• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಗ್ಯಾಸ್ ಸ್ಟವ್ ಹೋಲ್ಡರ್​ನಲ್ಲಿ ಡ್ರಗ್ಸ್; ಬೆಂಗಳೂರು ಏರ್​ಪೋರ್ಟ್​ನಲ್ಲಿ ಸಿಕ್ಕಿದ ಎಫೆಡ್ರೈನ್

ಗ್ಯಾಸ್ ಸ್ಟವ್ ಹೋಲ್ಡರ್​ನಲ್ಲಿ ಡ್ರಗ್ಸ್; ಬೆಂಗಳೂರು ಏರ್​ಪೋರ್ಟ್​ನಲ್ಲಿ ಸಿಕ್ಕಿದ ಎಫೆಡ್ರೈನ್

ಬೆಂಗಳೂರು ಏರ್​ಪೋರ್ಟ್​

ಬೆಂಗಳೂರು ಏರ್​ಪೋರ್ಟ್​

ತಮಿಳುನಾಡಿನಿಂದ ಕೊರಿಯರ್ ಮೂಲಕ ಬಂದಿದ್ದ ಗ್ಯಾಸ್ ಸ್ಟೌವ್ ಪಾರ್ಸಲ್ ಅನ್ನು ಬಿಚ್ಚಿ ಪರೀಕ್ಷಿಸಿದಾಗ ನಿಷೇಧಿತ ಎಫೆಡ್ರೈನ್ ಡ್ರಗ್ ಪತ್ತೆಯಾಗಿದೆ. ಆಸ್ಟ್ರೇಲಿಯಾದ ಸಿಡ್ನಿಗೆ ಇದನ್ನು ಕಳುಹಿಸಲು ಬುಕ್ ಮಾಡಲಾಗಿತ್ತು.

  • News18
  • 4-MIN READ
  • Last Updated :
  • Share this:

ಬೆಂಗಳೂರು: ಆಸ್ಟ್ರೇಲಿಯಾಗೆ ಸಾಗಣೆಯಾಗುತ್ತಿದ್ದ ಎಫೆಡ್ರೈನ್ ಎಂಬ ನಿಷೇಧಿತ ಮಾದಕವಸ್ತುವನ್ನು ಬೆಂಗಳೂರು ಏರ್​ಪೋರ್ಟ್​ನಲ್ಲಿ ಅಧಿಕಾರಿಗಳು ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ. ಚೆನ್ನೈನಿಂದ ಬಂದಿದ್ದ ಗ್ಯಾಸ್ ಸ್ಟೋವ್ ಪಾರ್ಸಲ್​ನಲ್ಲಿ ಈ ವಸ್ತುವನ್ನು ಇಡಲಾಗಿತ್ತು. ಗ್ಯಾಸ್ ಸ್ಟೋವ್​ನ ಹೋಲ್ಡರ್​ಗಳಲ್ಲಿ ಬಚ್ಚಿಡಲಾಗಿದ್ದ 2 ಕಿಲೋ ತೂಕದ ಎಫೆಡ್ರೈನ್​ನ ಮೌಲ್ಯ 80 ಲಕ್ಷ ಇರಬಹುದು ಎಂದು ಅಂದಾಜಿಸಲಾಗಿದೆ.


ತಮಿಳುನಾಡಿನ ಅಂಬೂರ್​ನಲ್ಲಿ ವ್ಯಕ್ತಿಯೊಬ್ಬರು ಈ ಗ್ಯಾಸ್ ಸ್ಟೋವ್​ಗಳನ್ನ ಡಿಎಚ್​ಎಲ್ ಕೊರಿಯರ್ ಮೂಲಕ ಬೆಂಗಳೂರಿಗೆ ಕಳುಹಿಸಿದ್ದರು. ಇದನ್ನು ಆಸ್ಟ್ರೇಲಿಯಾದ ಸಿಡ್ನಿಗೆ ಕಾರ್ಗೊ ವಿಮಾನದ ಮೂಲಕ ಅವರು ಕಳುಹಿಸಲು ಬುಕ್ ಮಾಡಿದ್ದರು. ಬೆಂಗಳೂರು ಏರ್​ಪೋರ್ಟ್​ಗೆ ಈ ಪಾರ್ಸಲ್ ಬಂದಾಗ ಮಾಮೂಲಿಯಂತೆ ಪರಿಶೀಲನೆ ಮಾಡಲಾಗಿದೆ. ಏರ್​ಪೋರ್ಟ್​ನಲ್ಲಿ ಅಳವಡಿಸಲಾಗಿದ್ದ ಅತ್ಯಾಧುನಿಕ ಸ್ಕ್ಯಾನಿಂಗ್ ಮೆಷೀನ್​ನಲ್ಲಿ ನಿನ್ನೆ ಇದರ ಸ್ಕ್ಯಾನ್ ಮಾಡಿದಾಗ ಅನುಮಾನ ಬಂದಿದೆ. ಆಗ ಸ್ಟೌವ್ ಅನ್ನು ಬಿಚ್ಚಿ ನೋಡಿದಾಗ ಹೋಲ್ಡರ್​ಗಳ ಒಳಗೆ ಬಿಳಿ ಪದಾರ್ಥ ಕಣ್ಣಿಗೆ ಬಿದ್ದಿತು. ಅದನ್ನು ಪರಿಶೀಲಿಸಿದಾಗ ಅದು ನಿಷೇಧಿತ ಎಫೆಡ್ರೈನ್ ಎಂಬ ಅಮಲು ಪದಾರ್ಥ ಎಂದು ಗೊತ್ತಾಗಿದೆ. ಬಳಿಕ ಅದನ್ನು ಅಧಿಕಾರಿಗಳು ಸೀಜ್ ಮಾಡಿದ್ಧಾರೆ.


ಇದನ್ನೂ ಓದಿ: ಸುಶಾಂತ್ ಸಿಂಗ್​ರದ್ದು ಕೊಲೆಯಲ್ಲ? ಶೀಘ್ರದಲ್ಲೇ ಸಿಬಿಐ ತನಿಖಾ ವರದಿ ಸಲ್ಲಿಕೆ ಸಾಧ್ಯತೆ


ಏರ್​ಪೋರ್ಟ್​ನಲ್ಲಿ ಪತ್ತೆಯಾದ ಈ ಎಫೆಡ್ರೈನ್ ವಸ್ತು ನಿಷೇಧಿತ ಡ್ರಗ್ಸ್ ಆಗಿದೆ. ಕೆಲವೊಮ್ಮೆ ಇದನ್ನು ವೈದ್ಯಕೀಯ ಚಿಕಿತ್ಸೆಗೂ ಬಳಕೆ ಮಾಡುವುದುಂಟು. ಆದರೆ, ಅಮಲು ಬರಿಸುವ ಈ ಪದಾರ್ಥ ಬಹುತೇಕ ಡ್ರಗ್ಸ್​ ಆಗಿ ಉಪಯೋಗಿಸಲಾಗುತ್ತದೆ. ಈ ಎರಡು ಕಿಲೋ ಎಫೆಡ್ರೈನ್​ಗೆ ಕಳ್ಳಮಾರುಕಟ್ಟೆಯಲ್ಲಿ 80 ಲಕ್ಷ ರೂ ಮೌಲ್ಯ ಇದೆ. ಆಸ್ಟ್ರೇಲಿಯಾದಲ್ಲಿ ಇದಕ್ಕೆ ಇನ್ನೂ ಹೆಚ್ಚಿನ ಬೆಲೆ ಇದೆ.

top videos
    First published: