ಕಾಂಗ್ರೆಸ್​ನ ಮಹಾನಾಯಕ ಹಾಗೂ ಬಿಜೆಪಿ ಯುವರಾಜರದ್ದು ಸಿಡಿ ಮಾಡುವ ಎರಡು ಫ್ಯಾಕ್ಟರಿಗಳಿವೆ: ಯತ್ನಾಳ್​

ಕಾಂಗ್ರೆಸ್ ನ ಮಹಾನಾಯಕ ಬಿಜೆಪಿಯ ಯುವರಾಜ ಕೆಲವೊಂದು ಹೆಣ್ಣು ಮಕ್ಕಳನ್ನ ಬಿಟ್ಟು ಬ್ಲ್ಯಾಕ್ ಮೇಲ್ ಮಾಡಿ, ಸಿಡಿ ತೆಗೆದುಕೊಳ್ಳುತ್ತಾರೆ. 

ಬಸನಗಗೌಡ ಪಾಟೀಲ್ ಯತ್ನಾಳ

ಬಸನಗಗೌಡ ಪಾಟೀಲ್ ಯತ್ನಾಳ

 • Share this:
  ಹಾವೇರಿ (ಮಾ. 27):  ಕಾಂಗ್ರೆಸ್​ನ ಮಹಾನಾಯಕ ಮತ್ತು ಬಿಜೆಪಿ ಯುವರಾಜರದ್ದು ಸಿಡಿ ಉತ್ಪನ್ನ ಮಾಡುವ ಎರಡು ಫ್ಯಾಕ್ಟರಿಗಳಿವೆ.  ಇವತ್ತು ಹೆಸರು ಹೊರ ಬಂದಿರುವ ಕಾಂಗ್ರೆಸ್ ನಾಯಕ ಇಂಥಾ ಸಿಡಿಗಳನ್ನ ಖರೀದಿ ಮಾಡುತ್ತಾರೆ ಎಂದು ಶಾಸಕ ಬಸವನಗೌಡ ಪಾಟೀಲ್ ಯತ್ನಾಳ ಹೊಸ ಬಾಂಬ್ ಸಿಡಿಸಿದ್ದಾರೆ.  ಜಿಲ್ಲೆಯ ರಾಣೇಬೆನ್ನೂರಿನಲ್ಲಿ ಮಾತನಾಡಿದ ಅವರು , ಕಾಂಗ್ರೆಸ್ ನ ಮಹಾನಾಯಕ ಬಿಜೆಪಿಯ ಯುವರಾಜ ಕೆಲವೊಂದು ಹೆಣ್ಣು ಮಕ್ಕಳನ್ನ ಬಿಟ್ಟು ಬ್ಲ್ಯಾಕ್ ಮೇಲ್ ಮಾಡಿ, ಸಿಡಿ ತೆಗೆದುಕೊಳ್ಳುತ್ತಾರೆ.  ಒಂದು ವೇಳೆ ಸಹಕರಿಸದಿದ್ದರೆ, ತೊಂದರೆ ಕೊಟ್ಟರೆ ಸಿಡಿ ಬಿಡುತ್ತೇನೆ ಎಂದು  ಭಯಪಡಿಸ್ತಾರೆ. ಎಷ್ಟೋ ಜನ ಶಾಸಕರು ಈ ಭಯದ ವಾತಾವರಣದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಲ್ಲಿದ್ದಾರೆ‌. ನಿನ್ನೆ ಸಿಡಿ ಯುವತಿ ಹೆಸರು ಹೇಳಿದಳಲ್ಲ ಅವರ ಡ್ರೈವರ್ ನೆ ಅವರ ಜೊತೆ ಅಡ್ಡಾಡಿರುವ ಬಗ್ಗೆ ಚರ್ಚೆ ಆಗ್ತಿದೆಯಲ್ಲ ಈ ಬಗ್ಗೆ ನಾನು ಮೊದಲೇ ಭವಿಷ್ಯ ನುಡಿದಿದ್ದೆ. ಬಿಜೆಪಿಯಲ್ಲೊಬ್ಬ ಯುವರಾಜ ಮತ್ತು ಕಾಂಗ್ರೆಸ್ ಮಹಾನಾಯಕ ಇಬ್ಬರೂ ಇದ್ದಾರೆಂದು ಹೇಳಿದ್ದೆ.  ಈಗ ಕಾಂಗ್ರೆಸ್ ಮಹಾನಾಯಕನದ್ದು ಹೊರಬಂದಿದೆ ಕೆಲವೆ ದಿನಗಳಲ್ಲಿ ಬಿಜೆಪಿಯ ಯುವರಾಜನದ್ದು ಹೊರಬರಲಿದೆ ಎಂದರು

  ಈ ಸಿಡಿ ಯುವರಾಜನ ರಕ್ಷಣೆ ಮಾಡಲು ಸಿಸಿಬಿಗೆ ಕೊಟ್ಟಿದ್ದು, ಸಿಬಿಐಗೆ ಕೊಟ್ಟರೆ ಎಲ್ಲ ಕಳ್ಳರನ್ನ ಒದ್ದು ಒಳಗೆ ಹಾಕುತ್ತಾರೆ. ಇಂಥಾ ಬಹಳ ಮಂದಿಯ ಸಿಡಿ   ಮಾಡಿದ್ದಾರೆ ಐಪಿಎಸ್, ಐಎಎಸ್ ಅಧಿಕಾರಿಗಳು, ವ್ಯಾಪಾರಸ್ಥರು, ಶಾಸಕರು, ಸಂಸದರ ಸಿಡಿಗಳಿವೆ. ಇವರಿಬ್ಬರೂ ಸಿಡಿ ಖರೀದಿದಾರರು. ಮೆಕ್ಕೆಜೋಳ, ಮೆಣಸಿನಕಾಯಿ ಖರೀದಿ ಮಾಡುವ  ರೀತಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲೊಬ್ಬರು ಸಿಡಿ ಖರೀದಿ ಮಾಡುವವರಿದ್ದಾರೆ
  ಬಿಜೆಪಿಯ ಉನ್ನತ ನಾಯಕನ ಸಿಡಿ ಕಾಂಗ್ರೆಸ್ ನ ಮಹಾನಾಯಕನ ಬಳಿ ಇದೆ ಎಂದರು

  ಸಿಎಂ ಬದಲಾವಣೆ ಆಗಲೇಬೇಕು..!

  ರಾಜ್ಯದಲ್ಲಿ ಭ್ರಷ್ಟಚಾರಿಗಳದ್ದು ಒಂದು ಗುಂಪು, ಪ್ರಾಮಾಣಿಕ‌ ರಾಜಕಾರಣಿಗಳದ್ದೊಂದು ಗುಂಪಿದೆ. ಎಲ್ಲ ಪಕ್ಷಗಳಲ್ಲೂ ಈ ಗುಂಪು ಇವೆ. ಸಿಎಂ ಬದಲಾವಣೆ ಆಗಲೇ ಬೇಕು. ಇದರ ಬಗ್ಗೆ ಬೇರೆ ಅಭಿಪ್ರಾಯವಿಲ್ಲ ರಾಜ್ಯದಲ್ಲಿನ ಎಲ್ಲ ಬೆಳವಣಿಗೆಗಳನ್ನ ಪ್ರಧಾನಿ ನರೇಂದ್ರ ಮೋದಿ ಗಮನಿಸುತ್ತಿದ್ದಾರೆ. ಎಲ್ಲ ಮಾಹಿತಿ ಕೇಂದ್ರ ಸರಕಾರ ಮತ್ತು ಪ್ರಧಾನಿ ಮೋದಿಯವರಿಗೆ ಇದೆ ಮೇ ಎರಡರ ನಂತರ ಪ್ರಧಾನಿ ಈ ಬಗ್ಗೆ ನಿರ್ಧಾರ ಕೈಗೊಳುತ್ತಾರೆ. ದೇಶಕ್ಕೆ, ಧರ್ಮಕ್ಕೆ ಕಷ್ಟ ಬಂದಾಗ ಭಗವಂತ ಹುಟ್ಟಿ ಬಂದಂತೆ ಮೇ ಎರಡರ ನಂತರ ನರೇಂದ್ರ ಮೋದಿಯವರು ಕರ್ನಾಟಕದ ಬೆಳವಣಿಗೆ ನೋಡಿ ಗಟ್ಟಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.

  ಸಿಎಂ ಯಡಿಯೂರಪ್ಪ ಬಿಜೆಪಿ ಶಾಸಕರಿಗೆ ಅನುದಾನ ಕೊಡುತ್ತಿಲ್ಲ. ಸಿದ್ದರಾಮಯ್ಯ, ಕುಮಾರಸ್ವಾಮಿ, ಜಮೀರ ಅಹಮ್ಮದ್​ ಅವರಿಗೆ ಅನುದಾನ ಕೊಡುತ್ತಾರೆ. ನಾವು ಅನುದಾನ ಕೇಳಿದರೆ ನಮಗೆ ವಿಷ ಕುಡಿಯೋಕೆ ಹಣ ಇಲ್ಲ ಅಂತಾರೆ. ಜಮೀರ ಅಹಮ್ಮದ ಹಿಂದೂಗಳನ್ನ ಬೈಯ್ಯುತ್ತಾ ಓಡಾಡ್ತಾರೆ. ಅವರಿಗೆ ಅನುದಾನ ಕೊಡ್ತಾರೆ. ಯಡಿಯೂರಪ್ಪ ಅವರ ಬೀಗ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಮರೀಸ್ವಾಮಿಗೆ ಅನುದಾನ ಕೊಡ್ತಾರೆ. ಬಿಜೆಪಿ ಶಾಸಕರಿಗೆ ಕೆಲವೇ ಕೆಲವು ಶಾಸಕರಿಗೆ ಅನುದಾನ ಕೊಡ್ತಾರೆ.

  ಇದನ್ನು ಓದಿ: ಮಹಾನ್​ ನಾಯಕ ರಾಜಕಾರಣಕ್ಕೆ ನಾಲಾಯಕ್​; ಕನಕಪುರದಲ್ಲಿ ಮುಂದಿನ ಹೋರಾಟ: ರಮೇಶ್​ ಜಾರಕಿಹೊಳಿ

  ಬಿಜೆಪಿಯ ಒಂದೇ ಒಂದು ಶಾಸಕಾಂಗ ಪಕ್ಷದ ಸಭೆ ನಡೆದಿಲ್ಲ. ಸಿದ್ದರಾಮಯ್ಯ ಆಗಾಗ ಶಾಸಕಾಂಗ ಪಕ್ಷದ ಸಭೆ ಮಾಡ್ತಾರೆ. ನಾವೆಲ್ಲ ಕೈ ಎತ್ತಿದ್ದಕ್ಕೆ ನೀವು ಸಿಎಂ ಆಗಿದ್ದೀರಿ. ಕಾಂಗ್ರೆಸ್, ಜೆಡಿಎಸ್ ನವರು ಕೈ ಎತ್ತಿದ್ದಕ್ಕಲ್ಲ. ಅವರ ಜೊತೆ ಇವರದು ಹೊಂದಾಣಿಕೆ ರಾಜಕಾರಣ ಇದೆ.

  ಶಾಸಕರು ನನ್ನ ವಿರುದ್ಧ ತಿರುಗಿ ಬಿದ್ದಿಲ್ಲ. ಒಬ್ಬ ಶಾಸಕರೂ ನನ್ನ ವಿರುದ್ಧ ಸಹಿ ಮಾಡಿಲ್ಲ. ಅಲ್ಲಿ ಹೋದ ಒಬ್ಬ ಶಾಸಕರು ನನಗೆ ಹೇಳಿದ್ದಾರೆ. ಯತ್ನಾಳರು ನಮ್ಮ ಪರ‌ವಾಗಿದ್ದಾರೆ, ಅವರ ವಿರುದ್ಧ ಸಹಿ ಮಾಡುವುದಿಲ್ಲ ಎಂದಿದ್ದಾರೆ. ಮೂವತ್ತೊಂದರವರೆಗೆ ಅಧಿವೇಶವಿತ್ತು ಸಿಡಿ ನೆಪದಲ್ಲಿ ಅಧಿವೇಶನ ಮೊಟಕು ಮಾಡಿದರು. ಬಜೆಟ್ ಮೇಲೆ ಅನೇಕ ವಿಷಯಗಳನ್ನ ಚರ್ಚೆ ಮಾಡಿವುದಿತ್ತು. ಕಾಂಗ್ರೆಸ್ ಮತ್ತು ಬಿಜೆಪಿ‌ ನಾಯಕರು ಒಂದಾಗಿ ಸಿಡಿ ನೆಪದಲ್ಲಿ ಅಧಿವೇಶನ ಮೊಟಕುಗೊಳಿಸಿದರು.

  ಇದೇನು ಒಂದು ಕುಟುಂಬದ ಸರಕಾರಾನಾ.? ಯಡಿಯೂರಪ್ಪ, ವಿಜಯೇಂದ್ರ, ರಾಘವೇಂದ್ರ ಮತ್ತು ಅವರ ಹೆಣ್ಣು ಮಕ್ಕಳ‌ ಸರಕಾರಾನಾ.? ಹಿಂಗಾದ್ರೆ ಪಕ್ಷ ಹೇಗೆ ಉಳಿಯಬೇಕು ಎಂದು ಮತ್ತೆ ಸಿಎಂ ಬಿ. ಎಸ್ ಯಡಿಯೂರಪ್ಪ ಹಾಗೂ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

  (ವರದಿ : ಮಂಜುನಾಥ ತಳವಾರ)
  Published by:Seema R
  First published: