ತಮ್ಮ ಸಂಸ್ಥೆಯ ಶಾಖೆಗಳಿಗೆ ರಜೆ ಘೋಷಿಸಿ ವಾಜಪೇಯಿಗೆ ಗೌರವ ಸಲ್ಲಿಸಿದ ಯತ್ನಾಳ

news18
Updated:August 17, 2018, 1:04 PM IST
ತಮ್ಮ ಸಂಸ್ಥೆಯ ಶಾಖೆಗಳಿಗೆ ರಜೆ ಘೋಷಿಸಿ ವಾಜಪೇಯಿಗೆ ಗೌರವ ಸಲ್ಲಿಸಿದ ಯತ್ನಾಳ
  • News18
  • Last Updated: August 17, 2018, 1:04 PM IST
  • Share this:
- ಮಹೇಶ್ ವಿ.ಶಟಗಾರ, ನ್ಯೂಸ್18 ಕನ್ನಡ

ವಿಜಯಪುರ(ಆಗಸ್ಟ್ 17) :  ಮಾಜಿ ಪ್ರಧಾನಿ ಅಟಲ ಬಿಹಾರಿ ವಾಜಪೇಯಿಗೂ ವಿಜಯಪುರ ಜಿಲ್ಲೆಗೂ ಅವಿನಾಭಾವ ಸಂಬಂಧ.  ಎರಡು ಬಾರಿ ಇಲ್ಲಿಗೆ ಆಗಮಿಸಿದ್ದ ಅವರು, ಬಿಜೆಪಿ ಸಂಘಟನೆ ನಡೆಸಿದ್ದರು. ತಾವು ಇಂದು ಈ ಸ್ಥಿತಿಯಲ್ಲಿರುವ ವಾಜಪೇಯಿ ಅವರೇ ಕಾರಣ ಎಂದು ಹೇಳಿರುವ ಯತ್ನಾಳ, ಈ ಕುರಿತು ತಮ್ಮ ಫೇಸ್ ಬುಕ್ ನಲ್ಲಿ ಹಾಕಿಕೊಂಡಿರುವ ಸ್ಟೇಟಸ್ ವೈರಲ್ ಆಗಿದೆ.

ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿ ಅವರು ನನ್ನ ಸಾಮಾಜಿಕ ಕ್ಷೇತ್ರದಲ್ಲಿ ಮೂಲ ಪ್ರೇರಕರು.  ಅವರ ನಾಯಕತ್ವಕ್ಕೆ ಮನಸೋತು ನಾನು ರಾಜಕೀಯಕ್ಕೆ ಬಂದೆ. ಅವರ ಸಂಪುಟದಲ್ಲಿ ಸಚಿವನಾಗಿ ಸೇವೆ ಸಲ್ಲಿಸಿದ್ದು ನನ್ನು ಪುಣ್ಯ. ಇಂದು ನನ್ನ ಜೀವನದಲ್ಲಿ ತಂದೆ ತಾಯಿ ಕಳೆದುಕೊಂಡಾಗೀನ ನೋವು ನನ್ನನ್ನು ಆವರಿಸಿದೆ ಎಂದು ತಮ್ಮ ಫೆಸ್​ಬುಕ್ನಲ್ಲಿ ಹಾಕಿಕೊಂಡಿದ್ದಾರೆ.

ಅಷ್ಟೇ ಅಲ್ಲ, ವಾಜಪೇಯಿ ಗೌರವಾರ್ಥ ಬಸನಗೌಡ ಪಾಟೀಲ ಯತ್ನಾಳ ತಾವು ಅಧ್ಯಕ್ಷರಾಗಿರುವ ಮತ್ತು ರಾಜ್ಯಾದ್ಯಂತ ಇರುವ 93 ಸಿದ್ಧಸಿರಿ ಹಣಕಾಸು ಶಾಖೆಗಳಿಗೆ ಇಂದು ರಜೆ ನೀಡುವ ಮೂಲಕ ಗೌರವ ಸಲ್ಲಿಸಿದ್ದಾರೆ.  ಅಲ್ಲದೇ, ದೆಹಲಿಗೆ ದೌಡಾಯಿಸಿದ್ದಾರೆ.
First published:August 17, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading