HOME » NEWS » State » BANNERGHATTA DOCTORS PROTECTED INDIAN GAUR ANIMAL TODAY GNR

ಬನ್ನೇರುಘಟ್ಟ ವೈದ್ಯರಿಂದ ಅಪರೂಪದ ಇಂಡಿಯನ್ ಗೌರ್ ರಕ್ಷಣೆ

ಸ್ಥಳದಲ್ಲಿಯೇ ಚಿಕಿತ್ಸೆ ನೀಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಕರೆತಂದು ಕಳೆದ ಒಂದು ವಾರದಿಂದ ಚಿಕಿತ್ಸೆ ನೀಡಲಾಗುತ್ತಿದೆ.

news18-kannada
Updated:August 25, 2020, 8:22 PM IST
ಬನ್ನೇರುಘಟ್ಟ ವೈದ್ಯರಿಂದ ಅಪರೂಪದ ಇಂಡಿಯನ್ ಗೌರ್ ರಕ್ಷಣೆ
ಇಂಡಿಯನ್​​ ಗೌರ್​​​​
  • Share this:
ಆನೇಕಲ್(ಆ.25): ಇಂಡಿಯನ್ ಗೌರ್ ಕಾಡೆಮ್ಮೆ ಜಾತಿಗೆ ಸೇರಿದ ಅಪರೂಪದ ವನ್ಯಜೀವಿ. ಕರ್ನಾಟಕ ಅದ್ರಲ್ಲು ದಕ್ಷಿಣ ಭಾತರದ ರಾಜ್ಯಗಳ ಅರಣ್ಯ ಪ್ರದೇಶಗಳಲ್ಲಿ ಕಾಣಸಿಗುವ ಅಪರೂಪದ ಪ್ರಾಣಿ. ಇತ್ತೀಚೆಗೆ ಬನ್ನೇರುಘಟ್ಟ ಅರಣ್ಯ ವ್ಯಾಪ್ತಿಯಲ್ಲಿಯು ಸಹ ಕಾಣಿಸಿಕೊಂಡಿತ್ತು. ಕೋಡಿಹಳ್ಳಿ ವೈಲ್ಡ್‌ಲೈಫ್ ರೇಂಜ್ನಲ್ಲಿ ಕಾಣಿಸಿಕೊಂಡಿದ್ದ ಇಂಡಿಯನ್ ಗೌರ್ ಗಾಯಗೊಂಡು ನಿಂತಲ್ಲೆ ನಿತ್ರಾಣಗೊಂಡಿತ್ತು. ಬನ್ನೇರುಘಟ್ಟ ಜೈವಿಕ ಉದ್ಯಾನವನದ ವೈದ್ಯರ ತಂಡ ನಿತ್ರಾಣಗೊಂಡಿದ್ದ ಪ್ರಾಣಿಗೆ ಸೂಕ್ತ ಚಿಕಿತ್ಸೆ ನೀಡಿ ಗಾಯವನ್ನು ಗುಣಪಡಿಸಿದ್ದಾರೆ.

ಹೌದು, ಇದೇ ತಿಂಗಳು 17ನೇ ತಾರೀಕು ಕೋಡಿಹಳ್ಳಿ ವೈಲ್ಡ್‌ಲೈಫ್ ರೇಂಜ್ನಲ್ಲಿ ಇಂಡಿಯನ್ ಗೌರ್ ಗಾಯಗೊಂಡು ನಿತ್ರಾಣಗೊಂಡಿದ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ನಡೆದಾಡಲು ಸಾಧ್ಯವಾಗದೇ ಮೂಕ ರೋಧನೆ ಅನುಭವಿಸುತ್ತಿತ್ರು. ಇದನ್ನು ಗಮನಿಸಿದ ರೈತರು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಅಧಿಕಾರಿಗಳು ಬನ್ನೇರುಘಟ್ಟ ಜೈವಿಕ ಉದ್ಯಾನವನದ ವೈದ್ಯರಿಗೆ ಮಾಹಿತಿ ರವಾನಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ ಬನ್ನೇರುಘಟ್ಟ ಜೈವಿಕ ಉದ್ಯಾನವನದ ವೈದ್ಯರು ಪರಿಶೀಲನೆ ನಡೆಸಿದಾಗ ಇಂಡಿಯನ್ ಗೌರ್ ಪ್ರಾಣಿಯ ಮುಂಗಾಲು ಗಾಯಗೊಂಡು ಊದಿಕೊಂಡಿತ್ತು. ನಡೆಯಲು ಕೂಡ ಆಗದೇ ನಿಂತಲ್ಲೇ ಮೂಕ ವೇದನೆ ಅನುಭವಿಸುತ್ತಿತ್ತು.

ಇದನ್ನೂ ಓದಿ: ಇನ್ನೊಂದು ವಾರದಲ್ಲಿ ಕ್ಲಬ್, ಪಬ್, ಬಾರ್‌ಗಳು ತೆರೆಯುವ ಸಾಧ್ಯತೆ : ಸಚಿವ ಹೆಚ್ ನಾಗೇಶ್

ಸ್ಥಳದಲ್ಲಿಯೇ ಚಿಕಿತ್ಸೆ ನೀಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಕರೆತಂದು ಕಳೆದ ಒಂದು ವಾರದಿಂದ ಚಿಕಿತ್ಸೆ ನೀಡಲಾಗುತ್ತಿದೆ. ಇಂಡಿಯನ್ ಗೌರ್ ಪ್ರಾಣಿ ಕಾಲಿನ ಗಾಯ ವಾಸಿಯಾಗಿದ್ದು, ಚೇತರಿಸಿಕೊಳ್ಳುತ್ತಿದೆ ಎಂದು ಉದ್ಯಾನವನದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜೊತೆಗೆ ರಾಮನಗರ ಅರಣ್ಯ ವ್ಯಾಪ್ತಿಯ ಕಾಡಿನ ಕುಪ್ಪೆ ಬಳಿ ಅಸ್ವಸ್ಥಗೊಂಡಿದ್ದ ಗಂಡು ಕರಡಿಗೆ ಸಹ ಬನ್ನೇರುಘಟ್ಟ ವೈದ್ಯರು ಸ್ಥಳಕ್ಕೆ ತೆರಳಿ ಚಿಕಿತ್ಸೆ ನೀಡಿದ್ದು, ಚೇತರಿಸಿಕೊಂಡ ಬಳಿಕ ವೈದ್ಯರ ತಂಡ ಕರಡಿಯನ್ನು ಕಾಡಿಗೆ ಬಿಟ್ಟ ಬಂದಿದ್ದಾರೆ. ಬನ್ನೇರುಘಟ್ಟ ಜೈವಿಕ ಉದ್ಯಾನವನ ವೈದ್ಯರ ತಂಡದ ಕಾರ್ಯವನ್ನು ಪ್ರಾಣಿ ಪ್ರಿಯರು ಶ್ಲಾಘಿಸಿದ್ದಾರೆ.
Published by: Ganesh Nachikethu
First published: August 25, 2020, 7:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories