Bank Holiday 2019: ಸೆ.26ರಿಂದ ಐದು ದಿನ ಬ್ಯಾಂಕ್​​ ರಜೆ; ಎಟಿಎಂನಿಂದ ಇಂದೇ ಹಣ ಡ್ರಾ ಮಾಡಿಟ್ಟುಕೊಳ್ಳಿ!

ಎಟಿಎಂಗಳಲ್ಲೂ ನಗದು ಕೊರತೆ ಎದುರಾಗುವ ಮುನ್ನವೇ ಹಣ ಡ್ರಾ ಮಾಡಿಕೊಳ್ಳಿ. ದಸರಾ ಹಬ್ಬವೂ ಇರುವ ಕಾರಣದಿಂದ ನಿಮಗೆ ಸಾಕಷ್ಟು ಖರ್ಚುಗಳು ಇರುತ್ತವೆ. ಇಷ್ಟು ದಿನ ರಜೆ ಬಂದಿರುವುದರಿಂದ ಎಟಿಎಂ ಸೇವೆಯನ್ನು ಸರಿಯಾಗಿ ಒದಗಿಸಲು ಬ್ಯಾಂಕ್​​​ಗಳಿಗೆ ಕಷ್ಟವಾಗಬಹುದು.

news18
Updated:September 19, 2019, 6:23 PM IST
Bank Holiday 2019: ಸೆ.26ರಿಂದ ಐದು ದಿನ ಬ್ಯಾಂಕ್​​ ರಜೆ; ಎಟಿಎಂನಿಂದ ಇಂದೇ ಹಣ ಡ್ರಾ ಮಾಡಿಟ್ಟುಕೊಳ್ಳಿ!
ಸಾಂದರ್ಭಿಕ ಚಿತ್ರ
news18
Updated: September 19, 2019, 6:23 PM IST
ಬೆಂಗಳೂರು(ಸೆ.19): ಇದೇ ತಿಂಗಳಾಂತ್ಯಕ್ಕೆ ಸತತ ಐದು ದಿನಗಳ ಕಾಲ ಬ್ಯಾಂಕ್​ ರಜೆ ಇರು​ವುದರಿಂದ ಎಟಿಎಂಗಳಲ್ಲಿ ನೋ ಕ್ಯಾಶ್‌ ಬೋರ್ಡ್‌ ಕಾಣುವ ಸಾಧ್ಯತೆ ಇದೆ. ಹೀಗಾಗಿ ನಿಮ್ಮ ಯಾವುದೇ ವ್ಯವಹಾರ ಇದ್ದಲ್ಲಿ ಇಂದೇ ಎಟಿಎಂಗಳಲ್ಲಿ ಹಣ ಡ್ರಾ ಮಾಡಿಕೊಂಡು ಇಟ್ಟುಕೊಳ್ಳವುದು ಒಳಿತು. ಇಲ್ಲದೇ ಹೋದಲ್ಲಿ ಬ್ಯಾಂಕ್​​ಗೆ ಐದು ರಜೆಯಿರುವ ಕಾರಣ, ಹಣ(ನಗದು)ಕ್ಕೆ ತೊಂದರೆಯಾಗಲಿದೆ.

ಸೆಪ್ಟೆಂಬರ್​ 26ರಿಂದ​ 30ರವರೆಗೂ ಬ್ಯಾಂಕ್​​ಗೆ​​ ರಜೆ ಇರಲಿದೆ. ಸತತ ಐದು ದಿನಗಳು ರಜೆ ಇರಲಿದ್ದು, ಬ್ಯಾಂಕ್​​​ ಗ್ರಾಹಕರಿಗೆ ನಗದು ಕೊರತೆ ಸಾಧ್ಯತೆಯಿದೆ. ಮುಂದಿನ ಗುರುವಾರ(ಸೆ.26) ಮತ್ತು ಶುಕ್ರವಾರ(ಸೆ.27) ಬ್ಯಾಂಕ್​​ ವಿಲೀನ ವಿರೋಧಿಸಿ ಮುಷ್ಕರ ನಡೆಯಲಿದೆ. ಸೆಪ್ಟೆಂಬರ್ 28 ನಾಲ್ಕನೇ ಶನಿವಾರ, ಸೆಪ್ಟೆಂಬರ್ 29ರಂದು ಭಾನುವಾರ ಬ್ಯಾಂಕ್ ತೆರೆಯುವುದಿಲ್ಲ. ಅಂತೆಯೇ ಸೆಪ್ಟೆಂಬರ್ 30ಕ್ಕೆ ಬ್ಯಾಂಕುಗಳ ಅರ್ಧ ವಾರ್ಷಿಕ ಲೆಕ್ಕಪತ್ರ ದಿನವಾಗಿದೆ. ಹೀಗಾಗಿ ಅಂದೂ ಬ್ಯಾಂಕ್ ತೆರೆಯುವುದಿಲ್ಲ ಎನ್ನುತ್ತಿವೆ ಮೂಲಗಳು.

ಮುಂದಿನ ತಿಂಗಳು ಅಕ್ಟೋಬರ್​​​ 1ರಂದು ಮಾತ್ರ ಬ್ಯಾಂಕ್​​​ ತೆರೆಯಲಾಗವುದು. ಬಳಿಕ ಮರುದಿನ ಅಕ್ಟೋಬರ್​​ 2ಕ್ಕೆ ಗಾಂಧಿ ಜಯಂತಿ ಇರುವುದರಿಂದ ಬ್ಯಾಂಕ್​​ಗೆ ರಜೆ ಇರುತ್ತದೆ. ಹೀಗಾಗಿ ಒಂದು ವಾರಗಳ ಕಾಲ ಗ್ರಾಹಕರಿಗೆ ಬ್ಯಾಂಕ್​​ ಸೇವೆ ಲಭ್ಯವಾಗದೇ ಹಣ ಹೊಂದಿಸಲು ಸಮಸ್ಯೆಯಾಗಲಿದೆ.

ಇದನ್ನೂ ಓದಿ: ಮೈಸೂರು ದಸರಾ 2019: ಪ್ರವಾಸಿ ಸ್ಥಳಗಳ ಭೇಟಿಗೆ ವಿಶೇಷ ಪ್ಯಾಕೇಜ್​ ಘೋಷಿಸಿದ ಕೆಎಸ್​​ಆರ್​​ಟಿಸಿ

ವಾರದಲ್ಲಿ ಆರು ದಿನ ರಜೆ ಇದೆ. ಆದ್ದರಿಂದ ಇಂದಿನಿಂದಲೇ ನಿಮಗೆ ಎಷ್ಟು ಹಣ ಬೇಕೋ ಎಟಿಎಂನಿಂದ ಡ್ರಾ ಮಾಡಿಕೊಳ್ಳುವುದು ಒಳ್ಳೆಯದು. ಸಾಧ್ಯವಾದರೇ ತಾವು ಬ್ಯಾಂಕ್ ಸೇವೆಗಳಾದ ಹಣ ಪಾವತಿ, ವಿತ್ ಡ್ರಾ, ಡಿಡಿ, ಚೆಕ್ ಮೊದಲಾದ ಕೆಲಸಗಳನ್ನು ಮುಗಿಸಿಕೊಂಡರೆ ನಿಮ್ಮ ವ್ಯವಹಾರಕ್ಕೆ ಯಾವುದೇ ತಡೆಯಾಗುವುದಿಲ್ಲ.

ಎಟಿಎಂಗಳಲ್ಲೂ ನಗದು ಕೊರತೆ ಎದುರಾಗುವ ಮುನ್ನವೇ ಹಣ ಡ್ರಾ ಮಾಡಿಕೊಳ್ಳಿ. ದಸರಾ ಹಬ್ಬವೂ ಇರುವ ಕಾರಣದಿಂದ ನಿಮಗೆ ಸಾಕಷ್ಟು ಖರ್ಚುಗಳು ಇರುತ್ತವೆ. ಇಷ್ಟು ದಿನ ರಜೆ ಬಂದಿರುವುದರಿಂದ ಎಟಿಎಂ ಸೇವೆಯನ್ನು ಸರಿಯಾಗಿ ಒದಗಿಸಲು ಬ್ಯಾಂಕ್​​​ಗಳಿಗೆ ಕಷ್ಟವಾಗಬಹುದು.
------------
Loading...

First published:September 19, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...