• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಬ್ಯಾಂಕ್​ಗಳೇ ಸೇರಿ ನನ್ನನ್ನು ದಿವಾಳಿಯಾಗಿಸುತ್ತಿವೆ: ವ್ಯಂಗ್ಯವಾಡಿ ಟ್ವೀಟ್​ ಮಾಡಿದ ವಿಜಯ್​ ಮಲ್ಯ

ಬ್ಯಾಂಕ್​ಗಳೇ ಸೇರಿ ನನ್ನನ್ನು ದಿವಾಳಿಯಾಗಿಸುತ್ತಿವೆ: ವ್ಯಂಗ್ಯವಾಡಿ ಟ್ವೀಟ್​ ಮಾಡಿದ ವಿಜಯ್​ ಮಲ್ಯ

ವಿಜಯ್​ ಮಲ್ಯ

ವಿಜಯ್​ ಮಲ್ಯ

" ಭಾರತೀಯ ಕಾಲಮಾನ 3.42ಕ್ಕೆ [15.42 ಯುಕೆ ಸಮಯ ] ಮಲ್ಯ ಅವರು ದಿವಾಳಿಯೆಂದು ತೀರ್ಪು ನೀಡುತ್ತೇನೆ" ಎಂದು ಕಂಪನಿ ವ್ಯವಹಾರಗಳ ನ್ಯಾಯಾಲಯದ (ಐಸಿಸಿ) ನ್ಯಾಯಾಧೀಶ ಮೈಕೆಲ್ ಬ್ರಿಗ್ಸ್ ಅವರು ಹೈಕೋರ್ಟ್‌ನ ಚಾನ್ಸರಿ ವಿಭಾಗದಲ್ಲಿ ಆನ್​ಲೈನ್​ ಮೂಲಕ ನಡೆದ ವಿಚಾರಣೆಯ ಸಂದರ್ಭದಲ್ಲಿ ತಮ್ಮ ತೀರ್ಪನ್ನು ತಿಳಿಸಿದ್ದಾರೆ.

ಮುಂದೆ ಓದಿ ...
  • Share this:

    ಉದ್ಯಮಿ ವಿಜಯ್ ಮಲ್ಯ ಅವರನ್ನು ದಿವಾಳಿಯೆಂದು ಲಂಡನ್ ಹೈಕೋರ್ಟ್ ಸೋಮವಾರ ಘೋಷಿಸಿದ ನಂತರ, ಈ ಸಂಬಂಧ ಮಾತನಾಡಿರುವ ವಿಜಯ್​ ಮಲ್ಯ ಜಾರಿ ನಿರ್ದೇಶನಾಲಯವು ನನ್ನ ಒಟ್ಟು ಆಸ್ತಿಯ ಮೌಲ್ಯ 14,000 ಸಾವಿರ ಕೋಟಿ ಎಂದು ಹೇಳುತ್ತಿದೆ. ಆದರೆ ಬ್ಯಾಂಕ್​ಗಳು 6,200 ಕೋಟಿ ರೂ.ಗಳ ಸಾಲದ ವಿರುದ್ಧ 14,000 ಕೋಟಿ ರೂ.ಗಳ ಆಸ್ತಿಯನ್ನು ಜಪ್ತಿ ಮಾಡಲು ಹೊರಟಿವೆ. ಇದನ್ನು ನೋಡಿದರೆ ಬ್ಯಾಂಕ್​ಗಳು ಸೇರಿ  ನನ್ನನ್ನು ಈಗ ದಿವಾಳಿಯಾಗಿಸುತ್ತಿವೆ ಎಂದು ಮಲ್ಯ ಆರೋಪ ಮಾಡಿದ್ದಾರೆ.


    "ಇ.ಡಿ 14 ಸಾವಿರ ಕೋಟಿ ಮೌಲ್ಯದಷ್ಟು ಇರುವ ನನ್ನ ಆಸ್ತಿಯನ್ನು ಸರ್ಕಾರಿ ಬ್ಯಾಂಕುಗಳ ಮನವಿ ಮೇರೆಗೆ 6.2 ಸಾವಿರ ಕೋಟಿಯನ್ನು ಬ್ಯಾಂಕ್​ ಸಾಲಕ್ಕೆ ಲಗತ್ತಿಸಿದೆ. ಬ್ಯಾಂಕ್​ಗಳ ಎಲ್ಲಾ ಬಡ್ಡಿ ಸೇರಿ 9 ಸಾವಿರ ಕೋಟಿ  ಹಣವನ್ನು ವಸೂಲಿ ಮಾಡುತ್ತಿವೆ. ಮಿಕ್ಕ 5 ಸಾವಿರ ಕೋಟಿ ಹೆಚ್ಚಿಗೆ ವಸೂಲಿ ಮಾಡುತ್ತಿವೆ. ಈ ಹಣವನ್ನು ಇ.ಡಿಗೆ ಹಿಂದಿರುಗಿಸಬೇಕಾಗಿರುವುದರಿಂದ ಬ್ಯಾಂಕುಗಳು ನನ್ನನ್ನು ನ್ಯಾಯಲಯದಲ್ಲಿ ದಿವಾಳಿ ಎಂದು ಘೋಷಿಸುವಂತೆ ಮಾಡಿವೆ. ಅದ್ಬುತ ಕೆಲಸ’’, ಎಂದು ವ್ಯಂಗ್ಯವಾಡಿ ಮಲ್ಯ ಟ್ವೀಟ್‌ ಮಾಡಿದ್ದಾರೆ.


    https://twitter.com/TheVijayMallya/status/1419724187325845508


    ಲಂಡನ್ ಹೈಕೋರ್ಟ್ ವಿಜಯ್ ಮಲ್ಯ ಅವರನ್ನು ಸೋಮವಾರ ನೀಡಿದ ತೀರ್ಪಿನಲ್ಲಿ ದಿವಾಳಿಯೆಂದು ಘೋಷಿಸಿತ್ತು, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ನೇತೃತ್ವದ ಭಾರತೀಯ ಬ್ಯಾಂಕುಗಳ ಒಕ್ಕೂಟವು ಮಲ್ಯ ಅವರ ಈಗ ಕಾರ್ಯನಿರ್ವಹಿಸದ, ಮುಚ್ಚಿ ಹೋಗಿರುವ ಕಿಂಗ್‌ಫಿಶರ್ ಏರ್‌ಲೈನ್ಸ್‌ಗೆ ಪಾವತಿಸಿದ ಸಾಲವನ್ನು ವಸೂಲಿ ಮಾಡುವ ಪ್ರಕರಣವನ್ನು ಇದರಿಂದ ಗೆದ್ದಂತಾಗಿದೆ.


    ಮಲ್ಯ ಅವರ ಆಸ್ತಿಗಳನ್ನು ವಶಪಡಿಸಿಕೊಳ್ಳಲು ಈ ತೀರ್ಪಿನಿಂದಾಗಿ ಅವಕಾಶ ಸಿಕ್ಕಂತಾಗಿದೆ. ಹೈಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಮಲ್ಯ ಇದೇ ವೇಳೆ ಹೇಳಿದ್ದಾರೆ, ಆದರೆ ಇದಕ್ಕೆ ಅನುಮತಿ ನಿರಾಕರಿಸಲಾಗಿದೆ.

    ಭಾರತೀಯ ಕಾಲಮಾನ 3.42ಕ್ಕೆ [15.42 ಯುಕೆ ಸಮಯ ] ಮಲ್ಯ ಅವರು ದಿವಾಳಿಯೆಂದು ತೀರ್ಪು ನೀಡುತ್ತೇನೆ" ಎಂದು ಕಂಪನಿ ವ್ಯವಹಾರಗಳ ನ್ಯಾಯಾಲಯದ (ಐಸಿಸಿ) ನ್ಯಾಯಾಧೀಶ ಮೈಕೆಲ್ ಬ್ರಿಗ್ಸ್ ಅವರು ಹೈಕೋರ್ಟ್‌ನ ಚಾನ್ಸರಿ ವಿಭಾಗದಲ್ಲಿ ಆನ್​ಲೈನ್​ ಮೂಲಕ ನಡೆದ ವಿಚಾರಣೆಯ ಸಂದರ್ಭದಲ್ಲಿ ತಮ್ಮ ತೀರ್ಪನ್ನು ತಿಳಿಸಿದ್ದಾರೆ.


     ಮೇನಲ್ಲಿ ಆನ್​ಲೈನ್​ ಮೂಲಕ ವಿಚಾರಣೆ ನಡೆಸಲಾಗಿತ್ತು, ಬ್ಯಾಂಕುಗಳು ಸಲ್ಲಿಸಿದ್ದ ದಿವಾಳಿತನದ ಅರ್ಜಿಯನ್ನು ತಿದ್ದುಪಡಿ ಮಾಡುವ ಕಾನೂನನ್ನು ಲಂಡನ್ ಹೈಕೋರ್ಟ್ ಎತ್ತಿಹಿಡಿದಿತ್ತು, ಭಾರತದಲ್ಲಿ ಇರುವ  ಆಸ್ತಿಗಳ ಮೇಲೆ ತಮ್ಮ ಆಸ್ತಿಗೆ ಭದ್ರತೆಯನ್ನು ನೀಡಬೇಕು ಎಂದು ವಿಜಯ್​ ಮಲ್ಯ ಅವರು ನ್ಯಾಯಲಯದಲ್ಲಿ ಅರ್ಜಿ ಸಲ್ಲಿಸಿದರು. ಅರ್ಜಿಯು 2018 ರಲ್ಲಿ ಸಲ್ಲಿಸಿತ್ತು.





    ವಿದೇಶಾಂಗ ಕಾರ್ಯದರ್ಶಿ ಹರ್ಷ್ ವರ್ಧನ್ ಶ್ರೀಂಗಾಲ್​ ಅವರು ಈ ತೀರ್ಪಿನ ಕುರಿತು  ಪ್ರತಿಕ್ರಿಯಿಸಿದ್ದು, ಬ್ಯಾಂಕ್​ಗಳಿಗೆ ವಂಚಿಸಿ ವಿದೇಶಕ್ಕೆ ಪರಾರಿಯಾಗಿ ಬಂದಿರುವ ವಿಜಯ್ ಮಲ್ಯ ಅವರ ಬಗ್ಗೆ ಭಾರತದ ಪರವಾಗಿ ಬಂದಿರುವ ಅತ್ಯುತ್ತಮ ತೀರ್ಪು ಇದಾಗಿದೆ.  ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪಗಳನ್ನು ಎದುರಿಸುತ್ತಿರುವ ಆರೋಪಿಯನ್ನು ಯುಕೆ ಅಧಿಕಾರಿಗಳು ಶೀಘ್ರ ಹಸ್ತಾಂತರಿಸುತ್ತಾರೆ ಈ ಬಗ್ಗೆ ಭಾರತ ಸರ್ಕಾರಕ್ಕೆ ಭರವಸೆ ಇದೆ ಎಂದು ಹೇಳಿದರು.








    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.



    Published by:HR Ramesh
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು