಿರಿ ಅಂತಿದ್ದೆ, ಹೊಡದವರಿಗೆ ಪ್ರಮೋಷನ್ ಕೊಡ್ತಿದ್ದೆ, ಪಿಸಿ ಇದ್ದವನನ್ನ ಎಎಸ್‌ಐ, ಪಿಎಸ್‌ಐ ಇದ್ದವನನ್ನ ಸಿಪಿಐ ಮಾಡ್ತಿದ್ದೆ,. ಅಲ್ದೆ, ಕರ್ನಾಟಕದ ತುಂಬ ಎನ್ಕೌಂಟರ್ ಸ್ಪೆಷಲಿಸ್ಟ್ ಗಳನ್ನ ಇಡುತ್ತಿದ್ದೆ ಎಂದ್ರು.
“ನಾನು ಮುಖ್ಯಮಂತ್ರಿ ಆದ್ರೆ ಒಬ್ರನ್ನ ಜೈಲಿಗೆ ಕಳಸ್ತೇನೆ”


ನಾನು ಮತ್ತೊಬ್ಬ ಯೋಗಿ ಬಾಬಾ ಆಗ್ತಾನೆ ಅನ್ನೋ ಭಯ ಅವರಿಗೆ ಅನ್ನೋ ಮೂಲಕ ಹೆಸರು ಪ್ರಸ್ತಾಪಿಸಿದೇ, ಸ್ವಪಕ್ಷದ ಕೆಲ ನಾಯಕರ ಬಗ್ಗೆ ಅಸಮಾಧಾನ ಹೊರ ಹಾಕಿದ್ರು. ನಾನು ಅಪ್ಪಿತಪ್ಪಿ ಮುಖ್ಯಮಂತ್ರಿ ಆದ್ರೆ ಒಬ್ರನ್ನ ಜೈಲಿಗೆ, ಒಬ್ಬರನ್ನ ಕಾಡಿಗೆ ಕಳಿಸ್ತೇನೆ ಅಂತಾ ಹೇಳಿದ್ರು.. ಮೊನ್ನೆ ಮಹಾರಾಷ್ಟ್ರದಲ್ಲಿ ಪೊಲೀಸರು ಡಿಜೆ ಎದ್ರು ಕುಣಿದಿದಾರೆ.. ಮುಂದೆ ನಾನು ಮುಖ್ಯಮಂತ್ರಿಯಾದ್ರೆ ಎಲ್ಲರೂ ಕುಣಿಯೋಣ ಅಂತಾ ಹೇಳಿ ಮುಖ್ಯಮಂತ್ರಿ ಆಗುವ ಆಸೆಯನ್ನ ಮತ್ತೊಮ್ಮೆ ಹೇಳಿಕೊಂಡ್ರು.‌


ಇದನ್ನೂ ಓದಿ: Karnataka Assembly Elections: ಪದ್ಮನಾಭನಗರದಲ್ಲಿ ಮತ್ತೆ ಕಮಲ ಅರಳುವುದೇ? ಸಾಮ್ರಾಟ್ ಅಶೋಕನ ವಿರುದ್ಧ ಕೈ-ದಳ ಕಹಳೆ!


“ಸಾವರ್ಕರ್ ಚಪ್ಪಲಿ ಧೂಳಿಗೂ ಸಮಾನರಲ್ಲದವರಿಂದ ಟೀಕೆ”


ಸ್ವಾತಂತ್ರ್ಯ ಪೂರ್ವದಲ್ಲಿ ಹಿಂದೂಗಳು ಒಗ್ಗಟ್ಟಾಗಲು ಗಣೇಶ ಉತ್ಸವ ಮಾಡ್ಲಾಗ್ತಿತ್ತು.. ಭಾರತಾದ್ಯಂತ ಗಣೇಶ ಉತ್ಸವ ಆಚರಣೆ ವಿಸ್ತರಿಸಿದ್ದು ವೀರ ಸಾವರ್ಕರ್.. ಆದ್ರೆ, ಸಾವರ್ಕರ್ ಚಪ್ಪಲಿಯ ಧೂಳಿನ ಸಮಾನ ಅಲ್ಲದವರು ಇವತ್ತು ಟೀಕೆ ಮಾಡ್ತಿದ್ದಾರೆ.. ಕೇವಲ ಮಹಾತ್ಮಾ ಗಾಂಧಿಯವರಿಂದಲೇ ಸ್ವಾತಂತ್ರ್ಯ ಸಿಕ್ಕಿಲ್ಲ.. ಆಜಾದ್, ಭಗತ್ ಸಿಂಗ್, ರಾಜಗುರು ಎಲ್ಲರ ಪರಿಶ್ರಮದಿಂದ ಸ್ವಾತಂತ್ರ್ಯ ಸಿಕ್ಕಿದೆ..  ಯಾರೋ ಉಪವಾಸ ಕೂತಿದ್ದಕ್ಕೆ ಸ್ವಾತಂತ್ರ್ಯ ಸಿಕ್ಕಿದೆ ಅಂತಾ ಬರೆದರು ಅಂದ್ರು.. ಗಾಂಧಿ, ನೆಹರು ಅವರಿಗೆ ಜೈಲು ಅಂದ್ರೆ ಆರಾಮವಾಗಿರುತ್ತಿತ್ತು. ಸಾವರ್ಕರ್ ಅವರಿಗೆ ಕಠಿಣ ಶಿಕ್ಷೆ ಇತ್ತು.. ಇವತ್ತು ಅವರು ಕ್ಷಮೆ ಕೇಳಿದ್ರು ಅಂತಾರೆ ಅಂತ ಆಕ್ರೋಶ ಹೊರಹಾಕಿದ್ರು.


“ಪಾಕಿಸ್ತಾನದಲ್ಲೂ ಗಣೇಶನ ಕೂರಿಸ್ತೇವೆ”


ಕಳೆದ ಎರಡು ವರ್ಷದಿಂದ ಮೂರು ದಿನ ಗಣೇಶ ಕೂರಿಸುವ ನಿರ್ಭಂಧವನ್ನ ಹೇರಿತ್ತು. ಮೂರು ದಿನ ಕೂರಿಸಬೇಕು.. ಐದೇ ಜನ ಇರಬೇಕು ಅಂತಾ ನಿಯಮ ಇತ್ತು.. ನಾನು ಬೊಮ್ಮಾಯಿಯವರಿಗೆ ಈ ಬಾರಿ ಹೇಳಿದೆ.. 21 ದಿನ ಕೂರಸ್ತೇನಿ ಅಂದೆ.. ನನ್ನ ತಲೆಯಲ್ಲಿ ಬಂದ್ರೆ ಒಂದ್ ವರ್ಷನೂ ಕೂರಿಸ್ತೇನೆ, ಡಿಜೆ ಹಚ್ತೇನೆ ಅಂದೆ.. ಕರ್ನಾಟಕ, ಭಾರತದಲ್ಲಿದೆಯೋ, ಪಾಕಿಸ್ತಾನದಲ್ಲಿದೆಯೊ..? ಇನ್ನೊಂದು ಐದು ವರ್ಷ ತಡೀರಿ.. ಪಾಕಿಸ್ತಾನದಲ್ಲೂ ಗಣಪತಿ ಕೂರಸ್ತೇವೆ ಅಂತ ಹೇಳಿದ್ರು..


“ಹಂತಕರಿಗೆ ಗುಂಡು ಹಾಕಬೇಕಿತ್ತು”


ಮೊದಲ ಮಸೀದಿ ಮೇಲಿನ ಸ್ಪೀಕರ್ ತೆರವು ಗೊಳಿಸಿ.. ಆಮೇಲೆ ಡಿಜೆ ಬಂದ್ ಮಾಡ್ತೇವೆ.. ಒಂದ್ ವೇಳೆ ಗಣಪತಿ ಇಟ್ಟರೆ ಏನ್ ಮಾಡ್ತಿರಾ.. ಜೈಲಿಗೆ ಹಾಕ್ತೀರಾ.. ಲಾಠಿ ಚಾರ್ಜ್ ಮಾಡ್ತಿರಾ.. ಗುಂಡು ಹಾಕ್ತೀರಾ.. ಹರ್ಷ ಕೊಲೆ ಮಾಡಿದವರಿಗೆ ಗುಂಡು ಹಾಕಬೇಕಿತ್ತು.. ಪ್ರವೀಣ್ ಹತ್ಯೆ ಮಾಡಿದವರಿಗೆ ಹಾಕ್ಬೇಕಿತ್ತು.. ಅದು ಬಿಟ್ಟು ಹಿಂದೂಗಳು ಸಂಭಾವಿತರು ಅಂತಾ ಡಿಜೆ ಹಚ್ಚಬೇಡಿ ಅಂತಿರಾ..‌ ಇದೇ ರೂಟ್ ಗೆ ಹೋಗು ಅನ್ನೊ ನಿಯಮ ಹಾಕ್ತೀರಾ.. ನಾನೇನಾದ್ರೂ ಇದ್ರೆ ಬೇಕಾದ್ ರೂಟ್ ಗೆ ಹೋಗಿ ಅಡ್ಡಾಡಿ ಬನ್ನಿ ಅಂತಿದ್ದೆ.. ಆ ಕಾಲ ಬರುತ್ತೆ ಅನ್ನೋ ಮೂಲಕ ಮುಖ್ಯಮಂತ್ರಿ ಆಗುವ ಬಯಕೆಯನ್ನ ಯತ್ನಾಳ್ ಬಿಚ್ಚಿಟ್ಟರು..


ಇದನ್ನೂ ಓದಿ: Bellary VIMS Case: ಸಾವನ್ನಪ್ಪಿದ್ದು ಇಬ್ಬರು, ಮತ್ತೊಬ್ಬರು ವೆಂಟಿಲೇಟರ್​ನಲ್ಲಿ ಇರಲಿಲ್ಲ-ಸುಧಾಕರ್​


“ನಾನು ನಂಬರ್ ಒನ್ ಆಗ್ತೀನಿ ಅಂತ ತಡೆಯುತ್ತಿದ್ದಾರೆ”


ನಮ್ಮವರು ನನ್ನ ಹೊರಗಡೆ ಬಿಡುತ್ತಿಲ್ಲ.. ಎಲ್ಲ ಅವೇ ಮಾರಿಗಳನ್ನ ತೆಗೆದುಕೊಂಡು ಅಡ್ಡಾಡುತ್ತಿದ್ದಾರೆ. ಎರಡನೇ ಹಂತದ ನಾಯಕರು. ಒಬ್ಬರಿಗೂ ಚಪ್ಪಾಳೆ ಹೊಡೆಯುವವರಿಲ್ಲ. ಯತ್ನಾಳನನ್ನ ಮುಂದೆ ಬಿಟ್ರೆ ಮುಂದೆ ನಂಬರ್ 1 ಆಗ್ತಾನೆ.. ಬೇಡ ಅಂತಾರೆ.. ಅದ್ಕೆ ಸಂಚಾರ ಬಿಟ್ಟಿದಿನಿ.. ಗಣಪತಿಗಾಗಿ ಅಡ್ಡಾಡುತ್ತಿದ್ದೇನೆ.. ಇವನನ್ನ ಹೊರಗೆ ಹಾಕಲಿಕ್ಕೆ ಆಗ್ತಿಲ್ಲ. ಇಟ್ಕೊಳೋದಕ್ಕೂ ಆಗ್ತಿಲ್ಲ ಅಂತಾ ಅಂತಿದಾರೆ.. ನಾನು, ಹಿಂದೂ ಪರವಾಗಿ ಮಾತ್ನಾಡುತ್ತಿದ್ದೇನೆ.. ಸಶಕ್ತ ಪ್ರಧಾನಿಯ ಕೈಯಲ್ಲಿ ನಮ್ಮ ದೇಶ ಇದೆ.. ಅಮೇರಿಕಾದ ಅಧ್ಯಕ್ಷರೂ ಒಂದು ಮೆಟ್ಟಿಲು ಇಳಿದು ಪ್ರಧಾನಿಗೆ ಗೌರವ ಕೊಡ್ತಾರೆ.. ಹಿಂದೆ 'ಮೌನ ಸಿಂಗ್' ಪ್ರಧಾನಿಯಾಗಿದ್ದಾಗ ಗೌರವ ಸಿಗುತ್ತಿರಲಿಲ್ಲ.. ಈಗ ಅಮೇರಿಕಾ ಅಧ್ಯಕ್ಷರೇ ಓಡಿ ಬರ್ತಾರೆ.. ಅದು ನಮ್ಮ ತಾಕತ್ತು ಎಂದ್ರು.

top videos
    First published: