Bengaluru: ಆನ್‌ಲೈನಲ್ಲೇ ಬ್ಯಾಂಕ್‌ ಮ್ಯಾನೇಜರ್‌ಗೆ ಗಾಳ ಹಾಕಿದ ಯುವತಿ, 5 ಕೋಟಿ ಕಳೆದುಕೊಂಡು ಈತನಾದ ಪೊಲೀಸ್ ಅತಿಥಿ!

ಪದೇ ಪದೇ ಯುವತಿ ಹಣ ಕೇಳಿದ್ದಾಳೆ. ಮೆಸೇಜ್​ ಮಾಡಿದ ಯುವತಿ, ನನಗೆ ಇನ್ನೂ ಹಣಬೇಕು, ಅದೆಷ್ಟು ಪ್ರೀತಿಬೇಕು ಕೇಳು ಅಂದಿದ್ದಾಳೆ. ಅಷ್ಟಕ್ಕೆ ಹರಿಶಂಕರ್ ಯುವತಿಗೆ ಹಂತ ಹಂತವಾಗಿ ಹಣ ಕೊಟ್ಟು ಪೊಲೀಸರ ಅತಿಥಿಯಾಗಿದ್ದಾನೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು (ಜೂ.24): ಮೋಸ ಹೋಗೋರು ಇರುವವರೆಗೆ ಮೋಸ ಮಾಡೋರು ಇದ್ದೇ ಇರುತ್ತಾರೆ ಅನ್ನೋ ಮಾತು ಪದೇ ಪದೇ ಸಾಬೀತಾಗುತ್ತಿದೆ. ಬೆಂಗಳೂರಿನ ಬ್ಯಾಂಕ್​ ಮ್ಯಾನೇಜರ್​ (Bank Manager) ಪರಿಚಯ ಮಾಡಿಕೊಂಡ ಯುವತಿ ಸ್ನೇಹ, ಪ್ರೀತಿ ಎಂದು ಹೇಳಿ 5 ಕೋಟಿ (5 Crore ) ಟೋಪಿ ಹಾಕಿದ್ದಾಳೆ. ಹರಿಶಂಕರ್ ಎಂಬುವರು ಹಣ‌ ಕಳೆದುಕೊಂಡಿರುವ ವ್ಯಕ್ತಿ. ಹನುಮಂತನಗರ (Hanumantanagar) ಇಂಡಿಯನ್ ಬ್ಯಾಂಕ್​ ನಲ್ಲಿ (Indian Bank) ಮ್ಯಾನೇಜರ್ ಆಗಿದ್ದು, ಮದ್ವೆಯಾಗಿ ಮಕ್ಕಳಿದ್ರೂ ಹುಡುಗಿ ಹಿಂದೆ ಬಿದ್ದು, ದೊಡ್ಡ ಎಡವಟ್ಟು ಮಾಡಿಕೊಂಡಿದ್ದಾರೆ. ಅನಿತಾ ಎಂಬ ಠೇವಣಿದಾರರ ಎಫ್​ಡಿ ಖಾತೆಯ (FD Account) ಮೇಲೆ ಸರಿಸುಮಾರು 5 ಕೋಟಿಯಷ್ಟು ಲೋನ್​ ಪಡೆದು ಇದೀಗ ಹನುಮಂತನಗರ ಪೊಲೀಸರ ಅತಿಥಿಯಾಗಿದ್ದಾನೆ.

ಯುವತಿಯ ಮೆಸೇಜ್​ಗೆ ಮೋಸ ಹೋದ ಮ್ಯಾನೇಜರ್​

ಹರಿಶಂಕರ್​ ಕಳೆದ ಮೂರ್ನಾಲ್ಕು ತಿಂಗಳ ಹಿಂದೆ ಡೇಟಿಂಗ್ ಆ್ಯಪ್​ನಲ್ಲಿ ತನ್ನ ಹೆಸರನ್ನ ನೊಂದಾಯಿಸಿಕೊಂಡಿದ್ದ. ಈ ವೇಳೆ‌ ಯುವತಿಯನ್ನು ಪರಿಚಯಿಸಿಕೊಂಡ ಇವರು ಪರಿಚಯ ಬೆಳೆಸಿಕೊಂಡಿದ್ದಾನೆ. ಯುವತಿ ಸಹ ಸಲುಗೆಯಿಂದ ಹರಿಶಂಕರನ ಮೊಬೈಲ್​ಗೆ ಮೆಸೇಜ್​ಗಳನ್ನು ಕಳುಹಿಸುತ್ತಿದ್ದಳು. ಚೆಂದದ ಯುವತಿಯ ಮೆಸೇಜ್​ಗೆ ಮನಸೋತು ತನ್ನ ಬಳಿಯಿದ್ದ 12 ಲಕ್ಷ ಹಣವನ್ನ ಯುವತಿಯ ಅಕೌಂಟ್​ಗೆ ಕಳುಹಿಸಿದ್ದ.

FD ಅಕೌಂಟ್ ಮೇಲೆ 5 ರೂ ಕೋಟಿ ಸಾಲ

ಪದೇ ಪದೇ ಯುವತಿ ಹಣ ಕೇಳಿದ್ದಾಳೆ. ಮೆಸೇಜ್​ ಮಾಡಿದ ಯುವತಿ, ನನಗೆ ಇನ್ನೂ ಹಣಬೇಕು, ಅದೆಷ್ಟು ಪ್ರೀತಿಬೇಕು ಕೇಳು ಅಂದಿದ್ದಾಳೆ. ಅಷ್ಟಕ್ಕೆ ಹರಿಶಂಕರ್ ತಾನು ಕೆಲಸ ಮಾಡ್ತಿದ್ದ ಇಂಡಿಯನ್ ಬ್ಯಾಂಕ್​ನ ಠೇವಣಿದಾರರಾದ ಅನಿತಾ ಎಂಬುವರ ಎಫ್​ಡಿ ಅಕೌಂಟ್ ಮೇಲೆ 5 ರೂ ಕೋಟಿಯಷ್ಟು ಸಾಲವನ್ನ ಮಾಡಿದ್ದಾನೆ. ಆ 5 ಕೋಟಿಯನ್ನ ಡೇಟಿಂಗ್ ಬೆಡಗಿಗೆ ನೀಡಿದ್ದಾನೆ.

ಇದನ್ನೂ ಓದಿ: Madhavananda Prabhu: ಬ್ರಿಟೀಷರ ಎದೆ ನಡುಗಿಸಿದ್ದ ವಿಜಯಪುರದ ಸಂತ! 27 ಬಾರಿ ಜೈಲುವಾಸ ಅನುಭವಿದ್ದ ಮಾಧವಾನಂದ ಪ್ರಭು

ಬ್ಯಾಂಕ್​ ಮ್ಯಾನೇಜರ್ ಹರಿಶಂಕರ್​


ಡೇಟಿಂಗ್ ಬೆಡಗಿಯ ಬಣ್ಣದ ಮಾತಿಗೆ ಕೋಟಿ ಕೋಟಿ ಸುರಿದು ಹರಿಶಂಕರ್​ ಇದೀಗ ಹನುಮಂತನಗರ ಪೊಲೀಸರ ಅತಿಥಿಯಾಗಿದ್ದಾನೆ. ಬ್ಯಾಂಕ್​ ವ್ಯವಸ್ಥಾಪಕ ಹರಿಶಂಕರ್, ಸಹಾಯಕ ವ್ಯವಸ್ಥಾಪಕಿ ಕೌಶಲ್ಯ ಮತ್ತು ಕ್ಲರ್ಕ್ ಮುನಿರಾಜು ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.

ಯುವತಿಗೆ ಹಣ ಕೊಡಲು ಖತರ್ನಾಕ್​ ಕೆಲಸ ಮಾಡಿದ

ಹನುಮಂತನಗರ ಇಂಡಿಯನ್ ಬ್ಯಾಂಕ್‌ನಲ್ಲಿ ಅನಿತಾ ಎಂಬುವರು 1.32 ಕೋಟಿ ರೂ. ಠೇವಣಿ ಇಟ್ಟಿದ್ದರು. ಆದರ ಆಧಾರದ ಮೇಲೆ ಅನಿತಾ, 75 ಲಕ್ಷ ರೂ. ಸಾಲ ಪಡೆದಿದ್ದರು. ಆನಂತರ ಹರಿಶಂಕರ್, ಕೌಶಲ್ಯ ಮತ್ತು ಮುನಿರಾಜು ಒಳಸಂಚು ರೂಪಿಸಿ ಅನಿತಾ ಅವರ ಠೇವಣಿ ಖಾತೆಯ ಲೀನ್ ಮಾರ್ಕ್ ಅನ್ನು ಅನಧಿಕೃತವಾಗಿ ಅಳಿಸಿ ಅವರ ಠೇವಣಿ ಹಣದ ಆಧಾರದ ಮೇಲೆ ಮೇ 13 ರಿಂದ 19ರ ನಡುವೆ ಓವರ್ ಡ್ರಾಫ್ಟ್​ನಲ್ಲಿ ಹಣ ಮಂಜೂರು ಮಾಡಿದ್ದರು.

ಎಲ್ಲ ಓವರ್ ಡ್ರಾಫ್ಟ್​ಗಳಿಗೂ ಅನಿತಾ ಅವರ 1.32 ಕೋಟಿ ರೂ. ಠೇವಣಿ ಹಣವನ್ನೇ ಆಧಾರವಾಗಿ ತೋರಿಸಿ 5.70 ಕೋಟಿ ರೂ. ಓವರ್ ಡ್ರಾಫ್ಟ್ ಖಾತೆಗಳನ್ನು ತೆರೆದು ವರ್ಗಾವಣೆ ಮಾಡಿಕೊಂಡಿದ್ದಾರೆ. ಆ ಹಣವನ್ನು ಪಶ್ಚಿಮ ಬಂಗಾಳದ 28 ಬ್ಯಾಂಕ್ ಖಾತೆಗಳಿಗೆ ಮತ್ತುರಾಜ್ಯ 2 ಖಾತೆ ಒಟ್ಟು 30 ಬ್ಯಾಂಕ್ ಖಾತೆಗಳಿಗೆ ಕೇವಲ 6 ದಿನಗಳ ನಡುವೆ 136 ಬಾರಿ ವರ್ಗಾವಣೆ ಮಾಡಿದ್ದಾರೆ. ಈ ವಿಷಯ ಮೇಲಧಿಕಾರಿಗಳ ಗಮನಕ್ಕೆ ಬಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Belagavi: ನಾಯಿ ಬರ್ತ್​ಡೇ ಆಚರಣೆ ವಿಡಿಯೋ ನೋಡಿ! 1 ಕ್ವಿಂಟಲ್ ಕೇಕ್, 5 ಸಾವಿರ ಜನರಿಗೆ ಭರ್ಜರಿ ಊಟ!

ಪೊಲೀಸರ ಮುಂದೆ ತಪ್ಪೊಪ್ಪಿಕೊಂಡ 

ಆತನನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಈ ವೇಳೆ ಯುವತಿಯ ಹಿಂದೆ ಬಿದ್ದು, ಮೋಸ ಹೋಗಿ ಹಣ ಕಳೆದುಕೊಂಡಿರೋದಾಗಿ ಹರಿಶಂಕರ್​ ತಪ್ಪೊಪ್ಪಿಕೊಂಡಿದ್ದಾರೆ.  ಮೋಹಕ ಮಾತುಗಳಿಗೆ ಮರುಳಾಗಿ ಆಕೆ ಕೇಳಿದಂತೆ ಆಕೆ ಹೇಳಿದ ಬ್ಯಾಂಕ್ ಖಾತೆಗಳಿಗೆ ಗ್ರಾಹಕರ ಹೆಸರಿನಲ್ಲಿ ಸಾಲದ ದಾಖಲೆ ಸೃಷ್ಟಿಸಿ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಕೊಂಡು ಆನಂತರ ಡೇಟಿಂಗ್ ಯುವತಿಗೆ ವರ್ಗಾವಣೆ ಮಾಡಿದ್ದೇನೆ ಎಂದು ಹೇಳಿದ್ದಾರೆ.
Published by:Pavana HS
First published: