News18 India World Cup 2019

ಸಾಲಕ್ಕಾಗಿ ಬ್ಯಾಂಕ್ ಮುಂದೆ ರೈತರ ಧರಣಿ; ತಮ್ಮದೆ ಹಣ ಪಡೆಯಲು ಪರದಾಡುತ್ತಿರುವ ಅನ್ನದಾತ

news18
Updated:June 4, 2018, 6:50 PM IST
ಸಾಲಕ್ಕಾಗಿ ಬ್ಯಾಂಕ್ ಮುಂದೆ ರೈತರ ಧರಣಿ; ತಮ್ಮದೆ ಹಣ ಪಡೆಯಲು ಪರದಾಡುತ್ತಿರುವ ಅನ್ನದಾತ
news18
Updated: June 4, 2018, 6:50 PM IST
-ಲೋಹಿತ್ ಶಿರೋಳ ನ್ಯೂಸ್18 ಕನ್ನಡ

ಚಿಕ್ಕೋಡಿ ( ಜೂನ್ . 04) :  ಸರ್ಕಾರ ರೈತರಿಗೆ ಉಪಯೋಗ ಆಗಲಿ ಅಂತಾ ಸಾಲ ಮಂಜುೂರು ಮಾಡಿದೆ. ಆ ಸಾಲ ರೈತರ ಅಕೌಂಟಿಗೂ ಜಮೆ ಆಗಿದೆ. ಬ್ಯಾಂಕ್ ಅಧಿಕಾರಿಗಳು ಮಾತ್ರ ರೈತರಿಗೆ ಹಣ ನೀಡ್ತಿಲ್ಲ. ಹೀಗಾಗಿ ರೈತರು ಬ್ಯಾಂಕ್ ಮುಂದೆ ಪ್ರತಿಭಟನೆ ಮಾಡ್ತಿದ್ದರೆ ಇತ್ತ ಬ್ಯಾಂಕ್ ಅಧಿಕಾರಿಗಳು ತಮಗೂ ಅದಕ್ಕೂ ಸಂಬಂಧ ಇಲ್ಲ ಅನ್ನೋಹಾಗೆ ಬೀಗ ಹಾಕೊಂಡು ಕೆಲಸ ಮಾಡ್ತಿದ್ದಾರೆ. ಅಷ್ಟಕ್ಕೂ ಯಾವುದು ಆ ಬ್ಯಾಂಕ್ ಅಂತೀರಾ ಈ  ವರದಿ ನೋಡಿ

ಬೆಳಗಾವಿ ಜಿ್ಲ್ಲೆಯ  ಹುಕ್ಕೇರಿ ಪಟ್ಟಣದಲ್ಲಿರುವ ಡಿಸಿಸಿ ಬ್ಯಾಂಕ್​​ಗೆ  ರೈತರ ಅಕೌಂಟುಗಳಿಗೆ ಸಿದ್ದರಾಮಯ್ಯ ಸಾಲ ಮನ್ನಾ ಮಾಡಿದ ನಂತರ ಹೊಸ ಸಾಲಕ್ಕಾಗಿ ರೈತರು ಅರ್ಜಿ ಹಾಕಿದ್ದರು. ಆ ಹಣ ಮಂಜೂರಾಗಿ ರೈತರ ಅಕೌಂಟುಗಳಿಗೆ ಜಮೆಯೂ ಆಗಿತ್ತು. ಜಮೆಯಾಗಿ 15 ದಿನ ಕಳೆದರೂ ಸಹ ಬ್ಯಾಂಕ್ ಅಧಿಕಾರಿಗಳು ಮಾತ್ರ ಸಾಲದ ಹಣವನ್ನು ನೀಡೋದಕ್ಕೆ ಮೀನ ಮೇಷ ಎನಿಸುತ್ತಿದ್ದಾರೆ.

ದಿನನಿತ್ಯ ಸಾಲದ ಹಣಕ್ಕಾಗಿ ರೈತರು ಬ್ಯಾಂಕ್​ಗೆ ಅಲೆದು ಚಪ್ಪಲಿ ಸವೆಸಿಕೊಂಡರು ಅಧಿಕಾರಿಗಳು ಮಾತ್ರ ನಾಳೆ ಬಾ ಪಾಲಿಸಿ ಅನುಸರಿಸಿದ್ದಾರೆ. ಹೀಗಾಗಿ ಇವತ್ತು ರೈತರು ಬ್ಯಾಂಕ್ ಮುಂದೆ ಪ್ರತಿಭಟನೆ ನಡೆಸಿದರು. ಅಲ್ಲದೆ ತಮಗೆ ಸಾಲಹ ಹಣ ಸಿಗುವವರೆಗೂ ಬ್ಯಾಂಕ್ ಬಿಟ್ಟು ಕದಲೊದಿಲ್ಲ ಅಂತ ರೈತರು ಸ್ಪಷ್ಟಪಡಿಸಿದ್ದಾರೆ.

ಇನ್ನು ರೈತರು  ಪ್ರತಿಭಟನೆ ಮಾಡುತ್ತಿದ್ದರೂ ಸಹ ಯಾವುದೇ ಜಿಲ್ಲಾ ಮಟ್ಟದ ಅಥವಾ ಜಿಲ್ಲಾಡಳಿತ ಅಧಿಕಾರಿಗಳು ಇತ್ತ ತಲೆ ಹಾಕಿಯೂ ಮಲಗಿಲ್ಲ. ಅಲ್ಲದೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ್ ಕತ್ತಿಯೂ ಸಹ ಸ್ಥಳಕ್ಕೆ ಬಂದು ರೈತರ ಸಮಸ್ಯೆ ಆಲಿಸಲು ಮುಂದಾಗಿಲ್ಲ. ಇದು ರೈತರ ಕೆಂಗಣ್ಣಿಗೆ ಗುರಿಯಾಗಿದೆ.

ಒಟ್ಟಾರೆಯಾಗಿ ಸರ್ಕಾರವೇನೋ ಸಾಲ ಮನ್ನಾ ಮಾಡಿ ರೈತರು ಕೇಳಿದ ಮರು ಸಾಲವನ್ನು ಸಹ ಅವರ ಅಕೌಂಟಿಗೆ ಹಾಕಿದೆ. ದೇವರು ಕೊಟ್ಟು ಕೈ ತೊಳೆದುಕೊಂಡರು ಸಹ ಪೂಜಾರಿಗಳು ಕೊಡಲಿಲ್ಲ ಅನ್ನೊಹಾಗೆ ಬ್ಯಾಂಕ್ ಸಿಬ್ಬಂಧಿಗಳು ಬಾಗಿಲು ಹಾಕಿಕೊಂಡು ಕೆಲಸ ಮಾಡುತ್ತಿದ್ದಾರೆ. ಇದರ ಹಿಂದೆ ರಾಜಕೀಯ ಕೈವಾಡವಿರುವುದು ಮೆಲ್ನೋಟಕ್ಕೆ ಗೋಚರವಾಗುತ್ತಿದ್ದರು ಜಿಲ್ಲಾಡಳಿತ ಮಾತ್ರ ಸುಮ್ಮನೆ ಕುಳಿತಿದೆ. ಹೀಗಾಗಿ ರೈತರ ಸಮಸ್ಯೆಗೆ ಸ್ಪಂದನೆ ಮಾಡಲಿಕ್ಕೆ ಇನ್ನಾದರೂ ಜಿಲ್ಲಾಡಳಿತ ಮುಂದಾಗುತ್ತಾ ಕಾದು ನೋಡಬೇಕು.
First published:June 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...