Bannerghatta park: ಬನ್ನೇರುಘಟ್ಟ ಪಾರ್ಕ್​ನಲ್ಲಿ ಹೊಸ ಮೈಲಿಗಲ್ಲು, ಒಂದೇ ದಿನ ಅರ್ಧ ಕೋಟಿ ಹಣ ಸಂಗ್ರಹ!

ಕೊರೋನಾ ಕಾಟದಿಂದ ಥಂಡಾ ಹೊಡೆದಿದ್ದ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಸ್ವಾತಂತ್ರ್ಯ ಅಮೃತಮಹೋತ್ಸವ ಬೂಸ್ಟರ್​ ಡೋಸ್ ನೀಡಿದೆ. 75ನೇ ಸ್ವತಂತ್ರ ಅಮೃತ ಮಹೋತ್ಸವದಂದು ಬರೋಬ್ಬರಿ 29,571 ಮಂದಿ ಪ್ರವಾಸಿಗರು ಬನ್ನೇರುಘಟ್ಟ ಪಾರ್ಕ್​ನ್ನು ವೀಕ್ಷಣೆ ಮಾಡಿದ್ದಾರೆ. ಉದ್ಯಾನವನದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ಪ್ರವಾಸಿಗರು ಆಗಮಿಸಿದಂತೆ.

ಬನ್ನೇರುಘಟ್ಟ ಉದ್ಯಾನವನ

ಬನ್ನೇರುಘಟ್ಟ ಉದ್ಯಾನವನ

  • Share this:
ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಜೈವಿಕ ಉದ್ಯಾನವನ (Bannerghatta park) ಪ್ರವಾಸಿಗರ (Tourist) ಅಚ್ಚುಮೆಚ್ಚಿನ ತಾಣ. ಕಾನನದ ಮಡಿಲಲ್ಲಿ ವಿಹರಿಸುವ ವನ್ಯಜೀವಿಗಳನ್ನು (Animals) ನೋಡೋದೇ ಚಂದ. ಇಲ್ಲಿಗೆ ದೇಶ-ವಿದೇಶದಿಂದ (Foreign) ಪ್ರವಾಸಿಗರು ಆಗಮಿಸ್ತಾರೆ. ಕೊರೋನಾ (Corona) ಹೊಡೆತದಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ 75ನೇ ವರ್ಷದ ಸ್ವತಂತ್ರ ಅಮೃತ ಮಹೋತ್ಸವ ನವ (Azadi ka Amrit Mahotsav) ಚೈತನ್ಯ ನೀಡಿದೆ. ಬನ್ನೇರುಘಟ್ಟ ಪಾರ್ಕ್​ ಆರ್ಥಿಕವಾಗಿ ನೂತನ ಮೈಲಿಗಲ್ಲು ಸ್ಥಾಪಿಸಿದೆ. ಹೌದು ಇದೇ ಮೊದಲ ಬಾರಿಗೆ ಬನ್ನೇರುಘಟ್ಟ ಉದ್ಯಾನವನದಲ್ಲಿ 50 ಲಕ್ಷಕ್ಕೂ ಅಧಿಕ ಹಣ ಸಂಗ್ರಹವಾಗಿದೆ. ಮತ್ತು 30 ಸಾವಿರದಷ್ಟು ಪ್ರವಾಸಿಗರು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಭೇಟಿ ನೀಡಿ ದಾಖಲೆ ಬರೆದಿದ್ದಾರೆ.

ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಜೈವಿಕ ಉದ್ಯಾನವನ ಪ್ರವಾಸಿಗರ ಅಚ್ಚುಮೆಚ್ಚಿನ ತಾಣ. ಕಾನನದ ಮಡಿಲಲ್ಲಿ ವಿಹರಿಸುವ ವನ್ಯಜೀವಿಗಳನ್ನು ಕಣ್ತುಂಬಿಕೊಳ್ಳಲು ದೇಶ ವಿದೇಶಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ವಿಶ್ವದಾದ್ಯಂತ ಕಾಡಿದ ಕೊರೋನಾ ಈ ಬನ್ನೇರುಘಟ್ಟ ಉದ್ಯಾನವನಕ್ಕೂ ಕಾಡಿತ್ತು.

29,571 ಮಂದಿ ಪ್ರವಾಸಿಗರ ಆಗಮನ

ಕೊರೋನಾ ಕಾಟದಿಂದ ಥಂಡಾ ಹೊಡೆದಿದ್ದ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಸ್ವಾತಂತ್ರ್ಯ ಅಮೃತಮಹೋತ್ಸವ ಬೂಸ್ಟರ್​ ಡೋಸ್ ನೀಡಿದೆ. 75ನೇ ಸ್ವತಂತ್ರ ಅಮೃತ ಮಹೋತ್ಸವದಂದು ಬರೋಬ್ಬರಿ 29,571 ಮಂದಿ ಪ್ರವಾಸಿಗರು ಬನ್ನೇರುಘಟ್ಟ ಪಾಕ್​ರ್ನ್ನು ವೀಕ್ಷಣೆ ಮಾಡಿದ್ದಾರೆ. ಉದ್ಯಾನವನದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ಪ್ರವಾಸಿಗರು ಆಗಮಿಸಿದಂತೆ.

ಇದನ್ನೂ ಓದಿ: ಬೆಂಗಳೂರಿನಲ್ಲಿನ್ನು ವಾಹನ ಪಾರ್ಕಿಂಗ್​ಗೆ ಸೂಪರ್ ವ್ಯವಸ್ಥೆ!

ಬರೋಬ್ಬರಿ 50 ಲಕ್ಷ ಹಣ ಸಂಗ್ರಹ

ಉದ್ಯಾನವನದಲ್ಲಿ ದಾಖಲೆಯ 50,13,980 ರೂಪಾಯಿ ಹಣ ಸಂಗ್ರಹವಾಗಿದೆ. ಅದೇ ದಿನ ಸಫಾರಿಗೆ 6 ಸಾವಿರಕ್ಕೂ ಅಧಿಕ ಮಂದಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ಅಲ್ಲದೇ 75ನೇ ಸ್ವತಂತ್ರ ಅಮೃತ ಮಹೋತ್ಸವ ಅಂಗವಾಗಿ ಬಿಎಂಟಿಸಿ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಿದ್ದರಿಂದ ಹೆಚ್ಚು ಪ್ರವಾಸಿಗರು ಭೇಟಿ ನೀಡಲು ಸಾಧ್ಯವಾಗಿದೆ.

ಅಹಿತಕರ ಘಟನೆ ನಡೆಯದಂತೆ ಅಚ್ಚುಕಟ್ಟಾದ ವ್ಯವಸ್ಥೆ

3 ದಿನ ಸರಣಿ ಸರ್ಕಾರಿ ರಜೆ, ಪ್ರಕೃತಿ ಮತ್ತು ವನ್ಯಜೀವಿಗಳ ಮೇಲಿನ ಪ್ರೀತಿಯಿಂದ ಪ್ರವಾಸಿಗರು ಭೇಟಿ ನೀಡಿದ್ದರು. ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಭೇಟಿ ನೀಡಿದರು ಯಾವುದೇ ಅಹಿತಕರ ಘಟನೆ ನಡೆಯದಂತೆ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿತ್ತು.

ವೀಕೆಂಡ್​ಗೂ ಪ್ರವಾಸಿಗರ ಸಂಖ್ಯೆ ಹೆಚ್ಚಳ

ಈ ವಾರವು ವೀಕೆಂಡ್ ಎಂಜಾಯ್ ಮಾಡಲು, ಯುವಕ ಯುವತಿಯರು, ಕುಟುಂಬ ಸದಸ್ಯರು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದ್ದಾರೆ. ಉದ್ಯಾನವನದ ಝೂ, ಚಿಟ್ಟೆಪಾರ್ಕ್ ಮತ್ತು ಸಫಾರಿಯಲ್ಲಿ ವನ್ಯಜೀವಿಗಳನ್ನು ಕಂಡು ಪ್ರವಾಸಿಗರು ಸಂತಸ ಪಟ್ಟಿದ್ದಾರೆ.

ಬೆಂಗಳೂರು ನಗರಕ್ಕೆ ಆಣತಿ ದೂರದಲ್ಲಿರುವ ಹಸಿರು ಸಿರಿ ನಡುವೆ ಕಾಡು ಪ್ರಾಣಿಗಳನ್ನು ಕಣ್ತುಂಬಿಕೊಳ್ಳಲು ಇಂದು ಸಹ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಾರೆ. ವಾರಾಂತ್ಯಕ್ಕೆ ಮತ್ತೆ ಬನ್ನೇರುಘಟ್ಟ ಜೈವಿಕ ಉದ್ಯಾನವನ ತುಂಬಿ ತುಳುಕ್ತಾ ಇರುತ್ತೆ.

ಕೊರೋನಾ ಕಾಟದ ಬಳಿಕ ಚೇತರಿಕೆ

ಒಟ್ನಲ್ಲಿ ಕೊರೋನಾ ಹೊಡೆತದಿಂದ ಆರ್ಥಿಕವಾಗಿ ನಷ್ಟ ಅನುಭವಿಸಿದ್ದ ಬನ್ನೇರುಘಟ್ಟ ಈಗ ಮತ್ತೆ ಪ್ರವಾಸಿಗರಿಂದ ತುಂಬಿ ತುಳುಕುತ್ತಿದೆ. ಜೈವಿಕ ಉದ್ಯಾನವನ 75ನೇ ಸ್ವತಂತ್ರ ಅಮೃತ ಮಹೋತ್ಸವದಂದು ದಾಖಲೆಯ ಪ್ರವಾಸಿಗರನ್ನು ತನ್ನತ್ತ ಸೆಳೆದಿದೆ. ಜೊತೆಗೆ ಸಾರ್ವಕಾಲಿಕ ಅತ್ಯಧಿಕ ಹಣ ಸಂಗ್ರಹ ಮಾಡಿದ ದಾಖಲೆ ಬರೆದಿದೆ.

ಇದನ್ನೂ ಓದಿ: ಬೆಂಗಳೂರಿಗೆ ಬರಲಿದೆ ವಿಶ್ವದ ಅತಿದೊಡ್ಡ ವಿಮಾನ! ಇದು ಹಾರುವ ಸ್ವರ್ಗ!

ನಿಮಗೂ ಕೂಡ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಭೇಟಿ ನೀಡಬೇಕು ಎಂಬ ಆಸೆ ಇದ್ದರೆ ಆನ್​ಲೈನ್ ಮೂಲಕ ಟಿಕೆಟ್ ಬುಕ್ ಮಾಡಿ ಯಾವುದೇ ಅಡೆತಡೆ ಇಲ್ಲದೆ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಭೇಟಿ ನೀಡಬಹುದು. ಜೊತೆಗೆ ಉದ್ಯಾನವನದಲ್ಲಿರುವ ಅಪರೂಪದ ಪ್ರಾಣಿ ಪ್ರಪಂಚವನ್ನು ಕಣ್ತುಂಬಿಕೊಳ್ಳಬಹುದಾಗಿದೆ.
Published by:Thara Kemmara
First published: