ಸಂಘ ಪರಿವಾರದಿಂದ ಅಧಿವೇಶನದಲ್ಲಿ ಮಾಧ್ಯಮ ನಿರ್ಬಂಧ ಆದೇಶ?; ಬೆಚ್ಚಿದ ಸಿಎಂ, ಟ್ವೀಟ್​ ಡಿಲೀಟ್​​

ಶತಮಾನದ ಪ್ರವಾಹ, ಕೇಂದ್ರದಿಂದ ಸಿಕ್ಕ ಬಿಡಿಗಾಸಿನ ಪರಿಹಾರ ಮತ್ತು ಸರ್ಕಾರದ ವೈಫಲ್ಯಕ್ಕೆ ಹೆದರಿ ಸರ್ಕಾರ ರಚನೆಯ ನಂತರ ನಡೆಯುತ್ತಿರುವ ಮೊದಲ ಸದನದಿಂದ ಮಾಧ್ಯಮವನ್ನು ದೂರ ಇಡಲಾಗಿದೆಯಾ? ಈ ಕೆಲಸದ ಹಿಂದೆ ಸರ್ಕಾರವೇ ಇದೆಯಾ? ಇಲ್ಲ ಅನ್ನುತ್ತವೆ ಮೂಲಗಳು. ಮಾಧ್ಯಮ ನಿರ್ಬಂಧಕ್ಕೆ ನಿಖರ ಕಾರಣಗಳು ಅಧಿಕೃತವಾಗಿ ಯಾರೂ ನೀಡದಿದ್ದರೂ ಇದರ ಹಿಂದಿರುವುದು ಆರ್​ಎಸ್​ಎಸ್​ ಎಂಬ ಮಾತುಗಳು ಮೂಲಗಳಿಂದ ಕೇಳಿ ಬರುತ್ತಿವೆ.

Seema.R | news18-kannada
Updated:October 10, 2019, 1:29 PM IST
ಸಂಘ ಪರಿವಾರದಿಂದ ಅಧಿವೇಶನದಲ್ಲಿ ಮಾಧ್ಯಮ ನಿರ್ಬಂಧ ಆದೇಶ?; ಬೆಚ್ಚಿದ ಸಿಎಂ, ಟ್ವೀಟ್​ ಡಿಲೀಟ್​​
ಪ್ರಾತಿನಿಧಿಕ ಚಿತ್ರ.
  • Share this:
ಬೆಂಗಳೂರು (ಅ.10): ಇದೇ ಮೊದಲ ಬಾರಿ ಅಧಿವೇಶನಕ್ಕೆ ಮಾಧ್ಯಮಗಳಿಗೆ ನಿರ್ಬಂಧ ವಿಧಿಸಲು ಬಿಜೆಪಿ ಸರ್ಕಾರ ಮುಂದಾಗಿದೆ. ಬಿಜೆಪಿ ಸರ್ಕಾರದ ಎಡವಟ್ಟುಗಳು ಜನರ ಮುಂದೆ ಬಿತ್ತರವಾಗುವುದನ್ನು ತಪ್ಪಿಸಲು ಬಿಜೆಪಿ ಈ ತಂತ್ರಕ್ಕೆ ಮುಂದಾಗಿದೆ ಎಂಬ ಆರೋಪಗಳು ಎಲ್ಲೆಡೆ ಕೇಳಿ ಬರುತ್ತಿದೆ. ಈ ನಿಯಮವನ್ನು ಸ್ಪೀಕರ್​ ಅವರ ಮೂಲಕವೇ ಆದೇಶಿಸಿದೆ. ಆದರೆ,  ಮೂಲಗಳ ಪ್ರಕಾರ ಈ ತೀರ್ಮಾನ ಬಿಜೆಪಿ ಸರ್ಕಾರದಲ್ಲ, ಸಂಘಪರಿವಾರ ಬಂದಿರುವ ಆದೇಶ ಎಂದು ಹೇಳಲಾಗುತ್ತಿದೆ.

ಕಳೆದ ಬಿಜೆಪಿ ಸರ್ಕಾರದಲ್ಲಿ ಆದ ಎಡವಟ್ಟುಗಳಿಂದ ಪಕ್ಷ ರಾಷ್ಟ್ರಮಟ್ಟದಲ್ಲಿ ಮುಜುಗರ ಅನುಭವಿಸಿತು. ಇನ್ನು ಈ ಬಾರಿ ಕೂಡ ಅನರ್ಹ ಶಾಸಕರ ಬೆಂಬಲದಿಂದ ಸರ್ಕಾರ ರಚನೆ ಮಾಡಿರುವ ಬಿಜೆಪಿ ವಿರುದ್ಧ ಪ್ರತಿಪಕ್ಷಗಳು ಹರಿಹಾಯಲು ಸಿದ್ಧತೆ ನಡೆಸಿದೆ. ಜೊತೆಗೆ ಪ್ರವಾಹ ಪರಿಹಾರ ವಿಳಂಬ ವಿಚಾರದಲ್ಲಿ ಕೇಂದ್ರ ಸರ್ಕಾರ ತೋರಿದ ವರ್ತನೆ ವಿರುದ್ಧ ಕೂಡ ಟೀಕಿಸಲು ಪ್ರತಿಪಕ್ಷಗಳು ಸಜ್ಜಾಗಿವೆ. ಆಡಳಿತ-ಪ್ರತಿಪಕ್ಷಗಳ ಚರ್ಚೆ ವೇಳೆ ಕೆಲವೊಂದು ವಿಷಯಗಳು ಹೊರ ಬಂದರೆ ಅದು ಸರ್ಕಾರಕ್ಕೆ ಮತ್ತೆ ಮುಜುಗರ ಉಂಟಾಗುವ ಸಾಧ್ಯತೆ ಇದೆ. ಇದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಮಾಧ್ಯಮಗಳ ನಿರ್ಬಂಧ ವಿಧಿಸುವಂತೆ ಬಿಜೆಪಿ ಮಾಧ್ಯಮ ಘಟಕದಿಂದಲೂ ನಿರ್ಬಂಧ ಮಾಡುವಂತೆ ಸ್ಪೀಕರ್​ಗೆ ಅಭಿಪ್ರಾಯ ಪತ್ರ ನೀಡಲಾಗಿದೆ.

ಟೀಕೆಗೆ ಜಗ್ಗಿದ ಸಿಎಂ

ಮಾಧ್ಯಮಗಳ ಸ್ವಾತಂತ್ರ್ಯ ಹರಣಕ್ಕೆ ಬಿಜೆಪಿ ಸರ್ಕಾರ ಮುಂದಾಗಿದೆ. ಜನ ಪ್ರತಿನಿಧಿಗಳು ತಮ್ಮ ಸಮಸ್ಯೆಗಳನ್ನು ಯಾವ ರೀತಿ ಅಧಿವೇಶನದಲ್ಲಿ ಚರ್ಚೆ ಮಾಡುತ್ತಾರೆ ಎಂಬುದು ಜನರಿಗೆ ತಿಳಿಯುವುದು ಈ ಮಾಧ್ಯಮಗಳಿಂದಲೇ. ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮಗಳನ್ನೇ ದೂರವಿಡುವುದು ಖಂಡನೀಯ ಎಂದು ಪ್ರತಿಪಕ್ಷ ನಾಯಕರು ಹರಿಹಾಯ್ದರು.

cm tweet
ಸಿಎಂ ಟ್ವೀಟ್​


ಟೀಕೆಗಳಿಗೆ ಜಗ್ಗಿದ ಸಿಎಂ ಬಿಎಸ್​ವೈ, ಮಾಧ್ಯಮ ಸ್ವಾತಂತ್ರ್ಯಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ. ಅಧಿವೇಶನ ನೇರ ಪ್ರಸಾರಕ್ಕೆ ಮಾಧ್ಯಮಗಳ ತಡೆ ಹಾಕಿರುವ ಸ್ಪೀಕರ್​ ನಿರ್ಧಾರವನ್ನು ಪುನರ್​ ಪರಿಶೀಲಿಸುವುದಾಗಿ ಸಿಎಂ ಭರವಸೆ ನೀಡಿ ಅಧಿವೇಶನ ಆರಂಭಕ್ಕೂ ಮುನ್ನ ಟ್ವೀಟ್​ ಮಾಡಿದ್ದರು.

ಸಂಘಪರಿವಾರದ ಆದೇಶಕ್ಕೆ ಬೆದರಿದ ಸಿಎಂ ಬಿಎಸ್​ವೈಸ್ಪೀಕರ್​ ಅವರ ನಿರ್ಧಾರವನ್ನು ಪುನರ್​ ಪರಿಶೀಲನೆ ನಡೆಸುವುದಾಗಿ ತಿಳಿಸಿದ ಕೆಲವೇ ನಿಮಿಷಗಳಲ್ಲಿ ಸಿಎಂ ಟ್ವೀಟ್​ ಡಿಲಿಟ್​ ಆಗಿದ್ದು, ಈ ನಿರ್ಧಾರ ಸರ್ಕಾರದ್ದಲ್ಲ, ಬದಲಾಗಿ ಸಂಘ ಪರಿವಾರದ್ದು ಎಂಬ ವಾದಕ್ಕೆ ಪುಷ್ಠಿ ನೀಡಿದೆ.

ಮಾಧ್ಯಮಗಳ ನಿರ್ಬಂಧಿಸುವಂತೆ ಸಂಘ ಪರಿವಾರದವರಿಂದ ಸೂಚನೆ ಹಿನ್ನೆಲೆ ಸ್ಪೀಕರ್ ಕಾಗೇರಿ ಅವರಿಂದ ಏಕಾಏಕಿ ನಿರ್ಧಾರ ಕೈಗೊಂಡಿದ್ದಾರೆ. ಇದೇ ಕಾರಣಕ್ಕೆ ಸಿಎಂ ಮನವಿಯನ್ನು ಅವರು ತಿರಸ್ಕರಿಸಿದ್ದಾರೆ ಎನ್ನಲಾಗಿದೆ.

ಇದನ್ನು ಓದಿ: ವಿಧಾನಸಭೆ, ಪರಿಷತ್ನಲ್ಲಿ ಸಿದ್ದರಾಮಯ್ಯ ಮತ್ತು ಎಸ್.ಆರ್. ಪಾಟೀಲ್ ವಿಪಕ್ಷ ನಾಯಕರು; ಮೂಲ ಕಾಂಗ್ರೆಸ್ಸಿಗರಿಗೆ ಹಿನ್ನಡೆ

ಸಂಘ ಪರಿವಾರದ ನಿರ್ಧಾರ ಹಿನ್ನೆಲೆ ಸಿಎಂಗೂ ಈ ಬಗ್ಗೆ ಎಚ್ಚರಿಕೆ ಬಂದಿದ್ದು, ಇದಾದ ಕೆಲವೇ ನಿಮಿಷಗಳಲ್ಲಿ ತಮ್ಮ ಟ್ವೀಟ್​ ಅಳಿಸಿ ಹಾಕಿದ್ದಾರೆ ಎನ್ನಲಾಗಿದೆ. ಬಿಜೆಪಿ ಸರ್ಕಾರದಲ್ಲಿ ಸಂಘ ಪರಿವಾರದ ಹಿಡಿತ ಹೆಚ್ಚಾಗಿದ್ದು, ನಾಯಕರ ಮಾತಿಗೆ ಬೆಲೆ ಇಲ್ಲದಂತೆ ಆಗಿದೆ ಎಂಬ ಮಾತು ಸ್ವಪಕ್ಷೀಯರಿಂದಲೇ ಕೇಳಿ ಬಂದಿದೆ. 

 
First published: October 10, 2019, 11:50 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading