Crime News| ನಟ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಮೇಲೆ ದರೋಡೆಗೆ ಯತ್ನ; ಕೂದಲೆಳೆಯ ಅಂತರದಲ್ಲಿ ಜೀವಾಪಾಯದಿಂದ ಪಾರು!

ಘಟನೆಯಲ್ಲಿ ರಕ್ಷಕ್​ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಚಿಕಿತ್ಸೆ ನೀಡಲಾಗಿದೆ. ಪೊಲೀಸರು ದೂರು ದಾಖಲಿಸಿಕೊಂಡು ವಿಚಾರಣೆ ಆರಂಭಿಸಿದ್ದಾರೆ. ಆದರೆ, ಪೊಲೀಸರು ರಕ್ಷಕ್ ಮೇಲೆ ದರೋಡೆಗೆ ಯತ್ನಿಸಿದ್ದ ಆಘಂತುಕರ ಹೆಡೆಮುರಿ ಕಟ್ತಾರಾ? ಎಂಬುದನ್ನು ಕಾದು ನೋಡಬೇಕಿದೆ.

ಬುಲೆಟ್ ಪ್ರಕಾಶ ಮಗ ರಕ್ಷಕ್.

ಬುಲೆಟ್ ಪ್ರಕಾಶ ಮಗ ರಕ್ಷಕ್.

 • Share this:
  ಬೆಂಗಳೂರು (ಸೆಪ್ಟೆಂಬರ್​ 08); ನಟ ದಿವಂಗತ ಬುಲೆಟ್ ಪ್ರಕಾಶ್ ಅನಾರೋಗ್ಯದ ಕಾರಣ ಕಳೆದ ವರ್ಷ ಮೃತಪಟ್ಟಿದ್ದರು. ಬುಲೆಟ್ ಪ್ರಕಾಶ್ ಅಗಲಿಕೆಯನ್ನು ಈಗಲೂ ಅವರ ಕುಟುಂಬದವರು ಮರೆಯು ಸಾಧ್ಯವಾಗುತ್ತಿಲ್ಲ. ಈ ನಡುವೆ ಅವರ ಮಗ ರಕ್ಷಕ್ ದರೋಡೆಗೆ ಒಳಗಾಗಿದ್ದು ಆಘಾತಕ್ಕೆ ಕಾರಣವಾಗಿದೆ. ಈ ವೇಳೆ ರಕ್ಷಕ್ ಕೂದಲೆಳೆಯ ಅಂತರದಲ್ಲಿ ಜೀವಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ತಿಳಿದುಬಂದಿದೆ.

  ದೂರು ನೀಡಿದ ನಂತರ ನ್ಯೂಸ್18 ಜೊತೆಗೆ ಮಾತನಾಡಿರುವ ರಕ್ಷಕ್, "ನಿನ್ನೆ ರಾತ್ರಿ ಹೆಬ್ಬಾಳ ಫ್ಲೈ ಓವರ್ ಮೇಲೆ ಟ್ರಾಫಿಕ್ ಜಾಮ್ ಇದ್ದ ಕಾರಣ ನಾನು ಮತ್ತೊಂದು ರಸ್ತೆಯಲ್ಲಿ ಬರುತ್ತಿದ್ದೆ. ಆ ರಸ್ತೆಯಲ್ಲಿ ತುಂಬ ಕತ್ತಲಿತ್ತು ಹಾಗೂ ವಾಹನ ಸಂಚಾರ ಕೂಡ ಹೆಚ್ಚಿರಲಿಲ್ಲ. ಆಗ ಕೆಲವರು ಮಂಗಳಮುಖಿಯರು ರಸ್ತೆಯಲ್ಲಿ ನಿಂತಿದ್ದರು. ಒಬ್ಬ ಮಂಗಳಮುಖಿ ನನ್ನ ಗಾಡಿಗೆ ಕೈ ಅಡ್ಡ ಹಾಕಿದರು.

  ಆಗ ನಾನು ಸ್ಲೋ ಮಾಡಿದೆ, ಅಷ್ಟರಲ್ಲಿ ನನ್ನ ಬ್ಯಾಗ್ ಗೆ ಕೈ ಹಾಕಿದ ಅನುಭವ ಆಯ್ತು ತಕ್ಷಣ ಗಾಡಿ ಸ್ಪೀಡ್ ಮಾಡಿದೆ. ಆದರೆ, ಆ ಮಂಗಳಮುಖಿ ಬ್ಯಾಗ್ ಹಿಡಿದು ಎಳೆದ ಕಾರಣ ಗಾಡಿಯಿಂದ ಬಿದ್ದೆ. ತಕ್ಷಣ ಎದ್ದು ನನ್ನ ಗಾಡಿ ಅಲ್ಲೇ ಬಿಟ್ಟು ಬಂದು ಮತ್ತೊಂದು ಗಾಡಿ ಹತ್ತಿ ಅಲ್ಲಿಂದ ಹೋದೆ. ಈ ಬಗ್ಗೆ ಹೆಬ್ಬಾಳ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದೆ. ನಂತರ ಅಮೃತಹಳ್ಳಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದೇನೆ" ಎಂದು ತಿಳಿಸಿದ್ದಾರೆ.

  ಇದನ್ನೂ ಓದಿ: Basavaraja Bommai| ಸಿಎಂ ಬೊಮ್ಮಾಯಿ-ಕೇಂದ್ರ ಸಚಿವ ನಿತೀನ್ ಗಡ್ಕರಿ ಭೇಟಿ ಹಲವು ಮಹತ್ವದ ಯೋಜನೆಗಳ ಬಗ್ಗೆ ಚರ್ಚೆ  ಘಟನೆಯಲ್ಲಿ ರಕ್ಷಕ್​ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಚಿಕಿತ್ಸೆ ನೀಡಲಾಗಿದೆ. ಪೊಲೀಸರು ದೂರು ದಾಖಲಿಸಿಕೊಂಡು ವಿಚಾರಣೆ ಆರಂಭಿಸಿದ್ದಾರೆ. ಆದರೆ, ಪೊಲೀಸರು ರಕ್ಷಕ್ ಮೇಲೆ ದರೋಡೆಗೆ ಯತ್ನಿಸಿದ್ದ ಆಘಂತುಕರ ಹೆಡೆಮುರಿ ಕಟ್ತಾರಾ? ಎಂಬುದನ್ನು ಕಾದು ನೋಡಬೇಕಿದೆ.
  Published by:MAshok Kumar
  First published: