ಬೆಂಗಳೂರು: ಬಾರ್‌ನಲ್ಲಿ (Bar) ಮದ್ಯ (Liqueur) ಕುಡಿಯುವಾಗ ಮತ್ತಲ್ಲಿ ಇರುವುದು ಮಾಮೂಲು. ಸಪ್ಲೈಯರ್ (Supplier) ಮೇಲೆ ಮತ್ತಲ್ಲಿ ಎಗರಾಡೋದು ಕಾಮನ್. ಹಾಗಂತ ಕೊಲೆ (Murder) ಮಾಡೋಕೆ ಆಗುತ್ತಾ? ಆದರೆ ಇಂತಹದ್ದೆ ಘಟನೆಯೊಂದರಲ್ಲಿ ಮಂಡ್ಯ (Mandya) ಮೂಲದ ಯುವಕನ ಕೊಲೆ ಆಗಿದೆ. ಮೃತ ಯುವಕ ಬೆಂಗಳೂರಿನಲ್ಲಿ ಕೆಲಸ ಮಾಡಿ ಜೀವನ ಮಾಡಲು ಅಂತ ಮಂಡ್ಯದಿಂದ ಬಂದಿದ್ದ, ಬಾರ್‌ನಲ್ಲಿ ಸಪ್ಲೈಯರ್ ಆಗಿ ಕೆಲಸಕ್ಕೆ ಸೇರಿಕೊಂಡು ಜೀವನ ಮಾಡುತ್ತಿದ್ದ. ಆದರೆ ಕ್ಷುಲ್ಲಕ ಕಾರಣಕ್ಕೆ ಸತ್ತು ಶವವಾಗಿ ಹೋಗಿದ್ದಾನೆ.
ಏನಿದು ಪ್ರಕರಣ?
ಜನವರಿ 22 ರಂದು ಬಾರ್‌ನಲ್ಲಿ ಮದ್ಯ ಸಪ್ಲೈ ಮಾಡುವುದು ಲೇಟ್ ಆಯ್ತು ಅಂತ ಸಪ್ಲೈಯರ್ ಹುಡುಗನ ಮೇಲೆ ಇಬ್ಬರು ಹಲ್ಲೆ ಮಾಡಿದ್ದರು. ಕುಮಾರಸ್ವಾಮಿ ಲೇಔಟ್ ಮುಖ್ಯರಸ್ತೆಯ SRR ಬಾರ್‌ನಲ್ಲಿ ಜನವರಿ 22 ರಂದು ಘಟನೆ ನಡೆದಿದ್ದು, ಆರೋಪಿಗಳು ಸಪ್ಲೈಯರ್ ತಲೆಯನ್ನು ಗೋಡೆಗೆ ಗುದ್ದಿಸಿದ್ದರು. ಪರಿಣಾಮ ಕಿವಿಯಲ್ಲಿ ರಕ್ತ ಸುರಿಸಿಕೊಂಡು ನಿಂತಿದ್ದ ವ್ಯಕ್ತಿ 23 ದಿನಗಳ ಬಳಿಕ ಸಾವಿನ ಮನೆ ಸೇರಿದ್ದಾನೆ. ಮೃತ ವ್ಯಕ್ತಿಯನ್ನು ಬಸವರಾಜ್ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: Acid Attack: ಅಪ್ರಾಪ್ತೆ ಮೇಲೆ ಆ್ಯಸಿಡ್ ಎರಚಿದ ಪಾಗಲ್ ಪ್ರೇಮಿ, ಪ್ರೀತ್ಸೇ ಅಂತ ಪ್ರಾಣ ತಿನ್ನುತ್ತಿದ್ದವನಿಂದ ಪಾಪದ ಕೃತ್ಯ!
ಜನವರಿ 22ಕ್ಕೆ ಹಲ್ಲೆ, 23ಕ್ಕೆ ತಲೆ ನೋವು, 24ಕ್ಕೆ ಕೋಮಾ!
ಜನವರಿ 22ಕ್ಕೆ ಗಲಾಟೆ ಆದ ಮಾರನೇ ದಿನ ಬೆಳಗ್ಗೆ ತಲೆ ನೋವು ಬಂದಿತ್ತು. ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದ ಬಸವರಾಜ್, ಆಸ್ಪತ್ರೆಗೆ ಹೋಗಿ ವೈದರ ಬಳಿ ತೋರಿಸಿಕೊಂಡು ಬಂದಿದ್ದ. ಅಡ್ಮಿಟ್ ಆಗುವಂತೆ ವೈದ್ಯರು ತಿಳಿಸಿದ್ದರು. ಆದರೆ ನಿರ್ಲಕ್ಷ್ಯ ಮಾಡಿ ಮನೆಗೆ ಹೋದವನು ತಲೆ ಸುತ್ತು ಬಂದು ಪ್ರಜ್ಞೆ ತಪ್ಪಿದ್ದ. ಆ ಬಳಿಕ ಆಸ್ಪತ್ರೆಗೆ ಅಡ್ಮಿಟ್ ಮಾಡಲಾಗಿತ್ತು. ತಪಾಸಣೆ ವೇಳೆ ತಲೆಯ ಒಳ ಭಾಗದಲ್ಲಿ ತೀವ್ರ ರಕ್ತಸ್ರಾವ ಆಗಿದೆ ಅನ್ನೋದು ಗೊತ್ತಾಗಿತ್ತು. 23 ದಿನಗಳ ಕಾಲ ಕೋಮಾದಲ್ಲಿದ್ದ ಬಸವರಾಜ್, ಫೆಬ್ರವರಿ 15ರಂದು ಸಾವನ್ನಪ್ಪಿದ್ದಾನೆ.
ಗಲಾಟೆ ಆದ ಬಳಿಕ ತಲೆಯ ಹೊರಭಾಗದಲ್ಲಿ ಯಾವುದೇ ಗಂಭೀರ ಗಾಯದ ಗುರುತು ಇರಲಿಲ್ಲ. ಇದರಿಂದ ಆತನಿಗೂ ಗಾಯದ ತೀವ್ರತೆ ಬಗ್ಗೆ ಗೊತ್ತಿರಲಿಲ್ಲ. ಆದರೆ ಆತ ಮನೆಯಲ್ಲಿ ತಲೆ ಸುತ್ತು ಬಂದು ಪ್ರಜ್ಞೆ ಕಳೆದುಕೊಂಡ ಬಳಿಕ ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಂತರಿಕ ರಕ್ತಸ್ರಾವ ಹೆಚ್ಚಾಗಿ ತೀವ್ರ ಸಮಸ್ಯೆ ಆಗಿತ್ತು. ಮೂರು ನಾಲ್ಕು ಆಸ್ಪತ್ರೆ ಬದಲಾವಣೆ ಮಾಡಿದ ಬಳಿಕ ಆತನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಪ್ರಕರಣದ ಸಂಬಂಧ ಐಪಿಸಿ ಸೆಕ್ಷನ್ 302ರ ಅಡಿ ಕೇಸ್ ದಾಖಲು ಮಾಡಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ದಕ್ಷಿಣ ವಿಭಾಗ ಡಿಸಿಪಿ ಕೃಷ್ಣಕಾಂತ್ ಮಾಹಿತಿ ನೀಡಿದ್ದಾರೆ.
ಬಾರ್ ಸಪ್ಲೈಯರ್ ಕೊಲೆಗೆ ಕಾರಣವಾದ ಆರೋಪಿಗಳನ್ನು ಸುರೇಶ್ ಕುಮಾರ್ ಮತ್ತು ವಿನೋದ್ ಕುಮಾರ್ ಎಂದು ಗುರುತಿಸಲಾಗಿದ್ದು, ಇಬ್ಬರನ್ನು ಪೊಲೀಸರು ಬಂಧನ ಮಾಡಿದ್ದಾರೆ. ಆರೋಪಿಗಳು ಡಿಪ್ಲೊಮಾ ಓದಿ ಕೊಂಡು ವಾಟರ್ ಫಿಲ್ಟರ್, ವಾಶಿಂಗ್ ಮಷಿನ್ ರಿಪೇರಿ ಮಾಡುವ ಕೆಲಸ ಮಾಡುತ್ತಿದ್ದರು. ಘಟನೆ ನಡೆದ ದಿನ ಕುಡಿದು ತೆಪ್ಪಗೆ ಮನೆಗೆ ಹೋಗಿದ್ದರೆ ಇವತ್ತು ಜೈಲಿಗೆ ಹೋಗುವ ಪರಿಸ್ಥಿತಿ ಬರುತ್ತಿರಲಿಲ್ಲ. ಆದರೆ ಕುಡಿದ ಮತ್ತಲ್ಲಿ 39 ವರ್ಷದ ಬಸವರಾಜ್ ಎಂಬಾತನನ್ನ ಕೊಂದು ಜೈಲು ಸೇರಿದ್ದಾರೆ.
ಆಸಲಿಗೆ ಆಗಿದ್ದೇನು?
ಜನವರಿ 22 ರಂದು ಕುಮಾರಸ್ವಾಮಿ ಲೇಔಟ್ ಮುಖ್ಯರಸ್ತೆಯ SRR ಬಾರ್ಗೆ ಸಂಜೆ ಬಂದಿದ್ದ ಸುರೇಶ್ ಕುಮಾರ್ ಮತ್ತು ವಿನೋದ್ ಕುಮಾರ್ ಎಣ್ಣೆ ಕೇಳಿದ್ದಾರೆ. ಸಪ್ಲೈ ಮಾಡುವುದು ತಡವಾಯ್ತು ಅಂತ ಜಗಳ ಮಾಡಿಕೊಂಡು ವಾಪಸ್ಸು ತೆರಳಿದ್ದರು. ಆ ಬಳಿಕ ಬೇರೆ ಬಾರ್‌ನಲ್ಲಿ ಕುಡಿದು ಮತ್ತೆ ರಾತ್ರಿ 10:30ಕ್ಕೆ SRR ಬಾರ್ಗೆ ಬಂದು ಜಗಳಕ್ಕೆ ನಿಂತಿದ್ದರು.
ಈ ವೇಳೆ ಬಸವರಾಜ್ ತಲೆ ಹಿಡಿದು ಗೋಡೆಗೆ ಹೊಡೆದಿದ್ದರಂತೆ. ಆ ವೇಳೆ ಬಸವರಾಜ ತಲೆ ಮತ್ತು ಕಿವಿಯಲ್ಲಿ ರಕ್ತ ಬಂದಿತ್ತು. ಇದೀಗ ಕೊಲೆ ಕೇಸ್ನಲ್ಲಿ ಜೈಲು ಸೇರಿದ್ದಾರೆ. ಮದ್ಯ ಕೊಡುವುದು ಲೇಟಾಯ್ತು ಎನ್ನುವ ಕಾರಣಕ್ಕೆ ಒಬ್ಬನ ಪ್ರಾಣವನ್ನೇ ತೆಗೆದಿರುವ ಆರೋಪಿಗಳು ನಿಜಕ್ಕೂ ಮನುಷತ್ವ ಕಳೆದುಕೊಂಡಿದ್ದಾರೆ. ಮಾಡಿದ ತಪ್ಪಿಗೆ ಜೈಲು ಶಿಕ್ಷೆ ಅನುಭವಿಸಬೇಕಿದೆ. ಕುಮಾರಸ್ವಾಮಿ ಲೇ ಔಟ್ ಪೊಲೀಸರು ಆರೋಪಿಗಳಿಗೆ ಕಠಿಣ ಶಿಕ್ಷೆ ಕೊಡಿಸಿ ಬಡವನ ಸಾವಿಗೆ ನ್ಯಾಯ ಕೊಡಿಸಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ