ಬೆಂಗಳೂರು: ಅವರೆಲ್ಲ ಬ್ಯಾಂಕ್ ನಲ್ಲಿ ಕೂತು ವ್ಯವಹಾರಗಳನ್ನು ನೋಡಿಕೊ ಳ್ಳುವವರು . ಆದ್ರೆ ಇವತ್ತು ಬ್ಯಾಂಕ್ ಕೆಲಸ ಬಿಟ್ಟು ಬೀದಿಗೆ ಬಂದಿದ್ರು. ಕೇಂದ್ರ ಸರ್ಕಾರದ ವಿರುದ್ದ ದೇಶದೆಲ್ಲೆಡೆ ನೌಕರರು ಸಿಡಿದೆದ್ದಿದ್ದಾರೆ. ಬ್ಯಾಂಕ್ ಗಳ ಖಾಸಗೀಕರಣ ಬೇಡ ಅಂತ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು. ಸಿಲಿಕಾನ್ ಸಿಟಿಯಲ್ಲೂ ಕೂಡ ಪ್ರತಿಭಟನೆಯ ಕಾವು ಜೋರಾಗಿತ್ತು. ಇಷ್ಟು ದಿನ ವೇತನ ಹೆಚ್ಚಳ ಕೆಲಸದ ಭದ್ರತೆ ಅಂತ ಬ್ಯಾಂಕ್ ನೌಕರರು ಪ್ರತಿಭಟನೆ ನಡೆಸುತ್ತಿದ್ದರು. ಆದ್ರೆ ಇವತ್ತು ರಾಷ್ಟೀಕೃತ ಬ್ಯಾಂಕ್ ಗಳ ಖಾಸಗೀಕರಣದ ವಿರುದ್ದ ಸಿಡಿದೆದ್ದರು. ಖಾಸಗೀಕರಣ ಬೇಡವೇ ಬೇಡ ಅಂತ ನಗರದ ಮೈಸೂರು ಬ್ಯಾಂಕ್ ಸರ್ಕಲ್ ನ ಸ್ಟೇಂಟ್ ಬ್ಯಾಂಕ್ ಆಫ್ ಇಂಡಿಯಾ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಗೆ ಭಾಗಿಯಾದ ಸಾವಿರಾರು ನೌಕರರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಅಂದಹಾಗೆ ಬ್ಯಾಂಕ್ ಒಕ್ಕೂಟಗಳ ಅಕ್ರೋಶಕ್ಕೆ ಕಾರಣ ಏನು ಅಂತ ನೋಡೋದಾದ್ರೆ, ಕೇಂದ್ರ ಬಜೆಟ್ ನಲ್ಲಿ ನಿರ್ಮಾಲ ಸಿತಾರಾಮನ್ 2 ಬ್ಯಾಂಕ್ ಗಳನ್ನು ಖಾಸಗೀಕರಣ ಗೊಳಿಸಲಾಗುವುದು ಅನ್ನೊ ಹೇಳಿಕೆ. ಇನ್ನೂ ಈಗಾಗಲೇ ಐಡಿಬಿಐ ಬ್ಯಾಂಕನ್ನು ಅದರ ಅತಿಹೆಚ್ಚಿನ ಪಾಲಿನ ಷೇರನ್ನು 2019ರಲ್ಲಿ ಎಲ್ ಐಸಿಗೆ ಮಾರಾಟ ಮಾಡುವ ಮೂಲಕ ಖಾಸಗೀಕರಣಗೊಳಿಸಿತ್ತು. ಅಲ್ಲದೆ ಕಳೆದ ನಾಲ್ಕು ವರ್ಷಗಳಲ್ಲಿ 14 ಸಾರ್ವಜನಿಕ ವಲಯ ಬ್ಯಾಂಕುಗಳನ್ನು ಒಟ್ಟು 5 ಕ್ಕೆ ಇಳಿಕೆ ಮಾಡಿದೆ.
ಇದೇ ರೀತಿ ಖಾಸಗೀಕರಣ ಮುಂದುವರೆದರೆ ಮುಂದಿನ ದಿನಗಳಲ್ಲಿ ರೈತ ಸಾಲ ,ಗೃಹ ಸಾಲ, ಶಿಕ್ಷಣ ಸಾಲ, ಉಳಿತಾಯ ಹಣದ ಭದ್ರೆತೆ ಇರಲ್ಲ ಎಂದು UFBU ವಕ್ತಾರ ಶ್ರೀನಿವಾಸ್ ತಿಳಿಸಿದ್ದಾರೆ. ಬ್ಯಾಂಕುಗಳ ಶಾಖೆಗಳಲ್ಲಿ ಇಂದು ಮತ್ತು ನಾಳೆಯ ಮುಷ್ಕರದಿಂದ ಚೆಕ್ ಕ್ಲಿಯರೆನ್ಸ್, ಸರ್ಕಾರದ ವಹಿವಾಟುಗಳಿಗೆ ವ್ಯತ್ಯಯವಾಗಲಿದೆ. ಹಣ ಪಾವತಿ , ಹಣ ವರ್ಗಾವಣೆ ಹೀಗೆ ಅನೇ ಸಮಸ್ಯೆ ಷೇರು ಮಾರುಕಟ್ಟೆ ಮೇಲೆ ಸಹ ಮುಷ್ಕರ ಪರಿಣಾಮ ಬೀರಲಿದೆ.
ಸದ್ಯ ಪ್ರತಭಟನೆ ಕೈ ಬೀಡಬೇಕು ಅಂದ್ರೆ ಸರ್ಕಾರ ಮತ್ತೊಮ್ಮೆ ಪರೀಶೀಲನೆ ಮಾಡಿ ಹೇಳಿಕೆಯನ್ನು ವಾಪಸ್ ಪಡೆಯಬೇಕು ಇಲ್ಲ ಅಂದ್ರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡೋದಾಗಿ ಬ್ಯಾಂಕ್ ನೌಕರರು ಎಚ್ಚರಿಕೆ ಕೊಟ್ಟರು. ಇನ್ನೂ ಸದ್ಯ ಶೇ. 70 ಕ್ಕೂ ಹೆಚ್ಚು ಮಂದಿ ರಾಷ್ಟೀಕೃತ ಬ್ಯಾಂಕ್ ಗಳನ್ನು ಅವಲಂಬಿಸಿದ್ದಾರೆ. ಹೀಗಾಗಿ ಇವತ್ತು ಕೆಲವರು ನೆಟ್ ಬ್ಯಾಂಕಿಂಗ್ ಮೂಲಕ ಕೆಲಸ ಕಾರ್ಯ ಮುಗಿಸಿಕೊಂಡರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ