HOME » NEWS » State » BANGLORE TOPED IN EASE OF LIVING INDEX SESR

Ease of Living Index: ಸುಲಭ ಜೀವನ ಗುಣಮಟ್ಟ ಸೂಚ್ಯಂಕ; ಬೆಂಗಳೂರಿಗೆ ಅಗ್ರಸ್ಥಾನ

10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆಯ 111 ನಗರಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. 2020ರಲ್ಲಿ ಈ ನಗರಗಳ ಮೌಲ್ಯಮಾಪನ ಮಾಡಲಾಗಿ

news18-kannada
Updated:March 4, 2021, 6:07 PM IST
Ease of Living Index: ಸುಲಭ ಜೀವನ ಗುಣಮಟ್ಟ ಸೂಚ್ಯಂಕ; ಬೆಂಗಳೂರಿಗೆ ಅಗ್ರಸ್ಥಾನ
ವಿಧಾನಸೌಧ
  • Share this:
ಗಾರ್ಡನ್​ ಸಿಟಿಯಾಗಿದ್ದ ಬೆಂಗಳೂರು ಐಟಿ ಉದ್ಯಮಗಳ ತವರೂರಾಗಿ ವಿಶ್ವದಲ್ಲಿಯೇ ಮನ್ನಣೆ ಪಡೆದಿದೆ. ಈಗ ಈ ನಗರಕ್ಕೆ ಮತ್ತೊಂದು ಗರಿಮೆ ಮೂಡಿದೆ.  ಸುಲಭ ಜೀವನ ಮಟ್ಟ ಸೂಚ್ಯಂಕದಲ್ಲಿ ಅತ್ಯುತ್ತಮ ನಗರವಾಗಿ ಬೆಂಗಳೂರು ಹೊರಹೊಮ್ಮಿದೆ. ಬೆಂಗಳೂರು ನಗರದ ನಂತರದ ಸ್ಥಾನದಲ್ಲಿ ಪುಣೆ ಮತ್ತು ಅಹಮದಾಬಾದ್​ ಸ್ಥಾನ ಗಿಟ್ಟಿಸಿದೆ. ದಶಲಕ್ಷಗಿಂತಲೂ ಹೆಚ್ಚಿನ ಜನಸಂಖ್ಯೆಯ ವಿಭಾಗದಲ್ಲಿ ಬೆಂಗಳೂರು ಅಗ್ರ ಸ್ಥಾನ ಪಡೆದಿದೆ. ನಂತರದಲ್ಲಿ ಪುಣೆ, ಅಹಮಾದಾಬಾದ್​, ಚೆನ್ನೈ, ಸೂರತ್​, ನವ ಮುಂಬೈ, ಕೊಯಮತ್ತೂರು, ವಡೋದರಾ, ಇಂದೋರ್​ ಮತ್ತು ಗ್ರೇಟರ್​ ಮುಂಬೈ ಸ್ಥಾನ ಪಡೆದಿದೆ ಎಂದು ಪ್ರೆಸ್​ ಇನ್ಫಾರ್ಮೆಷನ್​ ಬ್ಯೂರೋ ಪ್ರಕಟಣೆ ಹೊರಡಿಸಿದೆ.

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಬಿಡುಗಡೆ ಮಾಡಿರುವ ಈ ಪಟ್ಟಿಯಲ್ಲಿ ಲಕ್ಷಕ್ಕಿಂತಲೂ ಕಡಿಮೆ ಜನ ವಾಸಿಸುವ ನಗರದಲ್ಲಿ ಶಿಮ್ಲಾ ಸುಲಭ ಜೀವನ ಗುಣಮಟ್ಟ ಸೂಚ್ಯಂಕದ ಗರಿಮೆ ಪಡೆದಿದೆ. ಇದರ ನಂತರದ ಸ್ಥಾನ ಭುವನೇಶ್ವರ್​, ಸಿಲ್ವಸ್ಸಾ, ಕಕಿನಾಡ, ಸೇಲಂ, ವೆಲ್ಲೂರು, ಗಾಂಧಿನಗರ, ದಾವಣಗೆರೆ ಮತ್ತು ತಿರುಚಿನಪಳ್ಳಿ ಪಡೆದಿದೆ.

10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆಯ 111 ನಗರಗಳು ಭಾಗವಹಿಸಿದ್ದವು . 2020ನೇ ಸಾಲಿನ ನಗರವಾಸಗಳಲ್ಲಿ ಸುಲಭವಾಗಿ ಜೀವನ ನಿರ್ಣಹಣೆ ನಗರ ಕುರಿತು ಮೌಲ್ಯಮಾಪನ ಮಾಡಲಾಗಿದೆ. ಜೀವನದ ಗುಣಮಟ್ಟ ಮತ್ತು ನಗರ ಅಭಿವೃದ್ಧಿಯ ಪ್ರಭಾವಗಳ ಆಧಾರದ ಮೇಲೆ ಈ ಮೌಲ್ಯಮಾಪನ ಮಾಡಲಾಗಿದೆ. ಈ ವೇಳೆ ಬೆಂಗಳೂರು ಸುಲಭ ಜೀವನ ನಿರ್ವಹಣೆ ಉತ್ತಮ ನಗರ ಎಂಬ ಅರ್ಹತೆ ಗಿಟ್ಟಿಸಿಕೊಂಡಿದೆ. ವಿಶೇಷ ಎಂದರೆ, 10 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ನಗರದಲ್ಲಿ ರಾಜ್ಯದ ವಾಣಿಜ್ಯ ನಗರಿ ದಾವಣಗೆರೆ ಕೂಡ ಸುಲಭ ಜೀವನ ನಿರ್ವಹಣೆ ಸ್ಥಾನಗಿಟ್ಟಿಸಿಕೊಂಡಿದೆ.
Published by: Seema R
First published: March 4, 2021, 4:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories