• Home
 • »
 • News
 • »
 • state
 • »
 • Cheque Book Case: ಚೆಕ್​ಬುಕ್​ ನೀಡದ ಬ್ಯಾಂಕ್​​ಗೆ 45 ಸಾವಿರ ರೂ. ದಂಡ; ಗೆದ್ದ ಗದಗ ಜಿಲ್ಲೆಯ ಗ್ರಾಹಕ

Cheque Book Case: ಚೆಕ್​ಬುಕ್​ ನೀಡದ ಬ್ಯಾಂಕ್​​ಗೆ 45 ಸಾವಿರ ರೂ. ದಂಡ; ಗೆದ್ದ ಗದಗ ಜಿಲ್ಲೆಯ ಗ್ರಾಹಕ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಗದಗ ಜಿಲ್ಲಾ ಗ್ರಾಹಕ ಪರಿಹಾರ ಆಯೋಗವು ರುದ್ರಯ್ಯನವರಿಗೆ ದಂಡ ಪರಿಹಾರವಾಗಿ 30,000 ರೂ. ಹಾಗೂ ಪ್ರಕರಣದ ವೆಚ್ಚವಾಗಿ ಹೆಚ್ಚುವರಿ 15,000 ರೂ. ಪಾವತಿಸುವಂತೆ ಬ್ಯಾಂಕಿಗೆ ನಿರ್ದೇಶನ ನೀಡಿದೆ.

 • Trending Desk
 • Last Updated :
 • Gadag, India
 • Share this:

  ಬ್ಯಾಂಕ್ (BANK) ವ್ಯವಹಾರಗಳೆಂದರೆ ಸಾಮಾನ್ಯವಾಗಿ ಮೈಯೆಲ್ಲಾ ಕಣ್ಣಾಗಿ ಪರಿಶೀಲಿಸಬೇಕಾಗಿರುತ್ತದೆ.  ಬ್ಯಾಂಕಿನವರಿಗಾಗಲಿ ಅಥವಾ ಗ್ರಾಹಕರಿಗಾಗಲಿ (Bank Customers) ಇಬ್ಬರಿಗೂ ಅನ್ವಯವಾಗುತ್ತದೆ. ನಾವು ಸಾಕಷ್ಟು ಬಾರಿ ಗ್ರಾಹಕರಿಂದಾದ ಪ್ರಮಾದಗಳಿಗೆ ಬ್ಯಾಂಕ್ ದಂಡ (Fine) ವಿಧಿಸಿರುವ ಉದಾಹರಣೆಗಳನ್ನು ಕೇಳಿರಬಹುದು. ಆದರೆ, ರಾಜ್ಯದ ಗದಗ ಜಿಲ್ಲೆಯಲ್ಲಿ ನಡೆದಿರುವ ಒಂದು ಘಟನೆಯು ಮೇಲಿನ ಉದಾಹರಣೆಗೆ ತದ್ವಿರುದ್ಧವಾಗಿದೆ ಎನ್ನಬಹುದು. ಏಕೆಂದರೆ, ದಂಡ ಕಟ್ಟುವ ವಿಷಯದಲ್ಲಿ ಬ್ಯಾಂಕೇ ಸ್ವತಃ ಗ್ರಾಹಕನಿಗೆ ತನ್ನಿಂದಾದ ಅಸೌಕರ್ಯಕ್ಕಾಗಿ ದಂಡ ಕಟ್ಟಿದೆ. 


  KCC Bank ತನ್ನ ಗ್ರಾಹಕರೊಬ್ಬರಿಗೆ ಎರಡು ವರ್ಷಗಳ ಕಾಲ ಚೆಕ್ ಬುಕ್ ನೀಡಲು ನಿರಾಕರಿಸಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕನಿಗೆ  30,000 ರೂ. ದಂಡ ಪಾವತಿವಂತೆ ಬ್ಯಾಂಕ್​ಗೆ ​ಗದಗ ಜಿಲ್ಲಾ ಗ್ರಾಹಕ ಪರಿಹಾರ ಆಯುಕ್ತಾಲಯವು ಆದೇಶ ನೀಡಿದೆ.


  ಈ ಬಗ್ಗೆ ಗ್ರಾಹಕರ ಪರಿಹಾರ ಆಯೋಗದ ಅಧ್ಯಕ್ಷರಾಗಿರುವ ಡಿ.ವೈ ಬಸಾಪುರ ಅವರು ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದಾರೆ. ಪ್ರಕಟಣೆಯ ಪ್ರಕಾರ, ಲಕ್ಷ್ಮೇಶ್ವರ ತಾಲ್ಲೂಕಿನ ಪು ಬದ್ನಿ ಗ್ರಾಮದ ನಿವಾಸಿಯಾಗಿರುವ ರುದ್ರಯ್ಯ ಶಿವಾನಂದಯ್ಯ ಪುರಾಣಿಕಮಠ ಎಂಬುವವರು ಫೆಬ್ರುವರಿ 2020 ರಲ್ಲಿ ತಮ್ಮ ಖಾತೆಯಿರುವ ಕೆಸಿಸಿ ಬ್ಯಾಂಕಿಗೆ ಚೆಕ್ ಬುಕ್ ನೀಡುವ ಕುರಿತು ಅರ್ಜಿ ಸಲ್ಲಿಸಿದ್ದರು.


  ಸಾಂದರ್ಭಿಕ ಚಿತ್ರ


  ಬೆಳೆ ವಿಮಾ ಪರಿಹಾರ ಸಂಸ್ಥೆಯು ಬೆಳೆ ವಿಮೆಗೆ ಸಂಬಂಧಿಸಿದಂತೆ 23,080 ರೂಪಾಯಿಗಳ ಪರಿಹಾರ ಧನವನ್ನು 2016ರಲ್ಲಿ ವರ್ಗಾಯಿಸಿತ್ತು. ಆ ಸಂದರ್ಭದಲ್ಲಿ ರುದ್ರಯ್ಯ ಅವರ ಸಹೋದರರಾದ ಫಕೀರಯ್ಯ ಪುರಾಣಿಕಮಠ ಎಂಬುವವರು ರುದ್ರಯ್ಯನವರಿಗೆ ವಿಮಾ ಪರಿಹಾರಧನವನ್ನು ಬ್ಯಾಂಕ್ ನೀಡಬಾರದೆಂದು ಸೂಚನೆಯಿರುವ ಮಧ್ಯಂತರ ತಡೆ ಆಜ್ಞೆಯನ್ನು ನ್ಯಾಯಾಲಯದಿಂದ ತಂದಿದ್ದರು.


  ಇದನ್ನೂ ಓದಿ: Vijayapura: ಈ ರೈತರಿಗೆ ಇಬ್ಬನಿಯೇ ಆಧಾರ! ಭರವಸೆಯ ಕನಸು ಬಿತ್ತಿದ ಹವಾಮಾನ


  ಆದರೆ, ಈ ಸಂದರ್ಭದಲ್ಲಿ ರುದ್ರಯ್ಯ ತಮ್ಮ ಉಳಿತಾಯ ಖಾತೆಯಲ್ಲಿ ರೂ. 65,000 ಅದಾಗಲೇ ಹೊಂದಿದ್ದರು. ಹೀಗೆ ರುದ್ರಯ್ಯನವರ ಸ್ವತಃ ಉಳಿತಾಯ ಹಣವಿದ್ದರೂ ಸಹ ಬ್ಯಾಂಕ್ ನ್ಯಾಯಾಲಯದ ಸೂಚನೆಯ ಕಾರಣ ನೀಡಿ ಖಾತೆಯಲ್ಲಿ ಉಳಿದ ಮೊತ್ತವನ್ನು ಸಹ ಬಿಡುಗಡೆ ಮಾಡಲು ಸಾಧ್ಯವಾಗದಂತೆ ಚೆಕ್ ಬುಕ್ ನೀಡಲು ನಿರಾಕರಿಸಿತ್ತು. ಹೀಗೆ ಬ್ಯಾಂಕ್ 2020 ರಿಂದ ರುದ್ರಯ್ಯನವರಿಗೆ ಚೆಕ್ ಬುಕ್ ನೀಡಿಯೇ ಇರಲಿಲ್ಲ.


  ಇದಕ್ಕಾಗಿ ಆಯೋಗವು ರುದ್ರಯ್ಯನವರಿಗೆ ದಂಡ ಪರಿಹಾರವಾಗಿ 30,000 ರೂ. ಹಾಗೂ ಪ್ರಕರಣದ ವೆಚ್ಚವಾಗಿ ಹೆಚ್ಚುವರಿ  15,000 ರೂ. ಪಾವತಿಸುವಂತೆ ಬ್ಯಾಂಕಿಗೆ ನಿರ್ದೇಶನ ನೀಡಿದೆ.
  ಈ ಮಧ್ಯೆ ಬಿಜೆಪಿ ವಿರುದ್ಧ ಭೂಹಗರಣದ ಆರೋಪ ಮಾಡಿರುವ ಆಪ್ ಪಕ್ಷ


  ಈ ಮಧ್ಯೆ ಆಪ್ ಪಕ್ಷದ ಪ್ರಾದೇಶಿಕ ಇನ್-ಚಾರ್ಜ್ ಆಗಿರುವ ಎಂ.ಅರವಿಂದ್ ಅವರು, ಪ್ರದೇಶದ ರೈತರು ಈಗಾಗಲೇ ಸರ್ಕಾರ ಪ್ರಸ್ತಾಪ ಮಾಡಿರುವ ವಿಶೇಷ ಆರ್ಥಿಕ ವಲಯಕ್ಕೆ ಸಂಬಂಧಿಸಿದಂತೆ ತಮ್ಮ ಭೂಮಿಗಳನ್ನು ಕಡಿಮೆ ಮೊತ್ತಗಳಿಗೆ ಮಾರಾಟ ಮಾಡಿರುವ ರೈತರಿಗೆ ಬಿಜೆಪಿಯ ಹಿರಿಯ ಮುಖಂಡರು ಅನ್ಯಾಯ ಮಾಡಿರುವುದಾಗಿ ಆರೋಪಿಸಿದ್ದಾರೆ.


  ಕಳೆದ ಶನಿವಾರದಂದು ಮಾತನಾಡಿರುವ ಅರವಿಂದ್ ಅವರು ಹುಬ್ಬಳ್ಳಿಯ ಪಾಲೆ ಗ್ರಾಮದ ಬಳಿ ಈಗಾಗಲೇ ಪ್ರಸ್ತಾವಿತ ವಿಶೇಷ ಆರ್ಥಿಕ ವಲಯ ನಿರ್ಮಾಣದ ಹಿನ್ನೆಲೆಯಲ್ಲಿ ರೈತರಿಂದ ಭೂಮಿಯನ್ನು ಬಿಜೆಪಿಯ ಅನುಯಾಯಿಗಳೇ ಕಡಿಮೆ ಮೊತ್ತದಲ್ಲಿ ಅಂದರೆ ಪ್ರತಿ ಎಕರೆಗೆ 20 ಲಕ್ಷ ರೂ. ಕೊಟ್ಟು ರೈತರಿಂದ ಖರೀದಿಸಿ ಇದೀಗ ಭೂಸ್ವಾಧೀನ ಅಧಿಕಾರಿಗಳಿಗೆ ಭೂಮಿಯ ಬೆಲೆಯನ್ನು ಪ್ರತಿ ಎಕರೆಗೆ 80 ಲಕ್ಷ ರೂ. ನಿಗದಿಪಡಿಸುವಂತೆ ಒತ್ತಡ ಹೇರುತ್ತಿರುವುದಾಗಿ ಆರೋಪ ಮಾಡಿದ್ದಾರೆ.
  ಈ ಮೂಲಕ ರೈತರಿಗೆ ಇವರು ಅನ್ಯಾಯ ಮಾಡುತ್ತಿದ್ದಾರೆಂದು ಆರೋಪಿಸಿರುವ ಆಪ್ ಪಕ್ಷದ ಅರವಿಂದ್ ಅವರು ಕನಿಷ್ಠ ಐದು-ಹತ್ತು ವರ್ಷಗಳಿಂದ ಪಹಣಿ ಪತ್ರದಲ್ಲಿ ತಮ್ಮ ಹೆಸರಿನ ದಾಖಲೆ ಹೊಂದಿರುವ ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಅವರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

  Published by:Kavya V
  First published: