Bank Fraud: ಬ್ಯಾಂಕ್‌ನ 2 ಕೋಟಿ ಹಣ ಹೆಂಡ್ತಿ ಅಕೌಂಟ್‌ಗೆ ಟ್ರಾನ್ಸ್‌ಫರ್! ವಂಚಕ ಅಸಿಸ್ಟೆಂಟ್ ಮ್ಯಾನೇಜರ್ ಎಸ್ಕೇಪ್

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಬ್ಯಾಂಕ್ ಆಫ್ ಬರೋಡಾದಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುವ ಕುಮಾರ್ ಬೊನಾಲ್ ಎಂಬಾತ 2 ಕೋಟಿ ಹಣವನ್ನ ತನ್ನ ಹೆಂಡತಿಯ ಖಾತೆಗೆ ವರ್ಗಾಯಿಸಿ ಬಹುದೊಡ್ಡ ಹಗರಣ‌ ಮಾಡಿದ್ದಾನೆ.. ಈ ಪ್ರಕರಣ ಮುನ್ನೆಲೆಗೆ ಬರುತ್ತಿದ್ದಂತೆ ಈಗ ಎಸ್ಕೇಪ್ ಆಗಿದ್ದು, ಜಿಲ್ಲೆಯಿಂದಲೇ ತಲೆಮರೆಸಿಕೊಂಡಿದ್ದಾನೆ.

ಹಣ ದುರುಪಯೋಗ ಮಾಡಿ ಎಸ್ಕೇಪ್ ಆದ ಬ್ಯಾಂಕ್ ಮ್ಯಾನೇಜರ್

ಹಣ ದುರುಪಯೋಗ ಮಾಡಿ ಎಸ್ಕೇಪ್ ಆದ ಬ್ಯಾಂಕ್ ಮ್ಯಾನೇಜರ್

  • Share this:
ಯಲ್ಲಾಪುರ, ಉತ್ತರ ಕನ್ನಡ: ಯಲ್ಲಾಪುರ (Yellapur) ತಾಲೂಕಿನ ಬ್ಯಾಂಕ್ ಆಫ್ ಬರೋಡಾದಲ್ಲಿ (Bank of Baroda) ಭಾರೀ ಗೋಲ್ಮಾಲ್ (Golmall) ನಡೆದಿದೆ. ಇಲ್ಲಿನ ಶಾಖೆಯಲ್ಲಿ (Branch) 2.69 ಕೋಟಿ ರೂ. ಬ್ಯಾಂಕ್ ಅಧಿಕಾರಿಯೇ (bank Officers) ಲಪಟಾಯಿಸಿ ಪರಾರಿಯಾಗಿರುವ ಘಟನೆ ನಡೆದಿದೆ. ಇದ್ರಿಂದ ಗ್ರಾಹಕರು (Customer) ಬ್ಯಾಂಕ್ ಮೇಲಿನ ವಿಶ್ವಾಸ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಈ ಘಟನೆ ಸಂಬಂಧಿಸಿದಂತೆ ಪೊಲೀಸ್ ತನಿಖೆ (police enquiry) ಚುರುಕುಗೊಂಡಿದೆ. ಈ ನಡುವೆ ಹಣ ಕ್ರೆಡಿಟ್ (Credit) ಆಗಿದ್ದ ಖಾತೆಯಲ್ಲಿ ಸದ್ಯ ಝೀರೋ ಬ್ಯಾಲೆನ್ಸ್ (zero balance) ಇರುವುದು ತಿಳಿದುಬಂದಿದೆ. ಬರೋಬ್ಬರಿ 2.69 ಕೋಟಿ ರೂಪಾಯಿ (2.69 crore rupees) ಹಣವನ್ನು ತನ್ನ ಹೆಂಡತಿ ಅಕೌಂಟ್‌ಗೆ (wife account) ವರ್ಗಾಯಿಸಿರುವ ಅಸಿಸ್ಟಂಟ್ ಬ್ಯಾಂಕ್ ಮ್ಯಾನೇಜರ್ (bank manager), ಇದೀಗ ಎಸ್ಕೇಪ್ ಆಗಿದ್ದಾನೆ.

ಏನಿದು ಗೋಲ್ಮಾಲ್ ಪ್ರಕರಣ?

ಹೌದು, ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಬ್ಯಾಂಕ್ ಆಫ್ ಬರೋಡಾದಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುವ ಕುಮಾರ್ ಬೊನಾಲ್ ಎಂಬಾತ 2 ಕೋಟಿ ಹಣವನ್ನ ತನ್ನ ಹೆಂಡತಿಯ ಖಾತೆಗೆ ವರ್ಗಾಯಿಸಿ ಬಹುದೊಡ್ಡ ಹಗರಣ‌ ಮಾಡಿದ್ದಾನೆ.. ಈ ಪ್ರಕರಣ ಮುನ್ನೆಲೆಗೆ ಬರುತ್ತಿದ್ದಂತೆ ಈಗ ಎಸ್ಕೇಪ್ ಆಗಿದ್ದು, ಜಿಲ್ಲೆಯಿಂದಲೇ ತಲೆಮರೆಸಿಕೊಂಡಿದ್ದಾನೆ...

ಬ್ಯಾಂಕ್‌ನಲ್ಲಿ ಹಣ ಇಟ್ಟರೆ ಸೇಫ್ ಅಲ್ವಾ?

ಈ ಪ್ರಕರಣದಿಂದ ಗ್ರಾಹಕರು ಬೇಲಿಯೇ ಎದ್ದು ಹೊಲ ಮೇಯುವಂತಾಯಿತು ಎಂದು ಬ್ಯಾಂಕಿನ ಮೇಲಿನ ವಿಶ್ವಾಸ ಕಳೆದುಕೊಳ್ಳುವಂತಾಗಿದೆ... ಬ್ಯಾಂಕಿನಲ್ಲಿ ಹಣ‌ ಇಟ್ಟರೆ ಸೇಪ್ ಅಂತಾರೆ ಆದ್ರೆ ಇಂತ ಖದೀಮ ಉದ್ಯೋಗಿಗಳನ್ನ ನಂಬಿ ಹಣ ಇಟ್ರೆ ಮೂರು ನಾಮ ಗ್ಯಾರಂಟಿ...

ಇದನ್ನೂ ಓದಿ: KPTCL Exam Scam: ಪರೀಕ್ಷಾ ಅಕ್ರಮದ ತನಿಖೆ ಚುರುಕು; ನೆಟ್ ಪರೀಕ್ಷೆಯಲ್ಲಿ 46ನೇ ರ‍್ಯಾಂಕ್ ಪಡೆದ ಅಭ್ಯರ್ಥಿ ಅರೆಸ್ಟ್

ಪ್ರಕರಣದ ಬಗ್ಗೆ ಎಸ್‌ಪಿ ಹೇಳುವುದೇನು?

ಈ ಬಗ್ಗೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ ಪೆನ್ನೇಕರ್ ಮಾಹಿತಿ ನೀಡಿದ್ದಾರೆ. ಯಲ್ಲಾಪುರ ಬ್ಯಾಂಕ್ ಆಫ್ ಬರೋಡಾದಲ್ಲಿ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಕುಮಾರ್ ಬೋನಾಲ ಎನ್ನುವಾತ ಐದು ತಿಂಗಳ ಹಿಂದೆ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಸೇರ್ಪಡೆಗೊಂಡಿದ್ದ. ಸೇರ್ಪಡೆಗೊಂಡಾಗಿನಿಂದ ಸೆ. 5ರವರೆಗೆ ಬ್ಯಾಂಕ್ ನ ಸಿಬ್ಬಂದಿಗಳ ಲಾಗಿನ್ ಮೂಲಕ ಕರೆಂಟ್ ಅಕೌಂಟ್ ನಿಂದ ತನ್ನ ಪತ್ನಿಯ ಹೆಸರಿನ ಖಾತೆಗೆ ಆರೋಪಿ ಹಣವನ್ನ ವರ್ಗಾಯಿಸಿಕೊಂಡಿದ್ದಾನೆ. ಈ ಬಗ್ಗೆ ವಾರದ ಬಳಿಕ ಬ್ಯಾಂಕ್ ನ ಇತರ ಅಧಿಕಾರಿಗಳಿಗೆ ಮಾಹಿತಿ ದೊರೆತು ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿಸಿದ್ದಾರೆ.

ಆರೋಪಿ ನಾಪತ್ತೆ

ವಂಚನೆ ಪ್ರಕರಣ ದಾಖಲಾಗುವ ಕೆಲ ದಿನಗಳ ಹಿಂದೆ ಆರೋಪಿ ಕಾಣೆಯಾಗಿರುವ ಕುರಿತು ಕೂಡ ಪ್ರಕರಣ ದಾಖಲಾಗಿದೆ. ಸದ್ಯ ಆತ ಹಣ ವರ್ಗಾಯಿಸಿರುವ ಖಾತೆಯಲ್ಲಿ ಯಾವುದೇ ಹಣವಿಲ್ಲ. ನಮ್ಮ ತಂಡ ತನಿಖೆ ಮುಂದುವರಿಸಿದ್ದು, ಆರೋಪಿಯ ಬಂಧನದ ಬಳಿಕ ಹಣವನ್ನು ಮರುಭರಣ ಮಾಡಿಸಿಕೊಳ್ಳಲಿದ್ದೇವೆ ಎಂದು ತಿಳಿಸಿದ್ದಾರೆ.

ಹಿಂದೆಯೂ ಜಿಲ್ಲೆಯಲ್ಲಿ ನಡೆದಿತ್ತು ಇಂಥದ್ದೇ ಘಟನೆ

ಈ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಎಸ್.ಬಿ.ಐ ಬ್ಯಾಂಕಿನ ಸಿಬ್ಬಂದಿಯೋರ್ವ ಹಣವನ್ನ ಲಪಟಾಯಿಸಿ ಹೋಗಿದ್ದ. ಈ ‌ಬೆನ್ನಲ್ಲೇ ಮತ್ತೆ ಯಲ್ಲಾಪುರದಲ್ಲಿ ಈ ಘಟನೆ ನಡೆದಿದೆ.. ಇದರಿಂದ ಬ್ಯಾಂಕ್ ಗ್ರಾಹಕರು ಬ್ಯಾಂಕ್ ನಂಬಿ ಹಣ ಇಡುವದಾದರು ಹೇಗೆ ಅಂತಾ ಆತಂಕ ವ್ಯಕ್ತಪಡಿಸುತ್ತಿದ್ದಾರೆ..

ಇದನ್ನೂ ಓದಿ: Rohini Sindhuri: ರೋಹಿಣಿ ವಿರುದ್ಧ ಸಿಡಿದೆದ್ದ ಸಾರಾ ಮಹೇಶ್! 1 ಕೋಟಿ ರೂಪಾಯಿ ಮಾನನಷ್ಟ ಮೊಕದ್ದಮೆ

ವಂಚಕರಿಂದ ಬ್ಯಾಂಕ್ ಮೇಲಿನ ವಿಶ್ವಾಸಕ್ಕೆ ಧಕ್ಕೆ

ಪದೆ ಪದೆ ಇಂತ ಪ್ರಕರಣಗಳು ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿದ್ದು ಹಣ ಡೆಪೊಸಿಟ್ ಮಾಡಲು ಭಯಪಡುವಂತ ಸ್ಥಿತಿ ನಿರ್ಮಾವಾಗಿದೆ.. ಬ್ಯಾಂಕ್ ಸಿಬ್ಬಂದಿ ಮಾಡುವಾ ಅದ್ವಾನಕ್ಕೆ ಬ್ಯಾಂಕ್ ಹೆಸರು ಕೆಟ್ಟುಹೋಗುತ್ತಿದೆ.. ಹೊರ ರಾಜ್ಯದಿಂದ ಬರುವ ಬ್ಯಾಕ್ ಸಿಬ್ಬಂದಿ ಇಲ್ಲಿ ಬೇಕಾಬೆಟ್ಟಿ ಅದ್ವಾನ ಮಾಡಿ ಹೋಗುತ್ತಿರುವುದು ಇತ್ತಿಚಿಗೆ ಪದೆ ಪದೆ ಬೆಳಕಿಗೆ ಬರುತ್ತಿದೆ.
Published by:Annappa Achari
First published: