ಸಂಸದ ತೇಜಸ್ವಿಯನ್ನು ಫೇಕ್ ಕನ್ನಡಿಗ ಎಂದು ಹೀಗಳೆದ ಟ್ವೀಟಿಗರು; ಮತ್ತೊಮ್ಮೆ ಭಾಷೆಗೆ ಸಂಬಂಧಿಸಿದ ಸುದ್ದಿಯಲ್ಲಿ ಸೂರ್ಯ!

ಭಾನುವಾರ ಕನ್ನಡ ಪರ ಹೋರಾಟಗಾರರು ನಗರದ ಕೆಲ ಭಾಗಗಳಲ್ಲಿ ಜೈನ ಸಮುದಾಯದವರ ಅಂಗಡಿ ಮುಂಗಟ್ಟುಗಳ ಮುಂದೆ ಹಿಂದಿ ಭಾಷೆಯಲ್ಲಿ ಬರೆಯಲಾಗಿದ್ದ ಬೋರ್ಡ್​ಗಳನ್ನು ಒತ್ತಾಯಪೂರ್ವಕವಾಗಿ ತೆರವುಗೊಳಿಸಲು ಮುಂದಾಗಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆದರೆ, ಈ ಕುರಿತು ಟ್ವೀಟ್​ ಮಾಡುರುವ ಸಂಸದ ತೇಜಸ್ವಿ ಸೂರ್ಯ ಇದೀಗ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

MAshok Kumar | news18
Updated:August 19, 2019, 1:39 PM IST
ಸಂಸದ ತೇಜಸ್ವಿಯನ್ನು ಫೇಕ್ ಕನ್ನಡಿಗ ಎಂದು ಹೀಗಳೆದ ಟ್ವೀಟಿಗರು; ಮತ್ತೊಮ್ಮೆ ಭಾಷೆಗೆ ಸಂಬಂಧಿಸಿದ ಸುದ್ದಿಯಲ್ಲಿ ಸೂರ್ಯ!
ತೇಜಸ್ವಿ ಸೂರ್ಯ.
MAshok Kumar | news18
Updated: August 19, 2019, 1:39 PM IST
ಬೆಂಗಳೂರು (ಆಗಸ್ಟ್.19); ಈ ಹಿಂದೆ ಕೇಂದ್ರ ಶಿಕ್ಷಣ ಇಲಾಖೆ ಪ್ರಾಥಮಿಕ ಶಾಲೆಗಳಿಂದ ಹಿಂದಿ ಭಾಷೆಯನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದ್ದಾಗ ಇದರ ಪರವಹಿಸಿ ಕನ್ನಡಿಗರಿಂದ ಪೇಚಿಗೆ ಸಿಲುಕಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಇದೀಗ ಮತ್ತೊಮ್ಮೆ ಪೇಚಿಗೆ ಸಿಲುಕಿದ್ದಾರೆ. ಕನ್ನಡ ಪರ ಹೋರಾಟಗಾರರನ್ನು ರೌಡಿಗಳು ಎಂದು ಕರೆಯುವ ಮೂಲಕ ಟ್ವೀಟಿಗರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಭಾನುವಾರ ಕನ್ನಡ ಪರ ಹೋರಾಟಗಾರರು ನಗರದ ಕೆಲ ಭಾಗಗಳಲ್ಲಿ ಜೈನ ಸಮುದಾಯದವರ ಅಂಗಡಿ ಮುಂಗಟ್ಟುಗಳ ಮುಂದೆ ಹಿಂದಿ ಭಾಷೆಯಲ್ಲಿ ಬರೆಯಲಾಗಿದ್ದ ಬೋರ್ಡ್​ಗಳನ್ನು ಒತ್ತಾಯಪೂರ್ವಕವಾಗಿ ತೆರವುಗೊಳಿಸಲು ಮುಂದಾಗಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಇದನ್ನೂ ಓದಿ : ನಾಳೆಯೇ ಸಚಿವ ಸಂಪುಟ ವಿಸ್ತರಣೆ; ಸಿಎಂ ಯಡಿಯೂರಪ್ಪಗೂ ಸರ್​ಪ್ರೈಸ್​ ನೀಡಲಿದೆಯಾ ಹೈಕಮಾಂಡ್​ ಅಂತಿಮಪಟ್ಟಿ?

ಈ ಕುರಿತು ಟ್ವೀಟ್ ಮಾಡಿದ್ದ ಸಂಸದ ತೇಜಸ್ವಿ ಸೂರ್ಯ, “ಹಿಂದಿ ಭಾಷೆಯಲ್ಲಿ ಬೋರ್ಡ್ ಹಾಕಿದ್ದ ಕೆಲ ಜೈನ ಸಮುದಾಯದವರ ಮೇಲೆ ರೌಡಿಗಳು ದಾಳಿ ನಡೆಸಿದ್ದಾರೆ. ಆದರೆ, ಉರ್ದು ಭಾಷೆಯಲ್ಲಿ ಬೋರ್ಡ್ ಹಾಕಿದವರನ್ನು ಏಕೆ ಯಾರೂ ಪ್ರಶ್ನೆ ಮಾಡಲ್ಲ? ಎಂದಿದ್ದರು. ಅಲ್ಲದೆ ಶಾಂತಿಯುತವಾಗಿ ಬದುಕುತ್ತಾ ಕರ್ನಾಟಕಕ್ಕೆ ಕೊಡುಗೆ ನೀಡುತ್ತಿರುವವರ ವಿರುದ್ಧ ಆಕ್ರಮಣ ಮಾಡಿದರೆ ಕನ್ನಡ ಪ್ರಿಯರಿಗೆ ಹಾಗೂ ಕಾರ್ಯಕರ್ತರಿಗೆ ಅಪಚಾರವಾಗುತ್ತದೆ” ಎಂದು ಅಭಿಪ್ರಾಯಪಟ್ಟಿದ್ದರು.ಆದರೆ, ತೇಜಸ್ವಿ ಸೂರ್ಯ ಅವರ ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿತ್ತು. ಕನ್ನಡ ಪರ ಹೋರಾಟಗಾರರನ್ನು ರೌಡಿಗಳು ಎಂದು ಕರೆದ ಅವರ ನಡೆ ತೀವ್ರವಾದ ಟೀಕೆಗೆ ಗುರಿಯಾಗಿತ್ತು. ಅಲ್ಲದೆ. ಅನೇಕರು ತೇಜಸ್ವಿ ಸೂರ್ಯ ಓರ್ವ ಡೋಂಗಿ ಕನ್ನಡ ಪ್ರೇಮಿ ಎಂದು ಹೀಗೆಳೆದಿದ್ದರು.

ಸಾಮಾಜಿ ಜಾಲತಾಣದಲ್ಲಿ ಈ ಚರ್ಚೆ ಕಾವು ಪಡೆಯುತ್ತಿದ್ದಂತೆ ಮತ್ತೊಂದು ಟ್ವೀಟ್ ಮೂಲಕ ಸಮಜಾಯಿಷಿ ನೀಡಿರುವ ಅವರು, “ಕನ್ನಡದ ರತ್ನತ್ರಯರಾದ ರನ್ನ, ಜನ್ನ. ಪೊನ್ನ ಜೈನರಾಗಿದ್ದರೂ ಕನ್ನಡಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ. ಕನ್ನಡ ಸಾಹಿತ್ಯದ ಆರಂಭಿಕ ಕಾಲವನ್ನು ‘ಜೈನಯುಗ’ ಎಂದೇ ಗುರುತಿಸಲಾಗುತ್ತದೆ. ಹೀಗಾಗಿ ಜೈನರು ಅವರ ಇತಿಹಾಸವನ್ನು ಓದಿ ತಿಳಿದುಕೊಳ್ಳಲಿ ಹಾಗೂ ಕನ್ನಡ ಭಾಷೆಯನ್ನು ಬಳಸಲಿ ಎಂದು ನಾನು ಒತ್ತಾಯಿಸುತ್ತೇನೆ” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಟೀಕಿಸಿರುವ ಕೆಲವರು "ಪಂಪ, ರನ್ನ, ಪೊನ್ನ, ಜನ್ನ, ನಾಗಚಂದ್ರ, ಚಾವುಂಡರಾಯ, ಅತ್ತಿಮಬ್ಬೆ ಮುಂತಾದವರು ಈ ಕನ್ನಡ ನೆಲದ ಜೈನರು. ಅವರು ಕನ್ನಡದ ಸಾಹಿತ್ಯ, ಕಲೆ ಹಾಗೂ ಸಾಂಸ್ಕೃತಿಕ ಲೋಕಕ್ಕೆ ಅನನ್ಯವಾದ ಕೊಡುಗೆಗಳನ್ನು ಕೊಟ್ಟು ಕನ್ನಡ ನಾಡನ್ನು ಶ್ರೀಮಂತಗೊಳಿಸಿದರು. ಆದರೆ, ಬೆಂಗಳೂರಿನ ಚಿಕ್ಕಪೇಟೆಯ ಮಾರ್ವಾಡಿಗಳು ಕನ್ನಡ ನಾಡಿಗೆ ಏನು ಕೊಟ್ಟರು?" ಎಂದೂ ಸಂಸದರ ವಿರುದ್ಧ ರಂತರವಾಗಿ ಟೀಕಾಪ್ರಹಾರವನ್ನೇ ನಡೆಸುತ್ತಿದ್ದಾರೆ.

ಒಟ್ಟಾರೆ ತೇಜ್ವಸಿ ಸೂರ್ಯ ಸಂಸದರಾಗಿ ಆಯ್ಕೆಯಾದ ನಂತರ ಕನ್ನಡಿಗರಿಂದ ಸಾಮಾಜಿಕ ಜಾಲತಾಣದಲ್ಲಿ ಪೇಚಿಗೆ ಒಳಗಾಗುತ್ತಿರುವುದು ಇದು ಎರಡನೇ ಬಾರಿ ಎಂಬುದು ಉಲ್ಲೇಖಾರ್ಹ.

ಇದನ್ನೂ ಓದಿ : ಫೋನ್ ಕದ್ದಾಲಿಕೆ; ಸಿಎಂ ಯಡಿಯೂರಪ್ಪ ವಿರುದ್ಧ ಸಿದ್ದರಾಮಯ್ಯ ಆಕ್ರೋಶ; ಆಪರೇಷನ್​ ಕಮಲ ಕುರಿತೂ ತನಿಖೆಗೆ ಆಗ್ರಹ

First published:August 19, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...