ಸಾಲಮನ್ನಾಗೆ ಬ್ಯಾಂಕ್​ಗಳು ಒಪ್ಪದಿದ್ದಲ್ಲಿ ರೈತರ ಖಾತೆಗೆ ನೇರ ಜಮೆ ಮಾಡಲಾಗುವುದು : ಸಚಿವ ರೇವಣ್ಣ

news18
Updated:August 27, 2018, 5:15 PM IST
ಸಾಲಮನ್ನಾಗೆ ಬ್ಯಾಂಕ್​ಗಳು ಒಪ್ಪದಿದ್ದಲ್ಲಿ ರೈತರ ಖಾತೆಗೆ ನೇರ ಜಮೆ ಮಾಡಲಾಗುವುದು : ಸಚಿವ ರೇವಣ್ಣ
news18
Updated: August 27, 2018, 5:15 PM IST
- ಡಿಎಂಜಿಹಳ್ಳಿ ಅಶೋಕ್, ನ್ಯೂಸ್ 18 ಕನ್ನಡ 

ಹಾಸನ ( ಆಗಸ್ಟ್ 27) :  ಸಾಲಮನ್ನಾಗೆ ಬ್ಯಾಂಕ್​ಗಳು ಒಪ್ಪದಿದ್ದಲ್ಲಿ ರೈತರ ಖಾತೆಗೆ ನೇರ ಜಮೆ ಮಾಡಲಾಗುವುದು ಎಂದು ಲೋಕೋಪಯೋಗಿ ಸಚಿವ ಹೆಚ್​.​ ಡಿ ರೇವಣ್ಣ ಹೇಳಿದ್ದಾರೆ.

ಹಾಸನದಲ್ಲಿ ಮಾತನಾಡಿದ ಸಚಿವ ರೇವಣ್ಣ,  ರಿಸರ್ವ್ ಬ್ಯಾಂಕ್  ಸಾಲಮನ್ನಾ ಮಾಡಲು ಒಪ್ಪದಿದ್ದರೆ . 3 ಕಂತಿನಲ್ಲಿ ರೈತರಿಗೆ ಹಣ ಜಮಾ ಮಾಡುತ್ತೇವೆ. ಆರ್​.ಬಿ.ಐ,  ಬಿಜೆಪಿ ಯವರು ಅನುಮತಿ ನೀಡದಿದ್ದರೆ  ಏನು ಮಾಡಬೇಕೆಂದು ನಮಗೆ ಗೊತ್ತಿದೆ. ಸಾಲಮನ್ನಾ ವಿಚಾರದಲ್ಲಿ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ಇವರ ಬಂಡವಾಳ ಎನು ಎಂದು ರಾಜ್ಯದ ಜನರಿಗೆ ಗೊತ್ತಿದೆ ಎಂದು ಆರೋಪಿಸಿದರು.

ಸಾಲಮನ್ನಾ ಬಗ್ಗೆ ಮಾತನಾಡಲು ಶಾಸಕ ಬಿ.ಶ್ರೀರಾಮುಲುಗೆ ನೈತಿಕತೆಯಿಲ್ಲ. ಋಣಮುಕ್ತ ಪತ್ರ ನೀಡಿದರೆ ರಾಜೀನಾಮೆ ನೀಡುತ್ತೇನೆ ಎಂದಿದ್ದ ರಾಮುಲು ವಿರುದ್ಧ ಆರೋಪ ಮಾಡಿದರು.

ಮಿರ್ಚಿ ಬಜ್ಜಿ ತಿಂದು ಕಣ್ಣೀರು ಹಾಕಿದ ಸಚಿವ ಹೆಚ್​.ಡಿ.ರೇವಣ್ಣ

ಇದೇ ಸಂದರ್ಭದಲ್ಲಿ ಮಿರ್ಚಿ ಬಜ್ಜಿ  ತಿಂದು ಕಣ್ಣೀರು ಹಾಕಿದ ಪ್ರಸಂಗ ನಡೆಯಿತು ಇದರಿಂದ ರೇವಣ್ಣ ಯಾರಪ್ಪ ಈ ಮೀರ್ಚಿಯನ್ನು ಮಾಡಿದ್ದು ಯಾರಪ್ಪ. ಇದನ್ನು ತಿಂದು ಬಿಟ್ಟು ಮೂಗಿನಲ್ಲೂ ನೀರು ಬರುತ್ತದೆ ಎಂದು ಹೇಳಿ ಸೇರಿದ್ದ ಎಲ್ಲರಲ್ಲೂ ನಗೆಗಡಲಲ್ಲಿ ತೆಲಿಸಿದರು.

Loading...

 
First published:August 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...